ನವದೆಹಲಿ: 2014 ರ ನಂತರ ನಾವು 40 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದೇವೆ. ವ್ಯಾಪಾರಕ್ಕೆ ಹೊಸ ಅವಕಾಶಗಳನ್ನ ಸೃಷ್ಟಿಸುತ್ತಿದ್ದೇವೆ. ಜೊತೆಗೆ ಹೊಸ ಹೊಸ ಸಹಕಾರವನ್ನೂ ಹುಡುಕುತ್ತಿದ್ದೇವೆ. ಭಾರತದಲ್ಲಿ ಹೂಡಿಕೆ ಮಾಡುವ ಮೂಲಕ ನೀವೂ ಇದರ ಲಾಭ ಪಡೆದುಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಬಳಿಕ ದ್ವಿಪಕ್ಷೀಯ ಮಾತುಕತೆ ಕುರಿತು ವಿವರಿಸಿದ್ದಾರೆ.
2014ರ ನಂತರ ನಾವು 40 ದೇಶಗಳ ಜೊತೆಗೆ ಮುಕ್ತ ವ್ಯಾಪರ ಒಪ್ಪಂದ ಮಾಡಿಕೊಂಡಿದ್ದೇವೆ. ವ್ಯಾಪರಕ್ಕೆ ಹೊಸ ಅವಕಾಶ ಸೃಷ್ಟಿಸುತ್ತಿದ್ದೇವೆ. ಹೊಸ ಸಹಕಾರಗಳನ್ನೂ ಹುಡುಕುತ್ತಿದ್ದೇವೆ. ದೇಶದಲ್ಲಿ ಹೂಡಿಕೆ ಮಾಡುವ ಮೂಲಕ ಇದರ ಲಾಭವನ್ನ ನೀವೂ ಪಡೆದುಕೊಳ್ಳಬಹುದು. ಬ್ರಿಕ್ಸ್ ದೇಶಗಳ ನಡುವೆ ಮುಕ್ತ ವ್ಯಾಪಾರ ಕಲ್ಪಿಸಬಹುದು. ಪ್ರತಿವರ್ಷ 100 ವರ್ಷ ಸ್ಟಾರ್ಟ್ ಅಪ್ಗಳನ್ನ ಬ್ರಿಕ್ಸ್ ದೇಶಗಳು ಬೆಳೆಸಬಹುದು ಎಂದು ಹೇಳಿದ್ದಾರೆ.
ಮುಂದುವರಿದು.. ಇಡೀ ವಿಶ್ವ ರಚನಾತ್ಮಕ ಬದಲಾವಣೆ ಮೂಲಕ ಸಾಗುತ್ತಿದೆ. ಬದಲಾವಣೆಗಳನ್ನ ಯಾರಿಂದಲೂ ತಡೆಯಲು ಸಾಧ್ಯವಾಗುವುದಿಲ್ಲ. ಬ್ರಿಕ್ಸ್, ಜಿ7 ಗಿಂತಲೂ ಮುಂದಿದೆ, ಜಾಗತಿನ ಆರ್ಥಿಕತೆಯ 40% ಭಾಗ ಬ್ರಿಕ್ಸ್ ದೇಶಗಳಿಂದಲೇ ಬರುತ್ತಿದೆ ಎಂದು ಶ್ಲಾಘಿಸಿದರು.
ಭಾರತ ಜಾಗತಿಕ ಸಮಸ್ಯೆಗಳ ಪರಿಹಾರ ಕೇಂದ್ರ
ಇನ್ನೂ ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್ ಶೃಂಗಸಭೆ ಆಯೋಜಿಸಿದ್ದು, ಸುಸ್ಥಿರತೆ ನಮ್ಮ ಪ್ರಮುಖ ಉದ್ದೇಶವಾಗಿದೆ. ಜಾಗತಿಕ ಅನಿಶ್ಚಿತತೆ ನಡುವೆ ಭಾರತ ಸುಸ್ಥಿರವಾಗಿದೆ. ಭಾರತದಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿದೆ. ಭಾರತ ಹೊಸ ಅವಕಾಶಗಳ ಕೇಂದ್ರವಾಗಿದೆ. ಇಂದು ಭಾರತದಲ್ಲಿ ಸ್ಟಾರ್ಟ್ ಅಪ್ ಕ್ರಾಂತಿಯಾಗುತ್ತಿದೆ. ಜಾಗತಿಕವಾಗಿ ಸಮಸ್ಯೆಗಳ ಪರಿಹಾರ ಕೇಂದ್ರ ಭಾರತವಾಗಿದೆ. ಬಾಹ್ಯಕಾಶ, ರಕ್ಷಣೆ ಸೇರಿದಂತೆ ಹಲವು ವಲಯದಲ್ಲಿ ಹೊಸ ಸಂಶೋಧನೆಗಳು ಭಾರತದಲ್ಲಿ ನಡೆಯುತ್ತಿದೆ. ಯುಪಿಐ ಮೂಲಕ ದೇಶದ 50% ವಹಿವಾಟು ನಡೆಯುತ್ತಿದೆ ಎಂದು ಬಣ್ಣಿಸಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳು ವಿಶ್ವದ ಜನಸಂಖ್ಯೆಯ 50% ಇದೆ, ದೇಶದ ಜಿಡಿಪಿಯ 40% ಹಾಗೂ ಜಾಗತಿಕ ವ್ಯಾಪಾರದ 25% ಕ್ಕಿಂತ ಹೆಚ್ಚು ಪ್ರತಿನಿಧಿಸುತ್ತವೆ. ಈ ವರ್ಷ ಜಾಗತಿಕ ಜಿಡಿಪಿ ಸುಮಾರು ಎರಡೂವರೆ ಪಟ್ಟು ಬೆಳೆದಿದ್ದರೂ, ಬ್ರಿಕ್ಸ್ ರಾಷ್ಟ್ರಗಳ ಒಟ್ಟು ಜಿಡಿಪಿ ಸುಮಾರು ನಾಲ್ಕೂವರೆ ಪಟ್ಟು ವಿಸ್ತರಿಸಿದೆ. ಬ್ರಿಕ್ಸ್ ಆರ್ಥಿಕ ಶಕ್ತಿಯು ಪ್ರಪಂಚದ ಉಳಿದ ಭಾಗಗಳಿಗಿಂತ ಸುಮಾರು 2 ಪಟ್ಟು ವೇಗವಾಗಿ ಬೆಳೆದಿದೆ. ಬ್ರಿಕ್ಸ್ ರಾಷ್ಟ್ರಗಳು ಜಾಗತಿಕ ನಾವೀನ್ಯತೆ ಮತ್ತು ಪರಿಹಾರಗಳಿಗೆ ಪ್ರಮುಖ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ. ತಳಮಟ್ಟದ ಉಪಕ್ರಮಗಳಿಂದ ಹಿಡಿದು ಗಡಿನಾಡಿನ ತಂತ್ರಜ್ಞಾನಗಳವರೆಗೆ ಎಲ್ಲವನ್ನೂ ವ್ಯಾಪಿಸಿರುವ ನಾವೀನ್ಯತೆಗಾಗಿ ಹೊಸ ಸಾಧ್ಯತೆಗಳು ನಮ್ಮ ದೇಶಗಳಲ್ಲಿ ರೂಪುಗೊಳ್ಳುತ್ತಿವೆ. ಹೀಗಿರುವಾಗ ಭಾರತದಲ್ಲಿ ಆಯೋಜಿಸಲಾದ ಈ ವೇದಿಕೆಯು ಇಲ್ಲಿಯವರೆಗಿನ ಅತಿದೊಡ್ಡ ಬ್ರಿಕ್ಸ್ ವ್ಯಾಪಾರ ವೇದಿಕೆಯಾಗಿದೆ ಎಂದು ಹೇಳಿದ್ದಾರೆ.
Laxmi News 24×7