Breaking News

ರಾಷ್ಟ್ರೀಯ

ಉಡುಪಿ – ಬಾಲಕಿ ಮೇಲೆ ನಿರಂತರ ಅತ್ಯಾಚಾರ

ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ತಿಂಗಳುಗಳಿಂದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಮಹಿಳಾ ಠಾಣೆಯ ಪೊಲೀಸರು ಪೊಕ್ಸೊ ಕಾಯಿದೆಯಡಿ ಬಂಧಿಸಿದ್ದಾರೆ. ಸಂದೀಪ್ ನಾಯ್ಕ ಹಾಗೂ ವಿಘ್ನೇಶ್ ನಾಯ್ಕ ಬಂಧಿತ ಆರೋಪಿಗಳು.   ಬಾಲಕಿಯ ತಂದೆ ಹಾಗೂ ತಾಯಿ ಕೆಲಸಕ್ಕೆಂದು ಹೊರ ಹೋದ ಸಂದರ್ಭ ಆಕೆ ಮನೆಯಲ್ಲಿ ಒಬ್ಬಳೇ ಇರುತ್ತಿದ್ದಳು. ಈ ವೇಳೆ ಸಮೀಪದ ಮನೆಯಲ್ಲಿರುವ ಬಾಲಕಿಯ ಸಂಬಂಧಿಕರಾದ ಆರೋಪಿಗಳು, …

Read More »

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಫಲಿತಾಂಶ

ಬೆಳಗಾವಿ  – ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ನಿಕಟಪೂರ್ವ ಅಧ್ಯಕ್ಷೆ ಮಂಗಲಾ ಮೆಟಗುಡ್ ಪುನರಾಯ್ಕೆಯಾಗಿದ್ದಾರೆ. ಚಲಾಯಿತ 6805 ಮತಗಳ ಪೈಕಿ ಮಂಗಲಾ ಮೆಟಗುಡ್ 4935 ಮತ ಪಡೆದಿದ್ದಾರೆ. ಬಸವರಾಜ ಖಾನಪ್ಪನವರ್ 1155, ರವೀಂದ್ರ ತೋಟಿಗೇರ 582 ಹಾಗೂ ಸುರೇಶ ಮರಲಿಗನವರ್ 41 ಮತ ಪಡೆದಿದ್ದಾರೆ. 91 ಮತಗಳು ತಿರಸ್ಕೃತವಾಗಿವೆ.  

Read More »

ವಡಗಾಂವ ನೇಕಾರ ಸಮಾಜದ ಮೂವರು ಆತ್ಮಹತ್ಯೆ: ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ಕನ್ನಡ ಸಾಹಿತ್ಯ ಚುನಾವಣೆ ಗೋಕಾಕದಲ್ಲಿ ರಂಗೇರಿದೆ..   ಬೆಳಗಾವಿ ದಕ್ಷಿಣ ಮತಕೇತ್ರದ ಜನರ ಸಮಸ್ಯೆ ಆಲಿಸಿದ ಸತೀಶ ಜಾರಕಿಹೊಳಿ, ಮೃತರ ಕುಟುಂಬಕ್ಕೆ ಪರಿಹಾರ ಕಲ್ಪಿಸುವುದಾಗಿ ಭರವಸೆ ..! ಬೆಳಗಾವಿ: ಸಾಲದ ಬಾದೆ ತಾಳಲಾದರೆ ಆತ್ಮಹತ್ಯೆಗೆ ಶರಣಾದ ದಕ್ಷಿಣ ಮತಕ್ಷೇತ್ರದ ವಡಗಾಂವ ನೇಕಾರ ಸಮಾಜ ಮೂವರು ಮೃತ ಕುಟುಂಬಸ್ಥರ ಮನೆಗೆ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಿ, ನೊಂದ ಕುಟುಂಬಕ್ಕೆ ಸ್ವಾಂತನ ಹೇಳಿದರು.   ಇತ್ತೀಚೆಗೆ ಸಾಲಬಾಧೆಯಿಂದ ಆತ್ಮಹತ್ಯೆಗೆ …

Read More »

ಪಂಜಾಬ್ ಸಿಧು, ಕರ್ನಾಟಕ ಸಿದ್ದು ಇಬ್ಬರಿಂದಲೂ ಕಾಂಗ್ರೆಸ್ ಗೆ ನಷ್ಟ:

ಸಿಧು, ಸಿದ್ದು ಅವರಿಂದ ಕಾಂಗ್ರೆಸ್ ನಾಶವಾಗಲಿದೆ ಕಾರ್ಯಕ್ರಮಕ್ಕು ಮೊದಲು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಜ್ಯ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.  ರಾಷ್ಟ್ರೀಯ ಪಕ್ಷ ಎನ್ನುವ ಕಾಂಗ್ರೆಸ್ ಕೆಲವೆಡೆ ಮಾತ್ರ ಇದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಸಮನ್ವಯತೆ ಇಲ್ಲ. ಪಂಜಾಬ್ ನ ಸಿಧು ಹಾಗೂ ರಾಜ್ಯದ ಸಿದ್ದು ಅವರಿಂದ ಕಾಂಗ್ರೆಸ್ ವಿನಾಶ ಆಗಲಿದೆ ಎಂದು ಭವಿಷ್ಯ ನುಡಿದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ …

Read More »

ಗೋಲ್ಡನ್ ಟೆಂಪಲ್‌ನ ಅದ್ಭುತ ವೈಮಾನಿಕ ಫೋಟೋ ಹಂಚಿಕೊಂಡ ಉದ್ಯಮಿ ಮಹೀಂದ್ರಾ

ಅಮೃತಸರದ ಗೋಲ್ಡನ್ ಟೆಂಪಲ್‌ನ ಅದ್ಭುತ ವೈಮಾನಿಕ ಚಿತ್ರಣವನ್ನು ಶುಕ್ರವಾರ ಟ್ವಿಟ್ಟರ್ ನಲ್ಲಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಹಂಚಿಕೊಂಡಿದ್ದು, ಗುರುಪುರಬ್ ಸಂದರ್ಭದಲ್ಲಿ ಜನರಿಗೆ ಶುಭ ಹಾರೈಸಿದ್ದಾರೆ.ವಿದ್ಯುತ್ ದೀಪಗಳಿಂದ ಸುಂದರವಾಗಿ ಬೆಳಗಿರುವ ಗೋಲ್ಡನ್ ಟೆಂಪಲ್, ಅಕಾಲ್ ತಖ್ತ್ ಮತ್ತು ಸರೋವರದ ಅದ್ಭುತ ವೈಮಾನಿಕ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ. ಈ ವೇಳೆ ಎಲ್ಲರಿಗೂ ಟ್ವೀಟ್ ಮುಖಾಂತರ ಉದ್ಯಮಿ ಆನಂದ್ ಮಹೀಂದ್ರಾ ಅವರು ಗುರುಪುರಬ್‍ನ ಶುಭಾಶಯಗಳನ್ನು ತಿಳಿಸಿದ್ದಾರೆ. ಆನಂದ್ ಮಹೀಂದ್ರಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ …

Read More »

ರೈಲು ಹಳಿಯ ಮೇಲೆ ಬಾಂಬ್ ಸ್ಫೋಟ

ನವದೆಹಲಿ,ನ.20- ಜಾರ್ಖಂಡ್‍ನ ಧನ್‍ಬಾದ್ ವಿಭಾಗದಲ್ಲಿ ರೈಲು ಹಳಿಯ ಮೇಲೆ ಸ್ಫೋಟ ಸಂಭವಿಸಿ ಒಂದು ಡೀಸೆಲ್ ಎಂಜಿನ್ ಹಳಿತಪ್ಪಿದ ಘಟನೆ ಇಂದು ಮುಂಜಾನೆ ಜರುಗಿದೆ. ಇದು ಒಂದು ಬಾಂಬ್  ಸ್ಫೋಟವಾಗಿದ್ದು ಧನಬಾದ್ ವಿಭಾಗದ ಗರ್ವಾ ರಸ್ತೆ ಮತ್ತು ಬರ್ಕಣದ ನಡುವೆ ಸೋಟಗೊಂಡಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಇದು ಒಂದು ನಕ್ಸಲ್ ಸಂಬಂತ ಘಟನೆಯಾಗಿದೆ ಎಂದು ಮೂಲಗಳು ಸೂಚಿಸಿವೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು ಹಳಿಯ ಮೇಲೆ ಸಂಚಾರ ಪುನರಾರಂಭವಾಗುವುದನ್ನು ಕಾಯಲಾಗುತ್ತಿದೆ …

Read More »

ಕೊತ್ವಾಲ್‌ ರಾಮಚಂದ್ರನನ್ನು ಬಳಸಿ ಮೇಲೆ ಬಂದ ಡಿಕೆಶಿ: ಆರಗ

ರಾಯಚೂರು: ಹುಚ್ಚು ಹಿಡಿದವರಿಗೆ ಇಡೀ ಪ್ರಪಂಚವೇ ಹುಚ್ಚು ಹಿಡಿದಂತೆ ಕಾಣಿಸುತ್ತದೆ. ಅದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ನಮ್ಮ ಬಗ್ಗೆ ಅಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಟೀಕಿಸಿದರು.   ಸಿರವಾರ ಪಟ್ಟಣದಲ್ಲಿ ನಡೆದ ಜನ ಸ್ವರಾಜ್‌ ಯಾತ್ರೆಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್‌ ಕೊತ್ವಾಲ್‌ ರಾಮಚಂದ್ರ ಅಂಥವರನ್ನು ಬಳಸಿಕೊಂಡು ಮೇಲೆ ಬಂದವರು. ಆದರೆ, ನಾವು ಜನರಿಂದ ಬೆಳೆದು ಬಂದಿದ್ದೇವೆ. ಜಲಿಯನ್‌ ವಾಲಾಬಾಗ್‌ ಎಂದು ಶುದ್ಧವಾಗಿ …

Read More »

ಠಾಣೆಯಲ್ಲಿ ಸಿಬ್ಬಂದಿ ಎದುರು ಅಸಭ್ಯ ವರ್ತನೆ ಆರೋಪ: ಹುಬ್ಬಳ್ಳಿ ಪೊಲೀಸ್​ ಕಾನ್ಸ್​​ಟೇಬಲ್​ ಅಮಾನತು

ಹುಬ್ಬಳ್ಳಿ: ಠಾಣೆಯಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದಡಿ ನಗರದ ಕಸಬಾಪೇಟ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ ಶ್ರೀಕಾಂತ ಗೋಣೆಪ್ಪನವರ ಅವರನ್ನು ಅಮಾನತು ಮಾಡಲಾಗಿದೆ. ಶಿಸ್ತಿನ ಇಲಾಖೆಯಲ್ಲಿ ಶ್ರೀಕಾಂತ ಅಶಿಸ್ತಿನಿಂದ ವರ್ತಿಸುತ್ತಿದ್ದರು. ಠಾಣೆಯಲ್ಲಿ ಅಧಿಕಾರಿ, ಸಿಬ್ಬಂದಿ ಎದುರು ಶರ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದರು. ಹೀಗೆ ಮಾಡದಂತೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ದುರ್ವರ್ತನೆ ಮುಂದುವರಿಸಿದ್ದರು ಎನ್ನಲಾಗ್ತಿದೆ.   ಈ ಕಾರಣಕ್ಕೆ ಡಿಸಿಪಿ ಕೆ. ರಾಮರಾಜನ್ ಅವರು ತಮ್ಮ ವರ್ಗಾವಣೆಗೂ ಮುನ್ನವೇ ಶ್ರೀಕಾಂತ ಅಮಾನತು …

Read More »

ಬೆಳಗಾವಿಯ ಶಿವಬಸವನಗರದ ಹೆಸ್ಕಾಮ್ ಕಲ್ಯಾಣ ಮಂಟಪದ ಎದುರು ರಸ್ತೆ ಬದಿಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಜರ್ಮನ್ ಶೆಫರ್ಡ ಶ್ವಾನ ಪ್ರಾಣ ಬಿಟ್ಟಿದೆ.

   ಬೆಳಗಾವಿಯ ಶಿವಬಸವನಗರದ ಹೆಸ್ಕಾಮ್ ಕಲ್ಯಾಣ ಮಂಟಪದ ಎದುರು ರಸ್ತೆ ಬದಿಗೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಜರ್ಮನ್ ಶೆಫರ್ಡ ಶ್ವಾನ ಪ್ರಾಣ ಬಿಟ್ಟಿದೆ. ತನ್ಮೂಲಕ, ನಾಯಿಯೊಂದು ತನ್ನ ಪ್ರಾಣ ತೆತ್ತು ಸಂಭವಿಸಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದೆ.   ಶುಕ್ರವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ಶಿವಬಸವ ನಗರದ ಹೆಸ್ಕಾಮ್ ಕಲ್ಯಾಣ ಮಂಟಪವಿರುವ ಮುಖ್ಯ ರಸ್ತೆಯ ಬದಿಯ ಫುಟ್ ಪಾಥ್ ಮೇಲೆ ಜೀವಂತ ತಂತಿ ಬಿದ್ದಿತ್ತು. ಡಾ.ರಾಜು ನಾಯಕ ಅವರ ಜೆರ್ಮನ್ …

Read More »

ಸೇರಿ ಮೂವರು ಸಚಿವರ ದಿಢೀರ್ ರಾಜೀನಾಮೆ

ಜೈಪುರ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದ ಸಂಪುಟ ಪುನಾರಚನೆ ಕಸರತ್ತು ಆರಂಭವಾಗಿದ್ದು, ಮೂವರು ಸಚಿವರು ರಾಜೀನಾಮೆ ನೀಡಿದ್ದಾರೆ. ಕಂದಾಯ ಸಚಿವ ಹರೀಶ್ ಚೌಧರಿ, ವೈದ್ಯಕೀಯ ಮತು ಆರೋಗ್ಯ ಸಚಿವ ಡಾ.ರಘು ಶರ್ಮಾ ಮತ್ತು ಶಿಕ್ಷಣ ಸಚಿವ ಗೋವಿಂದ ಸಿಂಗ್ ದೋತಸ್ರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು,ರಾಜೀನಾಮೆ ಈ ಕುರಿತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ರವಾನಿಸಿದ್ದಾರೆ. ರಾಜಸ್ಥಾನ ಸಚಿವ ಸಂಪುಟದ ಮೂವರು ಸಚಿವರು ರಾಜೀನಾಮೆ ನೀಡಿದ್ದು, …

Read More »