ಮಂಡ್ಯ: ಬಲವಂತವಾಗಿ ಮ್ಯಾನ್ ಹೋಲ್ ಗಿಳಿಸಿ ಮಲ ಸ್ವಚ್ಛಗೊಳಿಸಿದ್ದ ಪ್ರಕರಣದಲ್ಲಿ ಬಲಿಪಶುವಾಗಿದ್ದ ಪೌರಕಾರ್ಮಿಕ ನಾರಾಯಣ ಪುರಸಭೆ ಅಧಿಕಾರಿಗಳ ಕಿರುಕುಳ ತಾಳಲಾರದೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮದ್ದೂರಿನಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ ಪೌರಕಾರ್ಮಿಕ ನಾರಾಯಣನನ್ನು ಮದ್ದೂರು ಪುರಸಭೆಯ ಮುಖ್ಯಾಧಿಕಾರಿ ಮುರುಗೇಶ್, ಆರೋಗ್ಯ ನಿರೀಕ್ಷಕ ಝಾಸಿಂಖಾನ್, ಪುರಸಭೆ ಅಧ್ಯಕ್ಷ ಸುರೇಶ್ ಕುಮಾರ್ ಬಲವಂತವಾಗಿ ಮ್ಯಾನ್ ಹೋಲ್‌ಗಿಳಿಸಿ ಬರಿಗೈಯ್ಯಲ್ಲಿ ಮಲ ಸ್ವಚ್ಛಗೊಳಿಸಿದ್ದರು ಎಂದು ಆರೋಪಿಸಲಾಗಿತ್ತು. ಈ ಪ್ರಕರಣ ಮಾದ್ಯಮಗಳಲ್ಲಿ ಸೋರಿಕೆಯಾಗಲು …
Read More »ಕೋವಿಡ್ ನೆಗೆಟಿವ್ ವರದಿ ಇಲ್ಲದೇ ಬರುವ ಜನರು ಪರದಾಡುವಂತೆ ಆಗಿದೆ.
ಕಲಬುರಗಿ: ಕೋವಿಡ್ ಸೋಂಕಿನ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದ ಮಹಾರಾಷ್ಟ್ರ ಗಡಿ ಭಾಗದಲ್ಲಿ ಮಂಗಳವಾರ ಬಿಗಿ ಕ್ರಮ ವಹಿಸಲಾಗಿದ್ದು, ಕೋವಿಡ್ ನೆಗೆಟಿವ್ ವರದಿ ಇಲ್ಲದೇ ಬರುವ ಜನರು ಪರದಾಡುವಂತೆ ಆಗಿದೆ. ತಮ್ಮನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದ ಮಹಿಳೆಯೊಬ್ಬರಿಗೆ ಗಡಿ ಪ್ರದೇಶಿಸಲು ಅವಕಾಶ ನೀಡದೆ ತಡೆದ ಘಟನೆ ಜಿಲ್ಲೆಯ ಬಳ್ಳೂರ್ಗಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ. ಮಹಾರಾಷ್ಟ್ರದಿಂದ ಅಫಜಲಪುರ ತಾಲೂಕಿನ ಬಳ್ಳೂರ್ಗಿ ಮಾರ್ಗವಾಗಿ ಮಹಿಳೆಯೊಬ್ಬರು, ವಿಜಯಪುರ ಜಿಲ್ಲೆಯ ಮೋರಟಗಿ ಗ್ರಾಮದಲ್ಲಿ ರಸ್ತೆ …
Read More »ಆಸ್ಪತ್ರೆಯಲ್ಲಿ ಯಾರೂ ಇಲ್ಲದ ವೇಳೆ ಮೈಮುಟ್ಟಿ ಕಿರುಕುಳ
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಗುತ್ತಿಗೆ ಕಾರ್ಮಿಕರಾಗಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿರುವ 33 ವರ್ಷದ ಮಹಿಳೆಗೆ ಆಸ್ಪತ್ರೆಯಲ್ಲಿ ಎಕ್ಸರೇ ಟೆಕ್ನಿಷಿಯನ್ ಆಗಿರುವ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಆರೋಪಿಸಲಾಗಿದೆ. ಹಾನಗಲ್ ಠಾಣೆ ಪೊಲೀಸರಿಗೆ ದೂರು ನೀಡಲಾಗಿದ್ದು, ಆಸ್ಪತ್ರೆಯಲ್ಲಿ ಯಾರೂ ಇಲ್ಲದ ವೇಳೆ ಮೈಮುಟ್ಟಿ ಕಿರುಕುಳ ನೀಡಲಾಗಿದೆ ಎಂದು ಹೇಳಲಾಗಿದೆ. ಮೊಬೈಲ್ನಲ್ಲಿ ಆತ …
Read More »ಚಿಕ್ಕೋಡಿಯ ಈ ಆಸ್ಪತ್ರೆಯಲ್ಲಿ ಹಿತ್ತಲ ಗಿಡ ‘ಮದ್ದು’
ಚಿಕ್ಕೋಡಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ ಒಬ್ಬರು ರೋಗಿಗಳ ಆರೋಗ್ಯ ಸೇವೆಯೊಂದಿಗೆ ಆಸ್ಪತ್ರೆ ಆವರಣದಲ್ಲಿ ಆಯುರ್ವೇದ ಸಸ್ಯೋದ್ಯಾನ ಅಭಿವೃದ್ಧಿಪಡಿಸಿ, ಆಯುರ್ವೇದ ಔಷಧಿ ಕುರಿತು ಜನಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯುಷ್ ವೈದ್ಯಾಧಿಕಾರಿಯಾಗಿರುವ ಡಾ.ಲಕ್ಷ್ಮೀಕಾಂತ ಕಡ್ಲೆಪ್ಪಗೋಳ ಅವರು ಆಸ್ಪತ್ರೆ ಆವರಣ ಖಾಲಿ ಜಾಗದಲ್ಲಿ ಆಯುರ್ವೇದದ ಸಸಿಗಳನ್ನು ಬೆಳೆಸಿದ್ದಾರೆ. ಡಾ.ಕಡ್ಲೆಪ್ಪಗೋಳ ಅವರು ಸರ್ಕಾರ ಜಾರಿಗೊಳಿಸಿದ್ದ ‘ಕಾಯಕಲ್ಪ’ ಯೋಜನೆಯನ್ನು ಬಳಸಿಕೊಂಡು ಆಸ್ಪತ್ರೆಯ ಆವರಣದ ಮೂಲೆಯೊಂದರಲ್ಲಿ ಪಾಳು ಬಿದ್ದಿದ್ದ …
Read More »ಬ್ಯಾಂಕ್ ಗ್ರಾಹಕರೇ ಗಮನಿಸಿ : ಮುಷ್ಕರ ಸೇರಿದಂತೆ ಮಾರ್ಚ್ ತಿಂಗಳಿನಲ್ಲಿ 11 ದಿನ ಬ್ಯಾಂಕ್ ಬಂದ್,
ನವದೆಹಲಿ: ಫೆಬ್ರವರಿ ತಿಂಗಳು ಮುಗಿಯುತ್ತಿರುವುದರಿಂದ ಬ್ಯಾಂಕ್ ಖಾತೆದಾರರು ಗಮನಿಸಬೇಕಾದ ಅಂಶವೆಂದರೆ ಮುಂಬರುವ ಮಾರ್ಚ್ ತಿಂಗಳಿನಲ್ಲಿ ದೇಶಾದ್ಯಂತ ಬ್ಯಾಂಕ್ ಗಳು ಮುಚ್ಚುವ 11 ದಿನಗಳು ಮುಚ್ಚಲಿವೆ. ನೀವು ನಿಮ್ಮ ಯಾವುದೇ ಕೆಲಸವನ್ನು ಮಾರ್ಚ್ ಗೆ ಮುಂದೂಡಿದ್ದರೆ, ನೀವು ಒಮ್ಮೆ ಬ್ಯಾಂಕ್ ಗಳಿಗೆ ರಜೆಯಲ್ಲಿರುವ ಕ್ಯಾಲೆಂಡರ್ ಅನ್ನು ನೋಡಬೇಕು. ಆ ದಿನಗಳಲ್ಲಿ ಯಾವುದೇ ಬ್ಯಾಂಕ್ ವ್ಯವಹಾರವನ್ನು ಯೋಜಿಸುವ ಮುನ್ನ ಬ್ಯಾಂಕ್ ರಜಾ ದಿನಗಳನ್ನು ತಿಳಿದುಕೊಳ್ಳುವುದು ಉತ್ತಮವಾಗಿದೆ ಕೂಡ. ಭಾರತೀಯ ರಿಸರ್ವ್ ಬ್ಯಾಂಕ್ …
Read More »ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ
ಮೂಡಲಗಿ: ಕೊರೊನಾ ಕಾರಣದಿಂದ ಕಳೆದ ಒಂದು ವರ್ಷದಿಂದ ಜಾತ್ರೆ, ಹಬ್ಬ ಹರಿದಿನಗಳು ನಿಂತುಹೋಗಿದ್ದವು. ದೇವಿಯ ಕೃಪೆಯಿಂದ ಕರೋನಾ ಕಾರ್ಮೋಡ ಕರಗಿ ಮತ್ತೆ ಎಂದಿನಂತೆ ಜನಜೀವನ ಸಾಗುವಂತಾಗಲಿ ಎಂದು ಶ್ರೀ ಮಹಾಲಕ್ಷ್ಮೀ ದೇವಿಯಲ್ಲಿ ಪ್ರಾರ್ಥಿಸೋಣ ಎಂದು ರಾಜ್ಯ ಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಹೇಳಿದ್ದಾರೆ. ಮೂಡಲಗಿ ತಾಲೂಕಿನ ಮಸಗುಪ್ಪಿ ಗ್ರಾಮದ ಶ್ರೀ ಮಹಾಲಕ್ಷ್ಮೀದೇವಿ ಹಾಗೂ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ …
Read More »ಬೆಳಗಾವಿ ಸೇರಿದಂತೆ ಕೆಲವೆಡೆ ಲೋಕಸಭೆ ಮತ್ತು ವಿಧಾನಸಭೆಗಳ ಉಪಚುನಾವಣೆಯೂ ಘೋಷಣೆಯಾಗುವ ಸಾಧ್ಯತೆ….!
ನವದೆಹಲಿ – ದೇಶದಲ್ಲಿ 5 ರಾಜ್ಯಗಳ ವಿಧಾನಸಭೆ ಚುನಾವಣೆ ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಇದಕ್ಕಾಗಿ ದಿನಾಂಕ ನಿಗದಿಪಡಿಸಲು ಕೇಂದ್ರ ಚುನಾವಣೆ ಆಯೋಗ ಬೆಳಗ್ಗೆ ಸಭೆ ಸೇರಲಿದೆ. ಆಸ್ಸಾಂ, ಪಶ್ಚಿಮಬಂಗಾಳ, ಪುದುಚೆರಿ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಚುನಾವಣೆ ನಡೆಯಬೇಕಿದೆ. ಇದರೊಂದಿಗೆ, ಬೆಳಗಾವಿ ಸೇರಿದಂತೆ ಕೆಲವೆಡೆ ಲೋಕಸಭೆ ಮತ್ತು ವಿಧಾನಸಭೆಗಳ ಉಪಚುನಾವಣೆಯೂ ಘೋಷಣೆಯಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಬೆಳಗಾವಿ ಲೋಕಸಭೆ ಮತ್ತು 3 ವಿಧಾನಸಭೆ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.
Read More »ಶಾಲಾರಂಭದಲ್ಲಿ ಕರ್ನಾಟಕವೇ ಮುಂದು; ಸಚಿವ ಸುರೇಶ್ ಕುಮಾರ್
ಬೆಂಗಳೂರು (ಫೆಬ್ರವರಿ 24): ಆಂಧ್ರ ಮತ್ತು ಪಂಜಾಬ್ ಹೊರತುಪಡಿಸಿದರೆ ಆರನೇ ತರಗತಿಯಿಂದ ಶಾಲೆ ಆರಂಭ ಮಾಡಿರುವುದು ನಮ್ಮ ರಾಜ್ಯ ಮಾತ್ರ. ನಾವು ಎಲ್ಲರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಇನ್ನೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಒಂದನೇ ತರಗತಿಯಿಂದ ಶಾಲೆ ಆರಂಭಿಸಲೂ ಚಿಂತನೆ ನಡೆಸಿದ್ದೇವೆ. ಹಾಗೆಯೇ ಮಕ್ಕಳ ಮತ್ತು ಶಾಲೆಗಳ ಹಿತದೃಷ್ಟಿಯಿಂದ ಶಾಲಾ ದಾಖಲಾತಿ ಸಮಯವನ್ನೂ ವಿಸ್ತರಿಸಲಾಗಿದೆ. ಇದೆಲ್ಲವನ್ನೂ ನಮ್ಮ ಆಡಳಿತ ಮಂಡಳಿಗಳೂ ಗಮನಿಸಬೇಕಿದೆ ಎಂದೂ ಸುರೇಶ್ ಕುಮಾರ್ …
Read More »ಧರ್ಮಟ್ಟಿ ಪಿಕೆಪಿಎಸ್ ಪತ್ತ ಹೆಚ್ಚಳ, 2 ಕೋಟಿ ರೂ.ಗಳಿಂದ 3.50 ಕೋಟಿ ರೂ.ಗಳಿಗೆ ಏರಿಕೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : ಧರ್ಮಟ್ಟಿ ಪಿಕೆಪಿಎಸ್‍ನಲ್ಲಿ ಈಗಾಗಲೇ 2 ಕೋಟಿ ರೂ.ಗಳ ಪತ್ತನ್ನು 3.50 ಕೋಟಿ ರೂ.ಗಳಿಗೆ ಹೆಚ್ಚಿಸಿ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲವನ್ನು ನೀಡಲಾಗುವುದು ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಧರ್ಮಟ್ಟಿ ಗ್ರಾಮದ ಲಕ್ಷ್ಮೀ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದ ಬಳಿಕ ಸಾರ್ವಜನಿಕರನ್ನುದ್ಧೇಶಿಸಿ ಮಾತನಾಡಿದ ಅವರು, ರೈತರಿಗೆ ಪಿಕೆಪಿಎಸ್ ಗಳು ಜೀವನಾಡಿಯಾಗಿವೆ ಎಂದು ಹೇಳಿದರು. ಧರ್ಮಟ್ಟಿ ಪಿಕೆಪಿಎಸ್‍ನಿಂದ ರೈತರಿಗೆ ಅನುಕೂಲವಾಗಲು ಸಾಲವನ್ನು …
Read More »ರಾಜ್ಯಕ್ಕೆ ಬಂದ ನಂತರ ತಕ್ಕ ಪ್ರತ್ಯುತ್ತರ ನೀಡುತ್ತೇನೆ: ಕಾಂಗ್ರೆಸ್ ನ ಬಿ ಟೀಂ ಎಂದ ಸಚಿವರಿಗೆ ಯತ್ನಾಳ್ ತಿರುಗೇಟು
ನವದೆಹಲಿ: “ನಾನು ಕರ್ನಾಟಕಕ್ಕೆ ಹಿಂದಿರುಗಿದ ನಂತರ ಅವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇನೆ” ಎಂದು ಹೇಳುವ ಮೂಲಕ ವಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಾವು ಕಾಂಗ್ರೆಸ್ ನ ಬಿ ಟೀಂ ಎಂದ ಸಚಿವ ಮುರುಗೇಶ್.ಆರ್ ನಿರಾಣಿ ಅವರಿಗೆ ಮಂಗಳವಾರ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‍ನ ಬಿ ಟೀಮ್‍ನಂತೆ ಕೆಲಸ ಮಾಡುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್‍ಗೆ ತಾಕತ್ತಿದ್ದರೆ, ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷೇತರ ಶಾಸಕನಾಗಿ ಗೆದ್ದು ಬರಲಿ ಎಂದು …
Read More »
Laxmi News 24×7