Breaking News

Daily Archives: ಫೆಬ್ರವರಿ 9, 2021

ಪಕ್ಷ ಹೇಳಿದರೆ ಅನಿವಾರ್ಯವಾಗಿ ಸ್ಪರ್ಧೆ ಮಾಡುತ್ತೇನೆ : ಸತೀಶ್ ಜಾರಕಿಹೊಳಿ,

ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಪಕ್ಷ ಹೇಳಿದರೆ ಅನಿವಾರ್ಯವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಸಂಬಂಧ ಈಗಾಗಲೇ 2-3 ಸುತ್ತಿನ ಸಭೆ ನಡೆದಿದೆ. ಪಕ್ಷದವರು ಮೂವರ ಹೆಸರನ್ನು ವರಿಷ್ಠರಿಗೆ ಕಳುಹಿಸಿದ್ದಾರೆ. ಪಕ್ಷ ಹೇಳಿದರೆ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು. ಇನ್ನು ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ …

Read More »

ನಾವು ಸದಾ ಜಾಗೃತರಾಗಿ, ಸಂಘಟಿತರಾದರೆ ಮಾತ್ರ ನಮ್ಮ ಮುಂದಿನ‌ ಭವಿಷ್ಯ ಉಜ್ವಲವಾಗಲಿದೆ: ರಮೇಶ್ ಜಾರಕಿಹೊಳಿ‌

ಹರಿಹರ: ಸಮಾಜದಲ್ಲಿ ಜಾಗೃತಿ ನಿರ್ಮಾಣ ಮತ್ತು ಸಬಲ ಸಂಘಟನೆಯ ದೃಷ್ಟಿಯಿಂದ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಹಮ್ಮಿಕೊಂಡಿದ್ದು, ನ್ಯಾಯಸಮ್ಮತವಾಗಿ ಸವಲತ್ತುಗಳನ್ನು ಪಡೆಯಲು ಸಂಘಟನಾ ಶಕ್ತಿ ಪ್ರದರ್ಶಿಸಬೇಕಾದ ಸಂದರ್ಭ ಇದಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ. ಹರಿಹರ ತಾಲ್ಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ 3 ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ ಮತ್ತು ಜನಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ‌, ನಾಯಕ ಜನಾಂಗದ …

Read More »

ಖೋಡೆಸ್ ಕಂಪನಿಗಳ ಮೇಲೆ ಐಟಿ ದಾಳಿ

ಬೆಂಗಳೂರು: ಖೋಡೇಸ್ ಗ್ರೂಪ್ ಮಾಲೀಕರ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿ ಐಟಿ ಅಧಿಕಾರಿಗಳು ಶಾಕ್‌ ನೀಡಿದ್ದಾರೆ. ಬೆಂಗಳೂರಿನಲ್ಲಿರುವ ಖೋಡೇಸ್ ಲಿಕ್ಕರ್ ಮಾಲೀಕರ ಮನೆ, ಫ್ಯಾಕ್ಟರಿ , ಕಚೇರಿಗಳ ಮೇಲೆ ಇಂದು ಬೆಳಗ್ಗೆ ಐಟಿ ಅಧಿಕಾರಿಗಳ ತಂಡಗಳು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಖೋಡೇಸ್ ಗ್ರೂಪ್‌ ಮಾಲೀಕ ರಾಮಚಂದ್ರ ಖೋಡೆ ಅವರ ಮೆಜೆಸ್ಟಿಕ್ ಬಳಿಯ ಮನೆ, ಕಚೇರಿ ಹಾಗೂ ಫ್ಯಾಕ್ಟರಿ ಸೇರಿದಂತೆ 15 ಕ್ಕೂ ಹೆಚ್ಚು ದಾಳಿ ನಡೆಸಿದ್ದಾರೆ. …

Read More »

ಮದ್ಯ ಖಜಾನೆ ಧಣಿ,ಮನೆಯನ್ನೇ ಕಚೇರಿ ಮಾಡಿದ್ದ BBMP ಅಧಿಕಾರಿ ದೇವೇಂದ್ರಪ್ಪ ಸೇವೆಯಿಂದ ಅಮಾನತು!

ಬೆಂಗಳೂರು: ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದ ಬಿಬಿಎಂಪಿ ನಗರ ಯೋಜನೆ ಸಹಾಯಕ ನಿರ್ದೇಶಕ ದೇವೇಂದ್ರಪ್ಪನನ್ನು ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ. ಪೂರ್ಣಗೊಂಡ ಕಟ್ಟಡಕ್ಕೆ ಅಕ್ಯುಪೆನ್ಸ್ ಸರ್ಟಿಫಿಕೇಟ್ ನೀಡಲು ಲಂಚ ಪಡೆಯುತ್ತಿದ್ದ ವೇಳೆ ದೇವೇಂದ್ರಪ್ಪ ಸಿಕ್ಕಿಬಿದ್ದಿದ್ದರು. ಹುಳಿಮಾವು ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಸಗಿಯವರಿಗೆ ಸೇರಿದ ಸ್ವತ್ತಿನಲ್ಲಿ ಕಟ್ಟಡ ನಿರ್ಮಾಣ ಮಾಡಿ ಸಿಗ್ಮಿಸ್‌ ಬ್ರಿವರೀಸ್‌ ಘಟಕದ ಕಟ್ಟಡ ನಿರ್ಮಾಣ ರ್ಪೂಗೊಳಿಸಲಾಗಿತ್ತು. ಆದರೆ ಪೂರ್ಣಗೊಂಡ ಕಟ್ಟಡ ಕಾಮಗಾರಿಗೆ ಓ.ಸಿ. ಪಡೆಯಲು ಕಂಪನಿ …

Read More »

ಡಾ.ರಾಜ್​ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು

ಬೆಂಗಳೂರು: ಕನ್ನಡದ ವರನಟ ಡಾ.ರಾಜ್ ಕುಮಾರ್​ ಅವರನ್ನ ಅಪಹರಿಸಿದ್ದ ನರಹಂತಕ ವೀರಪ್ಪನ್​ಗೆ ಕೋಟ್ಯಂತರ ಹಣವನ್ನು ರಾಜ್ಯ ಸರ್ಕಾರ ಕೊಟ್ಟಿತ್ತು ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. ಅಣ್ಣಾವ್ರನ್ನು ಬಿಡುಗಡೆ ಮಾಡಲು ಮೂರು ಹಂತದಲ್ಲಿ 15.22 ಕೋಟಿ ರೂಪಾಯಿಯನ್ನು ಅಂದಿನ ಮುಖ್ಯಮಂತ್ರಿ ಎಸ್​.ಎಂ. ಕೃಷ್ಣ ನೇತೃತ್ವದ ಸರ್ಕಾರ ನೀಡಿತ್ತು ಎಂಬ ಮಾಹಿತಿ ಪತ್ರಕರ್ತ ಶಿವಸುಬ್ರಮಣ್ಯನ್​ ಅವರು ಬರೆದಿರುವ ಪುಸ್ತಕದಲ್ಲಿ ರಿವೀಲ್​ ಆಗಿದೆ. 2000ರ ಜುಲೈ 30ರ ರಾತ್ರಿ ಗಾಜನೂರಿನ ತೋಟದ ಮನೆಯಿಂದ ಡಾ.ರಾಜ್‌ಕುಮಾರ್ …

Read More »

ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ!

ಬೆಂಗಳೂರು: ತಾನು ಓದುತ್ತಿದ್ದ ಕಾಲೇಜಿನ ಲೆಕ್ಚರರ್​ರೊಬ್ಬರ ಮಗನ ಪ್ರೇಮಪಾಶಕ್ಕೆ ಸಿಕ್ಕ ವಿದ್ಯಾರ್ಥಿನಿ, ಇದೀಗ ನ್ಯಾಯಕ್ಕಾಗಿ ವಿದ್ಯಾರಣ್ಯಪುರ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಸಂತ್ರಸ್ತ ಯುವತಿ ಕೊಟ್ಟ ದೂರಿನ ಮೇರೆಗೆ ಆರೋಪಿ ಚಂದನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಚಂದನ್​ ತಾಯಿ ನಗರದ ಕಾಲೇಜೊಂದರ ಲೆಕ್ಚರರ್. ಆ ಯುವತಿಯೂ ಅದೇ ಕಾಲೇಜಿನ ವಿದ್ಯಾರ್ಥಿನಿ. ಲೆಕ್ಚರರ್​ನನ್ನು ನೋಡೋಕೆ ಎಂದು ವಿದ್ಯಾರ್ಥಿನಿ ಮನೆಗೆ ಬಂದ ವೇಳೆ ಚಂದನ್​ ಪರಿಚಯವಾಗಿತ್ತು. ಇವರಿಬ್ಬರ ನಡುವೆ ಸಲುಗೆ ಬೆಳೆದು ಪ್ರೀತಿಗೆ ತಿರುಗಿತ್ತು. ಮುಂದೆ …

Read More »

ವೇಶ್ಯೆ ಸೋಗಲ್ಲಿ ಯುವಕರ ಕೋಣೆಗೆ ಆಂಟಿ ಎಂಟ್ರಿ!

ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ವೇಶ್ಯೆ ಸೋಗಿನಲ್ಲಿ ಗಿರಾಕಿಗಳ ಮನೆಗೆ ಕಳುಹಿಸಿ, ದಿನಕ್ಕೆ 1.5 ಲಕ್ಷ ಹಣ ಪೀಕುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 3 ವರ್ಷದಿಂದ ಹಲವು ಯುವಕರಿಗೆ ಗಾಳ ಹಾಕಿದ್ದ ಈ ದಂಪತಿ, ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಉಲ್ಲಾಳ ಉಪನಗರ ವಿಶ್ವೇಶ್ವರ ಲೇಔಟ್​ನ ಭಾಸ್ವತಿ ದತ್ತಾ (26) ಮತ್ತು ಕಿರಣ್​ ರಾಜ್​ (33) ಬಂಧಿತ ದಂಪತಿ. ನಾಗಮಂಗಲದ ಕಿರಣ್​ ಮತ್ತು ಪಶ್ಚಿಮ ಬಂಗಾಳದ ಭಾಸ್ವತಿ ದತ್ತಾ 2018ರಂದು …

Read More »

ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ಗದಗ: ಹಾವನ್ನ ಕಂಡ್ರೆ ಸಾಕು ಮಾರುದ್ದ ಓಡುವ ಜನರ ಸಂಖ್ಯೆಯೇ ಹೆಚ್ಚು. ‘ಹಾವು’ ಅಂದ್ರೆ ನಿದ್ರೆಯಲ್ಲೂ ಹಲವರು ಬೆಚ್ಚಿಬೀಳ್ತಾರೆ. ಆದರೆ, ಇಲ್ಲೊಬ್ಬ ವೃದ್ಧ ಹಾವಿನ ಜೊತೆ ಚೆಲ್ಲಾಟವಾಡುತ್ತ ಆ ಹಾವಿನಿಂದಲೇ ಪ್ರಾಣಬಿಟ್ಟಿದ್ದಾನೆ. ಇಂತಹ ಘಟನೆ ರೋಣ ಪಟ್ಟಣದಲ್ಲಿ ಸೋಮವಾರ ಸಂಭವಿಸಿದೆ. ಮಕ್ತುಮ್ ಸಾಬ ರಾಜೆಖಾನ್ (75) ಮೃತ ದುರ್ದೈವಿ. ಡಾ.ರಾಜ್​ ಅಪಹರಣ: ರಾಜ್ಯ ಸರ್ಕಾರ ಮುಚ್ಚಿಟ್ಟಿದ್ದ ಸ್ಫೋಟಕ ರಹಸ್ಯ ಬಯಲು ಹಲವು ವರ್ಷಗಳಿಂದ ಹಾವು ಹಿಡಿಯುವದರಲ್ಲಿ ಈ ವೃದ್ಧ ನಿಪುಣನಾಗಿದ್ದ. …

Read More »

ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರ..!

ಹಾಸನ: ಮಾವನಿಂದಲೇ ಸೊಸೆ ಮೇಲೆ ಅತ್ಯಾಚಾರವಾಗಿರುವ ಆರೋಪ ಜಿಲ್ಲೆಯ ಬೇಲೂರು ತಾಲೂಕಿನ ಸಿ.ಹೊಸಳ್ಳಿಯಲ್ಲಿ ಕೇಳಿಬಂದಿದೆ. ಈ ನಡುವೆ, ಪ್ರಕರಣದಿಂದ ಮನನೊಂದು ವಿಷ ಸೇವಿಸಿದ್ದ 30 ವರ್ಷದ ಮಹಿಳೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಇಂದು ಅಸುನೀಗಿದ್ದಾರೆ. Rape ಏನಿದು ಪ್ರಕರಣ? 6 ವರ್ಷಗಳ ಹಿಂದೆ ಪುಟ್ಟರಾಜು ಎಂಬಾತನ ಜೊತೆ ಮಹಿಳೆ ವಿವಾಹವಾಗಿದ್ದರು. ಕಳೆದ ಡಿಸೆಂಬರ್ 21 ರಂದು ಮಹಿಳೆಯ ಮಾವ ವೆಂಕಟೇಶ್ ಜೋಗಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದನಂತೆ. ಇದರಿಂದ, ಮನನೊಂದ …

Read More »

ಎಸ್.ಆರ್.ಪಾಟೀಲ್ ಆಸ್ಪತ್ರೆಗೆ ದಾಖಲು

ಬೆಂಗಳೂರು : ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್. ಈ ಬಗ್ಗೆ ಟ್ವಿಟ್ ಮೂಲಕ ತಿಳಿಸಿರುವ ಪಾಟೀಲ್ ಅವರು , ಸಣ್ಣ ಪ್ರಮಾಣದ ಅನಾರೋಗ್ಯದ ಕಾರಣ ವೈದ್ಯರು ಒಂದು ವಾರ ವಿಶ್ರಾಂತಿಗೆ ಸೂಚಿಸಿದ್ದರಿಂದ ನನಗೆ ಸದನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದಿದ್ದಾರೆ. ಅದರೊಂದಿಗೆ, ವೈದ್ಯರ ಚಿಕಿತ್ಸೆಯಿಂದ ಅವರು ಚೇತರಿಸಿಕೊಳ್ಳುತ್ತಿರುವದಾಗಿಯೂ,ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ ಹಾಗೂ ಶೀಘ್ರದಲ್ಲೇ ಗುಣಮುಖನಾಗಲಿದ್ದೇನೆ ಎಂದು ತಿಳಿಸಿದ್ದಾರೆ.

Read More »