ಮೈಸೂರು: ರಮೇಶ್ ಜಾರಕಿಹೊಳಿ ಅವರೊಂದಿಗೆ ಭೇಟಿ ಸೌಜನ್ಯದ ಭೇಟಿಯಷ್ಟೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅದಕ್ಕೆ ಸ್ಟೇ ಕೊಟ್ಟಿದ್ದಾರೆ ಅದರ ಬಗ್ಗೆ ಇನ್ನೇನು ಮಾತನಾಡಲಿ. ಜಾರಕಿಹೊಳಿ ಬಂದಿದ್ದು ಉಭಯಕುಶಲೋಪರಿಗೆ. ಬಂದು ಊಟ ಮಾಡಿ ಹೋದ್ರು ಅಷ್ಟೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ ರಮೇಶ್ ಜಾರಕಿಹೊಳಿ ಮಾತನಾಡಿ, ವಿವಾದಿತ ಸ್ಟಿಂಗ್ ಕಾರ್ಯಾಚರಣೆ ವಿಚಾರವಾಗಿ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತರಬಾರದಿತ್ತು. ಧೈರ್ಯವಾಗಿ ಎದುರಿಸಿ ಫೈಟ್ ಮಾಡಬೇಕಿತ್ತು ಎಂದಿದ್ದಾರೆ.
ಸಿದ್ದರಾಮಯ್ಯ ಅವರು ಯಾವ ಪಕ್ಷದಲ್ಲಿದ್ದರೂ ಅವರು ನಮ್ಮ ನಾಯಕರು. ನಾನು ಈಗ ಆ ಸ್ಟಿಂಗ್ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ. ನಾನು ಬೇರೆಯದೇ ವಿಚಾರವಾಗಿ ಅವರನ್ನು ಮಾತನಾಡಿಸಲು ಬಂದಿದ್ದೆ. ಇದು ಖಾಸಗಿ ಭೇಟಿ ಎಂದು ಸ್ಪಷ್ಟಪಡಿಸಿ ಅಲ್ಲಿಂದ ತೆರಳಿದ್ದಾರೆ.
Laxmi News 24×7