ಚಿಕ್ಕೋಡಿ(ಬೆಳಗಾವಿ): ಚುನಾವಣೆಗೆ ಆರು ತಿಂಗಳು ಬಾಕಿಯಿರುವಾಗ ಯತ್ನಾಳ್ ಎಲ್ಲಿ ಎಂದು ಬಿಜೆಪಿ ನಾಯಕರು ಹುಡುಕುತ್ತಾರೆ. ನಾನು ಈ ಬಾರಿ ಉಚಿತವಾಗಿ ಭಾಷಣ ಮಾಡುವುದಿಲ್ಲ, ಜೆಸಿಬಿ ಪಕ್ಷ ಪ್ರಾರಂಭ ಮಾಡುತ್ತೇನೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಅಥಣಿ ಪಟ್ಟಣದಲ್ಲಿಂದು ಮರಾಠ ಸಮುದಾಯದ ವತಿಯಿಂದ ನಿರ್ಮಾಣವಾಗಿರುವ 45 ಅಡಿ ಎತ್ತರದ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಕಟುಕನೋರ್ವ ಗೋ ಹತ್ಯೆ ಮಾಡುವುದನ್ನು ನೋಡಿದ ಶಿವಾಜಿ ಮಹಾರಾಜರು, ಕತ್ತಿಯಿಂದ ಆತನ ರುಂಡ ಚೆಂಡಾಡಿ ಅವತ್ತೇ ಗೋಹತ್ಯೆಯನ್ನು ತಡೆದರು. 2028ಕ್ಕೆ ನಾವು ಶಿವಾಜಿ ಮಹಾರಾಜರ ರೀತಿ ಶೌರ್ಯ ತೋರಿಸಬೇಕಾಗಿದೆ ಎಂದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಎಲ್ಲರನ್ನೂ ಒಗ್ಗೂಡಿಸುವ ಕಾರ್ಯವನ್ನು ಮಾಡಿದರು. ಆದರೆ ವಿಜಯಪುರದಲ್ಲಿ ಕೆಲವು ಪಾಕಿಸ್ತಾನವನ್ನು ಬೆಂಬಲಿಸುವವರು ಇದ್ದಾರೆ. ಬಸವರಾಜ ಬೊಮ್ಮಾಯಿ ಕಾಲದಲ್ಲಿ ಮರಾಠ ನಿಗಮ ಸ್ಥಾಪನೆ ಚರ್ಚೆ ನಡೆದಿತ್ತು. ಅವತ್ತು ನಾವು ಧ್ವನಿ ಎತ್ತಿದ್ದರಿಂದ ನಿಗಮ ಸ್ಥಾಪನೆಯಾಯಿತು. ಮರಾಠಿ ಭಾಷೆ ವಿರೋಧ ಮಾಡುತ್ತೀರಿ, ಆದರೆ ಉರ್ದು ಭಾಷೆ ಪ್ರೀತಿ ಮಾಡುತ್ತೀರಿ, ಕೆಲವು ಕಡೆ ಉರ್ದು ಭಾಷೆ ಬರೆದಿದ್ದಾರೆ ಅದನ್ನು ತೆಗೆಯಿರಿ ಎಂದು ಸವಾಲೆಸೆದರು.ಮಹಾರಾಷ್ಟ್ರದಲ್ಲಿ ದಲಿತರು ಶಿವಾಜಿಯನ್ನು ಆರಾಧಿಸುತ್ತಾರೆ: ಶಿವಾಜಿ ಮಹಾರಾಜರು ಮತ್ತು ಕರ್ನಾಟಕದ ನಡುವೆ ಸಂಬಂಧವಿತ್ತು. ಮೀಸಲಾತಿಯನ್ನು ಮೊದಲಿಗೆ ತಂದವರು ಕೊಲ್ಹಾಪುರ ಶಾಹು ಮಹಾರಾಜರು. ಮಹಾರಾಷ್ಟ್ರದಲ್ಲಿ ದಲಿತರು ಶಿವಾಜಿಯನ್ನು ಆರಾಧಿಸುತ್ತಾರೆ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಉನ್ನತ ಶಿಕ್ಷಣ ಪಡೆದಿದ್ದರಲ್ಲಿ ಕೊಲ್ಹಾಪುರ ಸಂಸ್ಥಾನದ ಕೊಡುಗೆ ಇದೆ ಎಂದರು.
Laxmi News 24×7