Breaking News

Uncategorized

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ – ಕರ್ನಾಟಕದ ಪೈಲಟ್ ಸೇರಿ ಇಬ್ಬರು ದುರ್ಮರಣ

ಲಕ್ನೋ: ತರಬೇತಿ ವಿಮಾನವೊಂದು  ಪತನಗೊಂಡ ಪರಿಣಾಮ ಕರ್ನಾಟಕದ ಪೈಲಟ್  ಸೇರಿ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ  ಗುರುವಾರ ನಡೆದಿದೆ. ಗಂಗಾ ನದಿ ತೀರದ ಸಮೀಪದ ಹೊಲವೊಂದರಲ್ಲಿ ದುರಂತ ಸಂಭವಿಸಿದೆ. ಕಾನ್ಪುರದ ಗಾರ್ಗ್ ಏವಿಯೇಷನ್ ತರಬೇತಿ ಕೇಂದ್ರದಿಂದ ಬೆಳಗ್ಗೆ 11:30ಕ್ಕೆ ಟ್ವಿನ್ ಎಂಜಿನ್ ಹೊಂದಿರುವ ನಾಲ್ಕು ಆಸನಗಳ ತರಬೇತಿ ವಿಮಾನ ಟೇಕ್‌ಆಫ್ ಆಗಿತ್ತು. ತರಬೇತಿ ಕೇಂದ್ರಕ್ಕೆ ಹಿಂದಿರುಗುತ್ತಿದ್ದ ವೇಳೆ 11:50ರ ಸುಮಾರಿಗೆ ವಿಮಾನ ನಿಯಂತ್ರಣ ಕಳೆದುಕೊಂಡು ಪತನಗೊಂಡಿದೆ …

Read More »

288 ಭಾರತೀಯರು ನಾಪತ್ತೆ, 21 ತಮಿಳಿಗರ ರಕ್ಷಣೆ – ರಾಜ್ಯವಾರು ಮಾಹಿತಿ ಹಂಚಿಕೊಂಡ ಎಂಇಎ

ನವದೆಹಲಿ: ನೇಪಾಳದಲ್ಲಿ ಉಂಟಾದ ರಣಭೀಕರ ಪ್ರವಾಹದಲ್ಲಿ 288 ಭಾರತೀಯ ಪ್ರಜೆಗಳು ನಾಪತ್ತೆಯಾಗಿದ್ದಾರೆಂದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ  ಗುರುವಾರ ಮಾಹಿತಿ ಹಂಚಿಕೊಂಡಿದೆ. ಈ ದುರಂತದಲ್ಲಿ 270 ಮಂದಿ ಮೃತಪಟ್ಟಿದ್ದು, ಸಾವಿರಾರು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ , ನಾಪತ್ತೆಯಾಗಿರುವ ಭಾರತೀಯರ ಪತ್ತೆಗೆ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೇಪಾಳದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಸಂಸ್ಥೆಗಳೊಂದಿಗೆ …

Read More »

1 Kg ಮಟನ್‌ಗೆ 1,250 ರೂ., ಚಿಕನ್‌ಗೆ 700 ರೂ.; ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ರಾಜಾತಿಥ್ಯಕ್ಕೆ ‘ರೇಟ್ ಫಿಕ್ಸ್’ ಆರೋಪ!

ಮಂಡ್ಯ: ವಿಚಾರಣಾಧೀನ ಖೈದಿಗಳಿಗೆ ರಾಜಾತಿಥ್ಯ ಒದಗಿಸಿದ ಪ್ರಕರಣದ ಬೆನ್ನಲ್ಲೇ, ಮಂಡ್ಯ ಜಿಲ್ಲಾ ಕಾರಾಗೃಹದ  ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಮತ್ತೊಂದು ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಜೈಲಿನಲ್ಲಿ ವಿಶೇಷ ಸವಲತ್ತು ಕಲ್ಪಿಸಲು ಖೈದಿಗಳಿಂದ (Prisoners) ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಖೈದಿಗಳು ತಮ್ಮ 15 ಜನರ ವಿಚಾರಣಾಧೀನ ಖೈದಿ ಸಂಖ್ಯೆ ಹಾಗೂ ಹೆಬ್ಬೆಟ್ಟಿನ ಮುದ್ರೆಯೊಂದಿಗೆ ಕಾರಾಗೃಹ ಇಲಾಖೆಯ ಡಿಜಿಪಿ …

Read More »

ದೇಶದಾದ್ಯಂತ 1,067 ಖೇಲೋ ಇಂಡಿಯಾ ಕೇಂದ್ರಗಳ ಆರಂಭ: ವಿ.ಸೋಮಣ್ಣ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಜೀಯವರ ನೇತೃತ್ವದ ಕೇಂದ್ರ ಸರ್ಕಾರವು ಭಾರತದಲ್ಲಿ ಕ್ರೀಡಾ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ, ಕ್ರೀಡಾ ಕ್ಷೇತ್ರಕ್ಕೆ ಇನ್ನಿಲ್ಲದ ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ ಜುಲೈ 2026ರ ವೇಳೆಗೆ ದೇಶದಾದ್ಯಂತ ಖೇಲೋ ಇಂಡಿಯಾ ಕೇಂದ್ರಗಳ ಸ್ಥಾಪನೆ ಮಾಡಲಾಗಿದೆ. ಅಲ್ಲದೇ, 349 ಕ್ರೀಡಾ ಮೂಲಸೌಕರ್ಯ ಯೋಜನೆಗಳಿಗೆ ಸುಮಾರು 3,176 ಕೋಟಿ ರೂ.ಗಳ ಹೂಡಿಕೆಯೊಂದಿಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆಗಳ ರಾಜ್ಯ ಸಚಿವರಾದ ವಿ.ಸೋಮಣ್ಣ  ಹೇಳಿದರು. …

Read More »

ಮಣಿಪುರದಲ್ಲಿ ಬಂಡುಕೋರರ ಅಟ್ಟಹಾಸ – ವಾಹನದ ಮೇಲೆ ದಾಳಿ, ನಾಲ್ವರು ನಾಗರಿಕರು ಬಲಿ

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ  ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಬಂಡುಕೋರರು ವಾಹನದ ಮೇಲೆ ಹೊಂಚು ಹಾಕಿ ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ. ಮತ್ತೋರ್ವ ವ್ಯಕ್ತಿ ನಾಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಕ್ಯೂಯಿ ಆಶಾಂಗ್ ಮತ್ತು ಥಬಂಬಾ ನಾಗಾ ನಡುವಿನ ನಿರ್ಜನ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಮೃತಪಟ್ಟ ನಾಲ್ವರೂ ಲಿಯಾಂಗ್‌ಮೈ ನಾಗಾ ಸಮುದಾಯಕ್ಕೆ ಸೇರಿದವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ದಾಳಿಯ ತೀವ್ರತೆಗೆ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮುಂದಿನ ಸೇನಾಪತಿ …

Read More »

ಬೆಂಗಳೂರು ನಮ್ಮ ದೇಶಕ್ಕೇ ಚಿನ್ನದ ಮೊಟ್ಟೆ ಇಡುವ ಕೋಳಿ, ಇನ್ನಷ್ಟು ಸುಧಾರಣೆ ಮಾಡಬೇಕು: ಕೃಷ್ಣ ಬೈರೇಗೌಡ

ಬೆಂಗಳೂರು: ರಾಜ್ಯಕ್ಕೆ, ನಮ್ಮ ದೇಶಕ್ಕೆ, ಬೆಂಗಳೂರು ಚಿನ್ನದ ಮೊಟ್ಟೆ ಇಡುವ ಕೋಳಿ. ಇದನ್ನ ಕಾಪಾಡಬೇಕಾಗಿರೋದು, ಇನ್ನಷ್ಟು ಸುಧಾರಣೆ ಮಾಡಬೇಕಾಗಿರೋದು ನಮ್ಮೆಲ್ಲರ ಕರ್ತವ್ಯ ಅಂತಾ ಸಚಿವ ಕೃಷ್ಣಬೈರೇಗೌಡ  ಜಿಬಿಎ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅಧಿಕಾರಿಗಳ ಜೊತೆ ಸಚಿವ ಕೃಷ್ಣಬೈರೇಗೌಡ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ. ಜಿಬಿಎ ವ್ಯಾಪ್ತಿಯ ಯೋಜನೆಗಳು, ಕಾಮಗಾರಿಗಳು, ಕಸದ ಸಮಸ್ಯೆ, ತೆರಿಗೆ ಸಂಗ್ರಹ ಸೇರಿದಂತೆ ಹಲವು ವಿಭಾಗಗಳ ಅಧಿಕಾರಿಗಳ ಜೊತೆ ಸಭೆ ಮಾಡಿ ಜಿಬಿಎ ಸುಧಾರಣೆ ಮಾಡುವ ಬಗ್ಗೆ ಚರ್ಚೆ …

Read More »

ದೇಶಾದ್ಯಂತ 41 ಅಗತ್ಯ ವಸ್ತುಗಳ ಬೆಲೆ ಸ್ಥಿರತೆಗೆ ಮುಂದಾದ ಕೇಂದ್ರ; 579 ಕೇಂದ್ರಗಳಲ್ಲಿ ಮೇಲ್ವಿಚಾರಣೆಗೆ ಜೋಶಿ ನಿರ್ದೇಶನ

ನವದೆಹಲಿ: ಶ್ರಾವಣ ಬಂತೆಂದರೆ ಹಬ್ಬ ಹರಿದಿನ, ಧಾರ್ಮಿಕ ಮಹೋತ್ಸವ ಹಾಗೂ ವಿವಾಹ ಸಮಾರಂಭಗಳ ಸುಗ್ಗಿ ಶುರುವಾದಂತೆ. ಈ ಹಂಗಾಮಿನಲ್ಲಿ ಸಹಜವಾಗಿಯೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಂಡುಬರುತ್ತದೆ. ಆದರೆ, ಕೇಂದ್ರ ಸರ್ಕಾರ ಈ ಬಾರಿ ಹಬ್ಬಗಳ ಋತುವಿನ ಆರಂಭದಿಂದಲೇ ಬೆಲೆ ಸ್ಥಿರೀಕರಣಕ್ಕೆ ಆದ್ಯತೆ ನೀಡಿದೆ. ನಾಗರ ಪಂಚಮಿ, ವರಮಹಾಲಕ್ಷ್ಮಿ ಹಬ್ಬ ಹಾಗೂ ಗಣೇಶ ಚತುರ್ಥಿ, ದಸರಾ, ದೀಪಾವಳಿಯಂತಹ ಹಬ್ಬಗಳ ಋತುವಿನಲ್ಲೂ ಹಾಲು, ಬೇಳೆಕಾಳು ಮತ್ತು ತರಕಾರಿ ಸೇರಿದಂತೆ 41 ಬಗೆಯ …

Read More »

ಮಳೆ ಕೊರತೆಯಿಂದ ತರಕಾರಿ ದರ ಏರಿಕೆ: ಗ್ರಾಹಕರು, ವ್ಯಾಪಾರಿಗಳು ಇಬ್ಬರು ಕಂಗಾಲು

ಬೆಂಗಳೂರು: ಎಲ್ ನೀನೋ ಎಫೆಕ್ಟ್ ನಿಂದ ರಾಜ್ಯದಲ್ಲಿ ಈಗಾಗಲೇ ಮುಂಗಾರು ಕೈಕೊಟ್ಟಿದೆ. ಇದರಿಂದ ಸರಿಯಾಗಿ ಬೆಳೆ ಇಲ್ಲದೆ ರೈತರು ಕಣ್ಣೀರು ಹಾಕುವಂತಾಗಿದೆ. ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗ್ತಿದ್ರೆ ಇತ್ತ ತರಕಾರಿ ಬೆಲೆ ಕೂಡ ನಿಧಾನವಾಗಿ ಏರಿಕೆ ಕಾಣುತ್ತಿದ್ದು, 30-40 ಇದ್ದ ತರಕಾರಿ ದರ ಇದೀಗ 60 ರಿಂದ 80 ರುಪಾಯಿಗೆ ಏರಿಕೆಯಾಗಿದೆ. ಹೌದು..ಯಾವ ತರಕಾರಿ  ಮುಟ್ಟಂಗಿಲ್ಲ ಕೈ ಮತ್ತು ಜೇಬು ಸುಡುತ್ತಿದೆ. ಇದರಿಂದ ಯಾರು ತರಕಾರಿ ಕೊಳ್ಳಲು ಬರ್ತಿಲ್ಲ ತುಂಬಾ …

Read More »

ರಾಕಿಂಗ್ ಸ್ಟಾರ್ ಅಬ್ಬರ – ಮೊದಲ ದಿನವೇ 140 ಕೋಟಿ ಬಾಚಿದ ಟಾಕ್ಸಿಕ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರ ವಿಶ್ವಾದ್ಯಂತ ಮೊದಲ ದಿನವೇ ಬರೋಬ್ಬರಿ 140 ಕೋಟಿಗೂ ಅಧಿಕ ಗಳಿಕೆ ಕಾಣುವ ಮೂಲಕ ಸಿನಿಮಾ ಭರ್ಜರಿ ಆರಂಭ ಪಡೆದುಕೊಂಡಿದೆ. ಭಾರತದಲ್ಲಿ ಈ ಚಿತ್ರ 120.75 ಕೋಟಿ ರೂ., ವಿದೇಶಗಳಲ್ಲಿ 20 ಕೋಟಿ ರೂ. ಗಳಿಸಿದೆ ಎಂದು ಅಂದಾಜಿಸಲಾಗಿದೆ. ಯಾವುದೇ ಪ್ರೀಮಿಯರ್ ಅಥವಾ ಸೆಲೆಬ್ರಿಟಿ ಶೋಗಳಿಲ್ಲದೆ ನೇರವಾಗಿ ಆರು ಭಾಷೆಗಳಲ್ಲಿ ತೆರೆಕಂಡ ಈ ಚಿತ್ರಕ್ಕೆ ಬಹುತೇಕ ಫ್ಯಾನ್ ಶೋಗಳು ಹೌಸ್‌ಫುಲ್ ಪ್ರದರ್ಶನ …

Read More »

ಮನೆಯಲ್ಲೇ 50 ಲಕ್ಷ ಕದ್ದ ಮಗ – ಗರ್ಲ್‌ಫ್ರೆಂಡ್‌ಗೆ 5 ಲಕ್ಷ ಖರ್ಚು, 1.5 ಲಕ್ಷದ iPhone ಗಿಫ್ಟ್!

ಗುವಾಹಟಿ: ಮನೆಯಲ್ಲೇ ನಡೆದ ಕಳ್ಳತನದ ಹಿಂದೆ ಮಗ ಇದ್ದಾನೆ ಎಂಬ ಆರೋಪ ಅಸ್ಸಾಂನ  ಜೋರ್ಹಾಟ್‌ನಲ್ಲಿ ಬೆಳಕಿಗೆ ಬಂದಿದ್ದು, ಈ ಪ್ರಕರಣ ಇದೀಗ ಭಾರೀ ಸಂಚಲನ ಮೂಡಿಸಿದೆ. ಅಪ್ಪ-ಅಮ್ಮ ಮನೆಯಿಂದ ಹೊರಗೆ ಹೋಗಿದ್ದಾಗ ಸ್ವಂತ ಮಗನೇ ಸುಮಾರು 50 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ. ಕದ್ದ ಹಣದ ಒಂದು ಭಾಗವನ್ನ ತನ್ನ ಗರ್ಲ್‌ಫ್ರೆಂಡ್‌ಗಾಗಿ ಖರ್ಚು ಮಾಡಿದ್ದಾನೆ ಎಂದು ಹೇಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎಂದು ಯಶ್ ಧನುಕಾ  …

Read More »