Breaking News

ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ: ಸಿ.ಸಿ ಪಾಟೀಲ್

Spread the love

ಗದಗ: ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ ಎಂದು ಮಾಜಿ ಸಚಿವ ಸಿ.ಸಿ ಪಾಟೀಲ್  ಟೀಕಿಸಿದ್ದಾರೆ.

ನಗರದ ಕಲ್ಯಾಣ ಕೇಂದ್ರದಲ್ಲಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಆಡಳಿತ ವೈಫಲ್ಯತೆ ಕಂಡಿದೆ. ಪ್ಲೇನ್ ಟೆಕ್‌ ಆಫ್‌ ಆಗುವ ಹಂತದಲ್ಲಿಲ್ಲ. ರನ್-ವೇಗೆ ಬಂದು ನಿಂತಿದೆ. ತಮ್ಮ ವೈಫಲ್ಯ ಮರೆಮಾಚಲು ಎಸ್‌ಐಆರ್‌, ಇವಿಎಮ್‌ ಮತ್ತು ಕೇಂದ್ರ ಸರ್ಕಾರದ ಬಗ್ಗೆ ಮಾತನಾಡ್ತಾರೆ. ಬರ ಪರಿಹಾರ ಅಂತ ರೈತರಿಗೆ 2500 ರೂ. ಬೃಹತ್ ಘೋಷಣೆ ಮಾಡಿದ್ದಾರೆ. ಇದು ಜಗತ್ತಿನಲ್ಲಿ 8ನೇ ಅದ್ಭುತ. ಇದೊಂದು ರೈತ ಪರ ಸರ್ಕಾರ ಎಂದು ವ್ಯಂಗ್ಯವಾಡಿದರು.

ಎಸ್‌ಐಆರ್‌, ಇವಿಎಮ್‌ ಮಷಿನ್ ಬಗ್ಗೆ ಕಾಂಗ್ರೆಸ್‌ನಿಂದ ಅಪಸ್ವರ ಕೇಳಿಬರುತ್ತಿದೆ. 133 ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಬಂದಾಗ ಇವಿಎಮ್‌ ಮಷಿನ್ ವರ್ಕ್ ಸರಿಯಾಗಿತ್ತಾ? ಎಮ್‌ಪಿ ಎಲೆಕ್ಷನ್‌ನಲ್ಲಿ ಸೋತಾಗ ಸರಿ ಇರಲಿಲ್ವಾ? ರಾಜ್ಯ ಸರ್ಕಾರಕ್ಕೆ ಆಲೋಚನಾ ಶಕ್ತಿ ಇರಬೇಕು. ಎಲ್ಲಾ ರಾಜ್ಯದ ಸಿಎಂ ಎಲ್ಲಾ ಬಲ್ಲವರು ಇರೋದಿಲ್ಲ. ಅದಕ್ಕೆ ತಾಂತ್ರಿಕ ಸಿಬ್ಬಂದಿ ಸಮಿತಿ ಇಟ್ಟುಕೊಳ್ಳಬೇಕು ಎಂದು ಹೇಳಿದರು.


Spread the love

About Laxminews 24x7

Check Also

ವೋಟ್‌ಚೋರಿಗೆ SIR ದುರ್ಬಳಕೆ..? – ಬೆಂಗಳೂರಿನ ಜನರಿಗೂ ಸಿಎಂ ಡಿಕೆಶಿ ಎಚ್ಚರಿಕೆ

Spread the loveಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್ ಫಾರಂ-7 ವಿವಾದ ಮತ್ತೊಂದು ಮಜಲಿಗೆ ತಲುಪಿದೆ. ಬೆಂಗಳೂರಿನಲ್ಲೂ ಎಸ್‌ಐಆರ್ ಸಂಬಂಧ ಇಬ್ಬರ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ