Breaking News

ಯೋಧರು ಎಂದಿಗೂ ಮಾಜಿ ಆಗಲು ಸಾಧ್ಯವಿಲ್ಲ; ಹುಕ್ಕೇರಿ ಶ್ರೀ

Spread the love

ಬೆಳಗಾವಿಯಲ್ಲಿ ಪ್ರಾದೇಶಿಕ ಸೇನೆಯ ಮಾಜಿ ಯೋಧರ ಕಲ್ಯಾಣ ಸಂಘದ ಉದ್ಘಾಟನೆ
ಯೋಧರನ್ನು ಬಿಟ್ಟರೇ ಬೇರ್ಯಾರು ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ. ಗಡಿಯಲ್ಲಿ ಶತ್ರುಗಳೊಂದಿಗೆ ಸೆಣಸಾಡುವ ಯೋಧರು ಎಂದಿಗೂ ಮಾಜಿ ಆಗಲಾರರು. ಇವರಿಂದ ಉತ್ತಮವಾಗಿ ದೇಶಭಕ್ತಿಯ ಪಾಠ ಹೇಳಿ ಕೊಡವವರು ಬೇರೇ ಯಾರು ಇಲ್ಲವೆಂದು ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜೀಗಳು ಹೇಳಿದರು.
ಪ್ರಾದೇಶಿಕ ಸೇನೆಯ ಮಾಜಿ ಯೋಧರ ಕಲ್ಯಾಣ ಸಂಘದ ಉದ್ಘಾಟನಾ ಸಮಾರಂಭವನ್ನು ಬೆಳಗಾವಿಯ ಕುಮಾರಗಂಧರ್ವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜೀಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಸೇನಾಧಿಕಾರಿ ಶ್ರೀನಿವಾಸ್ ರಾವ್ ಮತ್ತು ಡಾ. ರವಿ ಪಾಟೀಲ್ ಉಪಸ್ಥಿತರಿದ್ಧರು.
ಸಂಘದ ಅಧ್ಯಕ್ಷ ವಿಲಾಸ್ ಜಂಗಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರ ಗೌರವ ಉಪಸ್ಥಿತಿಯಲ್ಲಿ ನಿವೃತ್ತ ಸೇನಾಧಿಕಾರಿ ರಾಜ್ ಶುಕ್ಲಾ ಅವರು ಉದ್ಘಾಟಿಸಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಹುಕ್ಕೇರಿ ಶ್ರೀಗಳು, ಅವರು ದೇಶವನ್ನು ಉಳಿಸುವುದು ಯೋಧರಿಂದ ಮಾತ್ರ ಸಾಧ್ಯ. ಯೋಧರಿರುವ ಸ್ಥಳಗಳಲ್ಲಿ ದೇಶ ದ್ರೋಹಿ ಚಟುವಟಿಕೆಗಳಿಗೆ ಸ್ಥಾನವಿರಬಾರದು. ಈ ದೇಶದಲ್ಲಿ ಎಲ್ಲ ಹುದ್ಧೆಗಳು ಮಾಜಿಯಾಗಬಹುದು. ಆದರೇ, ಯೋಧ ಎಂದಿಗೂ ಮಾಜಿ ಆಗಬಾರದು. ದೇಶಭಕ್ತಿಯನ್ನು ಬೆಳೆಸುವ ಕಾರ್ಯವನ್ನು ಮಾಡಬೇಕು. ಮಕ್ಕಳಲ್ಲಿ ದೇಶಭಕ್ತಿಯನ್ನು ಜಾಗೃತಿಗೊಳಿಸಬೇಕು. ಯೋಧರು ತಮ್ಮ ತಾಯಿ ತಮ್ಮ ಕುಟುಂಬಕ್ಕೆ ಕೃತಜ್ಞತೆಯನ್ನು ಸಲ್ಲಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ, ನಿವೃತ್ತ ಸೇನಾಧಿಕಾರಿ ಶ್ರೀನಿವಾಸ್ ರಾವ್ ಅವರು ದೇಶ ರಕ್ಷಣೆಯಲ್ಲಿ ಯೋಧರು ಬಹಳಷ್ಟು ಕಷ್ಟಗಳೊಂದಿಗೆ ತಮ್ಮ ಯೋಗದಾನವನ್ನು ನೀಡುತ್ತಾರೆ. ಯೋಧರಿಗೆ ಸೌಲಭ್ಯಗಳನ್ನು ಪಡೆಯಲು ತೊಂದರೆಯಾಗುತ್ತಿತ್ತು. ಆದರೇ ಈಗ ಸಂಘಟನೆಯನ್ನು ರಚಿಸಲಾಗಿದ್ದು, ಇದು ಮಾಜಿ ಯೋಧರಿಗೆ ಅವಶ್ಯಕ ಸೌಲಭ್ಯಗಳನ್ನು ಪಡೆಯಲು ಸಹಕಾರಿಯಾಗಿದೆ. ಈ ಸಂಘಟನೆಯನ್ನು ಗಟ್ಟಿಗೊಳಿಸಬೇಕೆಂದರು.
ನಂತರ ಹಿರಿಯ ಮಾಜಿ ಸೇನಾಧಿಕಾರಿಗಳು ಮತ್ತು ಕುಟುಂಬಸ್ಥರು ಹಾಗೂ ವೀರನಾರಿಯರನ್ನು ಸನ್ಮಾನಿಸಲಾಯಿತು.

Spread the love

About Laxminews 24x7

Check Also

ಬೈಕ್​ ಡಿಕ್ಕಿ ಹೊಡೆದ ಪರಿಣಾಮ ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಗಾಯಗೊಂಡಿದ್ದಾರೆ.

Spread the loveಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷರೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ