ಹೊಬ್ಬರ ಕೊರತೆಯ ಹಿನ್ನಲೆ, ನ್ಯಾನೋ ಯೂರಿಯಾ ಮೊರೆ ಹೋದ ರೈತ….ಮುಗದ ಗ್ರಾಮದ ಮಲ್ಲಪ್ಪ ತನ್ನ ಕಬ್ಬು ಬೆಳೆಗೆ ನ್ಯಾನೋ ಯೂರಿಯಾ ಸಿಂಪಡಣೆ.
– ರಾಜ್ಯದಲ್ಲಿ ಅನ್ನದಾತರಿಗೆ ಯೂರಿಯಾ ಗೊಬ್ಬರ ಕೊರತೆಯ ಉದ್ಭವುಸಿದ್ದು ರೈತರು ಪರದಾಡುತ್ತಿದ್ದಾರೆ. ಆದರೆ ಇಲ್ಲೊಬ್ಬರು ರೈತರು ನ್ಯಾನೋ ಯೂರಿಯಾ ಗೊಬ್ಬರ ಬಳಸಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ.
ಹೌದು ಧಾರವಾಡ ತಾಲೂಕಿನ ಮುಗದ ಗ್ರಾಮದ ಮಲ್ಲಪ್ಪ ಸಿರಿಮಣ್ಣವರ ಇವರ ಹೊಲದಲ್ಲಿ ಯೂರಿಯಾ ಗೊಬ್ಬರ ಬದಲು, ನ್ಯಾನೋ ಯೂರಿಯಾ ಗೊಬ್ಬರವನ್ನು ಬಳಸಿ ಇತರರಿಗೆ ಮಾದರಿಯಾಗಿದ್ದಾರೆ.
ಡ್ರೋಣ್ ಮುಖಾಂತರ ಕಬ್ಬಿನ ಬೆಳೆಗೆ ನ್ಯಾನೋ ಯೂರಿಯಾ ಸಿಂಪರಣೆ ಮಾಡಲಾಗಿದೆ.
ಯೂರಿಯಾ ಗೊಬ್ಬರ ಬಳಸಿ ಭೂಮಿಯನ್ನು ಹಾಳು ಮಾಡುವುದಕ್ಕಿಂತ, ನ್ಯಾನೋ ಯೂರಿಯಾವನ್ನು ಬಳಸುವುದು ಉತ್ತಮವೆಂನ್ನುವ ರೈತ, ಹೆಚ್ಚು ಲಾಭದಾಯಕವಾಗಿದೆ ಎಂದು ಅಭಿಪ್ರಾಯ ಹೇಳಿಕೊಂಡಿದ್ದಾರೆ.
ಇನ್ನೂ ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಸರಶೆಟ್ಟಿ ಅವರು ಕೂಡ ಉಪಸ್ಥಿತರಿದ್ದರು ನ್ಯಾನೋ ಯೂರಿಯಾ ಕುರಿತು ಅಕ್ಕಪಕ್ಕದ ಜಮೀನು ರೈತರಿಗೆ ಮಾಹಿತಿ ವಿವತಿದ್ದಾರೆ. ಈ ವೇಳೆ ಗ್ರಾಮದ ರೈತರು ಉಪಸ್ಥಿತರಿದ್ದರು.
Laxmi News 24×7