Breaking News

ಮಂತ್ರಾಲಯದಲ್ಲಿ ವಿಶೇಷ ಪೂಜೆ, ಶ್ರೀಗಳಿಂದ ತೈಲಾಭ್ಯಂಜನ

Spread the love

ರಾಯಚೂರು: ನರಕ ಚತುರ್ದಶಿ  ಹಿನ್ನೆಲೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆಗಳನ್ನ ನೆರವೇರಿಸಲಾಯಿತು.

ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಮೂಲ ರಾಮದೇವರಿಗೆ ಕಾರ್ತಿಕ ಮಂಗಳಾರತಿ ನೆರವೇರಿಸಿ, ನಂತರ ಗೋಪೂಜೆ, ತುಳಸಿ ಪೂಜೆ ನೆರವೇರಿಸಿದರು. ಶ್ರೀ ರಾಯರ ಮೂಲ ಬೃಂದಾವನ ಹಾಗೂ ಮಠದ ಇತರ ಬೃಂದಾವನಗಳಿಗೆ ಸ್ವಾಮಿಜಿ ತೈಲಾಭ್ಯಂಜನವನ್ನು ನೆರವೇರಿಸಿದರು. ಬಳಿಕ ಪವಿತ್ರ ನಾರೀಕೃತ ನೀರಾಜನಂ ಸಮಾರಂಭವನ್ನು ನೆರವೇರಿಸಲಾಯಿತು. ಮಹಿಳೆಯರು ಶ್ರೀಗಳಿಗೆ ಆರತಿ ಬೆಳಗಿದರು.

ನಾನಾ ಪವಿತ್ರ ವಿಧಿಗಳ ಸರಣಿಯ ಬಳಿಕ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಭಕ್ತರಿಗೆ ಅನುಗ್ರಹ ಸಂದೇಶ ನೀಡಿ ಭಕ್ತರನ್ನು ಆಶೀರ್ವದಿಸಿದರು. 


Spread the love

About Laxminews 24x7

Check Also

12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ 65ರ ವೃದ್ಧ

Spread the loveಕಾರವಾರ: ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆಘಾತಕಾರಿ ಪ್ರಕರಣ ಮುಂಡಗೋಡು ತಾಲೂಕಿನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ