Breaking News
Home / ಜಿಲ್ಲೆ / ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಗೆ ಸೇರಿದ 110 ಆಸ್ತಿಗಳು,16ಆಸ್ತಿಗಳ ಹರಾಜಿಗೆ ಅನುಮತಿ ಕೋರಿ,ಬೆಳಗಾವಿ ಉಪವಿಭಾಗಾಧಿಕಾರಿಗಳು ಕೋರ್ಟ್ ಮೊರೆಹೋಗಿದ್ದಾರೆ.

ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಗೆ ಸೇರಿದ 110 ಆಸ್ತಿಗಳು,16ಆಸ್ತಿಗಳ ಹರಾಜಿಗೆ ಅನುಮತಿ ಕೋರಿ,ಬೆಳಗಾವಿ ಉಪವಿಭಾಗಾಧಿಕಾರಿಗಳು ಕೋರ್ಟ್ ಮೊರೆಹೋಗಿದ್ದಾರೆ.

Spread the love

ಬೆಳಗಾವಿ :ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೊಸೈಟಿಗೆ ಸೇರಿದ 110 ಆಸ್ತಿಗಳು,16 ಜನರ ಹೆಸರಿನಲ್ಲಿದ್ದು,ಈ ಆಸ್ತಿಗಳ ಹರಾಜಿಗೆ ಅನುಮತಿ ಕೋರಿ,ಬೆಳಗಾವಿ ಉಪವಿಭಾಗಾಧಿಕಾರಿಗಳು ಕೋರ್ಟ್ ಮೊರೆಹೋಗಿದ್ದಾರೆ.

ಜಿಲ್ಲಾ ನ್ಯಾಯಾಲಯದಲ್ಲಿ ಈ ಕುರಿತು,ಪ್ರಕರಣ ದಾಖಲಾಗಿದ್ದು,ಸೊಸೈಟಿ ಆಸ್ತಿ ಹೊಂದಿದದವರ 16 ಜನರಿಗೆ ನೋಟೀಸ್ ಜಾರಿಯಾಗಿದೆ.

ಸೊಸೈಟಿಯ ಒಟ್ಟು110 ಆಸ್ತಿಗಳು ಹದಿನಾರು ಜನರ ಹೆಸರಿನಲ್ಲಿವೆ, ಕೋಟ್ಯಾಂತರ ರೂ ಬೆಲೆಬಾಳುವ ಈ ಆಸ್ತಿಗಳ ಉತಾರದಲ್ಲಿ ಈಗಾಗಲೇ ಸರ್ಕಾರದ ಆಸ್ತಿ ಎಂದು ನಮೂದಿಸಲಾಗಿದೆ.ನ್ಯಾಯಾಲಯದ ಅನುಮತಿ ಪಡೆದು,ಕ್ರಮಬದ್ಧವಾಗಿ ಈ ಆಸ್ತಿಗಳನ್ನು ಹರಾಜು ಮಾಡಲು ಬೆಳಗಾವಿ ಉಪವಿಭಾಗಾಧಿಕಾರಿಗಳು ಈಗ ಕೋರ್ಟ್ ಮೊರೆ ಹೋಗಿದ್ದಾರೆ.

ನ್ಯಾಯಾಲಯದ ಆದೇಶ ಬಂದ ಬಳಿಕ, ಒಟ್ಟು 110 ಆಸ್ತಿಗಳು ಹರಾಜಿನ ಮೂಲಕ ಮಾರಾಟವಾದ ಬಳಿಕ,ಠೇವಣಿದಾರರಿಗೆ ಹಣ ಸಿಗುವ ಸಾದ್ಯತೆ ಇದೆ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ