ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬಳು ಅಪರಿಚಿತನೊಬ್ಬನ ಸ್ನೇಹ ಬೆಳೆಸಿ ಅತ್ಯಾಚಾರಕ್ಕೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ.
ಕೋರಮಂಗಲದ ಪಬ್ ಒಂದರಲ್ಲಿ ಸಿಗರೇಟ್ ಸೇದಲು ಸಮೀರ್ ಎಂಬಾತನ ಬಳಿ ಯುವತಿ ಲೈಟರ್ ಕೇಳಿದ್ದಾಳೆ. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಆರೋಪಿ ತನ್ನ ಮಾತಿನಿಂದ ಯುವತಿಯನ್ನ ನಂಬಿಸಿ ಮೊಬೈಲ್ ನಂಬರ್ ಪಡೆದಿದ್ದನು
ನಂತರ ಮಡಿವಾಳದ ಹೋಟೆಲ್ ರೂಮ್ಗೆ ಯುವತಿಯನ್ನ ಆಹ್ವಾನಿಸಿ, ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ಯುವತಿಗೆ ನಶೆ ಏರಿದ ತಕ್ಷಣ, ಆಕೆಯ ಮೇಲೆಯೇ ಆರೋಪಿ ಬಲಾತ್ಕಾರ ಎಸಗಿದ್ದಾನೆ. ಬೆಳಗಿನ ಜಾವ ನಶೆಯಿಂದ ಎಚ್ಚೆತ್ತುಕೊಂಡ ಸಂತ್ರಸ್ತೆ ಹೇಗೋ ಹೋಟೆಲ್ನಿಂದ ತಪ್ಪಿಸಿಕೊಂಡು ಬಂದು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿ ಸಮೀರ್ನನ್ನ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ. ಅಪರಿಚಿತರೊಂದಿಗೆ ಸ್ನೇಹ ಬೆಳೆಸುವಾಗ ಯುವತಿಯರು ಹೆಚ್ಚು ಎಚ್ಚರದಿಂದಿರಬೇಕೆಂಬುದಕ್ಕೆ ಈ ಘಟನೆ ಕನ್ನಡಿಯಾಗಿದೆ.
Laxmi News 24×7