Breaking News
Home / ರಾಜ್ಯ (page 436)

ರಾಜ್ಯ

5 ಜನರ ಬಾಳಿಗೆ ಬೆಳಕಾಗಿದ್ದಾರೆ.ಚಿಕ್ಕಮಗಳೂರಿನ ಮಹಿಳೆ

ಚಿಕ್ಕಮಗಳೂರು: ಇಲ್ಲಿನ ಗೌರಿ ಕಾಲುವೆಯ ನಿವಾಸಿ ಸಹನಾ ಮೊಸೆಸ್ ಎಂಬವರು​ ಸಾವಿನಲ್ಲೂ ಸಾರ್ಥಕತೆ ಮೆರೆದು ಮಾದರಿಯಾಗಿದ್ದಾರೆ. ತಮ್ಮ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಒಂದಲ್ಲ, ಎರಡಲ್ಲ 5 ಜನರ ಬಾಳಿಗೆ ಬೆಳಕಾಗಿದ್ದಾರೆ. ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರ ಕುಟುಂಬದವರ ದೃಢ ನಿರ್ಧಾರ ಹಾಗೂ ಸಹನಾ ಅವರ ಆಸೆಯಂತೆಯೇ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಇಂದು ನಗರದ ಜಿಲ್ಲಾಸ್ಪತ್ರೆಯಲ್ಲಿ ಸಹನಾರ ಕಣ್ಣು, ಕಿಡ್ನಿ ಹಾಗೂ ಯಕೃತ್ತನ್ನು ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಆಂಬುಲೆನ್ಸ್ …

Read More »

ಅನಾರೋಗ್ಯದ ಕಾರಣದಿಂದ ರಾಜ್ಯಸಭೆ ಕಲಾಪದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ;H.D.D.

ಬೆಂಗಳೂರು : ಅನಾರೋಗ್ಯದ ಕಾರಣದಿಂದ ಇಂದು ರಾಜ್ಯಸಭೆ ಕಲಾಪದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ರಾಜ್ಯಸಭೆ ಸದಸ್ಯರೂ ಆಗಿರುವ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಈ ಬಗ್ಗೆ ಇಂದು ರಾತ್ರಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿರುವ ಅವರು, ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಮಹತ್ವದ ಸಭೆಯನ್ನು ಇಂದೇ ಆಯೋಜಿಸಲಾಗಿತ್ತು. ಸೊಂಟ ನೋವಿನ ಕಾರಣ ಆ ಸಭೆಯಲ್ಲೂ ಬಹಳ ಹೊತ್ತು ಕೂರಲು ತಮ್ಮಿಂದ ಆಗಲಿಲ್ಲ. ಹತ್ತು ನಿಮಿಷವಷ್ಟೇ ಸಭೆಗೆ ಹಾಜರಾಗಿ ನಂತರ ವೈದ್ಯರಲ್ಲಿ …

Read More »

‘ಶಾಸಕರ ಶಿಫಾರಸ್ಸು ಪತ್ರ ಪರಿಶೀಲನೆ ಮಾಡಿ ವರ್ಗಾವಣೆ:ಗೃಹ ಸಚಿವ

ಬೆಂಗಳೂರು: ”ಶಾಸಕರ ಶಿಫಾರಸ್ಸು ಪತ್ರ ಪರಿಶೀಲನೆ ಮಾಡಿ ವರ್ಗಾವಣೆ ಮಾಡಲಾಗುವುದು” ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ”ಬಹುಶಃ ಇನ್ನೊಂದು ವಾರದಲ್ಲಿ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪೂರ್ಣವಾಗಲಿದೆ. ಒಂದು ವಾರದೊಳಗೆ ಅಂತಿಮ‌ ಮಾಡುತ್ತೇವೆ. ವರ್ಗಾವಣೆಗೆ ಶಾಸಕರ ಶಿಫಾರಸ್ಸು ಪತ್ರ ಒಂದು ಹಂತ. ಶಾಸಕರ ಶಿಫಾರಸ್ಸು ಪತ್ರ ಪರಿಶೀಲನೆ ಮಾಡಿ ವರ್ಗಾವಣೆ ಮಾಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು. ಸದಾಶಿವ ಆಯೋಗದ ವರದಿ ಜಾರಿ ಮಾಡುತ್ತೇವೆ: ”ಸದಾಶಿವ …

Read More »

ಮೂರು ಜಿಲ್ಲೆಗಳಾದ ತುಮಕೂರು, ಯಾದಗಿರಿ ಹಾಗೂ ಚಿತ್ರದುರ್ಗ ಶಾಸಕರು ಹಾಗೂ ಸಚಿವರ ಸಭೆ ಅಸಮಾಧಾನಕ್ಕೆ ಸಿಎಂ ಮದ್ದು

ಬೆಂಗಳೂರು: ಮೂರು ಜಿಲ್ಲೆಗಳಾದ ತುಮಕೂರು, ಯಾದಗಿರಿ ಹಾಗೂ ಚಿತ್ರದುರ್ಗ ಶಾಸಕರು ಹಾಗೂ ಸಚಿವರ ಸಭೆ ಮುಕ್ತಾಯವಾಗಿದೆ. ಈ ವೇಳೆ ಶಾಸಕರು ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತುಮಕೂರು, ಯಾದಗಿರಿ, ಚಿತ್ರದುರ್ಗ ಜಿಲ್ಲೆಗಳ ಕ್ಷೇತ್ರವಾರು ಸಮಸ್ಯೆ, ಅನುದಾನ, ಅಭಿವೃದ್ಧಿ ಸಂಬಂಧ ಸಭೆ ನಡೆಯಿತು. ಮೊದಲಿಗೆ ತುಮಕೂರು ಜಿಲ್ಲೆಯ ಸಚಿವರು, ಶಾಸಕರ ಜೊತೆ ಸಭೆ ನಡೆಸಿದರು. ಸಭೆಯ ಬಳಿಕ ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, …

Read More »

ಬೆನ್ನುಮೂಳೆಗೆ ಪೆಟ್ಟುಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಲುಮರದ ತಿಮ್ಮಕ್ಕ ಅವರನ್ನು ಇಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಬೆಂಗಳೂರು: ಮನೆಯಲ್ಲಿ ಜಾರಿ ಬಿದ್ದು ಬೆನ್ನುಮೂಳೆಗೆ ಪೆಟ್ಟುಬಿದ್ದ ಕಾರಣ ಜಯನಗರದ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶತಾಯುಷಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲುಮರದ ತಿಮ್ಮಕ್ಕರನ್ನು ಅರಣ್ಯ ಹಾಗೂ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. “ಮರಗಳನ್ನೇ ಮಕ್ಕಳಂತೆ ಮಮಕಾರದಿಂದ ಸಾಕಿರುವ ಮಹಾತಾಯಿಯಾದ ನಿಮಗೆ ಇಡೀ ಕರುನಾಡಿ ಜನರಷ್ಟೇ ಅಲ್ಲದೇ ವಿಶ್ವ ಪರಿಸರ ಪ್ರೇಮಿಗಳ ದಿವ್ಯ ಶುಭ ಹಾರೈಕೆ ಇದೆ. ನೀವು ಶೀಘ್ರ ಗುಣಮುಖರಾಗುತ್ತೀರಿ” ಎಂದು …

Read More »

ಉಡುಪಿ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ನಡೆದ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.

ಬೆಂಗಳೂರು: ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ನಡೆದಿದೆ ಎನ್ನಲಾದ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಈ ಬಗ್ಗೆ ಟ್ವೀಟ್ ಮೂಲಕ ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. “ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ನಡೆಸಲಾಗಿದೆ ಎಂಬ ಆರೋಪವಿದ್ದು, ಇದು ಸೂಕ್ಷ್ಮ ಪ್ರಕರಣವಾಗಿರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶಿಸಲಾಗಿದೆ‌” ಎಂದು ತಿಳಿಸಿದ್ದಾರೆ. ಈ ಪ್ರಕರಣ ರಾಜಕೀಯವಾಗಿ ಭಾರಿ ಸದ್ದು ಮಾಡಿದೆ. ಬಿಜೆಪಿ, …

Read More »

ಖುದ್ದು ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಫಿಲ್ಡಿಗಿಳಿಯುವ ಮೂಲಕ ಕಸ ವಿಲೇವಾರಿ‌ ಪರಿಶೀಲನೆ

ಬೆಳಗಾವಿ : ನಗರದ ಕೆಲವು ವಾರ್ಡ್​ಗಳಿಗೆ ಕಸ ಸಂಗ್ರಹಿಸುವ ವಾಹನಗಳು ಹೋಗುತ್ತಿರಲಿಲ್ಲ. ಕೆಲವು ಕಡೆಗಳಲ್ಲಿ ಸರಿಯಾದ ಸಮಯಕ್ಕೆ ವಾಹನ ತೆರಳುತ್ತಿಲ್ಲವೆಂದು ಆಯುಕ್ತರಿಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದಿದ್ದವು. ಇದರಿಂದ ಎಚ್ಚೆತ್ತುಕೊಂಡ ಆಯುಕ್ತ ಅಶೋಕ ದುಡಗುಂಟಿ ಸೋಮವಾರ ಬೆಳಗ್ಗೆ 5.30ಕ್ಕೆ ಸೈಕಲ್ ಮೇಲೆ ಕಸ ಸಂಗ್ರಹಿಸುವ ವಾಹನಗಳ ಶಾಖೆಗೆ ದಿಢೀರ್ ಭೇಟಿ ನೀಡಿದ್ದರು. ಈ ವೇಳೆ ಚಾಲಕರು, ಕ್ಲೀನರ್ ಗಳು ಎಷ್ಟು ಗಂಟೆಗೆ ಡ್ಯೂಟಿಗೆ ಬರುತ್ತಾರೆ ಎಂದು ಹಾಜರಿ ಪುಸ್ತಕ ಪರೀಕ್ಷಿಸಿದರು. ಸರಿಯಾದ …

Read More »

ಬಿಬಿಎಂಪಿ ಹಣ ಬಿಡುಗಡೆಗೆ ವಿಳಂಬ ಮಾಡಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾದ ಗುತ್ತಿಗೆದಾರರು

ಬೆಂಗಳೂರು: ಕಳೆದ 26 ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ತಾವು ಮಾಡಿರುವ ಕಾಮಗಾರಿಗಳ ಬಾಕಿ ಬಿಲ್ ಪಾವತಿ ಮಾಡದಿರುವ ಕುರಿತು ಬೆಂಗಳೂರು ಮಹಾನಗರ ಪಾಲಿಕೆ ಕಾರ್ಯನಿರತ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಇಂದು (ಸೋಮವಾರ) ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡರು.   ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಗುತ್ತಿಗೆದಾರರು, ”ಪಾಲಿಕೆಯ ಮುಖ್ಯ ಆಯುಕ್ತರು ಬಿಲ್ ಪಾವತಿಗೆ ಮೀನಮೇಷ ಎಣಿಸುತ್ತಿದ್ದಾರೆ. ಬಿಲ್ ಬಾಕಿ ಉಳಿಸಿಕೊಂಡು, …

Read More »

ಕೆಎಸ್​ಆರ್​ಟಿಸಿ ಡಿವಿಜನಲ್ ಸೆಕ್ಯುರಿಟಿ ಇನ್ಸ್​ಪೆಕ್ಟರ್​ ಹತ್ಯೆ

ಬಳ್ಳಾರಿ: ನಗರದ ಕೆಎಎಸ್​ಆರ್​ಟಿಸಿ ಡಿವಿಜನಲ್ ಸೆಕ್ಯುರಿಟಿ ಇನ್ಸ್​ಪೆಕ್ಟರ್​ ನನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ನಗರದ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ಹುಸೇನಪ್ಪ (54) ಕೊಲೆಯಾದ ಸೆಕ್ಯುರಿಟಿ ಇನ್ಸ್​ಪೆಕ್ಟರ್​. ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಮಾರಕಾಸ್ತ್ರಗಳಿಂದ ಹುಸೇನಪ್ಪ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾರೆ. ಹುಸೇನಪ್ಪ ಕೆಎಸ್​​ಆರ್​ಟಿಸಿನಲ್ಲಿ ಕಳೆದ 20 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ನಾಳೆ ಬೀದರ್​ನಲ್ಲಿ ಚಾಲಕರ ನೇಮಕಾತಿ ಪರೀಕ್ಷೆಗೆ ತೆರಳುತ್ತಿದ್ದ ಅವರು ಮನೆಯಿಂದ ಬಸ್ ನಿಲ್ದಾಣಕ್ಕೆ ಹೋಗುವ ವೇಳೆ ಕೊಲೆ ಮಾಡಲಾಗಿದೆ. ಸ್ಥಳಕ್ಕೆ …

Read More »

ನ್ನಡ ಚಿತ್ರರಂಗಕ್ಕೆ ಮೇಲಿಂದ ಮೇಲೆ ಆಘಾತ

ಕನ್ನಡ ಚಿತ್ರರಂಗ ಸೇರಿದಂತೆ ಇತರೆ ಭಾಷೆ ಸಿನಿಮಾ ನಟ-ನಟಿಯರ ಹಠಾತ್​ ಸಾವು ಅವರ ಅಭಿಮಾನಿಗಳಲ್ಲಿ ತೀವ್ರ ನೋವು ಉಂಟು ಮಾಡುತ್ತಿದೆ. ಇತ್ತೀಚಿನ ದಿನದಲ್ಲಿ ಯುವ ಜನತೆಯಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಸಾಕ್ಷಿಯೆಂಬಂತೆ ಅನೇಕ ಪ್ರಕರಣಗಳು ನಮ್ಮ ಸುತ್ತಮುತ್ತಲೂ ನಡೆಯುತ್ತಿವೆ. ಅದರಲ್ಲೂ ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ರೀತಿ ಯುವ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ಕೇವಲ ಉದ್ಯಮಕ್ಕೆ ಮಾತ್ರವಲ್ಲ, ರಾಜ್ಯಕ್ಕೆ ಬರಸಿಡಿಲು ಬಡಿಯುವಂತೆ ಮಾಡಿವೆ. ನಟ …

Read More »