Breaking News
Home / ಹುಬ್ಬಳ್ಳಿ / ಶಾರ್ಟ್ ಸರ್ಕ್ಯೂಟ್- ಪೊರಕೆ, ಹುಬ್ಬಳ್ಳಿ ಫಿನಾಯಿಲ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ

ಶಾರ್ಟ್ ಸರ್ಕ್ಯೂಟ್- ಪೊರಕೆ, ಹುಬ್ಬಳ್ಳಿ ಫಿನಾಯಿಲ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ

Spread the love

ಹುಬ್ಬಳ್ಳಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಫಿನಾಯಿಲ್ ಹಾಗೂ ಪೊರಕೆ ತಯಾರಿಕೆ ಕಾರ್ಖಾನೆಗೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಫಿನಾಯಿಲ್ ಹಾಗೂ ಪೊರಕೆಗಳು ಸುಟ್ಟು ಕರಕಲಾದ ಘಟನೆ ಹುಬ್ಬಳ್ಳಿಯ ಸಮೀಪದ ಶೇರವಾಡ ಗ್ರಾಮದ ಬಳಿಯ ವಿಭವ್ ಇಂಡಸ್ಟ್ರೀಯಲ್ ನಲ್ಲಿ ನಡೆದಿದೆ.

ಸಂಜೆ ವಿದ್ಯುತ್ ನಲ್ಲಿ ವ್ಯತ್ಯಯ ಉಂಟಾದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಫ್ಯಾಕ್ಟರಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಕುಂದಗೋಳ ಹಾಗೂ ಹುಬ್ಬಳ್ಳಿಯ ನಾಲ್ಕು ಅಗ್ನಿಶಾಮಕ ವಾಹನಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿವೆ. ಬೆಂಕಿ ಅವಘಡದಿಂದ ಲಕ್ಷಾಂತರ ಮೌಲ್ಯದ ಫಿನಾಯಿಲ್ ಹಾಗೂ ಪೊರಕೆ ಸುಟ್ಟು ಕರಕಲಾಗಿವೆ. ವಿಜಯ ದಶಮಿ ಹಬ್ಬದ ಕಾರಣ ಫ್ಯಾಕ್ಟರಿ ಗೆ ರಜೆ ನೀಡಲಾಗಿತ್ತು. ಹೀಗಾಗಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ರಜೆ ಇದ್ದ ಕಾರಣ ಕಾರ್ಖಾನೆಯ ಒಳಗಡೆ ಹೆಚ್ಚು ಜನ ಕಾರ್ಮಿಕರು ಇರಲಿಲ್ಲ. ಹೀಗಾಗಿ ಬಹು ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಾರ್ಮಿಕರು ಎಂದಿನಂತೆ ಕಾರ್ಯ ನಿರ್ವಹಿಸುವ ವೇಳೆ ಬೆಂಕಿ ಹೊತ್ತಿಕೊಂಡಿದ್ದರೆ ಭಾರೀ ಅನಾಹುತವಾಗುವ ಸಂಭವವಿತ್ತು. ಹೀಗಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಬೆಂಕಿ ಬಿದ್ದ ತಕ್ಷಣ ಕಾರ್ಖಾನೆಯಲ್ಲಿದ್ದ ಕಾರ್ಮಿಕರು ಕೂಗಾಡಿದ್ದರ ಪರಿಣಾಮ ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಸಾಧ್ಯವಾಗಿದೆ.

ಗ್ರಾಮೀಣ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕಾರ್ಖಾನೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸೇರಿದ್ದಾಗಿದೆ.


Spread the love

About Laxminews 24x7

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ 2ರ ಬಿಲ್​​ ಕಲೆಕ್ಟರ್ ವೆಂಕಟೇಶ ದಾಸರ್​ ಎಸಿಬಿ ಬಲೆಗೆ

Spread the loveಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubli-Dharwad Municipal Corporation ) ವಲಯ 2ರ ಬಿಲ್​​ ಕಲೆಕ್ಟರ್ ವೆಂಕಟೇಶ ದಾಸರ್​ ಎಸಿಬಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ