Breaking News

ರಮೇಶ್ ಜಾರಕಿಹೊಳಿ – ವಿಜಯೇಂದ್ರ ಪರಸ್ಪರ ಮುಖಾಮುಖಿ;

Spread the love

ಬೆಳಗಾವಿ : ಮಾಜಿ ಸಚಿವ, ಗೋಕಾಕ್​ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಮುಖಾಮುಖಿಯಾದ ಪ್ರಸಂಗ ನಡೆದಿದೆ. ಈ ವೇಳೆ ಇಬ್ಬರೂ ಪರಸ್ಪರ ಕುಶಲೋಪರಿ ನಡೆಸಿದರು.

ರಮೇಶ್ ಜಾರಕಿಹೊಳಿ ನೇರವಾಗಿ ಮೆಟ್ಟಿಲು ಏರಿ ಅಧಿವೇಶನಕ್ಕೆ ಹೋಗುವಾಗ ಅತ್ತ ಕಡೆಯಿಂದ ಬಂದ ವಿಜಯೇಂದ್ರ ಅವರು ಜಾರಕಿಹೊಳಿ ಬಳಿ ಹೋಗಿ ಮಾತನಾಡಿಸಿದರು.ಇಬ್ಬರ ನಡುವೆ ಏನು ಮಾತುಕತೆ ಆಯ್ತು? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಏನೂ ವಿಶೇಷ ಮಾತುಕತೆ ಇಲ್ಲ, ಅವರು ರೈತರ ಪ್ರತಿಭಟನೆ ಸ್ಥಳಕ್ಕೆ ಹೋಗಿದ್ದರು. ನೀವು ರೈತ ಪ್ರತಿಭಟನೆ ಸ್ಥಳಕ್ಕೆ ಬನ್ನಿ ಎಂದು ನನಗೂ ಹೇಳಿದರು. ಅದಕ್ಕೆ ನಾನು ಬರುತ್ತೇನೆ ಎಂದೆ, ಕುಶಲೋಪರಿ ಮಾತನಾಡಿದ್ದೇವೆ ಎಂದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ