Breaking News

ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವ ತಿರಸ್ಕರಿಸಿದ ಟ್ರಂಪ್‌ – ಮಧ್ಯಂತರ ಚುನಾವಣೆ ಬಳಿಕ ಮತ್ತೆ ಬಾಂಬ್‌ ದಾಳಿ?

Spread the love

ಟೆಹ್ರಾನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಅವರು ಇರಾನ್‌ ನೀಡಿದ್ದ 7 ದಿನಗಳ ಕದನ ವಿರಾಮ ಪ್ರಸ್ತಾವವನ್ನ ತಿರಸ್ಕರಿಸಿದ್ದಾರೆ. ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಗಳ  ಬಳಿಕ ಇರಾನ್‌ ಮೇಲೆ ಅಮೆರಿಕದ ಬಾಂಬ್‌ ದಾಳಿ ಮತ್ತೆ ಆರಂಭವಾಗಲಿದೆ. ಈ ಬಗ್ಗೆ ಟ್ರಂಪ್‌ ತಮ್ಮ ಸಹಾಯಕರಿಗೆ ತಿಳಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಅಮೆರಿಕ ತನ್ನ ಬಂದರುಗಳ ಮೇಲಿನ ನೌಕಾ ದಿಗ್ಬಂಧನ ತೆರವುಗೊಳಿಸಿದರೆ, ಹಾರ್ಮುಜ್ ಜಲಸಂಧಿಯನ್ನ ಮತ್ತೆ ತೆರೆಯುವುದು ಹಾಗೂ ಪರಮಾಣು ಮಾತುಕತೆಗಳನ್ನ ಪುನರಾರಂಭಿಸುವುದಾಗಿ ಕದನ ವಿರಾಮ ಷರತ್ತುಗಳಲ್ಲಿ ಇರಾನ್‌ ಪ್ರಸ್ತಾಪಿಸಿತ್ತು. ಏಕೆಂದ್ರೆ ಅಮೆರಿಕದ ದಿಗ್ಬಂಧನದಿಂದ ಇರಾನ್‌ನ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿದೆ. ಆದ್ರೆ ಟ್ರಂಪ್‌ ಇರಾನ್‌ ತನ್ನ ಬೇಡಿಕೆಗಳನ್ನು ಈಡೇರಿಸಲಿದೆ ಎನ್ನುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಅಮೆರಿಕದಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳ ಬಳಿಕ ಇರಾನ್‌  ಮಹತ್ವದ ಒಪ್ಪಂದವೊಂದಕ್ಕೆ ಮುಂದಾಗಬಹುದು. ಆ ಒಪ್ಪಂದದ ಅನ್ವಯ ಇರಾನ್‌ ತನ್ನ ಪರಮಾಣು ಕಾರ್ಯಕ್ರಮವನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸುವುದು ನಮ್ಮ ಉದ್ದೇಶವಾಗಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಇರಾನ್‌ ಕದನ ವಿರಾಮ ಪ್ರಸ್ತಾಪ ತಿರಸ್ಕಾರ
ಇದಕ್ಕೂ ಮುನ್ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಹಿನ್ನೆಲೆ ಮಾತನಾಡಿದ್ದ, ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ, 7 ದಿನಗಳೊಳಗೆ ಹಾರ್ಮುಜ್ ಜಲಸಂಧಿಯನ್ನ ಮತ್ತೆ ತೆರೆಯಲು ಮತ್ತು ಪರಮಾಣು ಮಾತುಕತೆಗಳನ್ನ ಪುನರಾರಂಭಿಸಲು ಇರಾನ್‌ ಪ್ರಸ್ತಾವನೆ ಸಲ್ಲಿಸಿದೆ. ಅಮೆರಿಕ ತನ್ನ ನೌಕಾ ದಿಗ್ಬಂಧನ ತೆರವುಗೊಳಿಸುವುದು, ತೈಲ ನಿರ್ಬಂಧ ಸಡಿಲಿಸುವುದು ಮತ್ತು ಕದನ ವಿರಾಮ ಪಾಲಿಸುವುದು ಇರಾನ್‌ನ ಪ್ರಸ್ತಾವನೆಯ ಪ್ರಮುಖ ಷರತ್ತುಗಳಾಗಿವೆ ಎಂದು ತಿಳಿಸಿದ್ದರು.

ಹಾರ್ಮುಜ್ ಜಲಸಂಧಿಯನ್ನ ಮತ್ತೆ ತೆರೆಯಲು ಇರಾನ್‌ ಅಮೆರಿಕಕ್ಕೆ ನಿರ್ದಿಷ್ಟವಾದ 7 ದಿನಗಳ ಪ್ಲ್ಯಾನ್‌ ನೀಡಿದೆ. ಮುಂದಿನ ನಿರ್ಧಾರವನ್ನು ಕೈಗೊಳ್ಳುವ ಹೊಣೆ ಇದೀಗ ಅಮೆರಿಕದ ಮೇಲಿದೆ ಎಂದು ಅರಾಘ್ಚಿ ಹೇಳಿದ್ದರು.

ಅಲ್ಲದೇ, ಅಗತ್ಯ ಷರತ್ತುಗಳನ್ನು ಪೂರೈಸಿದರೆ, ಜಲಸಂಧಿಯನ್ನ ಮತ್ತೆ ತೆರೆಯಬಹುದು. ಏಳು ದಿನಗಳೊಳಗೆ ಸಾಮಾನ್ಯ ಸಾಗರ ಮಾರ್ಗವನ್ನು ಪುನಃಸ್ಥಾಪಿಸಬಹುದು. ಈಗ ಆಯ್ಕೆ ಅಮೆರಿಕದ ಕೈಯಲ್ಲಿದೆ ಎಂದಿದ್ದರು. ಆದ್ರೆ ಇರಾನ್‌ನ ಕದನ ವಿರಾಮ ಪ್ರಸ್ತಾಪವನ್ನು ಅಮೆರಿಕ ತಿರಸ್ಕಾರ ಮಾಡಿರುವುದು ಇದೀಗ ಉಭಯ ದೇಶಗಳ ನಡುವೆ ಮತ್ತೆ ಯುದ್ಧ ಶುರುವಾಗುತ್ತಾ ಎನ್ನುವ ಆತಂಕ ಎದುರಾಗಿದೆ.


Spread the love

About Laxminews 24x7

Check Also

ಸರ್ಕಾರದಿಂದ ಬಾರದ ಕೋಟ್ಯಂತರ ರೂಪಾಯಿ ಅನುದಾನ – ಪತ್ರ ಬರೆದು ಕೆಆರ್‌ಐಡಿಎಲ್ ಎಇಇ ನಾಪತ್ತೆ!

Spread the loveಗದಗ: ರಾಜ್ಯ ಸರ್ಕಾರದ ಅನುದಾನ ಬಾರದಕ್ಕೆ ಪತ್ರ ಬರೆದು KRIDL ಎಇಇ (ಸಹಾಯಕ ಕಾರ್ಯಪಾಲಕ ಎಂಜಿನಿಯರ್) ಅಧಿಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ