Breaking News

NEET-UG case | 10 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಖರೀದಿಸಿ 15 ಲಕ್ಷಕ್ಕೆ ಮಾರಿದ್ದ ವೈದ್ಯನ ಮಗ ಅರೆಸ್ಟ್‌

Spread the love

ನವದೆಹಲಿ: ನೀಟ್‌ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ  ಮಂಗಳವಾರ ಬ್ಯಾಚುಲರ್ ಆಫ್ ಆಯುರ್ವೇದ ಮೆಡಿಸಿನ್ ಅಂಡ್ ಸರ್ಜರಿ  ವಿದ್ಯಾರ್ಥಿಯನ್ನ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ವಿದ್ಯಾರ್ಥಿಯನ್ನ ಶುಭಂ ಖೈರ್ನರ್ (30) ಎಂದು ಗುರುತಿಸಲಾಗಿದೆ. ಈತ ʻಊಹೆ ಪ್ರಶ್ನೆಪತ್ರಿಕೆʼ ಯನ್ನು  ಪುಣೆ ಮೂಲದ ಶಂಕಿತನಿಂದ 10 ಲಕ್ಷ ರೂ.ಗೆ ಖರೀದಿಸಿ, ಹರಿಯಾಣದ ಮೂಲದ ವ್ಯಕ್ತಿಗೆ 15 ಲಕ್ಷ ರೂ.ಗೆ ಮಾರಾಟ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

4 ತಂಡ ವಿಶೇಷ ಕಾರ್ಯಾಚರಣೆ
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ವಹಿಸಿಕೊಂಡಿರುವ ಸಿಬಿಐ 4 ವಿಶೇಷ ತಂಡ ರಚಿಸಿ ಕಾರ್ಯಾಚರಣೆಗೆ ಇಳಿದಿತ್ತು. ಈ ವೇಳೆ ನಾಸಿಕ್ ಅಪರಾಧ ವಿಭಾಗವು ಬಂಧಿಸಿದ್ದ ವಿದ್ಯಾರ್ಥಿಯನ್ನ ಸಿಬಿಐ ತನ್ನ ಸುಪರ್ದಿಗೆ ಪಡೆಯಿತು.

ಇನ್ನೂ ನೀಟ್‌ ಪ್ರಕರಣದ ತನಿಖೆ ಮುಂದುವರಿಯುತ್ತಿದ್ದಂತೆ ಇನ್ನಷ್ಟು ರಹಸ್ಯಗಳು ಬಯಲಾಗುತ್ತಿವೆ. ಮೊದಲಿಗೆ ನಾಸಿಕ್‌ ಮುದ್ರಣಾಲಯದಿಂದ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಅನುಮಾನ ಮೂಡಿದ್ದವು. ಆದ್ರೀಗ ಪೊಲೀಸ್‌ ಮೂಲಗಳು ಪರೀಕ್ಷಾ ಪ್ರಶ್ನೆಪತ್ರಿಕೆಯನ್ನು ಅಲ್ಲಿ ಮುದ್ರಿಸಲಾಗಿಲ್ಲ ಎಂದು ಹೇಳುತ್ತಿವೆ.

ಶುಭಂ ತಂದೆ ಮತ್ತು ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಮಧುಕರ್ ಖೈರ್ನಾರ್ ಅವರು ತಮ್ಮ ಮಗನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ, ನನ್ನ ಮಗ ನಿರಪರಾಧಿ ಎಂದು ಪ್ರತಿಪಾದಿಸಿದ್ದಾರೆ.

ಏನಿದು NEET ಪ್ರಶ್ನೆಪತ್ರಿಕೆ ಸೋರಿಕೆ ವಿವಾದ?
ಭಾರತ ಸರ್ಕಾರವು ಈ ಪ್ರಕರಣವನ್ನು ಸಮಗ್ರ ತನಿಖೆಗಾಗಿ ಕೇಂದ್ರ ತನಿಖಾ ದಳಕ್ಕೆ ಹಸ್ತಾಂತರಿಸಿದೆ. ಮೇ.3 ರಂದು ನಡೆಸಲಾದ ನೀಟ್‌ ಪರೀಕ್ಷೆಗೂ ಮುನ್ನವೇ ಈ ವರ್ಷದ ಗೆಸ್‌ ಪೇಪರ್ (‌ಸಂಭಾವ್ಯ ಪ್ರಶ್ನೆಗಳ ಪಟ್ಟಿ) ರಾಜಸ್ಥಾನದಲ್ಲಿ ಸೋರಿಕೆಯಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಇದಾದ ಬಳಿಕ, ಈ ಕುರಿತು ರಾಜಸ್ಥಾನದ ಸ್ಪೇಷಲ್‌ ಆಪರೇಷನ್‌ ತಂಡ (SOG) ತನಿಖೆ ನಡೆಸಿದ್ದು, ನೀಟ್‌ ಪರೀಕ್ಷೆಗೂ ಮುನ್ನ2-3 ದಿನಗಳ ಮೊದಲು ಸೋರಿಕೆಯಾದ ಸಂಭಾವ್ಯ ಪ್ರಶ್ನೆಪತ್ರಿಕೆಯ ಭಾಗವಾಗಿದ್ದ ಕೈಬರಹದ ಪ್ರಶ್ನೆಗಳ ಸೆಟ್ 720 ಅಂಕಗಳಲ್ಲಿ 600 ಅಂಕಗಳ ಮೌಲ್ಯದ ಸುಮಾರು 140 ಪ್ರಶ್ನೆಗಳು ನಿಜವಾದ ಪರೀಕ್ಷೆಯಲ್ಲಿ ಕಾಣಿಸಿಕೊಂಡಿದೆ. ಅಂದರೆ ಇದು ಅಸಲಿ ಪ್ರಶ್ನೆಪ್ರತಿಕೆಹೊಂದಿಗೆ ಬಹುತೇಕ ಹೋಲಿಕೆಯಾಗಿರುವುದು ಕಂಡುಬಂದಿದೆ.

ಇನ್ನು, ಈ ಪ್ರಕರಣದಲ್ಲಿ CBI ತನಿಖೆ ನಡೆಯುತ್ತಿದ್ದು, ಈಗಾಗಲೇ ಈ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನವೊಂದರಲ್ಲೇ ಈವರೆಗೂ ಸುಮಾರು 45 ಜನರನ್ನು ಬಂಧಿಸಲಾಗಿದ್ದು, ಸೋರಿಕೆಯಾದ ‘ಊಹೆ ಪ್ರಶ್ನೆ ಪತ್ರಿಕೆ’ ಮುದ್ರಣಾಲಯದಿಂದ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.


Spread the love

About Laxminews 24x7

Check Also

ವ್ಯೂ ಪಾಯಿಂಟ್‌ ನಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳ ಸಾವು

Spread the loveತಿರುವನಂತಪುರಂ: ವ್ಯೂ ಪಾಯಿಂಟ್ ನಲ್ಲಿ ಸಿಡಿಲು ಬಡಿದು ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಕೇರಳದ ಮಲಪ್ಪುರಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ