Breaking News

ಮತದಾನದ ಹಕ್ಕು ಕಸಿಯುವುದು ಸಂವಿಧಾನದ ಆಶಯಕ್ಕೆ ವಿರುದ್ಧ – SIR ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ವಾಗ್ದಾಳಿ

Spread the love

ಹೈದರಾಬಾದ್: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ  ಕುರಿತು ದೇಶಾದ್ಯಂತ ವಿವಾದ ಭುಗಿಲೆದ್ದಿದೆ. ಇದರ ಮಧ್ಯೆಯೇ ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮಹತ್ವದ ಹೇಳಿಕೆ ನೀಡಿದ್ದಾರೆ.

ತೆಲಂಗಾಣದ ಹೈದರಾಬಾದ್‌ನಲ್ಲಿರುವ ನಲ್ಸಾರ್‌ ಕಾನೂನು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದ್ದಾರೆ.

ಚುನಾವಣಾ ಆಯೋಗದ ಮತದಾರರ ಪರಿಷ್ಕರಣೆ  ಪ್ರಕ್ರಿಯೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಲಕ್ಷಾಂತರ ನಾಗರಿಕರ ಮತದಾನದ ಹಕ್ಕು ಕಸಿಯುವುದು ಸಂವಿಧಾನದ ಆಶಯಕ್ಕೆ ವಿರುದ್ಧ. ಕೋಟ್ಯಂತರ ನಾಗರಿಕರನ್ನ ಮತದಾನದ ಹಕ್ಕಿನಿಂದ ವಂಚಿಸುವ ಯಾವುದೇ ಪ್ರಕ್ರಿಯೆಯು ಅನಿಯಂತ್ರಿತವಾಗಿದ್ದು, ಸಂವಿಧಾನಾತ್ಮಕ ವ್ಯವಸ್ಥೆಯನ್ನೇ ನಿರಾಕರಿಸಿದಂತಾಗುತ್ತದೆ. ಮೂಲ ರಚನೆಗೆ ಧಕ್ಕೆ ತರುತ್ತದೆ ಎಂದಿದ್ದಾರೆ.

ದೇಶದ ಕೋಟ್ಯಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಕ್ರಮವನ್ನ ಯಾವುದೇ ರೀತಿಯ ಸಮರ್ಥನೆಯಿಂದಲೂ ನ್ಯಾಯಸಮ್ಮತಗೊಳಿಸಲು ಸಾಧ್ಯವಿಲ್ಲ. ಕೋಟ್ಯಂತರ ಭಾರತೀಯ ನಾಗರಿಕರು ಮತದಾನದ ಹಕ್ಕಿನಿಂದ ವಂಚಿತರಾಗಿ, ತಮ್ಮದೇ ದೇಶದಲ್ಲಿ 2ನೇ ದರ್ಜೆಯ ನಾಗರಿಕರಂತಾಗುವ ಪರಿಸ್ಥಿತಿ ಉಂಟಾದರೆ, ಅಂತಹ ಪ್ರಕ್ರಿಯೆ ಸ್ವಭಾವತಃ ಅನಿಯಂತ್ರಿತವಾಗಿದೆ. ಇದನ್ನು ಯಾವುದೇ ರೀತಿಯಲ್ಲೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದ್ರೆ ಇದು ಸಂವಿಧಾನದ ಹೃದಯಕ್ಕೇ ನೀಡಿದ ಹೊಡೆತ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಂವಿಧಾನದ ಮೂಲ ರಚನೆಗೆ ಧಕ್ಕೆ
ಮತದಾರರು ಮೃತಪಟ್ಟ ಸಂದರ್ಭ ಹೊರತುಪಡಿಸಿ, ಸೂಕ್ತ ನೋಟಿಸ್ ನೀಡದೆ ಮತ್ತು ಅವರ ಕಡೆಯ ಸ್ಪಷ್ಟನೆಯನ್ನು ಆಲಿಸದೆ ಯಾರೊಬ್ಬರ ಹೆಸರನ್ನೂ ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಹಾಗಿಲ್ಲ. ನಾಗರಿಕನಿಂದ ಮತದಾನದ ಹಕ್ಕನ್ನು ಬೇರ್ಪಡಿಸುವುದು ದೇಹದಿಂದ ಆತ್ಮವನ್ನು ತೆಗೆದಂತೆ. ಮತದಾನದ ಹಕ್ಕು ಸಂವಿಧಾನದ ‘ಮೂಲ ರಚನೆ’ಯ (Basic Structure) ಭಾಗವಾಗಿದ್ದು, ಸಂವಿಧಾನದ ವಿಧಿ 14 (ಸಮಾನತೆ) ಮತ್ತು ವಿಧಿ 326 (ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು) ಅನ್ನು ಯಾವುದೇ ಅಧಿಕಾರವಾಗಲಿ ಅಥವಾ ನ್ಯಾಯಾಲಯವಾಗಲಿ ಉಲ್ಲಂಘಿಸುವಂತಿಲ್ಲ. ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ ಎಂದು ನ್ಯಾಯಮೂರ್ತಿ ಭುಯಾನ್ ಸ್ಪಷ್ಟಪಡಿಸಿದ್ದಾರೆ.


Spread the love

About Laxminews 24x7

Check Also

ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ: ಸಿ.ಸಿ ಪಾಟೀಲ್

Spread the loveಗದಗ: ದೇಶದ ಚುಕ್ಕಾಣಿ ಕಾಂಗ್ರೆಸ್ ಕೈನಲ್ಲಿ ಸಿಕ್ಕರೆ ಭಾರತ ಮರಳಿ ಪಾಕಿಸ್ತಾನಕ್ಕೆ ಮರ್ಜ್ ಆಗುತ್ತೆ ಎಂದು ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ