Breaking News

ಕೋವಿಡ್ ನೆಗೆಟಿವ್ ವರದಿ ಇಲ್ಲದೇ ಬರುವ ಜನರು ಪರದಾಡುವಂತೆ ಆಗಿದೆ.

Spread the love

ಕಲಬುರಗಿ: ಕೋವಿಡ್ ಸೋಂಕಿನ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದ ಮಹಾರಾಷ್ಟ್ರ ಗಡಿ ಭಾಗದಲ್ಲಿ ಮಂಗಳವಾರ ಬಿಗಿ ಕ್ರಮ ವಹಿಸಲಾಗಿದ್ದು, ಕೋವಿಡ್ ನೆಗೆಟಿವ್ ವರದಿ ಇಲ್ಲದೇ ಬರುವ ಜನರು ಪರದಾಡುವಂತೆ ಆಗಿದೆ. ತಮ್ಮನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದ ಮಹಿಳೆಯೊಬ್ಬರಿಗೆ ಗಡಿ ಪ್ರದೇಶಿಸಲು ಅವಕಾಶ ನೀಡದೆ ತಡೆದ ಘಟನೆ ಜಿಲ್ಲೆಯ ಬಳ್ಳೂರ್ಗಿ ಚೆಕ್ ಪೋಸ್ಟ್ ನಲ್ಲಿ ನಡೆದಿದೆ.

ಮಹಾರಾಷ್ಟ್ರದಿಂದ ಅಫಜಲಪುರ ತಾಲೂಕಿನ ಬಳ್ಳೂರ್ಗಿ ಮಾರ್ಗವಾಗಿ ಮಹಿಳೆಯೊಬ್ಬರು, ವಿಜಯಪುರ ಜಿಲ್ಲೆಯ ಮೋರಟಗಿ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಸಹೋದರ ಅಂತ್ಯಕ್ರಿಯೆಗೆ ಹೊರಟಿದ್ದರು. ಈ ವೇಳೆ ಚೆಕ್ ಪೋಸ್ಟ್ ನಲ್ಲಿ ಮಹಿಳೆ ಸೇರಿ ಆಕೆಯ ಜೊತೆಗಿದ್ದವರನ್ನು ಅಧಿಕಾರಿಗಳು ತಡೆದು ತಪಾಸಣೆಗೆ ಒಳಪಡಿಸಿದರು.

ಈ ವೇಳೆ ಅವರಲ್ಲಿ ಕೋವಿಡ್ ನೆಗೆಟಿವ್ ವರದಿ ಇಲ್ಲದ ಕಾರಣ ರಾಜ್ಯ ಗಡಿ ಪ್ರವೇಶಿಸಲು ಮಹಿಳೆ ಸೇರಿ ಯಾರಿಗೂ ಬಿಡಲಿಲ್ಲ. ನನ್ನ ತಮ್ಮ ತೀರಿಕೊಂಡಿದ್ದಾರೆ. ಅಂತ್ಯಸಂಸ್ಕಾರಕ್ಕೆ ಹೊರಟ್ಟಿದ್ದೇವೆ. ದಯಮಾಡಿ ನಮ್ಮನ್ನು ಬಿಡಿ, ಕೊನೆಯ ಬಾರಿ ತಮ್ಮನ ಮುಖ ನೋಡುತ್ತೇನೆ ಎಂದು ಚೆಕ್ ಪೋಸ್ಟ್​ನಲ್ಲಿದ್ದ ತಹಶೀಲ್ದಾರರ ಮುಂದೆ ಮಹಿಳೆಯ ಪರಿಪರಿಯಾಗಿ ಬೇಡಿಕೊಂಡರು.


Spread the love

About Laxminews 24x7

Check Also

ಕಲ್ಯಾಣ ಕ್ರಾಂತಿಯ ಶರಣೆ ಕಲ್ಯಾಣಮ್ಮ‌ನ ಐಕ್ಯಸ್ಥಳ ದುಸ್ಥಿತಿಯಲ್ಲಿ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

Spread the love ಕಲ್ಯಾಣ ಕ್ರಾಂತಿಯ ಶರಣೆ ಕಲ್ಯಾಣಮ್ಮ‌ನ ಐಕ್ಯಸ್ಥಳ ದುಸ್ಥಿತಿಯಲ್ಲಿ; ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಜಗಜ್ಯೋತಿ ಬಸವಣ್ಣನವರ ನೇತೃತ್ವದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ