Breaking News

ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬರ ಅಧ್ಯಯನ ನಡೆಸಿದ ಕೇಂದ್ರ ತಂಡ

Spread the love

ರಾಯಚೂರು: ಕೇಂದ್ರ ಬರ ಅಧ್ಯಯನ ತಂಡ ನಿನ್ನೆ ಮಧ್ಯಾಹ್ನದಿಂದ ರಾತ್ರಿವರೆಗೂ ರಾಯಚೂರಿನಲ್ಲಿ ವಿವಿಧೆಡೆ ಬೆಳೆ ಹಾನಿ ಪರಿಶೀಲನೆ ಮಾಡಿದೆ. ಸಂಜೆಯಾಗಿದ್ದರಿಂದ ಜಮೀನಿನಲ್ಲಿ ಮೊಬೈಲ್ ಟಾರ್ಚ್ ಹಾಕಿ ಬೆಳೆ ವೀಕ್ಷಣೆ ಮಾಡಿ ಮಾಹಿತಿ ಸಂಗ್ರಹಿಸಿದೆ.

ರಾತ್ರಿಯಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೇಂದ್ರದ ತಂಡ ಬೆಳೆ ವೀಕ್ಷಣೆ ಮಾಡಿದೆ. ಸಂಜೆ ಕತ್ತಲು ಆವರಿಸಿದ ಹಿನ್ನೆಲೆಯಲ್ಲಿ ಮೊಬೈಲ್ ಟಾರ್ಚ್‌ನಲ್ಲಿ ವೀಕ್ಷಣೆ ಮಾಡಿತು. ರಾಯಚೂರಿಗೆ ಮಧ್ಯಾಹ್ನ ಆಗಮಿಸಿದ್ದ ತಂಡ ರಾತ್ರಿ ವರೆಗೆ ಜಿಲ್ಲೆಯ ವಿವಿಧೆಡೆ ಬರ ಅಧ್ಯಯನ ನಡೆಸಿತು.

ದೇವದುರ್ಗ, ಲಿಂಗಸೂಗೂರು ಹಾಗೂ ಮಸ್ಕಿ ತಾಲೂಕಿನಲ್ಲಿ ಬರ ಅಧ್ಯಯನ ಮಾಡಲಾಗಿದೆ. ಮೆಣಸಿನಕಾಯಿ, ಹತ್ತಿ, ತೊಗರಿ ಬೆಳೆ ವೀಕ್ಷಣೆ ಮಾಡಿ ಮಾಹಿತಿ ಪಡೆದಿದೆ.

ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ ಬರ ಅಧ್ಯಯನ ನಡೆಸಿ ತೊಗರಿ ಬೆಳೆ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆದರು.


Spread the love

About Laxminews 24x7

Check Also

ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ: ಸಿ.ಸಿ ಪಾಟೀಲ್

Spread the loveಗದಗ: ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ ಎಂದು ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ