ಬೆಳಗಾವಿ: ಕಬ್ಬಿನ ದರ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಘೋಷಿಸಿದ್ದಾರೆ. ಪೊಲೀಸರ ವಶದಿಂದ ಬಿಡುಗಡೆಯಾದ ಬಳಿಕ ಬೆಳಗಾವಿಯ ಪೊಲೀಸ್ ಕ್ವಾರ್ಟರ್ಸ್‌ನ ವೀರಭದ್ರ ದೇವಸ್ಥಾನದಲ್ಲಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ನಾಳೆಯಿಂದ ಕಾರ್ಯಾರಂಭ ಮಾಡಲಿದ್ದು, ಯಾವುದೇ ರೈತರು ಕಾರ್ಖಾನೆಗಳ ಆರಂಭಕ್ಕೆ ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದರು. ಗುರ್ಲಾಪುರದಲ್ಲಿಯೂ ಹೋರಾಟವನ್ನು ಹಿಂಪಡೆಯಲಾಗಿದ್ದು, ನಾಳೆ ಅಲ್ಲಿ ರೈತರೆಲ್ಲರೂ …
Read More »ಗರ್ಭಿಣಿ ಪತ್ನಿ ಎದುರಲ್ಲೇ ಪತಿಗೆ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು
ಗರ್ಭಿಣಿ ಪತ್ನಿಯ ಎದುರಲ್ಲೇ ದುಷ್ಕರ್ಮಿಗಳು ಪತಿಗೆ ಗುಂಡಿಕ್ಕಿ ಹತ್ಯೆಗೈದ ದಾರುಣ ಘಟನೆ ನಡೆದಿದೆ. ಯಾಸೀನ್ ಜುಬೇರಿ (34) ಹತ್ಯೆಯಾದ ದುರ್ದೈವಿ. ಗರ್ಭಿಣಿ ಪತ್ನಿಯನ್ನು ಯಾಸೀನ್ ಆಸ್ಪತ್ರೆಗೆ ಕರೆತಂದಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇದರಿಂದ ಸ್ಥಳದಲ್ಲೇ ಅವರು ಸಾವನ್ನಪ್ಪಿದ್ದಾರೆ. ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ವಿಜಯಪುರದ ನೆಹರು ನಗರದ ಮುಂಡೆವಾಡಿ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ. ಅಫ್ಜಲ್‌ಪುರದ ಟಕ್ಕೆ ಮೂಲದ ಯಾಸೀನ್ ಜುಬೇರಿ ಕೊಲೆಯಾದವರು. ಸ್ಥಳಕ್ಕೆ …
Read More »ಲಾಭ ಹಂಚಿಕೆ ಸೂತ್ರದಡಿ ಕಬ್ಬಿನ ಬೆಲೆ ನಿಗದಿ
ಬೆಳಗಾವಿ: ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಮಹತ್ವದ ಹೆಜ್ಜೆ ಇಟ್ಟಿರುವ ಜಿಲ್ಲಾಡಳಿತ, ಇದೇ ಮೊದಲ ಬಾರಿಗೆ ಆದಾಯ ಹಂಚಿಕೆ (Profit Sharing) ಸೂತ್ರದಡಿ ಕಬ್ಬಿನ ಬೆಲೆ ನಿಗದಿಪಡಿಸಲು ನಿರ್ಧರಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಈ ನೂತನ ಸೂತ್ರವನ್ನು ರೂಪಿಸಲಾಗಿದೆ. ರೈತರ ಬೇಡಿಕೆಗಳಿಗೆ ಪೂರಕವಾಗಿರುವ ಈ ಸೂತ್ರಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರು ಕೂಡ ಸಹಮತ ಸೂಚಿಸಿರುವುದು ವಿಶೇಷವಾಗಿದೆ. ಈ ಹಿಂದೆ …
Read More »ಡಿ. 2ರಿಂದ ಬೆಳಗಾವಿ ಅಧಿವೇಶನ: ₹20 ಸಾವಿರ ಕೋಟಿ ವೆಚ್ಚದ ರಸ್ತೆ, ಸೇತುವೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಪುಟ ಅಸ್ತು
ರಾಜ್ಯದ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ಯೋಜನೆಗಳಿಗೆ ಕರ್ನಾಟಕ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ರಾಜ್ಯದ ವಿವಿಧೆಡೆ ರಸ್ತೆ, ಸೇತುವೆ ಹಾಗೂ ಕಟ್ಟಡ ಕಾಮಗಾರಿಗಳ ಅಭಿವೃದ್ಧಿಗೆ ಒಟ್ಟು ₹20 ಸಾವಿರ ಕೋಟಿ ವೆಚ್ಚ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ. ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ ಖಂಡ್ರೆ, ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳ ಕುರಿತು ಮಾಹಿತಿ ನೀಡಿದರು. ರಾಜ್ಯದ ವಿವಿಧ ರಾಜ್ಯ …
Read More »ಯುವತಿಗೆ ಮತ್ತು ಬರಿಸಿ ರೇಪ್ ಆರೋಪ – ಯುವಕ ಸಮೀರ್ ಬಂಧನ
ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬಳು ಅಪರಿಚಿತನೊಬ್ಬನ ಸ್ನೇಹ ಬೆಳೆಸಿ ಅತ್ಯಾಚಾರಕ್ಕೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೋರಮಂಗಲದ ಪಬ್ ಒಂದರಲ್ಲಿ ಸಿಗರೇಟ್ ಸೇದಲು ಸಮೀರ್ ಎಂಬಾತನ ಬಳಿ ಯುವತಿ ಲೈಟರ್ ಕೇಳಿದ್ದಾಳೆ. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಆರೋಪಿ ತನ್ನ ಮಾತಿನಿಂದ ಯುವತಿಯನ್ನ ನಂಬಿಸಿ ಮೊಬೈಲ್ ನಂಬರ್ ಪಡೆದಿದ್ದನು ನಂತರ ಮಡಿವಾಳದ ಹೋಟೆಲ್ ರೂಮ್‌ಗೆ ಯುವತಿಯನ್ನ ಆಹ್ವಾನಿಸಿ, ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ಯುವತಿಗೆ ನಶೆ ಏರಿದ …
Read More »ನವೆಂಬರ್‌ನಲ್ಲೇ 99 ಅಡಿಗೆ ಕುಸಿದ ಕೆಆರ್‌ಎಸ್ ನೀರಿನ ಮಟ್ಟ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ನೀರಿನ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ನವೆಂಬರ್ ಆರಂಭದಲ್ಲೇ 99 ಅಡಿಗೆ ಕುಸಿದಿದ್ದು, ಬೇಸಿಗೆ ಸಮೀಪಿಸುವ ಮುನ್ನವೇ ಜಲಕಂಟಕ ಎದುರಾಗುವ ಆತಂಕ ಸೃಷ್ಟಿಯಾಗಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಕೇವಲ ಒಂದು ವಾರದ ಅವಧಿಯಲ್ಲೇ ಬರೋಬ್ಬರಿ 5 ಅಡಿ ನೀರು ಖಾಲಿಯಾಗಿದೆ. ಕಳೆದ ವಾರ 104 …
Read More »ಕಾಫಿನಾಡ ಶಕ್ತಿದೇವತೆ ಬಿಂಡಿಗ ದೇವೀರಮ್ಮನ ಜಾತ್ರಾ ಮಹೋತ್ಸವ – ಈ ಬಾರಿ ಭಕ್ತರಿಗೆ ಹೊಸ ರೂಲ್ಸ್
ಚಿಕ್ಕಮಗಳೂರು: ತಾಲೂಕಿನ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಬಿಂಡಿಗ- ಮಲ್ಲೇನಹಳ್ಳಿ ಗ್ರಾಮದ ಶಕ್ತಿದೇವತೆ ದೇವೀರಮ್ಮನ ಜಾತ್ರಾ ಮಹೋತ್ಸವಕ್ಕೆ ಈ ಬಾರಿ ಜಿಲ್ಲಾಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಹೊಸ ನಿಯಮಗಳನ್ನ ಜಾರಿಗೆ ತಂದಿದೆ. ಈಗಾಗಲೇ ಜಾತ್ರಾ ಮಹೋತ್ಸವಕ್ಕೆ ಜಿಲ್ಲಾಡಳಿತ, ವಿವಿಧ ಇಲಾಖೆಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆಗಳು ನಡೆಯುತ್ತಿವೆ. ಸಮುದ್ರ ಮಟ್ಟದಿಂದ ಸುಮಾರು 3,800 ಅಡಿ ಎತ್ತರದ ಕಿರಿದಾದ ದುರ್ಗಮ ಹಾದಿಯ ಬೆಟ್ಟದ ತುದಿಯಲ್ಲಿರೋ ಜಗನ್ಮಾತೆ ದೇವಿರಮ್ಮ ಲಕ್ಷಾಂತರ …
Read More »ಹಳ್ಳಿಗರೆಂದರೆ ಗುಗ್ಗುಗಳಲ್ಲ ಪ್ರಿಯಾಂಕ್ ಖರ್ಗೆಗೆ ಹೆಚ್‌ಡಿಕೆ ಖಡಕ್ ತಿರುಗೇಟು
ಬೆಂಗಳೂರು: ಹಳ್ಳಿಗರೆಂದರೆ ಗುಗ್ಗುಗಳಲ್ಲ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ. ಸ್ಟಿಂಗ್ ಆಪರೇಷನ್ ಕುರಿತ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಅವರು, ಹೆಚ್.ಡಿ.ಕುಮಾರಸ್ವಾಮಿ ಹಳ್ಳಿ ಗುಗ್ಗುನಾ? ನಾವೇನು ಬಿಗ್ ಬಾಸ್ ನಡೆಸ್ತಿದ್ದೀವಾ, ತನಿಖೆಯನ್ನು ಲೈವ್ ಸ್ಟ್ರೀಮ್ ಮಾಡಲು ಆಗುತ್ತಾ? ತನಿಖೆ ಮಕ್ಕಳ ಆಟವಲ್ಲ, ಅವರಿಂದ ನನಗೆ ಪ್ರಮಾಣಪತ್ರ ಅಗತ್ಯವಿಲ್ಲ, ಕಲಿಯುವುದು …
Read More »ಸವದತ್ತಿ ಗುಡ್ಡದಲ್ಲಿ ಹುಂಡಿ ಎಣಿಕೆ – ಮನೆಯಲ್ಲಿನ ತಿಗಣೆ ಓಡಿಸುವಂತೆ ಭಕ್ತನ ವಿಚಿತ್ರ ಪತ್ರ ಪತ್ತೆ
ಬೆಳಗಾವಿ: ಉತ್ತರ ಕರ್ನಾಟಕದ ಆರಾಧ್ಯ ದೇವತೆ ಸವದತ್ತಿ ಯಲ್ಲಮ್ಮನ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಒಟ್ಟು 2 ಕೋಟಿ 69 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ಇದರ ಜೊತೆಗೆ ಹುಂಡಿಯಲ್ಲಿ ಭಕ್ತನೊಬ್ಬ ಬರೆದಿದ್ದ ವಿಚಿತ್ರ ಬೇಡಿಕೆಯ ಪತ್ರ ಎಲ್ಲರ ಗಮನ ಸೆಳೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದಲ್ಲಿರುವ ದೇವಸ್ಥಾನದ ಹುಂಡಿಯಲ್ಲಿ 2.34 ಕೋಟಿ ನಗದು ಕಾಣಿಕೆ ಸಂಗ್ರಹವಾಗಿದೆ. ಇದರ ಜೊತೆಗೆ 26.95 ಲಕ್ಷ ಮೌಲ್ಯದ ಚಿನ್ನಾಭರಣ …
Read More »ಹುಟ್ಟುಹಬ್ಬದಂದೇ ನಾಲೆ ಬಳಿ ದ್ವಿತೀಯ ಪಿಯು ವಿದ್ಯಾರ್ಥಿ ನಿಗೂಢ ನಾಪತ್ತೆ
ಮಂಡ್ಯ: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ನಾಲೆ ಬಳಿ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಸಮೀಪದ ವರುಣಾ ನಾಲೆ ಬಳಿ ನಡೆದಿದೆ. ಮೈಸೂರು ಮೂಲದ ವೈಭವ್ (17) ನಾಪತ್ತೆಯಾದ ವಿದ್ಯಾರ್ಥಿ. ಈತ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ನಿನ್ನೆ ವೈಭವ್‌ನ ಹುಟ್ಟುಹಬ್ಬ ಇದ್ದಿದ್ದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣವಿತ್ತು. ಆದರೆ, ಮನೆಯಿಂದ ಬೈಕ್‌ನಲ್ಲಿ ಹೊರಟಿದ್ದ ವೈಭವ್ ಬೆಳಗೊಳ ಸಮೀಪದ …
Read More »
Laxmi News 24×7