Breaking News
Home / ರಾಜ್ಯ (page 437)

ರಾಜ್ಯ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಮೇಲೆ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿ ಧಾರವಾಡ ಹೈಕೋರ್ಟ್

ಧಾರವಾಡ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಮೇಲೆ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿ ಧಾರವಾಡ ಹೈಕೋರ್ಟ್ ತೀರ್ಪು ನೀಡಿದೆ. ವಿಧಾನಸಭಾ ಚುನಾವಣೆ ವೇಳೆ ಜೆಪಿ ನಡ್ಡಾ ಅವರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಮೇ 11, 2023ರಂದು ಮತದಾರರಿಗೆ ಆಮಿಷವೊಡ್ಡಿದ ಆರೋಪದಡಿ ದೂರು ದಾಖಲಾಗಿತ್ತು. ಮೇ 7, 2023 ರಂದು ಬಹಿರಂಗ ಸಭೆ ನಡೆದಿತ್ತು. ಬಹಿರಂಗ ಸಭೆಯಲ್ಲಿ ಜೆ ಪಿ ನಡ್ಡಾ ಭಾಷಣ ಮಾಡಿದ್ದರು. …

Read More »

ತಮ್ಮ ಮೇಲೆ ಕೇಳಿ ಬಂದ ಲಂಚದ ಆರೋಪಕ್ಕೆ ಸಂಬಂಧಪಟ್ಟಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ

ಮಂಡ್ಯ/ಬೆಂಗಳೂರು: ಕೃಷಿ ಸಚಿವರು ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಸ್ವತಃ ಕೃಷಿ ಇಲಾಖೆಯ ಅಧಿಕಾರಿಗಳೇ ನೇರವಾಗಿ ರಾಜ್ಯಪಾಲರಿಗೆ ದೂರು ನೀಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಅಧಿಕಾರಿಗಳೆಂದು ಬಿಂಬಿಸಿ ರಾಜ್ಯಪಾಲರಿಗೆ ನೀಡಿರುವ ದೂರು ಪಿತೂರಿ ಸ್ವರೂಪದಲ್ಲಿದ್ದು, ನಕಲಿ ವ್ಯಕ್ತಿಗಳು ಮಾಡಿರುವ ಯೋಜಿತ ಸಂಚಾಗಿದೆ ಎಂದು ಕಿಡಿಕಾರಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಆರೋಪಿಸಿ ಮಂಡ್ಯ ಜಿಲ್ಲೆಯ ಏಳು ಕೃಷಿ ಅಧಿಕಾರಿಗಳಿಂದ ದೂರು ಅರ್ಜಿ ಬಂದಿದ್ದು, ಈ ಬಗ್ಗೆ …

Read More »

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನಿಗೆ 136 ಎಂ ಎಲ್ ಎ ಗಳ ಸಪೋರ್ಟ್ ಇದೆ:

ಬಾಗಲಕೋಟೆ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆಯಲ್ಲ. ಅಲ್ಲಿಯ ಸ್ಪೀಕರ್, ಎಷ್ಟು ಬಾರಿ ನಮ್ಮ ನಾಯಕರನ್ನು ಹೊರ ಹಾಕಿದ್ದಾರೆ? ಎಷ್ಟು ಹೊತ್ತು ಹೊರಹಾಕಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಪಕ್ಷದ ಮುಖಂಡರಿಗೆ ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪೂರ ಟಾಂಗ್ ನೀಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ವಿರೋಧ ಮಾಡುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು. ಅದ್ರ ಬಗ್ಗೆ ಮಾತನಾಡಲು ಯೋಗ್ಯತೆ ಅವರಿಗೆ ಇಲ್ಲ, ಮೊದಲು ಬಿಜೆಪಿಗರು ತಾವು …

Read More »

ಮುಸ್ಲಿಮರೇ ಇಲ್ಲದ ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಹಬ್ಬಾಚರಣೆ

ಬಾಗಲಕೋಟೆ : ದೇಶಾದ್ಯಂತ ಶನಿವಾರ ಶಿಯಾ ಮುಸ್ಲಿಮರು ಮೊಹರಂ ಆಚರಿಸಿದರು. ರಾಜ್ಯದಲ್ಲೂ ಶ್ರದ್ಧಾ ಭಕ್ತಿಯ ಮೊಹರಂ ನಡೆದಿದೆ. ಬಾಗಲಕೋಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೋಕ ಮೆರವಣಿಗೆಗಳು ನಡೆದವು. ಮುಸ್ಲಿಮರೊಂದಿಗೆ ಹಿಂದೂಗಳೂ ಭಾಗಿಯಾಗಿದ್ದರು. ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಮೊಹರಂ ಆಚರಿಸಿಕೊಂಡು ಬರಲಾಗುತ್ತಿದೆ. ಈ ಗ್ರಾಮದಲ್ಲಿ ಮುಸ್ಲಿಮರು ಇಲ್ಲ. ಹೀಗಿದ್ದರೂ ಬೇರೆ ಗ್ರಾಮದಿಂದ ಸಮುದಾಯದವರನ್ನು ಕರೆಸಿ ಮೊಹರಂ ಮಾಡಲಾಗುತ್ತದೆ. ಹಿಂದೂಗಳು ಮತ್ತು ಮುಸ್ಲಿಮರು ಪರಸ್ಪರ ಒಟ್ಟಾಗಿ ಸೇರಿ ಹಬ್ಬ …

Read More »

40% ಕಮಿಷನ್ ಆರೋಪ ಮಾಡ್ತಿದ್ದ ಕೆಂಪಣ್ಣ ಯಾವ ಮೂಲೆಯಲ್ಲಿದ್ದಾರೆ?: ಗೋವಿಂದ ಕಾರಜೋಳ

ಬಾಗಲಕೋಟೆ : “ಬಿಜೆಪಿ ಸರ್ಕಾರದ ವಿರುದ್ದ 40% ಕಮಿಷನ್ ಆರೋಪ ಮಾಡುತ್ತಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಈಗ ಯಾವ ಮೂಲೆಯಲ್ಲಿ ಇದ್ದಾರೆ? ಕೆಂಪಣ್ಣನನ್ನು ಬ್ಯಾಟರಿ ಹಿಡಿದು ಹುಡಕಬೇಕಿದೆ” ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತ‌ಪಡಿಸಿದ್ದಾರೆ. ಬಾಗಲಕೋಟೆ ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು 3 ತಿಂಗಳಾಗಿದ್ದು, ಒಂದು ಅಭಿವೃದ್ದಿ ಕಾಮಗಾರಿಯೂ ಶುರುವಾಗಿಲ್ಲ. ದಯವಿಟ್ಟು ಅಭಿವೃದ್ದಿ ಕೆಲಸ ನಿಲ್ಲಿಸಬೇಡಿ. ನಿಮ್ಮ ಸರ್ಕಾರ ಆರ್ಥಿಕ‌ …

Read More »

ನನ್ನ ಹತ್ತಿರವೂ ಪೆನ್​ಡ್ರೈವ್​ ಇದೆ.: ಲಕ್ಷ್ಮಣ್​ ಸವದಿ

ಚಿಕ್ಕೋಡಿ (ಬೆಳಗಾವಿ): ನನ್ನ ಹತ್ತಿರವೂ ಪೆನ್​ಡ್ರೈವ್​ ಇದೆ. ಸಂದರ್ಭ ಬಂದಾಗ ನಾನು ಕೂಡ ಪೆನ್​ ಡ್ರೈವ್​ ಬಿಡುಗಡೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೇಳಿಕೆಗೆ ಅಥಣಿ ಶಾಸಕ ಲಕ್ಷ್ಮಣ್​ ಸವದಿ ತಿರುಗೇಟು ನೀಡಿದ್ದಾರೆ. ಅಥಣಿ ತಾಲೂಕಿನ ಕೋಕಟನೂರು ಗ್ರಾಮದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಉದ್ಘಾಟನೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ರು. ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ಮಾಡಿರುವ ಭ್ರಷ್ಟಾಚಾರ ಆರೋಪಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಹೆಚ್​ಡಿಕೆ ಮಾತನ್ನು ನಾನು …

Read More »

ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಧಿವಶ..

ಸ್ಯಾಂಡಲ್‌ವುಡ್ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನ ಅವರು ನಿಧನರಾಗಿದ್ದಾರೆ. ಪತಿ ಜೊತೆ ಸ್ಪಂದನಾ ಬ್ಯಾಂಕಾಕ್ ಗೆ ಹೋಗಿದ್ದು, ತೀವ್ರ ಹೃದಯಾಘಾತದಿಂದ ಸ್ಪಂದನಾ ಬ್ಯಾಂಕಾಕ್ ನಲ್ಲೇ ಸಾವನ್ನಪ್ಪಿದ್ದಾರೆ. ವಿಜಯ್ ಜೊತೆ ಸ್ಪಂದನಾ 2007ರಲ್ಲಿ ಸಪ್ತಪದಿ ತುಳಿದಿದ್ದರು. ವಿಜಯ್​- ಸ್ಪಂದನಾ ದಂಪತಿಗೆ ಶೌರ್ಯ ಎಂಬ ಪುತ್ರನಿದ್ದಾನೆ ಸ್ಪಂದನಾ ಅವರು ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿದ್ದು, ಇದು ಇಡೀ ಕನ್ನಡ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಸ್ಪಂದನಾ ವಿಜಯ್​ ರಾಘವೇಂದ್ರ …

Read More »

ಎಚ್‌ಡಿಕೆ ನೈಸ್‌ ದಾಖಲೆ ಕೊಟ್ರೆ ತನಿಖೆ ಎಂದ ಜೋಶಿ; ಪ್ರತ್ಯುತ್ತರ ಕೊಡುವೆನೆಂದ ಡಿಕೆಶಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಹಲವಾರು ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, “ನೈಸ್‌” ವಿವಾದ (Nice controversy) ತಾರಕಕ್ಕೇರಿದೆ. ಬಿಎಂಐಸಿ ಯೋಜನೆಯ ಅವ್ಯವಹಾರದ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಸಲ್ಲಿಸುವುದಾಗಿ ಹೇಳಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್‌ ಕೆಂಡವಾಗಿದೆ. ಅಲ್ಲದೆ, ನೈಸ್‌ ಸಂಸ್ಥೆ ಜತೆ ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ಸೇರಿಕೊಂಡಿದ್ದಾರೆ ಎಂಬ ಆರೋಪಕ್ಕೆ ಡಿಕೆಶಿ ಖಡಕ್‌ ಪ್ರತಿಕ್ರಿಯೆ ನೀಡಿದ್ದು, ಎಚ್‌ಡಿಕೆಗೆ …

Read More »

ರಾಜ್ಯ ​ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಭಾಗ್ಯಗಳ ಹೆಸರಿನಲ್ಲಿ ನಾಯಕರು ಭಾಗ್ಯ ಪಡೆಯುತ್ತಿದ್ದಾರೆ.: ಅಶ್ವತ್ಥ್ ನಾರಾಯಣ

ಬೆಂಗಳೂರು, ಆಗಸ್ಟ್​ 06: ಭಾಗ್ಯಗಳ ಹೆಸರಿನಲ್ಲಿ ಆಶ್ರಯ ಪಡೆದು ರಾಜಕಾರಣ ಮಾಡುತ್ತಿದ್ದಾರೆ. ಇವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದೆಯಾ, ನಾಚಿಕೆ ಆಗಬೇಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ(Ashwath Narayan)ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಬಗ್ಗೆ ಮಾತನಾಡುವ ಅರ್ಹತೆ, ಯೋಗ್ಯತೆ ಇಲ್ಲ. ಭ್ರಷ್ಟಾಚಾರ ಮಾಡಿಕೊಂಡು ಕುಳಿತಿರುವ ಕಾಂಗ್ರೆಸ್​​ಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ. ಜನರ ಮೇಲೆ ಪ್ರೀತಿ ಇಟ್ಟುಕೊಂಡು ಕಾಂಗ್ರೆಸ್ ಗ್ಯಾರಂಟಿ ಕೊಟ್ಟಿದ್ದಲ್ಲ. …

Read More »

ಕಾಂಗ್ರೆಸ್​ನಲ್ಲಿ ಸದ್ಯ ಶಾಸಕ-ಸಚಿವ ನಡುವೆ ಅಸಮಾಧಾನ , ಇದರ ಮಧ್ಯೆ ಹೈಕಮಾಂಡ್ ಲೋಕಸಭಾ ಚುನಾವಣೆಗೆ ಕರೆ ನೀಡಿದೆ

ಬೆಂಗಳೂರು, : ಕಾಂಗ್ರೆಸ್​ನಲ್ಲಿ (Congress) ಸದ್ಯ ಶಾಸಕ-ಸಚಿವ ನಡುವೆ ಅಸಮಾಧಾನ ಸ್ಫೋಟಗೊಂಡಿದೆ. ಇದರ ಮಧ್ಯೆ ಹೈಕಮಾಂಡ್ ಲೋಕಸಭಾ ಚುನಾವಣೆಗೆ ತಯಾರುವಂತೆ ಕರೆ ನೀಡಿದೆ. ಇದೆಲ್ಲರ ಮಧ್ಯೆ ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಸಚಿವ ಸ್ಥಾನಕ್ಕೆ ಕೈತಪ್ಪಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಅಸಮಾಧನ ಹೊರಹಾಕಿದ್ದಾರೆ. ಇದರ ನಡುವೆ ಇದೀಗ ಕಾಂಗ್ರೆಸ್​ನಲ್ಲಿ ವಿಧಾನಪರಿಷತ್ ನಾಮನಿರ್ದೇಶನ (MLC nomination )ಫೈಟ್​ ಜೋರಾಗಿದೆ. ಹೌದು.. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ನಾಮ ನಿರ್ದೇಶನಕ್ಕೆ ಮೂವರ …

Read More »