Breaking News

ವೋಟ್‌ಚೋರಿಗೆ SIR ದುರ್ಬಳಕೆ..? – ಬೆಂಗಳೂರಿನ ಜನರಿಗೂ ಸಿಎಂ ಡಿಕೆಶಿ ಎಚ್ಚರಿಕೆ

Spread the love

ಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ ಫಾರಂ-7 ವಿವಾದ ಮತ್ತೊಂದು ಮಜಲಿಗೆ ತಲುಪಿದೆ. ಬೆಂಗಳೂರಿನಲ್ಲೂ ಎಸ್‌ಐಆರ್ ಸಂಬಂಧ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಸಂತ ಲಕ್ಷ್ಮಿ ಸೇರಿದಂತೆ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗರ್ ದೂರಿನಡಿ ಎಫ್‌ಐಆರ್ ದಾಖಲಿಸಲಾಗಿದೆ.

ಇನ್ನೊಂದೆಡೆ ಸಾರ್ವಜನಿಕ ಕಾರ್ಯಕ್ರಮದಲ್ಲೇ ಸಿಎಂ ಡಿಕೆಶಿ ವೋಟ್‌ಚೋರಿ ಸುಳಿವು ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಮತಕನ್ನಕ್ಕೆ ಬ್ರೇಕ್ ಹಾಕಲು ತಾವು ಹೋರಾಡುತ್ತಿರೋದಾಗಿ ಹೇಳಿದ್ದಾರೆ.

ಬೆಂಗಳೂರಲ್ಲೂ ನಿಮ್ಮ ವೋಟು ಹುಷಾರು, ನಿಮ್ಮ ವೋಟು ತೆಗೆಯಲು ತಂತ್ರ ನಡೆಯುತ್ತಿದೆ. ನಿಮ್ಮ ವೋಟು ಉಳಿಸಲು ನಾನು ಹಗಲು ರಾತ್ರಿ ಹೋರಾಟ ಮಾಡುತ್ತಿದ್ದೇನೆ ಎಂದು ಎಚ್ಚರಿಸಿದ್ದಾರೆ ಸಿಎಂ.

ಇನ್ನೊಂದು ಕಡೆ ರಾಜ್ಯದಲ್ಲಿ ಫಾರಂ 7 ದುರ್ಬಳಕೆ ಮೂಲಕ ದೇಶದ ಪ್ರಜಾ ವ್ಯವಸ್ಥೆಯ ನಿಯಮಗಳನ್ನ ಗಾಳಿಗೆ ತೂರಿದ್ದಾರೆ ಅಂತಾ ಸಚಿವ ಸಂತೋಷ್ ಲಾಡ್ ಆರೋಪಿಸಿದ್ದಾರೆ.


Spread the love

About Laxminews 24x7

Check Also

ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ: ಸಿ.ಸಿ ಪಾಟೀಲ್

Spread the loveಗದಗ: ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ ಎಂದು ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ