Breaking News

Daily Archives: ಫೆಬ್ರವರಿ 7, 2021

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ‘ಏಕಾಂಗಿ ಪ್ರತಿಭಟನೆ’ ನಡೆಸಿದ ರೈತ

ಬಾಗಲಕೋಟೆ: ನಗರದ ಬಸವೇಶ್ವರ ವೃತ್ತದಲ್ಲಿ ರೈತರೊಬ್ಬರು ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸುಮಾರು ಎರಡೂವರೆ ಗಂಟೆ ಏಕಾಂಗಿಯಾಗಿ ಪ್ರತಿಭಟಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಮುಗಳೊಳ್ಳಿ ಗ್ರಾಮದ ರೈತ ಬಿ.ಎಸ್​.ಬಜನ್ನವರ್​ ಎಂಬುವವರು ಏಕಾಂಗಿಯಾಗಿ ನಿಂತು ಪ್ರತಿಭಟನೆ ನಡೆಸಿದ್ದಾರೆ. ಇಂದು ದೇಶಾದ್ಯಂತ ಹಮ್ಮಿಕೊಂಡಿರುವ ಹೆದ್ದಾರಿ ಬಂದ್​ಗೆ ಬೆಂಬಲ ಸೂಚಿಸಿ ರೈತ ಈ ರೀತಿ ಹೋರಾಟ ನಡೆಸಿದ್ದಾರೆ. ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾ ನಿರತ ರೈತ ಒತ್ತಾಯಿಸಿದ್ದಾರೆ.

Read More »

ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ಆನೆಗಳ ಸಾವು

ಬೆಂಗಳೂರು :ಇತ್ತೀಚೆಗೆ ತಮಿಳುನಾಡಿನ ಮಡುಮಲೈನಲ್ಲಿ ಆನೆಗೆ ಬೆಂಕಿ ಹಚ್ಚಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ದೇಶಾದ್ಯಂತ, ಆನೆಗಳ ರಕ್ಷಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ದೇಶದಲ್ಲಿ ಆನೆಗಳ ತವರೂರಾದ ಕರ್ನಾಟಕದಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಸುಮಾರು 78 ಆನೆಗಳು ಮಾನವನ ದುಷ್ಕೃತ್ಯಕ್ಕೆ ಬಲಿಯಾಗಿವೆ ಎಂದು ತಿಳಿದು ಬಂದಿದೆ. ಇವುಗಳಲ್ಲಿ ಕ್ರಿಮಿನಾಶಕ ಔಷಧ ಸೇವನೆಯಿಂದ, ವಿದ್ಯುತ್ ಶಾಕ್ ನಿಂದ, ರಸ್ತೆ ಆಘಾತಗಳಿಂದ ಮತ್ತು ಬಂದೂಕುಗಳಿಂದ ಕೊಲ್ಲಲ್ಪಟ್ಟ ಘಟನೆಗಳು ನಡೆದಿವೆ. ಆರು ವರ್ಷಗಳ …

Read More »

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸದಸ್ಯನ ಮನೆಗೆ ಬೆಂಕಿ

ಕೋಲಾರ: ಗ್ರಾಮ ಪಂಚಾಯತಿ ಚುನಾವಣೆಯ ದ್ವೇಷದ ಹಿನ್ನೆಲೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸದಸ್ಯನ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಮುಳಬಾಗಲು ತಾಲೂಕಿನ ರಾಜೆಂದ್ರಹಳ್ಳಿಯಲ್ಲಿ ನಡೆದಿದೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿತ ನೂರ್ ಜಾನ್ ಮನೆಗೆ ವಿರೋಧಿ ಗುಂಪಿನಿಂದ ಬೆಂಕಿ ಹಾಕಿರುವ ಅರೋಪ ಕೇಳಿ ಬಂದಿದೆ. ಘಟನೆಯಲ್ಲಿ ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಹಾಗೂ ನಷ್ಟ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಡಿವೈಎಸ್​ಪಿ ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ …

Read More »

ಮೊದಲ ಸಿಆರ್‌ಪಿಎಫ್ ಮಹಿಳಾ ತಂಡ ‘ಕೋಬ್ರಾ’ ಘಟಕಕ್ಕೆ ಸೇರ್ಪಡೆ

ಗುರುಗ್ರಾಮ‌: 34ನೇ ಸಿಆರ್‌ಪಿಎಫ್‌ನ ಮೊದಲ ಮಹಿಳಾ ತಂಡವನ್ನು ಶನಿವಾರ ವಿಶೇಷ ಜಂಗಲ್‌ ವಾರ್‌ಫೇರ್‌ ಕಮಾಂಡೊ ಪಡೆ ‘ಕೋಬ್ರಾ’ಗೆ(ಕಮಾಂಡೊ ಬೆಟಾಲಿಯನ್ ಫಾರ್ ರೆಸೊಲ್ಯೂಟ್ ಆಕ್ಷನ್‌) ಸೇರಿಸಲಾಯಿತು. ಇಲ್ಲಿನ ಕಡರ್‌ಪುರದಲ್ಲಿರುವ ಸಿಆರ್‌ಪಿಎಫ್‌ ಶಿಬಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಹಿಳೆಯರು ನಡೆಸಿದ ಯುದ್ಧಸಮರ ಕಸರತ್ತನ್ನು ಸಿಆರ್‌ಪಿಎಫ್ ಮಹಾನಿರ್ದೇಶಕಿ ಎ ಪಿ ಮಹೇಶ್ವರಿ ವೀಕ್ಷಿಸಿದರು. ‘ಈಗಿರುವ ಆರು ಸಿಆರ್‌ಪಿಎಫ್‌ ಮಹಿಳಾ ಬೆಟಾಲಿಯನ್‌ಗಳಿಂದ ಮಹಿಳೆಯರನ್ನು ಕೋಬ್ರಾ ಪಡೆಗೆ ಆಯ್ಕೆ ಮಾಡಲಾಗಿದೆ. ಇವರೆಲ್ಲರೂ …

Read More »

ಏಷ್ಯಾದ ಅತೀ ದೊಡ್ಡ ಏರ್​ ಶೋಗೆ ವಿಶೇಷ ಭದ್ರತೆ ನೀಡಿದ್ದು ಗುರುಡ ಪಡೆ

ಬೆಂಗಳೂರು: ಫೆಬ್ರವರಿ 3 ರಿಂದ ಮೂರು ದಿನಗಳ ಕಾಲ ನಡೆದ ಏಷ್ಯಾದ ಅತೀ ದೊಡ್ಡ ಏರ್​ ಶೋ ಶುಕ್ರವಾರ ಮುಕ್ತಾಯವಾಯಿತು. ಈ ಏರ್​ ಶೋಗೆ ಭಯೋತ್ಪಾದನೆ ನಿಗ್ರಹದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಗರುಡ ಸೈನ್ಯ ಭದ್ರತೆಯನ್ನ ಒದಗಿಸಿತ್ತು. ರಾಷ್ಟ್ರಪತಿ ರಾಮನಾಥ್ ಕೋವಿಂದ್, ಚೀಫ್ ಆಫ್ ಡಿಫೆನ್ಸ್​ ಸ್ಟಾಪ್​ ಜನರಲ್ ಬಿಪಿನ್ ರಾವತ್ ಮತ್ತು ಮೂವರು ಸೇನಾ ಮುಖ್ಯಸ್ಥರು ಮತ್ತು ರಕ್ಷಣಾ ಮಂತ್ರಿಗಳು ಮತ್ತು ಇತರರು ಭಾಗವಹಿಸಿದ್ದ ಪ್ರದರ್ಶನದಲ್ಲಿ ಗರುಡ್​ ಸೈನ್ಯವನ್ನ …

Read More »

₹29 ಲಕ್ಷ ಪಡೆದು, ಬಳಿಕ ಕಾರ್ಯಕ್ರಮಗಳಿಗೆ ಹಾಜರಾಗದೇ ವಂಚಿಸಿದ್ದಾರೆ ಸನ್ನಿ ಲಿಯೋನ್​

ತಿರುವನಂತಪುರಂ: ಕಾರ್ಯಕ್ರಮಗಳಿಗೆ ಭಾಗವಹಿಸುದಾಗಿ ಬರೋಬ್ಬರಿ ₹29 ಲಕ್ಷ ಪಡೆದು ವಂಚನೆ ಮಾಡಿರುವ ಆರೋಪದ ಮೇಲೆ ಬಾಲಿವುಡ್​ ನಟಿ ಸನ್ನಿ ಲಿಯೋನ್​ನ್ನ ಕೇರಳ ಪೊಲೀಸರು ಇಂದು ವಿಚಾರಣೆ ನಡೆಸಿದ್ದಾರೆ. ಕೊಚ್ಚಿಯಲ್ಲಿ ಏರ್ಪಡಿಸಲಾದ ಎರಡು ಕಾರ್ಯಕ್ರಮಗಳಿಗೆ ಭಾಗವಹಿಸುವುದಾಗಿ ಹೇಳಿ ಸನ್ನಿ ಲಿಯೋನ್​ ₹29 ಲಕ್ಷ ಪಡೆದು, ಬಳಿಕ ಕಾರ್ಯಕ್ರಮಗಳಿಗೆ ಹಾಜರಾಗದೇ ವಂಚಿಸಿದ್ದಾರೆ ಎಂದು ಆಯೋಜಕರು ದೂರು ನೀಡಿದ್ದಾರೆ ಅಂತಾ ವರದಿಯಾಗಿದೆ. ದೂರಿನ ಅನ್ವಯ ಕೇರಳ ಪೊಲೀಸರು ಸನ್ನಿ ಲಿಯೋನ್ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ …

Read More »

ಶರದ್ ಪವಾರ್ ಸಚಿನ್​​ಗೆ ಎಚ್ಚರಿಕೆ

ಮುಂಬೈ: ಬೇರೆ ಯಾವುದೇ ಕ್ಷೇತ್ರದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ನಾನು ಸಚಿನ್​​ಗೆ ಸಲಹೆ ನೀಡುತ್ತೇನೆ ಅಂತಾ ಎನ್​​ಸಿಪಿ ಮುಖ್ಯಸ್ಥ ಶರದ್ ಪವಾರ್ ಎಚ್ಚರಿಕೆಯನ್ನ ನೀಡಿದ್ದಾರೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಮೊನ್ನೆ ಪಾಪ್ ಸಿಂಗರ್ ರಿಹಾನಾ ಟ್ವೀಟ್ ಮಾಡಿದ್ದರು. ಇದನ್ನ ಖಂಡಿಸಿ ಬಾಲಿವುಡ್​ ಹಾಗೂ ಕ್ರಿಕೆಟ್ ಸ್ಟಾರ್​​ಗಳು #IndiaTogether #IndiaAgainstPropaganda ಹ್ಯಾಶ್​ ಟ್ಯಾಗ್ ಅಡಿ ಅಭಿಯಾನ ಶುರುಮಾಡಿದ್ದರು. ಈ ಅಭಿಯಾನಕ್ಕೆ ಕೈಜೋಡಿಸಿ ಟ್ವೀಟ್ ಮಾಡಿದ್ದ ತೆಂಡೂಲ್ಕರ್.. ಭಾರತದ ಸಾರ್ವಭೌಮತ್ವ ವಿಚಾರದಲ್ಲಿ …

Read More »

ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾದ ಕಳ್ಳತನ ಕೆಲವು ಪ್ರಕರಣದಲ್ಲಿ ಆರೋಪಿ ಸುಳಿವು ಸಿಕ್ಕಿಲ್ಲ.

ಕಾರವಾರ: ಕೊರೋನಾ ಮಹಾಮಾರಿ ತಂದಿಟ್ಟ ಸಂಕಷ್ಟ ಒಂದೆರಡಲ್ಲ ಹತ್ತಾರು ಮಾರ್ಗದಲ್ಲಿ ಜನರನ್ನ ಸಂಕಷ್ಟದ ಗುಹೆಗೆ ನೂಕಿಸಿದೆ. ಇದರ ಬಾಗವಾಗಿ ಲಾಕ್ಡೌನ್​ ನಂತರ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದ ಮನೆಗಳಲ್ಲಿ ಕಳ್ಳತನ ಪ್ರಕರಣಗಳು ಅಧಿಕವಾಗಿದೆ. ಲಾಕ್​ಡೌನ್ ಬಳಿಕ ನಾಲ್ವತ್ತಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿವೆ ಇದಕ್ಕೆಲ್ಲ ಕಾರಣ ಲಾಕ್​ಡೌನ್ ನಲ್ಲಿ ಕೆಲಸ ಇಲ್ಲದವರ ಕೃತ್ಯ ಎನ್ನಲಾಗಿದೆ. ಈ ಪೈಕಿ ರಾಷ್ಟ್ರೀಯ …

Read More »

B.S.Y.. ಗೆ ವಯಸ್ಸಾಗಿದೆ ತಮ್ಮ ಮೊಮ್ಮಕ್ಕಳ ಜೊತೆ ಕಾಲ ಕಳೆಯುವುದು ಉತ್ತಮ: ಯತ್ನಾಳ

ಚಿತ್ರದುರ್ಗ : ಸಿಎಂ ಯಡಿಯೂರಪ್ಪ ಅವರಿಗೆ ದಣಿವಾಗಿದೆ. ಅವರ ಕುಟುಂಬವೇ ಸರ್ಕಾರವನ್ನು ನಡೆಸುತ್ತಿದೆ. ಅವರ ಮಗ ವಿಜಯೇಂದ್ರ, ಇಡೀ ಕುಟುಂಬ ಕಾವೇರಿ ನಿವಾಸದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದನ್ನು ಹೈಕಮಾಂಡ್ ಗಮನಿಸುತ್ತಿದೆ. ತಮ್ಮ ಕುಟುಂಬವನ್ನು ಮತ್ತಷ್ಟು ಉದ್ಧಾರ ಮಾಡಲು ಯಡಿಯೂರಪ್ಪ ಸಿಎಂ ಆಗಿ  ಉಳಿದಿದ್ದಾರೆ. ಅವರು ಆದಷ್ಟು ಬೇಗ ರಾಜಕೀಯ ನಿವೃತ್ತಿ ಪಡೆದು ಮೊಮ್ಮಕ್ಕಳನ್ನು ಆಡಿಸಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದ ವಾಗ್ದಾಳಿ …

Read More »

ಇಂದು ಕುರುಬ ಸಮುದಾಯದಿಂದ ಬೃಹತ್​ ಸಮಾವೇಶ

ಬೆಂಗಳೂರು (ಫೆ. 7): ಕುರುಬ ಸಮುದಾಯ ಬೃಹತ್​ ಸಮಾವೇಶಕ್ಕೆ ಇಂದು ರಾಜಧಾನಿ ಸಾಕ್ಷಿಯಾಗಲಿದೆ. ಈ ಮೂಲಕ ತಮ್ಮ ಮೀಸಲಾತಿಯ ಕೂಗನ್ನು ಸರ್ಕಾರಕ್ಕೆ ಮುಟ್ಟಿಸಲು ಸಮುದಾಯ ನಿರ್ಧರಿಸಿದೆ. ಈಗಾಗಲೇ ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ ಬೆಂಗಳೂರಿಗೆ  ಯಶಸ್ವಿ ಪಾದಯಾತ್ರೆಯನ್ನು ನಡೆಸಲಾಗಿದೆ.  ನಗರದ ಹೊರವಲದಲ್ಲಿರುವ ಮಾದಾವರ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದಲ್ಲಿ ಇಂದು ಬೃಹತ್​ ಸಮಾವೇಶ ನಡೆಯಲಿದ್ದು, ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ. ರಾಜ್ಯ …

Read More »