ಚಿಕ್ಕೋಡಿ: ತಾಲೂಕಿನ ಯಕ್ಸಂಬಾ ಪಟ್ಟಣದ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವಿಸಿ ಅವಾಚ್ಚ ಶಬ್ದಗಳಿಂದ ಸಾರ್ವಜನಿಕರನ್ನು ನಿಂದಿಸಿದ ಅನಿಲ ಪೂಜಾರಿ ಚಿಕ್ಕೋಡಿ ಪ್ರಥಮ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯ ಸಸಿ ನೆಡುವ ವಿನೂತನ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.
ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಹಾಜರಾಗಿ, ತಾನು
ಸಾರ್ವಜನಿಕ ಸ್ಥಳದಲ್ಲಿ ಏರು ಧ್ವನಿಯಲ್ಲಿ ಮಾತನಾಡಿ ಸಾರ್ವಜನಿಕರಿಗೆ ತೊಂದರೆ ನೀಡಿದ ಒಪ್ಪಿಕೊಂಡಿದ್ದ ಅನಿಲ ಪೂಜಾರಿಗೆ 1 ಸಾವಿರ ರೂ. ದಂಡದ ಜತೆಗೆ
ಸದಲಗಾ ಪೊಲೀಸ್ ಠಾಣಾ ಮತ್ತು
ಚಿಕ್ಕೋಡಿ ನ್ಯಾಯಾಲಯದ ಆವರಣದಲ್ಲಿ ತಲಾ 25 ಸಸಿ ನೀಡುವ ಶಿಕ್ಷೆ ನೀಡಿದೆ.ಸಸಿ ನೆಡಲು ವಿಫಲವಾದರೆ 30 ದಿನಗಳ ಕಾರಾಗೃಹ ಶಿಕ್ಷೆಯ ಎಚ್ಚರಿಕೆ ನೀಡಿದೆ.
Laxmi News 24×7