Breaking News

ಅಂಜನಾದ್ರಿ ಬೆಟ್ಟದಿಂದ ಮುಜರಾಯಿ ಇಲಾಖೆಯ ಸಿಬ್ಬಂದಿ ಹೊರಕ್ಕೆ – ಎಲ್ಲ ಕಚೇರಿಗಳಿಗೆ ಬೀಗ ಜಡಿದ ವಿದ್ಯಾದಾಸ್ ಬಾಬಾ

Spread the love

ಕೊಪ್ಪಳ: ಅಂಜನಾದ್ರಿ ಬೆಟ್ಟದಿಂದ ಮುಜರಾಯಿ ಇಲಾಖೆಯ ಸಿಬ್ಬಂದಿಯನ್ನು ಹೊರಕ್ಕೆ ಕಳಿಸಿ, ಆಡಳಿತ ಕಚೇರಿ ಸೇರಿ ಎಲ್ಲ ಕಚೇರಿಗಳಿಗೆ ವಿದ್ಯಾದಾಸ್ ಬಾಬಾ ಬೀಗ ಜಡಿದಿದ್ದಾರೆ.

ಆಂಜನೇಯನ ಜನ್ಮ ಸ್ಥಳ ಎಂದೆ ಖ್ಯಾತಿ ಪಡೆದಿರುವ ಗಂಗಾವತಿ  ತಾಲೂಕಿನ ಹನುಮನಹಳ್ಳಿ ಬಳಿ ಇರುವ ಅಂಜನಾದ್ರಿ ಪರ್ವತ ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಅಧಿಸೂಚಿತ ದೇವಸ್ಥಾನವೆಂದು ಹೊರಡಿಸಿದ ಜಿಲ್ಲಾಡಳಿತದ ಆದೇಶವನ್ನು ಧಾರವಾಡ ವಿಭಾಗೀಯ ಪೀಠ ರದ್ದುಗೊಳಿಸಿತ್ತು. ಇದರ ಬೆನ್ನಲ್ಲೇ ವಿದ್ಯಾದ್ಯಾಸ್ ಬಾಸ್ ಬೆಟ್ಟದಿಂದ ಸಿಬ್ಬಂದಿಯನ್ನ ಕೆಳಗಿಳಿಸಿ ಆಡಳಿತ ಕಚೇರಿ ಸೇರಿದಂತೆ ಎಲ್ಲಾ ಕಟ್ಟಡಗಳಿಗೆ ಬೀಗ ಹಾಕಿದ್ದಾರೆ.

ಆಡಳಿತ ಕಚೇರಿ, ಉಗ್ರಾಣ ಕೊಠಡಿ, ಸಂಸ್ಕ್ರತ ಪಾಠಶಾಲೆ, ಅಡುಗೆ ಕೋಣೆ ಸೇರಿ 08 ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿಗೆ ಬೆಟ್ಟದ ಮೇಲೆ ಬರಲು ಪ್ರವೇಶ ನಿರ್ಬಂಧ ಹೇರಲಾಗಿದೆ.

ಜಿಲ್ಲಾಡಳಿತದ ಆದೇಶವನ್ನ ಹೈಕೋರ್ಟ್ ರದ್ದು ಮಾಡಿದ ಬೆನ್ನಲ್ಲೇ ದೇವಸ್ಥಾನವನ್ನು ವಿದ್ಯಾದಾಸ್ ಬಾಬಾ ಕಬ್ಜಾ ಮಾಡಿದ್ದಾರೆ.


Spread the love

About Laxminews 24x7

Check Also

ಮನ್ಮುಲ್ ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣ – ಮತ್ತೆ ಮೂವರ ಬಂಧನ, 11ಕ್ಕೇರಿದ ಆರೋಪಿಗಳ ಸಂಖ್ಯೆ

Spread the loveಮಂಡ್ಯ: ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘ  ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ