Breaking News

Daily Archives: ಫೆಬ್ರವರಿ 12, 2021

ಮೀಸಲಾತಿ ಹೋರಾಟ ಎತ್ತಸಾಗಿದೆ ಎಂದ ಹೈಕೋರ್ಟ್ ವಕೀಲ ಎಸ್.ವಿ.ಎಸ್

ಬೆಂಗಳೂರು: ಇತ್ತೀಚೆಗೆ ಸಮಾಜದಲ್ಲಿ ಜಾತಿ ಜಾತಿಗಳಿಗೂ ಮೀಸಲಾತಿ ನೀಡಬೇಕೆಂದು ಸಮಾಜವನ್ನು ಮಾರ್ಗದರ್ಶನ ಮಾಡುವ ಸ್ವಾಮೀಜಿಗಳು ಹೋರಾಟಕ್ಕೆ ಇಳಿದಿರುವುದು ಬಹು ಚರ್ಚಿತ ಅಂಶವಾಗಿದೆ. ಧರ್ಮದ ಅನುಯಾಯಿಗಳಾದ ಪೂಜ್ಯರುಗಳೇ ಈ ರೀತಿಯ ಹಾದಿಯಲ್ಲಿ ಹೊರಟಿರುವುದು ಬೇಸರತರಿಸಿದೆ ಎಂದು ಹೈಕೋರ್ಟ್ ವಕೀಲ ಎಸ್.ವಿ.ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದ್ದಾರೆ. ಸನ್ಯಾಸತ್ವದ ಮೂಲತ್ವವೇ ಸರ್ವಸಂಘ ಪರಿತ್ಯಾಗ ಎಂಬ ಅರ್ಥವನ್ನು ವೇದಗಳ ಕಾಲದಿಂದಲೂ ಅಳವಡಿಕೆಯಾಗಿದೆ. ಧರ್ಮದ ತಳಹದಿಯೇ ಜಾತಿ. ಈ ಜಾತಿ ಜಾತಿಗಳ ಸಮಷ್ಟಿಯೇ ಧರ್ಮ. ಆದರೆ ಈ ಜಾತಿ …

Read More »

ಫಾರ್ಮಸಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ 6 ಆರೋಪಿಗಳನ್ನು ಬಂಧಿಸಿದ ಪೊಲೀಸರು

ಹೈದರಾಬಾದ್: ಫಾರ್ಮಸಿ ವಿದ್ಯಾರ್ಥಿನಿಯ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ರಾಜು, ರಮೇಶ್, ಶಿವ, ನಾದಂ, ಭಾಸ್ಕರ, ಕುಮಾರ್ ಎಂದು ಗುರುತಿಸಲಾಗಿದೆ. ಕಾಲೇಜು ತರಗತಿಯನ್ನು ಮುಗಿಸಿ ಆಟೋ ಹತ್ತಿ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು ಆಟೋ ಚಾಲಕನೇ ಕಿಡ್ನಾಪ್ ಮಾಡಿ ಸ್ನೇಹಿತರ ಜೊತೆ ಓಮ್ನಿ ಕಾರಲ್ಲಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿ ಗ್ಯಾಂಗ್ ರೇಪ್ …

Read More »

ಬಸನಗೌಡ ಪಾಟೀಲ್ ಯತ್ನಾಳ್ ಗೆ ಪಕ್ಷದ ಹೈಕಮಾಂಡ್ ಶೋಕಾಸ್ ನೋಟೀಸ್ ಜಾರಿ

ಬೆಂಗಳೂರು: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಪಕ್ಷದ ಹೈಕಮಾಂಡ್ ಶೋಕಾಸ್ ನೋಟೀಸ್ ಜಾರಿ ಮಾಡಿದೆ. ಸರ್ಕಾರದ ವಿರುದ್ಧ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪದೇ ಪದೇ ಹೇಳಿಕೆಗಳನ್ನು ನೀಡಿ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪ ಹಾಗೂ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡುತ್ತಿರುವ ಆರೋಪ ಹಿನ್ನೆಲೆಯಲ್ಲಿ ಬಿಜೆಪಿ ಕೇಂದ್ರಿಯ ಶಿಸ್ತು ಸಮಿತಿ ನೋಟೀಸ್ ನೀಡಿದ್ದು, 15 ದಿನಗಳ ಒಳಗೆ ಉತ್ತರ ನಿಡುವಂತೆ ಸೂಚಿಸಿದೆ. ಯತ್ನಾಳ್ ಯಡಿಯೂರಪ್ಪ ವಿರುದ್ಧ …

Read More »

ಮೈಸೂರು- ಚಾಮರಾಜನಗರ ರೈಲು ಮಾರ್ಗ ವಿದ್ಯುದೀಕರಣ ಕಾಮಗಾರಿಗೆ ಶೀಘ್ರವೇ ಚಾಲನೆ

ಮೈಸೂರು: ಬಹುನಿರೀಕ್ಷಿತ, ಬಹು ಅಗತ್ಯವಿದ್ದ ಮೈಸೂರು-ಚಾಮರಾಜನಗರ ರೈಲು ಮಾರ್ಗ ಎಲೆಕ್ಟ್ರಿಫಿಕೇಷನ್ ಕಾಮಗಾರಿಗೆ ಶೀಘ್ರವೇ ಚಾಲನೆ ದೊರೆಯಲಿದೆ. ಕಾಮಗಾರಿಗೆ ಗುತ್ತಿಗೆಯನ್ನು ನೀಡಲಾಗಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ರೈಲ್ವೆ ವಿದ್ಯುದೀಕರಣಕ್ಕಾಗಿ ಇರುವ ಕೇಂದ್ರ ಕಚೇರಿಯ ಮುಖ್ಯ ಯೋಜನಾ ನಿರ್ದೇಶಕ ಆರ್ ಎ ಚೌಧರಿ ವಿದ್ಯುದೀಕರಣ ಕಾಮಗಾರಿ 12 ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ, ಫೆ.1 ರಂದು ಮಂಡನೆಯಾದ ಬಜೆಟ್ ನಲ್ಲಿ ಇದಕ್ಕಾಗಿ ಅನುದಾನವನ್ನೂ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಯೋಜನೆಗೆ 18.89 ಕೋಟಿ ರೂಪಾಯಿಗಳ …

Read More »

ಗದಗದಲ್ಲಿ ರಾಜ್ಯದ ಮೊದಲ ಇವಿಎಂ ಗೋದಾಮು ಉದ್ಘಾಟನೆ

ಗದಗ: ರಾಜ್ಯದ ಮೊದಲ ಎಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ) ಗೋದಾಮನ್ನು ರೈಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಗದಗದಲ್ಲಿ ಉದ್ಘಾಟಿಸಿದರು. ಸುಮಾರು 2.65 ಕೋಟಿ ರು ವೆಚ್ಚದಲ್ಲಿ ಈ ಕಟ್ಟಡ ಜಿಲ್ಲಾಧಿಕಾರಿ ಕಚೇರಿ ಹಿಂದೆ ನಿರ್ಮಾಣವಾಗಿದೆ, ಹೆಚ್ಚು ಸುರಕ್ಷಿತವಾದ ಕಟ್ಟಡವು ಪ್ರವೇಶದ್ವಾರದ ಬಳಿ ಮೊದಲ ಹಂತದ ಚೆಕ್‌ರೂಮ್ ಮತ್ತು ಜಿಲ್ಲೆಯ ನಾಲ್ಕು ಅಸೆಂಬ್ಲಿ ವಿಭಾಗಗಳಿಗೆ ಮೀಸಲಾಗಿರುವ ನಾಲ್ಕು ಇಂಟರ್ ಕನೆಕ್ಟೆಡ್ ಸಭಾಂಗಣಗಳನ್ನು ಹೊಂದಿದೆ. ಎಲ್ಲಾ ಸಭಾಂಗಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, …

Read More »

ಖೋಡೇಸ್ ಗ್ರೂಪ್ ಕಂಪನಿ ಮೇಲೆ ಐಟಿ ದಾಳಿ: ರೂ.878 ಕೋಟಿ ಅಕ್ರಮ ಆಸ್ತಿ ಪತ್ತೆ

ಬೆಂಗಳೂರು: ಮದ್ಯ ತಯಾರಿಕಾ ಕ್ಷೇತ್ರದ ಪ್ರಮುಖ ಕಂಪನಿ ಖೋಡೇಸ್ ಗ್ರೂಪ್ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿ ವೇಳೆ ರೂ.878.82 ಕೋಟಿಗಳಷ್ಟು ಅಘೋಷಿತ ಆದಾಯ ಪತ್ತೆ ಹಚ್ಚಿದ್ದಾರೆ. ಖೋಡೇಸ್ ಗ್ರೂಪ್’ನ ಮಾಲೀಕರ ಮನೆ, ಕಚೇರಿ ಸೇರಿದಂತೆ ಒಟ್ಟು 26 ಸ್ಥಳಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆದ್ದರು. ಈ ವೇಳೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದ ಅಧಿಕಾರಿಗಳು ಅವುಗಳನ್ನು ಪರಿಶೀಲನೆ ನಡೆಸಿದಾಗ ರೂ.878 ಕೋಟಿಯಷ್ಟು ಅಘೋಷಿತ ಆದಾಯ …

Read More »

ಪಕ್ಷ ಬಯಸಿದ್ರೆ ಗೋಕಾಕ್​ನಿಂದ ನಾನೇ ಸ್ಪರ್ಧೆ ಮಾಡುತ್ತೇನೆ: ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ: ಪಕ್ಷ ಬಯಸಿದ್ರೆ ಗೋಕಾಕ್​ನಿಂದ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಕಾಂಗ್ರೆಸ್​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಟಾಂಗ್​ ಕೊಟ್ಟಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ರಮೇಶ ಜಾರಕಿಹೊಳಿ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ ಎಂದಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯರಿಗೆ …

Read More »

‘ಮಿಠಾಯಿ ಕಂಡ ಮಗುವಿನಂತಾಗಿರುವ ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್’

ಮೈಸೂರು: ಸಿದ್ದರಾಮಯ್ಯ ಮಿಠಾಯಿ ಕಂಡ ಮಗುವಿನಂತಾಗಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಟ್ರಂಪ್ ಇದ್ದಂತೆ. ಟ್ರಂಪಾಯಣದಂತೆ ಸಿದ್ದರಾಮಾಯಣ ನಡೆಯುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿದಾಗ ಸಿಎಂ ಎಂಬ ಮಿಠಾಯಿ ನೆನಪಾಗುತ್ತದೆ. ಅದನ್ನು ಪಡೆಯಬೇಕೆಂದು ಚಡಪಡಿಸುತ್ತಾರೆ. ಹೀಗಾಗಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ. ಸೋಲನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಸಿದ್ಧರಿಲ್ಲ, ಅವರದು ಕಾಂಗ್ರೆಸ್ ಸಂಸ್ಕಾರ, ಸಂಸ್ಕೃತಿ …

Read More »

ಸಿದ್ದರಾಮಯ್ಯರ ಅಹಿಂದ ಲೆಕ್ಕಾಚಾರಕ್ಕೆ ಸತೀಶ ಜಾರಕಿಹೊಳಿ ಹೇಳಿದ್ದೇನು..?

ಕಾಂಗ್ರೆಸ್ ಪಕ್ಷ ಇರೋದೆ ಅಹಿಂದ್ ಬೇಸ್ ಮೇಲೆ, ಹೀಗಾಗಿ ಮತ್ತೆ ಅಹಿಂದ ಸಮಾವೇಶ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸುತ್ತಾರೆ ಎಂಬ ಚರ್ಚೆ ಕೇಳಿ ಬರುತ್ತಿರುವ ವಿಚಾರಕ್ಕೆ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ ಜಾರಕಿಹೊಳಿ ಈ ಬಗ್ಗೆ ಎಲ್ಲಿಯೂ ಚರ್ಚೆ ಆಗಿಲ್ಲ, ಅಹಿಂದ ಚಳುವಳಿ ಎಲ್ಲಿಯೂ ಇಲ್ಲವೇ ಇಲ್ಲ, ಯಾಕೆಂದರೆ ಕಾಂಗ್ರೆಸ್ ಪಕ್ಷ ಇರೋದೇ …

Read More »

A.B.V.P.ಅಧ್ಯಕ್ಷರಾಗಿದ್ದ ಬಗ್ಗೆ ಸತೀಶ ಜಾರಕಿಹೊಳಿ ಹೇಳಿದ್ದೇನು..?

೪೦ ವರ್ಷದ ಎಬಿವಿಪಿಗೂ, ಜನಸಂಘಕ್ಕೂ ಈಗಿನ ಆರ್‌ಎಸ್‌ಎಸ್, ಬಿಜೆಪಿಗೂ ಸಾಕಷ್ಟು ವ್ಯತ್ಯಾಸವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  ಸತೀಶ ಜಾರಕಿಹೊಳಿ ಎಬಿವಿಪಿ ಅಧ್ಯಕ್ಷರಾಗಿದ್ದರು ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಯಿಸಿದ ಸತೀಶ ಜಾರಕಿಹೊಳಿ ೪೦ ವರ್ಷದ ಎಬಿವಿಪಿ, ಆರ್‌ಎಸ್‌ಎಸ್, ಜನಸಂಘಕ್ಕೂ ಬಿಜೆಪಿಗೂ ಯಾವುದೇ ರೀತಿ ಸಂಬAಧ ಇಲ್ಲ. ಮೊದಲು ಜನಸಂಘದ ಕಾರ್ಯಕ್ರಮ ನೋಡಲು ಇಡೀ ಊರಿಗೆ ಊರೇ ಹೋಗುತ್ತಿತ್ತು. ಹೀಗಾಗಿ ಬಹಳಷ್ಟು ವ್ಯತ್ಯಾಸವಾಗಿದೆ, ಹೋರಾಟ, …

Read More »