Breaking News

Daily Archives: ಫೆಬ್ರವರಿ 20, 2021

ಅಧಿಕಾರಿಗಳ ಜೊತೆ ನವದೆಹಲಿಗೆ ತೆರಳಿದ ರಮೇಶ್ ಸಾಹುಕಾರ್…

ಬೆಳಗಾವಿ-ಕರ್ನಾಟಕ ರಾಜ್ಯದ ಹಲವು ನೀರಾವರಿ ಯೋಜನೆಗಳ ಕುರಿತು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ರಾಜ್ಯದ ಜಲಸಂಪನ್ಮೂಲ ಸಚಿವ ಶ್ರೀ ರಮೇಶ್ ಜಾರಕಿಹೊಳಿ‌, ನವದೆಹಲಿಯಲ್ಲಿ ಸೋಮವಾರ ಭೇಟಿ ಮಾಡಿ ಚರ್ಚಿಸಲಿದ್ದಾರೆ. ಆ ಸಭೆಗೂ ಮುನ್ನ ನವದೆಹಲಿಯ ಕರ್ನಾಟಕ ಭವನದಲ್ಲಿ ಕೃಷ್ಣಾ, ಕಾವೇರಿ, ಮಹದಾಯಿ ಸೇರಿದಂತೆ ಅಂತರರಾಜ್ಯ ಜಲವಿವಾದಗಳ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ತಜ್ಞರು ಮತ್ತು ತಾಂತ್ರಿಕ ಸಲಹೆಗಾರರ ಸಭೆಯಲ್ಲಿ …

Read More »

ಆರ್ಥಿಕವಾಗಿ ಸಬಲರಾಗಿರುವ ಜಾತಿಗಳನ್ನು 2ಎ ಗೆ ಸೇರಿಸಲು ವಿರೋಧ

ಗೋಕಾಕ: ಆರ್ಥಿಕವಾಗಿ ಸಬಲರಾಗಿರುವ ಜಾತಿಗಳನ್ನು 2ಎ ಗೆ ಸೇರ್ಪಡೆ ಮಾಡುವುದಕ್ಕೆ ರಾಜ್ಯ ಆರ್ಯ ಈಡಿಗ ಸಂಘದ ಯುವ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಈಳಿಗೇರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಡಿಗ, ಬಿಲ್ಲವ ಸೇರಿ ಅನೇಕ ಜಾತಿಗಳು ಈಗಾಗಲೇ 2ಎ ನಲ್ಲಿವೆ. ಇದರಲ್ಲಿ ಈಡಿಗ ಸಮುದಾಯ 60 ಲಕ್ಷದಿಂದ 70 ಲಕ್ಷ ಜನಸಂಖ್ಯೆ ಹೊಂದಿದೆ. 2ಎ ನಲ್ಲಿ ಈಗಾಗಲೇ ಇರುವ ಸಮುದಾಯಗಳಿಗೆ ಸರಿಯಾಗಿ ಮೀಸಲಾತಿ …

Read More »

ಮರಕ್ಕೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು: ಚಾಲಕ ಸಜೀವ ದಹನ

ರಾಯಚೂರು: ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಚಾಲಕ ಸಜೀವ ದಹನವಾದ ಘಟನೆ ತಾಲೂಕಿನ ಕಲ್ಮಲ ಸಮೀಪ ಸಂಭವಿಸಿದೆ. ಮೃತ ಕಾರು ಚಾಲಕನನ್ನು ಮಲ್ಲಟ ಗ್ರಾಮದ ಸದಾನಂದಗೌಡ ಮಾಲೀಪಾಟೀಲ (60) ಎಂದು ಗುರುತಿಸಲಾಗಿದೆ. ಮಲ್ಲಟದಿಂದ ರಾಯಚೂರು ಕಡೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡದಿದೆ. ಇದರಿಂದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಕ್ಷಣದಲ್ಲೇ ಹೊತ್ತಿ ಉರಿದಿದೆ. ಕಾರು ಲಾಕ್ ಆಗಿರುವ ಕಾರಣ ಚಾಲಕ …

Read More »

ಮಸಗುಪ್ಪಿ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಭೇಟಿ ಶಾಸಕರಿಂದ ಭಜರಂಗದಳ ಘಟಕ ಉದ್ಘಾಟನೆ

ಮೂಡಲಗಿ : ಮಸಗುಪ್ಪಿ ಮಹಾಲಕ್ಷಿ ದೇವಿ ದೇವಸ್ಥಾನವು ಭಕ್ತರ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವ ಪುಣ್ಯಕ್ಷೇತ್ರವಾಗಿ ಬೆಳೆಯುತ್ತಿದೆ ಎಂದು ಕೆಎಂಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಮಸಗುಪ್ಪಿ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸುಮಾರು 5 ಕೋಟಿ ವೆಚ್ಚದಲ್ಲಿ ಮಹಾಲಕ್ಷ್ಮಿ ದೇವಿ ದೇವಸ್ಥಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. 2.50 ಕೋಟಿ ರೂ.ವೆಚ್ಚದಲ್ಲಿ ದೇವಸ್ಥಾನದ ಹೊಸ ಕಟ್ಟಡ, 50 ಲಕ್ಷ ರೂ.ವೆಚ್ಚದಲ್ಲಿ ದೇವಸ್ಥಾನದ ಸಿಖರ , …

Read More »

ಬೆಳಗಾವಿ: ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ನೇಕಾರನ ಕುಟುಂಬಕ್ಕೆ ಸಚಿವರ ಸಾಂತ್ವನ

ಬೆಳಗಾವಿ: ನಗರದ ವಡಗಾವಿಯಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ನೇಕಾರ ಸಿದ್ದಲಿಂಗೇಶ್ವರ ಗಂಗಪ್ಪ ಹೊರಕೇರಿ ಅವರ ಮನೆಗೆ ಕೈಮಗ್ಗ, ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಶ್ರೀಮಂತ ಪಾಟೀಲ ಶನಿವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕುಟುಂಬದವರಿಗೆ ತಮ್ಮ ‘ಶ್ರೀಮಂತ ಪಾಟೀಲ ಪ್ರತಿಷ್ಠಾನ’ದಿಂದ ಆರ್ಥಿಕ ನೆರವು ನೀಡಿದರು. ಆದಷ್ಟು ಬೇಗ ಇಲಾಖೆಯಿಂದಲೂ ನೆರವು ಕೊಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಇಲಾಖೆಯ ಅಧಿಕಾರಿಗಳು, ಮುಖಂಡರು ಹಾಗೂ ಸ್ಥಳೀಯರು ಇದ್ದರು.

Read More »

ಭೀಕರ ಅಪಘಾತ : ನಡುರಸ್ತೆಯಲ್ಲೇ ಹೊತ್ತಿ ಉರಿದ ಲಾರಿ-ಕಾರು

ದಾವಣಗೆರೆ : ಟಿಪ್ಪರ್-ಲಾರಿಗೆ ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಲಾರಿಗೂ ತಗಲು ಸುಟ್ಟು ಕರಕಲಾದ ಘಟನೆ ನಡೆದಿದೆ. ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ. ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಾಗುತ್ತಿದ್ದ ಕಾರು, ದಾವಣಗೆರೆ ಕಡೆಯಿಂದ ಬರುತ್ತಿದ್ದಂತ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡು, ಕ್ಷಣಾರ್ಧದಲ್ಲೇ ಹೊತ್ತಿ ಉರಿದಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದಂತವರು …

Read More »

ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಳ: ಗಡಿಯಲ್ಲಿ ನಿಗಾವಹಿಸುವಂತೆ ಡಿಸಿಎಂ ಸೂಚನೆ

ಬೆಳಗಾವಿ: ಮಹರಾಷ್ಟ್ರ, ಕೇರಳ ರಾಜ್ಯದಲ್ಲಿ ಹೊಸ ಪ್ರಭೇದದ ಕೋವಿಡ್ ಪತ್ತೆ ಹಿನ್ನೆಲೆಯಲ್ಲಿ ಗಡಿಯಲ್ಲಿ ನಿಗಾ ವಹಿಸುವಂತೆ ಸೂಚಿಸಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು. ಸಾರ್ವಜನಿಕರು ಹೆಚ್ಚಿನ ಜಾಗೃತಿ ವಹಿಸಿ ಮಾಸ್ಕ್ ಧರಿಸಬೇಕು. ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಈಗಾಗಲೇ ಅಂತರರಾಜ್ಯ ಸಾರಿಗೆ ಆರಂಭವಾಗಿದೆ. ಈ ಮೊದಲಿನಂತೆ ಜಾಗೃತಿ ವಹಿಸಲು ಸೂಚನೆ ನೀಡಲಾಗಿದೆ ಎಂದರು. ಇನ್ನು ಪಂಚಮಸಾಲಿ ಸಮುದಾಯ 2ಎಗೆ ಸೇರಿಸಬೇಕು ಎಂಬ ಹೋರಾಟದ ವಿಚಾರವಾಗಿ ಪ್ರತಿಕ್ರಿಯಿಸಿ, ಸಮಾಜದ ಹೋರಾಟಕ್ಕೆ ನನ್ನ …

Read More »

ಫೆ.23 ರಂದು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿ

ಬೆಂಗಳೂರು: “ಶಿಕ್ಷಣ ಇಲಾಖೆಯ ಧೋರಣೆ, ದ್ವಂದ್ವ ನಿಲುವು, ಅವೈಜ್ಞಾನಿಕ ಕ್ರಮಗಳನ್ನು ಖಂಡಿಸಿ ಫೆ. 23ರಂದು ಬೃಹತ್‌ ಪ್ರತಿಭಟನಾ ರ‍್ಯಾಲಿ ಮತ್ತು ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದು ರಾಜ್ಯ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳ ಸಂಘಟನೆಯ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಶನಿವಾರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅಂದು ಬೆಳಿಗ್ಗೆ 10 ಗಂಟೆಗೆ ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ನಡೆಯಲಿರುವ ಬೃಹತ್‌ ಪ್ರತಿಭಟನಾ ರ‍್ಯಾಲಿಯಲ್ಲಿ ರಾಜ್ಯಾದ್ಯಂತ …

Read More »

ಪಡಿತರ ಅಕ್ಕಿ ಮಾರಾಟ : ಬೆಳಗಾವಿಯಲ್ಲಿ ಮೂವರ ಬಂಧನ

ಬೆಳಗಾವಿ : ಇಲ್ಲಿನ ಶೆರಿಗಲ್ಲಿಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.   ವಿತರಿಸುವ ಪಡಿತರ ಅಕ್ಕಿಗಳನ್ನು ಮಾರಾಟ ಮಾಡುತ್ತಿದ್ದ ವೇಳೆ ಖಡೇಬಜಾರ ಠಾಣೆಯ ಪಿಐ ದೀರಜ್ ಶಿಂಧೆ ನೇತೃತ್ವದ ತಂಡ ದಾಳಿ ನಡೆಸಿ, ಮೂವರು ಬಂಧಿಸಿದ್ದಾರೆ.   ಬಂಧಿತರಿಂದ ಐಸರ್ ಕಂಪನಿಯ ಗೂಡ್ಸ್ ವಾಹನ, 66375 ಮೌಲ್ಯದ 118 ಅಕ್ಕಿ ಚೀಲ ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.

Read More »

ಭಾರತ-ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಸರಣಿಯ ಕೊನೆಯ 2 ಟೆಸ್ಟ್ ಪಂದ್ಯಗಳ ಆತಿಥ್ಯಕ್ಕೆ ಸಜ್ಜು

ಅಹಮದಾಬಾದ್: ನವೀಕೃತ ಗೊಂಡಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂ ಭಾರತ-ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಸರಣಿಯ ಕೊನೆಯ 2 ಟೆಸ್ಟ್ ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗಿದೆ. ಮೂರನೇ ಟೆಸ್ಟ್ ಪಂದ್ಯವು ಹಗಲು- ರಾತ್ರಿ ನಡೆಯಲಿದ್ದು, ವೈಮಾನಿಕ ಚೆಂಡುಗಳನ್ನು ಗುರುತಿಸಲು ಸುಲಭವಾಗು ವಂತೆ, ನೆರಳನ್ನು ನಿವಾರಿಸಲು ಸ್ಟೇಡಿಯಂನಲ್ಲಿ ಹೊಸದಾಗಿ ಎಲ್‌ಇಡಿ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ಕ್ರೀಡಾಂಗಣದಲ್ಲಿ 11 ಸೆಂಟರ್ ಸ್ಟ್ರಿಪ್‌ಗಳಿದ್ದು, ಇದು ಅನನ್ಯವಾದುದು. ಆಟಗಾರರಿಗೆ 4 ಡ್ರೆಸ್ಸಿಂಗ್ …

Read More »