Breaking News

ಬೆಳಗಾವಿಯಲ್ಲಿ ಅನಧಿಕೃತ ಖಾಸಗಿ ಹೂವಿನ ಮಾರುಕಟ್ಟೆ ಅಟ್ಟಹಾಸಕ್ಕೆ ಸರ್ಕಾರಿ ವ್ಯಾಪಾರಿಗಳು ಕಂಗಾಲು ದಂಡು ಮಂಡಳಿ ಮೊರೆ ಹೋಗಿ ನ್ಯಾಯಕ್ಕಾಗಿ ಆಗ್ರಹ..ಕೂಡಲೇ ಮಾರುಕಟ್ಟೆ ಬಂದ್ ಮಾಡಲೂ ಒತ್ತಾಯ!!!

Spread the love

ಕುಂದಾನಗರಿ ಬೆಳಗಾವಿಯಲ್ಲಿ ಹೂವಿನ ವ್ಯಾಪಾರಿಗಳ ನಡುವೆ ಕಿಚ್ಚು ಹತ್ತಿಕೊಂಡಿದೆ. ಎಪಿಎಂಸಿ ಮತ್ತು ತೋಟಗಾರಿಕಾ ಇಲಾಖೆಯ ಅನುಮತಿ ಇಲ್ಲದೆ ತಲೆ ಎತ್ತಿರುವ ಖಾಸಗಿ ಹೂವಿನ ಮಾರುಕಟ್ಟೆ ವಿರುದ್ಧ ಸರ್ಕಾರಿ ಮಾರುಕಟ್ಟೆಯ ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ. ಇಂದು ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

:ಬೆಳಗಾವಿಯ ಭರತೇಶ್ ಶಿಕ್ಷಣ ಸಂಸ್ಥೆಯ ಸಮೀಪ ಯಾವುದೇ ಕಾನೂನುಬದ್ಧ ಅನುಮತಿ ಇಲ್ಲದೆ ಖಾಸಗಿ ಸಗಟು ಹೂವಿನ ಮಾರುಕಟ್ಟೆಯನ್ನು ಆರಂಭಿಸಲಾಗಿದೆ. ಇದರಿಂದಾಗಿ ರೈತರು ಸರ್ಕಾರಿ ಮಾರುಕಟ್ಟೆಗೆ ಬಾರದೆ ಖಾಸಗಿ ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದು, ಸರ್ಕಾರಿ ಮಾರುಕಟ್ಟೆಯ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ದಂಡು ಮಂಡಳಿಯ ಸಿಇಒ ಮಂಚಲವಾರ ಸುದಾಮ್ ಹರಿವಿಜಯ್ ಅವರನ್ನು ಭೇಟಿ ಮಾಡಿದ ವ್ಯಾಪಾರಿಗಳ ನಿಯೋಗ, ತಕ್ಷಣವೇ ಈ ಅನಧಿಕೃತ ಮಾರುಕಟ್ಟೆಯನ್ನು ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸಿತು.

ಸಾಮಾಜೀಕ ಕಾರ್ಯಕರ್ತ ರಾಜಕುಮಾರ್ ಟೋಪಣ್ಣವರ ಅವರು ಈಗಾಗಲೇ ಸರ್ಕಾರಿ ಹೂವಿನ ಮಾರುಕಟ್ಟೆ ಇರುವಾಗ ಎಪಿಎಂಸಿ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಅನುಮತಿಯನ್ನು ಪಡೆಯದೇ, ದಂಡು ಮಂಡಳಿಯ ಪ್ರದೇಶದಲ್ಲಿ ಹೂವಿನ ಮಾರುಕಟ್ಟೆಯನ್ನು ಆರಂಭಿಸಲಾಗಿದೆ ಎಂದು ದೂರಿದರು.
ಇನ್ನು ಆಯೇಷಾ ಸನದಿ ಅವರು ಸರ್ಕಾರಿ ಹೂವಿನ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವ್ಯಾಪಾರಿಗಳು ಮಳಿಗೆಗಳನ್ನು ಖರೀದಿಸಲಾಗಿದೆ. ಹೀಗಿರುವಾಗ ಖಾಸಗಿ ಮಾರುಕಟ್ಟೆಗೆ ರೈತರು ಒಲುವು ತೋರಿದರೇ, ಸರ್ಕಾರಿ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ನಷ್ಟಕ್ಕೊಳಗಾಗುತ್ತಾರೆ. ಇಂದು ಸರ್ಕಾರಿ ಮಾರುಕಟ್ಟೆಯಲ್ಲಿನ ಮಳಿಗೆಗಳು ಸ್ಥಗಿತವಾಗಿವೆ. ನಮಗೆ ನ್ಯಾಯ ನೀಡಿ ಎಂದರು. ನಾಳೆಯಿಂದ ಖಾಸಗಿ ಮಾರುಕಟ್ಟೆ ಕಾರ್ಯನಿರ್ವಹಿಸಬಾದು. ಎಲ್ಲಿಯ ವರೆಗೂ ನ್ಯಾಯ ಸಿಗುವುದಿಲ್ಲವೋ ಅಲ್ಲಿಯ ವರೆಗೂ ನಮ್ಮ ಪ್ರತಿಭಟನೆ ಜಾರಿಯಲ್ಲಿರಲಿದೆ ಎಂದರು.
ಸಮಾಜಸೇವಕರ ಸುಜೀತ್ ಮುಳಗುಂದ ಅವರು ಕೂಡ ಈ ಸಮಸ್ಯೆಯ ಪರಿಹಾರ ಸಿಗುವವರೆಗೂ ನಿಯಮಬಾಹಿರ ಖಾಸಗಿ ಮಾರುಕಟ್ಟೆಯನ್ನು ಆರಂಭಿಸಲೂ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದರು.
ಇನ್ನು ದಂಡು ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಂಚಲವಾರ ಸುದಾಮ್ ಹರಿವಿಜಯ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ