Breaking News

ನಶೆ ಏರಿದವರ ಏಟಿನ ದಾಳಿಗೆ ಇಬ್ಬರು ನಿರ್ಮಾಣ ಹಂತದ ಅಪಾರ್ಟ್​​ಮೆಂಟ್ ಮೂರನೇ ಮಹಡಿಯಲ್ಲಿ, ಮತ್ತೊಬ್ಬ ಅಪಾರ್ಟ್​​ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

Spread the love

ಅನೇಕಲ್, ಮಾರ್ಚ್ 16: ಬೆಂಗಳೂರು ಹೊರವಲಯ ಆನೇಕಲ್ (Anekal) ತಾಲ್ಲೂಕಿನ ಸರ್ಜಾಪುರ (Sarjapur) ಬಾಗಲೂರು ರಸ್ತೆಯ ಪೋರ್ ವಾಲ್ಸ್ ಅವೆನ್ಯೂ ಹೆಸರಿನ ನಿರ್ಮಾಣ ಹಂತದ ಅಪಾರ್ಟ್​​ಮೆಂಟ್​ನಲ್ಲಿ ಮೂವರ ಬರ್ಬರ ಹತ್ಯೆಯಾಗಿದೆ.

ಬಿಹಾರ (Bihar) ಮೂಲದ ಅನ್ಸು (19), ರಾಧೆಶ್ಯಾಮ್ (20), ದೀಪು (22), ಮೃತಪಟ್ಟರು. ಹೋಳಿ ಹಬ್ಬದ ಅಂಗವಾಗಿ ಬಿಹಾರ ಮೂಲದ ಕಟ್ಟಡ ಕಾರ್ಮಿಕರಿಗೆ ರಜೆ ನೀಡಲಾಗಿತ್ತು. ಇದೇ ಖುಷಿಯಲ್ಲಿ, ದೊಡ್ಡ ಕನ್ನಲ್ಲಿ ಬಳಿಅಪಾರ್ಟ್​​ಮೆಂಟ್​ನಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದ ತಮ್ಮದೇ ಊರಿನವರನ್ನು ಆರೋಪಿ ಸೋನಾ ಅಂಡ್ ಗ್ಯಾಂಗ್ ಎಣ್ಣೆಪಾರ್ಟಿಗೆ ಕರೆದಿತ್ತು. ಎಣ್ಣೆಪಾರ್ಟಿ ಏಂಜಾಯ್ ಮಾಡಲು ಅನ್ಸು, ದೀಪು,

ರಾಧೆಶ್ಯಾಮ್ ಮತ್ತು ಸಹೋದರ ಬೀರಬಲ್ ಸರ್ಜಾಪುರದ ನಿರ್ಮಾಣ ಹಂತದ ಕಟ್ಟಡಕ್ಕೆ ತೆರಳಿದ್ದರು. ಸಂಜೆವರೆಗೆ ಕುಡಿದು ತಿಂದು ಏಂಜಾಯ್ ಮಾಡಿದ್ದರು.ನಶೆ ನೆತ್ತಿಗೇರುತ್ತಿದ್ದಂತೆ ಓರ್ವ ಎಣ್ಣೆಪಾರ್ಟಿ ಆಯೋಜಿಸಿದ್ದವನ ತಂಗಿಗೆ ಕರೆ ಅಸಭ್ಯವಾಗಿ ಮಾತನಾಡಿದ್ದಾನೆ. ಇದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದ್ದು, ಎರಡು ಗ್ಯಾಂಗ್ ನಡುವೆ ಬಡಿದಾಟ ಶುರುವಾಗಿದೆ. ಹೊರಗಿನಿಂದ ಬಂದ ನಾಲ್ವರ ಮೇಲೆ ಸೋನಾ ಅಂಡ್ ಗ್ಯಾಂಗ್ ಕೈಗೆ ಸಿಕ್ಕ ದೊಣ್ಣೆ ಮತ್ತು ಕಬ್ಬಿಣದ ರಾಡ್​ನಿಂದ ಅಟ್ಟಾಡಿಸಿ ಹಲ್ಲೆ ನಡೆಸಿದೆ.

ನಶೆ ಏರಿದವರ ಏಟಿನ ದಾಳಿಗೆ ಇಬ್ಬರು ನಿರ್ಮಾಣ ಹಂತದ ಅಪಾರ್ಟ್​​ಮೆಂಟ್ ಮೂರನೇ ಮಹಡಿಯಲ್ಲಿ, ಮತ್ತೊಬ್ಬ ಅಪಾರ್ಟ್​​ಮೆಂಟ್ ಪಕ್ಕದ ಖಾಲಿ ಜಾಗದಲ್ಲಿ ರಕ್ತದ ಮಡುವಿನಲ್ಲಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.


Spread the love

About Laxminews 24x7

Check Also

ಅನಾಥಾಶ್ರಮದಲ್ಲಿ ಊಟ ಸೇವಿಸಿದ 29 ವಿದ್ಯಾರ್ಥಿಗಳು ಅಸ್ವಸ್ಥ

Spread the loveಮಂಡ್ಯ, ಮಾರ್ಚ್ 16: ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ಟಿ.ಕಾಗೇಪುರ ಗ್ರಾಮದಲ್ಲಿ ಆಘಾತಕಾರಿ ಘಟನೆ ಸಂಭವಿಸಿದ್ದು, ಅನಾಥಾಶ್ರಮದಲ್ಲಿ ಊಟ ಸೇವಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ