Breaking News

ಇಬ್ಬರು ಆರೋಪಿಗಳ ಬಂಧನ; ಎಸ್ಪಿ.ಡಾ.ಭೀಮಾಶಂಕರ್ ಗುಳೇದ್

Spread the love

ಇಬ್ಬರು ಆರೋಪಿಗಳ ಬಂಧನ; ಎಸ್ಪಿ.ಡಾ.ಭೀಮಾಶಂಕರ್ ಗುಳೇದ್
ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಜಾನಪದ ಗಾಯಕ ಮಾರುತಿ ಲಕ್ಕೆ ನಡೆದ ಕೊಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರುತಿ ಅವರ ತಂದೆ ನೀಡಿದ ದೂರಿನ ಮೇರೆಗೆ ರಾಯಬಾಗ ಪೊಲೀಸರು ತನಿಖೆ ನಡೆಸಿದ್ದು, ಆರೋಪಿಗಳಾದ ಸಿದ್ರಾಮನಿ ಮತ್ತು ಆಕಾಶ ಪೂಜಾರಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.
ಮಾರುತಿ ಮೊದಲು ಕಬ್ಬಿನ ಗ್ಯಾಂಗ್‌ನ ಸದಸ್ಯರಾಗಿದ್ದು, ಜಾನಪದ ಹಾಡುಗಳಿಗೆ ತೊಡಗಿಕೊಂಡ ಬಳಿಕ ಗ್ಯಾಂಗ್ ತೊರೆದಿದ್ದರು. ಈ ಕಾರಣದಿಂದ ಅವರನ್ನು ಪ್ಲಾನ್ ಮಾಡಿ ಕೊಲೆ ಮಾಡಲಾಗಿದೆ ಎಂದು ಡಾ. ಗುಳೇದ್ ಹೇಳಿದರು.
ಹೆಚ್ಚಿನ ಮಾಹಿತಿ ಕಲೆಹಾಕುವ ತನಿಖೆ ಮುಂದುವರಿದಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ