Breaking News

ಊಟ ಮಾಡುವಾಗ ಹೃದಯಾಘಾತ – ಮಗಳು, ಅಳಿಯನ ಕಣ್ಣೆದುರೇ ಪ್ರಾಣಬಿಟ್ಟ ವ್ಯಕ್ತಿ!

Spread the love

ರಾಮನಗರ: ಊಟ ಮಾಡುತ್ತಿದ್ದಾಗಲೇ ಹೃದಯಾಘಾತ  ಸಂಭವಿಸಿ ಮಗಳು, ಅಳಿಯನ ಎದುರಲ್ಲೇ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಮನಗರ ತಾಲೂಕಿನ ಮಂಚಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಲಿಂಗಯ್ಯ ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ. ಮಗಳು ಹಾಗೂ ಅಳಿಯನೊಂದಿಗೆ ಸಂತೋಷದಿಂದ ಊಟ ಮಾಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿದ್ದು, ಪ್ರಾಣಬಿಟ್ಟಿದ್ದಾರೆ.

ಸೋಫಾದ ಮೇಲೆ ಕುಳಿತು ಊಟ ಮಾಡುವಾಗ ಕುಸಿದು ಬೀಳುವ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಏಕಾಏಕಿ ಕುಳಿತ ಜಾಗದಲ್ಲೇ ಕುಸಿದ ತಂದೆಯನ್ನ ಮೊದಲಿಗೆ ಅಲ್ಲೇ ಊಟ ಮಾಡುತ್ತಿದ್ದ ಅವರ ಮಗಳು ನೋಡಿದ್ದಾರೆ.

ಆಘಾತದಲ್ಲಿ ಕಿಟಾರನೆ ಚೀರುತ್ತಾ ತಂದೆ ಬಳಿ ಓಡಿಬಂದಿದ್ದಾರೆ. ತಕ್ಷಣ ಕುಸಿದು ಬಿದ್ದ ತಂದೆಯ ಎದೆ ಒತ್ತಿ ಪ್ರಥಮ ಚಕಿತ್ಸೆ ನೀಡಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ತಂದೆ ಪ್ರಾಣಬಿಟ್ಟಿದ್ದಾರೆ.


Spread the love

About Laxminews 24x7

Check Also

ತಗಡಿನ ಮನೆಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳು

Spread the loveಗದಗ: ತಗಡಿನ ಮನೆಗೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ