ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಕೊಡನಿ ಗ್ರಾಮದಲ್ಲಿ ಸೀರೆಯ ಜೋಕಾಲಿ ಆಟವಾಡುತ್ತಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಆಕಸ್ಮಿಕವಾಗಿ ಸೀರೆ ಕುತ್ತಿಗೆಗೆ ಬಿಗಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಮೃತ ಬಾಲಕಿಯನ್ನು ಶುಭ್ರಾ ಯುವರಾಜ್ ರಾವುತ್ ಪಾಟೀಲ್ (14 ವರ್ಷ) ಎಂದು ಗುರುತಿಸಲಾಗಿದೆ. ಈ ದುರ್ಘಟನೆಯಿಂದಾಗಿ ಇಡೀ ಕೊಡನಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ. ಸ್ಥಳಕ್ಕೆ ನಿಪ್ಪಾಣಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿರಶೀಲನೆ ನಡೆಸಿದ್ದು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ …
Read More »10 ರೂ.ಗಾಗಿ ಪೆಟ್ರೋಲ್ ಬಂಕ್‌ನಲ್ಲಿ ಹೊಡೆದಾಟ – ಜಗಳ ಬಿಡಿಸಲು ಬಂದಿದ್ದವನ ಕೊಲೆ, 6 ಜನ ಅರೆಸ್ಟ್
ರಾಯಚೂರು: ತಾಲೂಕಿನ ಹಂಚಿನಾಳ ಕ್ಯಾಂಪ್ ಬಳಿ ಪೆಟ್ರೋಲ್ ಬಂಕ್‌ನಲ್ಲಿ 10 ರೂ.ಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಪ್ರಕರಣದ 6 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಹೊಡೆದಾಟದ ದೃಶ್ಯ ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜಗಳ ಬಿಡಿಸಲು ಹೋದ ಗಿಲ್ಲೆಸುಗೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಮೇಘನಾಥ್ (42) ಕೊಲೆಯಾದ ವ್ಯಕ್ತಿ. ಪೆಟ್ರೋಲ್ ಬಂಕ್ ಸಿಬ್ಬಂದಿ ರವಿ, ವೀರೇಶ್, ನರಸಿಂಹ, ಮಾರೆಪ್ಪ, ರಮೇಶ್, ಪ್ರವೀಣ ಬಂಧಿತ ಆರೋಪಿಗಳು ಎನ್ನಲಾಗಿದೆ. …
Read More »ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಡಿಸೆಂಬರ್‌ನಲ್ಲಿ ನಾನು ಬಾಂಗ್ಲಾದೇಶಕ್ಕೆ ತೆರಳುತ್ತೇನೆ: ಶೇಖ್ ಹಸೀನಾ
ನವದೆಹಲಿ: ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಯಾವುದಕ್ಕೂ ನಾನು ಹೆದರುವುದಿಲ್ಲ. ಇದೇ ಮುಂಬರುವ ಡಿಸೆಂಬರ್‌ನಲ್ಲಿ ನಾನು ನನ್ನ ಪಕ್ಷದ ಸಹೋದ್ಯೋಗಿಗಳೊಂದಿಗೆ ತಾಯ್ನಾಡಿಗೆ ಮರಳಲಿದ್ದೇನೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಬಾಂಗ್ಲಾದೇಶದಲ್ಲಿಸದ್ಯ ತೀವ್ರ ರಾಜಕೀಯ ಬಿಕ್ಕಟ್ಟು ಹಾಗೂ ಅವರ ವಿರುದ್ಧ ಕಾನೂನು ಕ್ರಮಗಳ ತೂಗುಗತ್ತಿ ಇದ್ದಾಗಲೂ ಶೇಖ್ ಹಸೀನಾ ತಾಯ್ನಾಡಿಗೆ ಮರಳುವ ದೃಢ ನಿರ್ಧಾರ ಪ್ರಕಟಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬಾಂಗ್ಲಾದೇಶಕ್ಕೆ ಹೋದರೆ ನನ್ನನ್ನು ಜೈಲಿಗೆ ಹಾಕಬಹುದು …
Read More »4 ವೋಟರ್ ಐಡಿ ಹೊಂದಿದ್ದ ಆರೋಪ; ನಟ ಪ್ರಕಾಶ್ ರಾಜ್‌ಗೆ ಜಾಮೀನು ಮಂಜೂರು
ಬೆಂಗಳೂರು: ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಅಕ್ರಮವಾಗಿ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆಂಬ ಆರೋಪ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ನಟನಿಗೆ ಜಾಮೀನು ಮಂಜೂರು ಮಾಡಿದೆ. ನಟ ಪ್ರಕಾಶ್ ರಾಜ್ ವಿರುದ್ಧ ನಾಲ್ಕು ವೋಟರ್ ಐಡಿ ಹೊಂದಿರುವ ಆರೋಪ ಕೇಳಿಬಂದಿತ್ತು. ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನಟನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ ಮಾಡಿತ್ತು. ವಾರಂಟ್ ರೀಕಾಲ್ ಮಾಡಿಸಲು ನಟ ಕೋರ್ಟ್ಗೆ …
Read More »ಧಾರವಾಡ ಕೃಷಿ ವಿವಿ ಗೋಧಿ ಬೀಜ ಈಗ ಇಂಡೋನೇಷಿಯಾದಲ್ಲಿ ಬಿತ್ತನೆ
ಧಾರವಾಡ: ಇತ್ತೀಚೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಬಾಹ್ಯಾಕಾಶಕ್ಕೆ ಮೆಂತೆ ಮತ್ತು ಹೆಸರು ಕಾಳುಗಳನ್ನ ತೆಗೆದುಕೊಂಡು ಹೋಗಿ ಪ್ರಯೋಗ ಮಾಡಲಾಗಿತ್ತು. ಈಗ ಇದೇ ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಈ ಬಾರಿ ಮತ್ತೊಂದು ದೇಶಕ್ಕೆ ಗೋಧಿ ತಳಿಯ ಬೀಜ ಕಳಿಸಲಾಗುತ್ತಿದೆ. ಇದಕ್ಕೆ ಸ್ವತಃ ಪ್ರಧಾನಿ ಮೋದಿಯವರೇ ಆ ದೇಶದ ಜೊತೆ ಒಡಂಬಡಿಕೆ ಮಾಡಿಕೊಂಡು ಬಂದಿದ್ದಾರೆ. ಇತ್ತೀಚೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಂಡೋನೇಷಿಯಾಗೆ ಭೇಟಿ ನೀಡಿದ್ದರು. ಈ …
Read More »ಕಾಡುಗೋಡಿ ಬಾಲಕಿ ಕೊಲೆ ಕೇಸ್ – ಆರೋಪಿ ಪ್ರಿಯಾಂಕಾಗೆ ಜಾಮೀನು ಮಂಜೂರು
ಬೆಂಗಳೂರು: ಕಾಡುಗೋಡಿಯಲ್ಲಿ ಮಗಳು ವೆನ್ನೀಲಾ ಕೊಲೆ ಪ್ರಕರಣ ಸಂಬಂಧ ಆರೋಪಿ ತಾಯಿ ಪ್ರಿಯಾಂಕಾಗೆ ಬೆಂಗಳೂರು ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆರೋಪಿ ಪ್ರಿಯಾಂಕಾ ಪರ ವಕೀಲ ಪ್ರಸನ್ನ, ಕೊಲೆಯಲ್ಲಿ ತಾಯಿ ನೇರವಾಗಿ ಭಾಗಿಯಾಗಿಲ್ಲ ಎಂದು ವಾದ ಮಂಡಿಸಿದರು. ಇದರ ಆಧಾರದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮಾ.24ರಂದು ಮಗು ವೆನ್ನೀಲಾ ಶವವಾಗಿ ಪತ್ತೆಯಾಗಿತ್ತು. ಪ್ರಕರಣದಲ್ಲಿ ಮಗುವಿನ ತಾಯಿ ಪ್ರಿಯಾಂಕಾ, ಪ್ರಿಯಕರ ಮೋಹನ್‌ನನ್ನು ಬಂಧನ ಮಾಡಲಾಗಿತ್ತು. ಜೂನ್ 11ರಂದು …
Read More »ಚಿಪ್ಪೆಕಲ್ಲು ದುರಂತದಲ್ಲಿ ತಾಯಿ ಸಾವು – ಮನನೊಂದಿದ್ದ ಮಗ ಆತ್ಮಹತ್ಯೆ
ಕಾರವಾರ: ಭಟ್ಕಳದ ಚಿಪ್ಪೆಕಲ್ಲು ದುರಂತದಲ್ಲಿ ತಾಯಿಯ ಸಾವಿನಿಂದ ಮನನೊಂದ ಮಗ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೇಂಗ್ರೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಮೋಳಿನಮನೆಯಲ್ಲಿ ಘಟನೆ ನಡೆದಿದೆ. ಆನಂದ ಅಣ್ಣಪ್ಪ ನಾಯ್ಕ (36) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಎಂ.ಕಾಂ ಪದವೀಧರನಾಗಿರುವ ಅಣ್ಣಪ್ಪ ನಾಯ್ಕ ಮದ್ಯ ವ್ಯಸನಿಯಾಗಿ, ತಾಯಿಯ ಆಶ್ರಯದಲ್ಲಿದ್ದ. ಕಳೆದ ಮೇ ತಿಂಗಳಲ್ಲಿ ನಡೆದ ಶಿರಾಲಿಯ ತಟ್ಟಿಹಕ್ಕಲಿನಲ್ಲಿ ನಡೆದ ಚಿಪ್ಪೆಕಲ್ಲು …
Read More »15 ದಿನದ ಹಿಂದಷ್ಟೇ ಉದ್ಘಾಟನೆಯಾದ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ
ಬೆಂಗಳೂರು: ಕಳೆದ 15 ದಿನದ ಹಿಂದಷ್ಟೇ ಉದ್ಘಾಟನೆಯಾದ ಬೆಂಗಳೂರಿನ ಕೃಷ್ಣಪಥ ಹೆದ್ದಾರಿ ಈಗ ಸಾವಿನ ಹೈವೇ ಆಗ್ತಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಎಸ್.ಎಂ ಕೃಷ್ಣ ದಶಪಥ ಹೆದ್ದಾರಿಯಲ್ಲಿ ಸವಾರರ ಒನ್ ವೇ ಸಂಚಾರ ಪ್ರಾಣಕ್ಕೆ ಕಂಟಕವಾಗ್ತಿದೆ. ಕಡಬಗೆರೆ ಟು ಚಲ್ಲಘಟ್ಟ ಸಂಪರ್ಕಿಸುವ 11 ಕಿ.ಮೀ ಉದ್ದದ ರಸ್ತೆಯ ಎಂಟ್ರಿ-ಎಕ್ಸಿಟ್‌ಗಳಲ್ಲಿ ನಿಯಮಬಾಹಿರವಾಗಿ ಸವಾರರು ಒನ್ ವೇ ಸಂಚಾರ ಮಾಡ್ತಿದ್ದಾರೆ. ಸರ್ವೀಸ್ ರಸ್ತೆಗಳಿಗೆ ತೆರಳುವ ಭರದಲ್ಲಿ ನೇರವಾಗಿ ಹೆದ್ದಾರಿಯಲ್ಲಿ ಒನ್ ವೇನಲ್ಲಿ ಸಂಚಾರ ಮಾಡ್ತಿದ್ದಾರೆ. …
Read More »ಎಸ್.ಆರ್ ವಿಶ್ವನಾಥ್ ಜೊತೆ ಜಟಾಪಟಿ ಮುಗಿದ ವಿಚಾರ – ಪಕ್ಷದ ಹಿತದೃಷ್ಟಿಯಿಂದ ಒಟ್ಟಿಗೆ ಕಾರ್ಯನಿರ್ವಹಣೆ: ಡಾ.ಸುಧಾಕರ್
ಬೆಂಗಳೂರು: ಎಸ್.ಆರ್ ವಿಶ್ವನಾಥ್ ಜೊತೆ ಜಟಾಪಟಿ ಮುಗಿದ ವಿಚಾರ. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಒಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸಂಸದ ಡಾ.ಸುಧಾಕರ್ ಅವರು ತಿಳಿಸಿದ್ದಾರೆ. ನಗರದ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ರಾಜ್ಯ ಉಸ್ತುವಾರಿ ಡಾ.ರಾಧಾಮೋಹನ್ ದಾಸ್ ಅಗರ್‌ವಾಲ್ ಅವರು ನಮ್ಮನ್ನು ಕರೆದಿದ್ದರು. ನಮ್ಮ ಭಾಗದಲ್ಲಿ ಅನ್ಯೋನ್ಯವಾಗಿ ಬಿಜೆಪಿಯನ್ನು ಸದೃಢವಾಗಿ ಕಟ್ಟಬೇಕು. ಪರಸ್ಪರ ಏನೇ ಭಿನ್ನಾಭಿಪ್ರಾವಿದ್ದರೂ ಅದು ಪಕ್ಷದ ಮೇಲೆ …
Read More »ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚನೆ; ಮಾಜಿ ಸಚಿವ ಜಾಲಪ್ಪ ಸೊಸೆಗೆ 5 ವರ್ಷ ಜೈಲು ಶಿಕ್ಷೆ
ಬೆಂಗಳೂರು: ವೈದ್ಯಕೀಯ ಸೀಟು ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಮಾಜಿ ಸಚಿವ ಜಾಲಪ್ಪ ಅವರ ಸೊಸೆ ನಾಗವೇಣಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ದೋಷಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶ್ ಕುಮಾರ್ ಯಾರಪ್ಪ ದೂರು ದಾಖಲಿಸಿದ್ದರು. ವೈದ್ಯಕೀಯ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ಕೋಟಾದಡಿ ಸೀಟು ಕೊಡಿಸುವುದಾಗಿ 45 ಲಕ್ಷ ರೂ. ಹಣ ಪಡೆದು ವಂಚಿಸಲಾಗಿದೆ …
Read More »
Laxmi News 24×7