Breaking News

ಸ್ನೇಹಿತರಿಂದಲೇ ಗೆಳೆಯನ ಬರ್ಬರ ಹತ್ಯೆ: ತಲೆ ಮೇಲೆ ಕಲ್ಲೆತ್ತಿ ಹಾಕುವ ಭಯಾನಕ ದೃಶ್ಯ ಸೆರೆ

Spread the love

ಕಲಬುರಗಿ, ಮಾರ್ಚ್​ 16: ಆತ ಎಂದಿನಂತೆ ನಿನ್ನೆ ಸಂಜೆ ಮನೆಯಿಂದ ಹೊರಹೋಗಿದ್ದ. ರಾತ್ರಿ ಹತ್ತು ಗಂಟೆಗೆ ಆತನ ತಂದೆ ಕರೆ ಮಾಡಿ ಎಲ್ಲಿದ್ದಿಯಾ, ಎಷ್ಟೋತ್ತಿಗೆ ಮನೆಗೆ ಬರ್ತಿಯಾ ಅಂತಾ ವಿಚಾರಿಸಿದ್ದಾರೆ. ಸ್ನೇಹಿತರ (friends) ಜೊತೆ ಹೊರಗಡೆ ಇದ್ದೇನೆ. ಆದಷ್ಟು ಬೇಗ ಬರ್ತೆನೆ ಅಂತಾ‌ ಹೇಳಿದ್ದಾ. ಆದರೆ ತಡರಾತ್ರಿಯಾದರೂ ಮಗ ಮನೆಗೆ ವಾಪಸ್ ಬಂದಿರಲಿಲ್ಲ. ಮಗನ‌ ಬರುವಿಕೆಯ ದಾರಿ ಕಾಯ್ತಿದ್ದ ಹೆತ್ತವರು ಬಳಿಕ ನಿದ್ದೆಗೆ ಜಾರಿದ್ದಾರೆ. ಬೆಳಗಾಗುವಷ್ಟರಲ್ಲಿ ಮನೆಯಿಂದ ಐವತ್ತು ಅಡಿ ದೂರದಲ್ಲೆ ಮಗನನ್ನು ಬರ್ಬರವಾಗಿ ಹತ್ಯೆ (kill) ಮಾಡಿ ಬಿಸಾಕಿರುವ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗನನ್ನ ಸ್ಮೇಹಿತರೇ ಬರ್ಬರವಾಗಿ ಹತ್ಯೆ ಮಾಡಿರುವ ಸಿಸಿಟಿವಿ ದೃಶ್ಯ ಕಂಡು ಬೆಚ್ಚಿಬಿದ್ದಾರೆ.

ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ‌ ಬರ್ಬರ ಹತ್ಯೆ

ಜೊತೆಗಿದ್ದ ಸ್ನೇಹಿತರೇ ತಮ್ಮ ಕುಚಿಕು ಗೆಳೆಯನನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಒಂದಲ್ಲ, ಎರಡಲ್ಲ ಅಂತಾ ಬರೊಬ್ಬರಿ 12 ಬಾರಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇನ್ನೊಂದೆಡೆ ಮಗನನ್ನ ಕಳೆದುಕೊಂಡು ಹೆತ್ತವರು ಕಣ್ಣೀರು ಹಾಕಿದ್ದಾರೆ. ಸಂಜೆಯವರೆಗೂ ಜೊತೆಗಿದ್ದ ಸ್ನೇಹಿತ ಇನ್ನಿಲ್ಲ ಅಂತಾ ಮೌನಕ್ಕೆ ಶರಣಾಗಿರುವ ಸ್ನೇಹಿತರು. ಅಂದಹಾಗೆ ಇಂತಹದೊಂದು ಘಟನೆಗೆ ಕಲಬುರಗಿ ನಗರ ಸಾಕ್ಷಿಯಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ