Breaking News

ದೆಹಲಿಯಲ್ಲಿ ಮರಾಠಿ ಕಂಪು

Spread the love

ಕಣ್ಮನ ಸೆಳೆದ ಅಖಿಲ ಭಾರತೀಯ 98ನೇ ಮರಾಠಿ ಸಾಹಿತ್ಯ ಸಮ್ಮೇಳನದ ಗ್ರಂಥ ದಿಂಡಿ
ದೇಶದ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತೀಯ 98ನೇ ಮರಾಠಿ ಸಾಹಿತ್ಯ ಸಮ್ಮೇಳನದ ಹಿನ್ನೆಲೆ ಉತ್ಸಾಹದ ಗ್ರಂಥದಿಂಡಿ ಮೆರವಣಿಗೆ ನಡೆಯಿತು.
ದೇಶದ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ್ ಭಾರತೀಯ 98ನೇ ಮರಾಠಿ ಸಾಹಿತ್ಯ ಸಮ್ಮೆಳನದ ಹಿನ್ನೆಲೆ ಉತ್ಸಾಹದ ಗ್ರಂಥದಿಂಡಿ ಮೆರವಣಿಗೆ ನಡೆಯಿತು. ಈ ದಿಂಡಿಯಲ್ಲಿ ಮರಾಠಿ ಅಭಿಜಾತ ಭಾಷೆಯ ಕಂಪು ಸೂಸಿತು. ಈ ದಿಂಡಿಯೂ ರಾಜಧಾನಿ ದೆಹಲಿಗರ ಗಮನವನ್ನು ಸೆಳೆಯಿತು.
ಮೊದಲಿಗೆ ಸಂಸತ್ತಿನಲ್ಲಿರುವ ಛತ್ರಪತಿ ಶಿವಾಜೀ ಮಹಾರಾಜರು, ರಾಜರ್ಷಿ ಶಾಹೂ ಮಹಾರಾಜರು, ಮಹಾತ್ಮಾ ಜ್ಯೋತಿಬಾ ಫೂಲೆ, ಡಾ. ಬಾಬಾಸಾಹೇಬ್ ಅಂಬೇಡ್ಕರರ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿ ದಿಂಡಿಗೆ ಚಾಲನೆಯನ್ನು ನೀಡಲಾಯಿತು.
ಸಮ್ಮೇಳನದ ಮುಖ್ಯ ಆಯೋಜಕರಾದ ಸಹಜ ಸಂಸ್ಥೆಯ ಅಧ್ಯಕ್ಷ ಸಂಜಯ ನಹಾರ್, ನ್ಯಾಷನಲ್ ಬುಕ್ ಟ್ರಸ್ಟಿನ ಚೇರಮನ್ ಮೀಲಿಂದ್ ಮರಾಠೆ, ನಿರ್ಗಮಿತ ಸಮ್ಮೇಳನಾಧ್ಯಕ್ಷ ಡಾ. ಡಾ. ರವೀಂದ್ರ ಶೋಭಣೆ, ರಾಜ್ಯದ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ವಿಕಾಸ್ ಖಾರಗೆ, ಸಾಹಿತಿ ಶರದ್ ಗೋರೆ ಅವರು ಇದರಲ್ಲಿ ಸಹಭಾಗಿಯಾಗಿದ್ದರು.
ಹರಿ ನಾಮಜಪ, ಢೋಲ್ ತಾಶಾ, ಸಾಹಿತ್ಯಾಧಾರಿತೆ ರೂಪಕಗಳು, ಮರಾಠಿ ಸಂಸ್ಕೃತಿಯನ್ನು ಬಿಂಬಿಸುವ ವೇಷಭೂಷಣದಲ್ಲಿ ಮರಾಠಿ ಭಾಷಿಕರು ಬೆಳಗಾವಿ ಸೇರಿದಂತೆ ವಿವಿಧೆಡೆಯಿಂದ ಭಾಗಿಯಾಗಿ, ಮರಾಠಿ ಭಾಷಿಕರು ಜೈ ಭವಾನಿ, ಜೈ ಶಿವಾಜೀ ಘೋಷನೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಗಮನಸೆಳೆದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ