Breaking News

ರಾಜ್ಯ

ಐತಿಹಾಸಿಕ ಶ್ರೀಗುರು ಕೊಟ್ಟೂರೇಶ್ವರ ರಥೋತ್ಸವ ರದ್ದು;

ವಿಜಯನಗರ: ಜಿಲ್ಲೆಯ ಕೊಟ್ಟೂರಿನ ಐತಿಹಾಸಿಕ ಶ್ರೀ ಗುರು ಕೊಟ್ಟೂರೇಶ್ವರ ರಥೋತ್ಸವ ರದ್ದು ಮಾಡಲು ನಿರ್ಧರಿಸಲಾಗಿದ್ದು, ಮಾ.7ರಂದು ನೆರವೇರಬೇಕಿದ್ದ ರಥೋತ್ಸವ ನಡೆಯುತ್ತಿಲ್ಲ. ಪ್ರತಿ ವರ್ಷವೂ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಆಗಮಿಸುತ್ತಾರೆ. ಆದರೆ ಈ ಸಲ ಕರೊನಾ ಕರಿನೆರಳಿನ ಹಿನ್ನೆಲೆಯಲ್ಲಿ ರಥೋತ್ಸವ ರದ್ದು ಮಾಡಲಾಗಿದ್ದು, ಹೊರಗಿನ ಭಕ್ತರಿಗೂ ಪ್ರವೇಶ ನಿಷೇಧಿಸಲಾಗಿದೆ. ಬರೀ ಪೂಜಾ-ಕೈಂಕರ್ಯಗಳಿಗೆ ಮಾತ್ರ ಅವಕಾಶ ಕಲ್ಪಿಸಲು ಇಂದಿನ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್, …

Read More »

10 ರೂಪಾಯಿ ನೋಟು ಎಸೆದು 92 ಸಾವಿರ ಹಣ ದೋಚಿದ ಖದೀಮ! ಸಿಸಿ ಕ್ಯಾಮರಾದಲ್ಲಿ ಕೃತ್ಯ ಸೆರೆ

ಬೆಂಗಳೂರು: ಸಿಟಿ ಮಾರುಕಟ್ಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಚಾಲಕನ ಗಮನ ಬೇರೆಡೆ ಸೆಳೆದು ಕಾರಿನ ಹಿಂಬದಿ ಸೀಟಿನಲ್ಲಿ ಇರಿಸಿದ್ದ 92 ಸಾವಿರ ರೂ. ಮೌಲ್ಯದ ಬ್ಯಾಗ್​ ಅನ್ನು ಖದೀಮ ಹೊತ್ತೊಯ್ದಿದ್ದಾನೆ. ಶಾಂತಿನಗರದ ನಿವಾಸಿ ಉದ್ಯಮಿ ಸುನೀಲ್​ ನೀಡಿದ ದೂರಿನ ಆಧಾರದ ಮೇರೆಗೆ ಸಿಟಿ ಮಾರುಕಟ್ಟೆ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಫೆ.18ರಂದು ಸುನೀಲ್​ ತಮ್ಮ ಕಾರು ಚಾಲಕ ಸೀಬಾ ಅಲ್ಡರ್​ ಜತೆ ಬಿವಿಕೆ ಐಯ್ಯಂಗಾರ್​ ರಸ್ತೆಗೆ ಬಂದು ಎಸ್​ಜೆಪಿ …

Read More »

ಪೊಗರು ಸಿನಿಮಾ ವಿವಾದ ಸುಖಾಂತ್ಯದ ಬಳಿಕ ಲಿಖಿತ ರೂಪದಲ್ಲಿ ಕ್ಷಮೆ ಕೇಳಿದ ಧ್ರುವ ಸರ್ಜಾ

ಬೆಂಗಳೂರು: ‘ಪೊಗರು’ ಸಿನಿಮಾ ವಿವಾದ ಸುಖಾಂತ್ಯದ ಬಳಿಕ ನಟ ಧ್ರುವ ಸರ್ಜಾ, ಲಿಖಿತ ರೂಪದಲ್ಲಿ ಬ್ರಾಹ್ಮಣ ಸಮುದಾಯದ ಬಳಿ ಕ್ಷಮೆ ಕೇಳಿದ್ದಾರೆ. ‘ನಮ್ಮ ಇಡೀ ಕುಟುಂಬ ಹನುಮ ಭಕ್ತರು. ಆಂಜನೇಯನ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಇಡೀ ವಂಶವೇ ಹಿಂದುತ್ವದ ಪದ್ಧತಿಯನ್ನು ಆಚರಿಸುತ್ತಾ ಗೌರವಿಸುತ್ತಾ ಬದುಕುತ್ತಿದ್ದೇವೆ. ತಾತನವರ ಕಾಲದಿಂದಲೂ ಹಿಂದುತ್ವದ ಪ್ರತಿಪಾದಕರಾಗಿಯೇ ಬದುಕಿದ್ದೇವೆ. ಕಲೆಯೇ ಧರ್ಮ. ನಾವು ಎಲ್ಲ ಧರ್ಮಗಳನ್ನು ಗೌರವಿಸಿದ್ದೇವೆ. ಚಿತ್ರದ ಕಥೆ, ಪಾತ್ರಪೋಷಣೆಯಲ್ಲಿ ಯಾವುದೇ ಸಮುದಾಯಕ್ಕೆ ಎನ್ನುವಂತಹ …

Read More »

10ನೇ ತರಗತಿ ಪಾಸಾದವರಿಗೆ Reserve Bank Of India ನಲ್ಲಿ ಉದ್ಯೋಗಾವಕಾಶ

ನವದೆಹಲಿ: RBI Vaccancies – ಭಾರತೀಯ ರಿಸರ್ವ್ ಬ್ಯಾಂಕ್ (RBI)ನಲ್ಲಿ ಉದ್ಯೋಗ (RBI Vacancies Latest News) ಮಾಡಲು ಬಯಸುವವರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. RBI ಖಾಲಿ ಇರುವ ಆಫೀಸ್ ಅಟೆಂಡೆಂಟ್ಸ್ ಹುದ್ದೆಗಳ ಭರ್ತಿಗಾಗಿ (RBI Office Attendant Recruitment 2021) ಅಧಿಕೃತ ಅಧಿಸೂಚನೆ ಜಾರಿಗೊಳಿಸಿದೆ. ಅರ್ಜಿ ಪ್ರಕ್ರಿಯೆಯನ್ನು RBI ತನ್ನ ಅಧಿಕೃತ ವೆಬ್‌ಸೈಟ್ rbi.org.in ನಲ್ಲಿ 24 ಫೆಬ್ರವರಿ 2021 ರಿಂದ ಪ್ರಾರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು …

Read More »

UPSC’ ಕೊನೆಯ ಅವಕಾಶದ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್ ನಿಂದ ಬಿಗ್ ಶಾಕ್!

ನವದೆಹಲಿ: 2020ರ ಅಕ್ಟೋಬರ್ʼನಲ್ಲಿ ಕೊನೆಯ ಪ್ರಯತ್ನ ನಡೆಸಿದ ಅಭ್ಯರ್ಥಿಗಳಿಗೆ ಯುಪಿಎಸ್ ಸಿ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಹೆಚ್ಚುವರಿ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷ ಯುಪಿಎಸ್ ಸಿ ಪರೀಕ್ಷೆಗೆ ಪೂರ್ವಸಿದ್ಧತೆ ಮಾಡಿಕೊಳ್ಳಲು ಆಗದ ಕೊನೆಯ ಅವಕಾಶದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿದೆ. ಸಿವಿಲ್ ಸರ್ವೀಸ್ ಎಕ್ಸಾಮಿನೇಷನ್ 2020ರಲ್ಲಿ ಕೊನೆಯ ಪ್ರಯತ್ನ ಮಾಡಿದ್ದ ಅರ್ಜಿದಾರರು, ಕೋವಿಡ್-19 …

Read More »

ಶೇಂಗಾ ಖರೀದಿ ಮಾಡಿ ನಮ್ಮನ್ನು ಕಾಪಾಡ ಬೇಕೆಂದ ಶೇಂಗಾ ಬೆಳೆದ  ಜಿಲ್ಲೆಯ ರೈತರು

ಯಾದಗಿರಿ : ಶೇಂಗಾ ಬೆಳೆದ  ಜಿಲ್ಲೆಯ ರೈತರು ಉತ್ತಮ ದರ ಸಿಗದೆ ಪರದಾಡುವಂತಾಗಿದೆ.ನಿ ತ್ಯವೂ ಸಾವಿರಾರು ಕ್ವಿಂಟಾಲ್ ಶೇಂಗಾವನ್ನು ಹತ್ತಿಕುಣಿ, ಗುರುಮಠಕಲ್, ಬಂದಳ್ಳಿ,ಅರಕೇರಾ ಕೆ ಹಾಗೂ ಇನ್ನಿತರ ಭಾಗದಿಂದ ಹೊತ್ತು ತಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ಕಡಿಮೆ ದರಕ್ಕೆ ಶೇಂಗಾ ಖರೀದಿ ಮಾಡುತ್ತಿದ್ದಾರೆ. ಉತ್ತಮ ಬೆಲೆ ಸಿಗದೆ, ಸಿಕ್ಕ ಹಣಕ್ಕೆ ರೈತರು ಶೇಂಗಾ ಮಾರಾಟ ಮಾಡುತ್ತಿದ್ದಾರೆ. ‌ಯಾದಗಿರಿ, ಸುರಪುರ, ಶಹಾಪುರ, ವಡಗೇರಾ, ಗುರುಮಠಕಲ್, …

Read More »

ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಜೈ ಅಂದ ಸಿಂದಗಿ ನಾರಿಯರು!

ವಿಜಯಪುರ : ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರಣ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರ ಉಪಸ್ಥಿತಿಯಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲೆಯ ಸಿಂದಗಿಯಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಕುಂದುಕೊರತೆ ಸಭೆಗೆ ಸಾರ್ವಜನಿಕರಿಂದ  ಅಭೂತಪೂರ್ವ ಪ್ರತಿಕ್ರಿಯೆ ಮತ್ತು ಸ್ಪಂದನೆ ದೊರೆತಿದೆ. ಸಿಂದಗಿ ಸಾತವಿರೇಶ್ವರ ಸಭಾಂಗಣದಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ದೀಪ ಬೆಳಗಿಸಿ ಮಾತನಾಡಿ, …

Read More »

ಅಂತರ ತಾಲೂಕಾ ಹಾಗೂ ಗೋಕಾಕ ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ

ಗೋಕಾಕ: ಗೋಕಾಕ ತಾಲೂಕಾ ಬಾಡಿ ಬಿಲ್ಡರ್ಸ್ ಅಸೋಸಿಯೇಷನ ವತಿಯಿಂದ ದಿ. 26 ರಂದು ಸಂಜೆ 5 ಗಂಟೆಗೆ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಅಂತರ ತಾಲೂಕಾ ಹಾಗೂ ಗೋಕಾಕ ತಾಲೂಕಾ ಮಟ್ಟದ ದೇಹದಾಢ್ರ್ಯದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಅಸೋಸಿಯೇಷನ ಕಾರ್ಯದರ್ಶಿ ರಮೇಶ ಕಳ್ಳಿಮನಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಈ ಸ್ಪರ್ಧೆಯಲ್ಲಿ 55, 60, 65, ಹಾಗೂ 65+ ಕೆಜಿ ದೇಹ ತೂಕದ ಸ್ಪರ್ಧಾಳುಗಳಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು …

Read More »

ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರೊಂದಿಗೆ ಚರ್ಚಿಸುತ್ತಿರುವ ರೈತ ಸಂಘದ ಮುಖಂಡರು.

ಗೋಕಾಕ: ಕಳೆದ ಎರಡು ವರ್ಷಗಳಿಂದ ನೆರೆ, ಅತಿವೃಷ್ಟಿ ಹಾಗೂ ಕೊರೋನಾ ಮಹಾಮಾರಿಯಿಂದ ಆರ್ಥಿಕವಾಗಿ ತತ್ತರಿಸಿರುವ ರೈತರಿಗೆ ಈಗ ಸಾಲ ತುಂಬುವಂತೆ ನೋಟಿಸು ನೀಡುತ್ತಿರುವ ಬ್ಯಾಂಕ್‍ನವರು ತಮ್ಮ ಕಾರ್ಯವನ್ನು ಕೂಡಲೇ ನಿಲ್ಲಿಸಬೇಕೆಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಒತ್ತಾಯಿಸಿದ್ದಾರೆ. ನಗರದ ತಹಶೀಲದಾರ ಕಾರ್ಯಾಲಯದಲ್ಲಿ ಸಾಲ ತುಂಬಲು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನವರು ರೈತರಿಗೆ ನೀಡುತ್ತಿರುವ ನೋಟಿಸ್‍ನ್ನು ತಹಶೀಲ್ದಾರರ ಗಮನಕ್ಕೆ ತಂದು ಅವರೊಂದಿಗೆ ಚರ್ಚಿಸಿ, ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, …

Read More »

ಹುಟ್ಟುಹಬ್ಬದ ಸಂಭ್ರಮದಲ್ಲಿ ಭೂಮಿ ಶೆಟ್ಟಿ

ನಟಿ ಭೂಮಿ ಶೆಟ್ಟಿ ಇಂದು ತಮ್ಮ 22ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭೂಮಿ ಶೆಟ್ಟಿ 2018ರಲ್ಲಿ ಪ್ರಸಾರವಾಗುತ್ತಿದ್ದ ‘ಕಿನ್ನರಿ’ ಧಾರಾವಾಹಿಯಲ್ಲಿ ನಟಿಸುವ ಮೂಲಕ ಎಲ್ಲರ ಮನೆಮಾತಾದರು. ಇವರು ಕನ್ನಡ ಅಲ್ಲದೇ ತೆಲುಗು ಧಾರಾವಾಹಿಯಲ್ಲೂ ಅಭಿನಯಿಸಿದ್ದಾರೆ.   2019 ರ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಸುವ ಮೂಲಕ ಭೂಮಿ ಶೆಟ್ಟಿ ಇನ್ನಷ್ಟು ಜನಪ್ರಿಯತೆ ಪಡೆದರು. ಭೂಮಿ ಶೆಟ್ಟಿ 1998 ಫೆಬ್ರವರಿ 19ರಂದು ಜನಿಸಿದ್ದು ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Read More »