Breaking News

1 Kg ಮಟನ್‌ಗೆ 1,250 ರೂ., ಚಿಕನ್‌ಗೆ 700 ರೂ.; ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ರಾಜಾತಿಥ್ಯಕ್ಕೆ ‘ರೇಟ್ ಫಿಕ್ಸ್’ ಆರೋಪ!

Spread the love

ಮಂಡ್ಯ: ವಿಚಾರಣಾಧೀನ ಖೈದಿಗಳಿಗೆ ರಾಜಾತಿಥ್ಯ ಒದಗಿಸಿದ ಪ್ರಕರಣದ ಬೆನ್ನಲ್ಲೇ, ಮಂಡ್ಯ ಜಿಲ್ಲಾ ಕಾರಾಗೃಹದ  ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಮತ್ತೊಂದು ಗಂಭೀರ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

ಜೈಲಿನಲ್ಲಿ ವಿಶೇಷ ಸವಲತ್ತು ಕಲ್ಪಿಸಲು ಖೈದಿಗಳಿಂದ (Prisoners) ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

Mandya Jail Police 2

ಖೈದಿಗಳು ತಮ್ಮ 15 ಜನರ ವಿಚಾರಣಾಧೀನ ಖೈದಿ ಸಂಖ್ಯೆ ಹಾಗೂ ಹೆಬ್ಬೆಟ್ಟಿನ ಮುದ್ರೆಯೊಂದಿಗೆ ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್  ಅವರಿಗೆ ಪತ್ರ ಬರೆದು ರಕ್ಷಣೆ ಹಾಗೂ ತನಿಖೆಗೆ ಒತ್ತಾಯಿಸಿದ್ದಾರೆ. ಜೈಲು ಅಧೀಕ್ಷಕಿ ಶಾಂತಮ್ಮ, ಸಿಬ್ಬಂದಿಗಳಾದ ಅನಿಲ್, ಶಿವರಾಜ ಹಾಗೂ ರವಿ ವಿರುದ್ಧ ಖೈದಿಗಳಿಂದ ಸುಲಿಗೆ ಮಾಡುತ್ತಿರುವ ನೇರ ಆರೋಪ ಕೇಳಿಬಂದಿದೆ.

ಸೆಲ್‌ಗಳಿಗೆ ನಿಗದಿಯಾದ ತಿಂಗಳ ದರಪಟ್ಟಿ:
* ಸೆಲ್ – 1: ಪ್ರತಿ ತಿಂಗಳು 10,000 ರೂ.
* ಸೆಲ್ – 3: ಪ್ರತಿ ತಿಂಗಳು 15,000 ರೂ.
* ಸೆಲ್ – 4: ಪ್ರತಿ ತಿಂಗಳು 15,000 ರೂ.
* ಸೆಲ್ – 5: ಪ್ರತಿ ತಿಂಗಳು 5,000 ರೂ.
* ಸೆಲ್ – 6: ಪ್ರತಿ ತಿಂಗಳು 8,000 ರೂ.
* ರೂಮ್ ಬದಲಾವಣೆಗೆ: 2,000 ರೂ.
* ಪನಿಷ್ಮೆಂಟ್ ಸೆಲ್‌ನಿಂದ ಹೊರಬರಲು: 10,000 ರೂ.

ಜೈಲಲ್ಲೇ ಸಿಗುತ್ತೆ ಕ್ಯಾಟರಿಂಗ್ ಸೇವೆ:
ಖೈದಿಗಳ ಬೇಡಿಕೆಗೆ ತಕ್ಕಂತೆ ಹಣ ಪಡೆದು ವಿಶೇಷ ಅಡುಗೆ ಮಾಡಿಸಿಕೊಡುವ ಕ್ಯಾಟರಿಂಗ್ ದಂಧೆಯೂ ಇಲ್ಲಿ ನಡೆಯುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಮಟನ್ ಬೇಕಾದರೆ ಪ್ರತಿ ಕೆಜಿಗೆ 1,250 ರೂ. ಹಾಗೂ ಚಿಕನ್‌ಗೆ ಪ್ರತಿ ಕೆಜಿಗೆ 700 ರೂ. ನಿಗದಿಪಡಿಸಲಾಗಿದೆ. ಹಣ ನೀಡದ ಖೈದಿಗಳಿಗೆ ಕಮಾನು ಹತ್ತಿಸುವುದಾಗಿ (ದೈಹಿಕ ಶಿಕ್ಷೆ) ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಇತ್ತೀಚೆಗಷ್ಟೇ ಡಿಜಿಪಿ ಅಲೋಕ್ ಕುಮಾರ್ ಹಾಗೂ ಕಾರಾಗೃಹ ಡಿಐಜಿ ದಿವ್ಯಶ್ರೀ ಮಂಡ್ಯ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ, ಭೇಟಿ ವೇಳೆ ಇಂತಹ ಯಾವುದೇ ಲಿಖಿತ ಪತ್ರ ತಮಗೆ ಸಿಕ್ಕಿಲ್ಲ ಎಂದು ಡಿಐಜಿ ದಿವ್ಯಶ್ರೀ ಸ್ಪಷ್ಟಪಡಿಸಿದ್ದಾರೆ. ವೈರಲ್ ಪತ್ರದ ಆಧಾರದ ಮೇಲೆ ಇಲಾಖಾ ತನಿಖೆ ಮುಂದುವರಿದಿದೆ.


Spread the love

About Laxminews 24x7

Check Also

ಕಾನ್ಪುರದಲ್ಲಿ ತರಬೇತಿ ವಿಮಾನ ಪತನ – ಕರ್ನಾಟಕದ ಪೈಲಟ್ ಸೇರಿ ಇಬ್ಬರು ದುರ್ಮರಣ

Spread the loveಲಕ್ನೋ: ತರಬೇತಿ ವಿಮಾನವೊಂದು  ಪತನಗೊಂಡ ಪರಿಣಾಮ ಕರ್ನಾಟಕದ ಪೈಲಟ್  ಸೇರಿ ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಘಟನೆ ಉತ್ತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ