Breaking News

ಎಥೆನಾಲ್‌ ಬಂಕ್‌ಗಳಲ್ಲಿ ಮಿಕ್ಸ್‌ ಆಗ್ತಿಲ್ಲ, ಸರಬರಾಜು ಮಾಡುವಲ್ಲೇ ಮಿಕ್ಸ್‌ ಆಗ್ತಿದೆ – ಡಿಕೆ ಶಿವಕುಮಾರ್‌

Spread the love

ಬೆಂಗಳೂರು: ಎಥೆನಾಲ್‌  ಪೆಟ್ರೋಲ್‌ ಬಂಕ್‌ಗಳಲ್ಲಿ ಮಿಶ್ರಣ ಆಗ್ತಿಲ್ಲ, ಎಲ್ಲಿ ಸರಬರಾಜು ಆಗ್ತಿದೆಯೋ ಅಲ್ಲೇ ಮಿಶ್ರಣ ಮಾಡಲಾಗ್ತಿದೆ. ಇದ್ರ ಬಗ್ಗೆ ದಾಖಲೆಗಳಿವೆ ಎಂದು ಸಿಎಂ ಡಿಕೆ ಶಿವಕುಮಾರ್‌  ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆಟ್ರೋಲ್‌ನಲ್ಲಿ (Petrol) ಎಥೆನಾಲ್ 20% ಗಿಂತ ಹೆಚ್ಚು ಪ್ರಮಾಣ ಪತ್ತೆಯಾಗಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.

e20 ethanol petrol

ನಾವು ಬೇಕು ಎಂದು ಪರಿಶೀಲನೆ ಮಾಡಿದ್ದೇವೆ. ಸಚಿವರಿಗೆ ಏನ್ ಆದೇಶ ಕೊಡ್ಬೇಕೋ ಕೊಟ್ಟಿದ್ದೇನೆ. 67 ಕಡೆ ಸ್ಯಾಂಪಲ್ ತೆಗೆದು ಪರಿಶೀಲನೆ ಮಾಡಿದ್ದೇವೆ. ಕೇಂದ್ರಕ್ಕೂ‌ ಮಾಹಿತಿ ಕೊಟ್ಟು ನಾವು ಪರಿಶೀಲನೆ ಮಾಡಿದ್ದೇವೆ, ಸಾವಿರಾರು ವಾಹನ ಸವಾರರು ದೂರು ಕೊಡ್ತಿದ್ದಾರೆ. ವಾಹನಗಳು ಮಧ್ಯದಲ್ಲೇ ಕೆಟ್ಟು ನಿಲ್ಲುತ್ತಿವೆ, ಇಂಜಿನ್‌ ಎಲ್ಲಾ ಹಾಳಾಗ್ತಿದೆ. ಎಷ್ಟು ಮೈಲೇಜ್‌ ಕೊಡಬೇಕೋ ಅಷ್ಟು ಕೊಡುತ್ತಿಲ್ಲ ಅಂತಾ ಎಂದರು.

ಎಥೆನಾಲ್‌ ಬಂಕ್‌ಗಳಲ್ಲಿ ಮಿಕ್ಸ್‌ ಆಗ್ತಿಲ್ಲ, ಎಲ್ಲಿ ಸರಬರಾಜು ಮಾಡ್ತಿದ್ದಾರೋ ಅಲ್ಲಿ ಮಿಕ್ಸ್ ಆಗ್ತಿದೆ. ಎಲ್ಲಾ ದಾಖಲೆಗಳಿವೆ. ಎಥೆನಾಲ್ ವಿಚಾರದಲ್ಲಿ ಇಡೀ ದೇಶಕ್ಕೆ ಆತಂಕ ಇದೆ. ಇದು ತುಂಬಾ ಅಪಾಯಕಾರಿ ನಾವು ಇದನ್ನ ಖಂಡಿಸುತ್ತೇವೆ. ಜಾಗೃತಿ ಮೂಡಿಸಬೇಕಾದದ್ದು ನಮ್ಮ ಕರ್ತವ್ಯ. ನಾಳೆ ಮತ್ತೆ ಸಚಿವರು ಪ್ರೆಸ್‌ಮೀಟ್‌ ಮಾಡ್ತಿದ್ದಾರೆ, ಜನರನ್ನ ರಕ್ಷಣೆ ಮಾಡಬೇಕಾದದ್ದು ನಮ್ಮ ಕೆಲಸ. ವಿರೋಧ ಪಕ್ಷದವರು ಮಾತಾಡಲ್ಲ ಅಶೋಕಣ್ಣ ಮಾತಾಡಲ್ಲ, ದಳದವರು ಮಾತಾಡಲ್ಲ ಪಾಪ… ಮುಚ್ಕೊಬೇಕಲ್ಲ ಎಂದು ತಿವಿದರು.


Spread the love

About Laxminews 24x7

Check Also

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65ರ ವೃದ್ಧ

Spread the loveಕಾರವಾರ: ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆಘಾತಕಾರಿ ಪ್ರಕರಣ ಮುಂಡಗೋಡು ತಾಲೂಕಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ