Home / ರಾಜ್ಯ / ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ಆನೆಗಳ ಸಾವು

ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ಆನೆಗಳ ಸಾವು

Spread the love

ಬೆಂಗಳೂರು :ಇತ್ತೀಚೆಗೆ ತಮಿಳುನಾಡಿನ ಮಡುಮಲೈನಲ್ಲಿ ಆನೆಗೆ ಬೆಂಕಿ ಹಚ್ಚಿದ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ದೇಶಾದ್ಯಂತ, ಆನೆಗಳ ರಕ್ಷಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ.

ದೇಶದಲ್ಲಿ ಆನೆಗಳ ತವರೂರಾದ ಕರ್ನಾಟಕದಲ್ಲಿ ಕಳೆದ ಆರು ವರ್ಷಗಳ ಅವಧಿಯಲ್ಲಿ ಸುಮಾರು 78 ಆನೆಗಳು ಮಾನವನ ದುಷ್ಕೃತ್ಯಕ್ಕೆ ಬಲಿಯಾಗಿವೆ ಎಂದು ತಿಳಿದು ಬಂದಿದೆ. ಇವುಗಳಲ್ಲಿ ಕ್ರಿಮಿನಾಶಕ ಔಷಧ ಸೇವನೆಯಿಂದ, ವಿದ್ಯುತ್ ಶಾಕ್ ನಿಂದ, ರಸ್ತೆ ಆಘಾತಗಳಿಂದ ಮತ್ತು ಬಂದೂಕುಗಳಿಂದ ಕೊಲ್ಲಲ್ಪಟ್ಟ ಘಟನೆಗಳು ನಡೆದಿವೆ.

ಆರು ವರ್ಷಗಳ ಅವಧಿಯಲ್ಲಿ, ರಾಜ್ಯದಾದ್ಯಂತ 471 ಆನೆಗಳು ಸಾವನ್ನಪ್ಪಿವೆ. ಅದರಲ್ಲಿ 393 ಸಹಜ ಸಾವುಗಳು ಮತ್ತು 78 ಅಸಹಜ ಸಾವುಗಳು ಸಂಭವಿಸಿವೆ. ಆನೆಗಳು ಬೆಳೆಗಳ ಮೇಲೆ ದಾಳಿ ಮಾಡುತ್ತಿವೆಯೆಂದು ಕೆಲವು ಪ್ರಾಂತ್ಯಗಳ ರೈತರು ಆನೆಗಳನ್ನು ಕೊಲ್ಲಲು ಸಹ ಹಿಂಜರಿಯುತ್ತಿಲ್ಲ.

ಕಾಡಿನಿಂದ ತಪ್ಪಿಸಿಕೊಂಡು ಹೊರಬಂದ ಆನೆಗಳು ಮತ್ತು ಹಿಂಡಿನಿಂದ ದಾರಿ ತಪ್ಪಿದ ಆನೆಗಳು ಕಳೆದುಹೋಗಿ ನಾಡಿಗೆ ಬರುತ್ತಿವೆ. ಇದರ ಪರಿಣಾಮವಾಗಿ ಕೆಲವು ಸಂದರ್ಭಗಳಲ್ಲಿ ರಸ್ತೆ ಅಪಘಾತದಲ್ಲಿಯೂ ಸಹಾ ಆನೆಗಳು ಸಾಯುತ್ತಿವೆ.

ಕೆಲವೊಮ್ಮೆ ರೈಲು ಹಳಿಗಳನ್ನು ದಾಟುವ ಸಂದರ್ಭದಲ್ಲಿ ಸಾವನ್ನಪ್ಪುತ್ತವೆ. ಪರಸ್ಪರ ಆನೆಗಳ ನಡುವಿನ ಘರ್ಷಣೆಗಳು ನೈಸರ್ಗಿಕ ಸಾವಿಗೆ ಪ್ರಮುಖ ಕಾರಣಗಳಾಗಿವೆ. ಮತ್ತು ವಯಸ್ಸಾದ ಕಾರಣದಿಂದಾಗಿ ಆನೆಗಳು ಸಾವನ್ನಪ್ಪುತ್ತಿವೆ.

ಆರು ವರ್ಷಗಳಲ್ಲಿ ಕರ್ನಾಟಕದಲ್ಲಿ ಸಂಭವಿಸಿದ ಆನೆಗಳ ಸಾವು

* 2014-15: 77 ಆನೆಗಳು ಸಹಜ ಸಾವು. 18 ಮಾನವನ ದುಷ್ಕೃತ್ಯಕ್ಕೆ ಬಲಿ.

* 2015-16: 59 ಆನೆಗಳು ಸಹಜ ಸಾವನ್ನಪ್ಪಿವೆ. ಮತ್ತು 15 ಅಸಹಜ‌ ಸಾವು.

* 2016-17: 90 ಆನೆಗಳು ಸಹಜ ಸಾವು. 10 ಆನೆಗಳು ಮಾನವ ಕ್ರೌರ್ಯಕ್ಕೆ ಬಲಿ.

* 2017-18: 67 ಆನೆಗಳು ಸಹಜ, 11 ಆನೆಗಳು ಅಸಹಜ‌ ಸಾವನ್ನಪ್ಪಿವೆ.

* 2018-19: 59 ಆನೆಗಳು ಸಹಜ, 15 ಆನೆಗಳು ಅಸಹಜ ಸಾವನ್ನಪ್ಪಿವೆ.

* 2019-20: 41 ಆನೆಗಳು ಸಹಜ, 9 ಆನೆಗಳು ಅಸಹಜವಾಗಿ ಸಾವು.

ಆನೆಗಳಿಗೆ ವಿದ್ಯುತ್ ಬೇಲಿಯೇ ಕಂಟಕ: ರೈತರು ತಮ್ಮ ಬೆಳೆಗಳನ್ನು ರಕ್ಷಿಸಲು ತಮ್ಮ ಹೊಲಗಳಲ್ಲಿ ಮತ್ತು ತೋಟಗಳಲ್ಲಿ ವಿದ್ಯುತ್ ಬೇಲಿಗಳನ್ನು ನಿರ್ಮಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಆನೆಗಳು ವಿದ್ಯುತ್ ಪೂರೈಕೆ ಇರುವ ಬೇಲಿಯನ್ನು ಸ್ಪರ್ಶಿಸಿ ಸಾವನ್ನಪ್ಪುತ್ತಿವೆ. ವಿದ್ಯುತ್ ಮತ್ತು ಬಂದೂಕು ಗುಂಡಿನಿಂದ ಗಾಯಗಳಾಗಿ ಪ್ರತಿ ವರ್ಷ ಸರಾಸರಿ 12 ಆನೆಗಳು ಸಾಯುತ್ತಿವೆ. ಒಂದು ವೇಳೆ ಗುಂಡೇಟಿನಿಂದ ಆನೆಗಳು ಸಾವನ್ನಪ್ಪಿದರೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಆದರೆ ಇತರೆ ಕಾರಣಗಳಿಂದ ಸಾವನ್ನಪ್ಪಿದರೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕೆಲವು ಪ್ರಕರಣಗಳಲ್ಲಿ ಅಪರಾಧಿಗಳು ಶಿಕ್ಷೆಗೊಳಗಾದ ಬಗ್ಗೆ ಯಾವುದೇ ದಾಖಲೆಗಳಿಲ್ಲ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ