Breaking News

ರಾಜ್ಯ

ದೇವಸ್ಥಾನದ ಕಾಣಿಕೆ ಡಬ್ಬಿ ಕಳ್ಳತನ – ವಿಶ್ವಹಿಂದೂ ಪರಿಷತ್ ಸಂಚಾಲಕ ಅರೆಸ್ಟ್

ಮಂಗಳೂರು ಮಾರ್ಚ್ 8: ಬೈಕ್, ದೇವಸ್ಥಾನದ ಕಾಣಿಕೆ ಡಬ್ಬಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಂಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಂಟೆಪದವು ನಿವಾಸಿ ತಾರನಾಥ್ ಮೋಹನ್ ಎಂದು ಗುರುತಿಸಲಾಗಿದ್ದು, ಇತ ವಿಶ್ವಹಿಂದೂಪರಿಷತ್ ಹಾಗೂ ಬಜರಂಗದಳ ಉಳ್ಳಾಲ ಗ್ರಾಮಾಂತರ ಪ್ರಖಂಡದ ಸಂಚಾಲಕ ಎಂದು ತಿಳಿದು ಬಂದಿದೆ. ನಿನ್ನೆ ಮಧ್ಯರಾತ್ರಿ ಸಿಸಿಟಿವಿಯಲ್ಲಿ ದೊರೆತ ಮಾಹಿತಿ ಆಧಾರದಲ್ಲಿ ಸಾರ್ವಜನಿಕರೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಮಂಜನಾಡಿ ದೇವಸ್ಥಾನದಿಂದ ಕಾಣಿಕೆ ಡಬ್ಬಿ …

Read More »

ಬಾಲಕರಿಗೆ ಲೈಂಗಿಕ ಕಿರುಕುಳ ನೀಡಿದ್ದವನಿಗೆ 10 ವರ್ಷ ಜೈಲು; ಒಬ್ಬನ ಮೇಲೆಯೇ 21 ಪೋಕ್ಸೋ ಪ್ರಕರಣಗಳು

ಉಡುಪಿ: ಈತನ ಮೇಲಿದ್ದಿದ್ದು ಒಂದೆರಡು ಪ್ರಕರಣಗಳಲ್ಲ. ಬರೋಬ್ಬರಿ 21 ಪೋಕ್ಸೋ ಪ್ರಕರಣಗಳು. ಅಷ್ಟಕ್ಕೂ ಈತನ ಮೇಲೆ ಹೀಗೆ ಇಷ್ಟೊಂದು ಕೇಸುಗಳು ಬೀಳಲು ಕಾರಣ ಈತ ಬಾಲಕರಿಗೆ ನೀಡಿದ್ದ ಲೈಂಗಿಕ ಕಿರುಕುಳ. ಹೌದು.. ಬಾಲಕರಿಗೆ ಲೈಂಗಿಕವಾಗಿ ಕಿರುಕುಳು ನೀಡಿದ್ದ ಈ ವ್ಯಕ್ತಿಗೆ ನ್ಯಾಯಾಲಯ ಈಗ 10 ವರ್ಷ ಜೈಲುಶಿಕ್ಷೆ ವಿಧಿಸಿದೆ. ಈ ಆರೋಪಿಯ ಹೆಸರು ಚಂದ್ರ ಹೆಮ್ಮಾಡಿ. ಈತನ ಮೇಲೆ 21 ಪ್ರಕರಣಗಳಿದ್ದು, ಆ ಪೈಕಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ …

Read More »

Karnataka Budget 2021: ಶ್ರಮಿಕ ವರ್ಗ ಮರೆತ ಬಿಎಸ್‌ವೈ

ಸಾರ್ವಜನಿಕ ಆರೋಗ್ಯಕ್ಕೆ ಮುಂಚೆಗಿಂತ ಸ್ವಲ್ಪ ಹೆಚ್ಚು ಒತ್ತು ಕೊಟ್ಟಿರುವುದು ಬಜೆಟ್‌ನ ಸ್ವಾಗತಾರ್ಹ ಅಂಶ. ಇದು ಬಿಟ್ಟರೆ ಶ್ರಮಿಕ ಸಮುದಾಯಕ್ಕೆ ಕೇವಲ ನಿರಾಶೆ ತರುವ ಬಜೆಟ್‌. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಇತ್ತೀಚಿನ ಸಂಶೋಧನಾ ವರದಿಯ ಪ್ರಕಾರ, ನಗರದ ಅಸಂಘಟಿತ ಕ್ಷೇತ್ರದ ಕಾರ್ಮಿಕರಲ್ಲಿ ಶೇ 46ರಷ್ಟು ಮಂದಿಯ ಆದಾಯ ಕಡಿಮೆಯಾಗಿದೆ. ಈಗಲೂ ಶೇ 15ರಷ್ಟು ಕಾರ್ಮಿಕರು ಕೆಲಸವಿಲ್ಲದೆ ಇದ್ದಾರೆ. ಇದು ಇಡೀ ರಾಜ್ಯದ ಪರಿಸ್ಥಿತಿಯೂ ಹೌದು. ಈ ಸಮಸ್ಯೆ ಪರಿಹರಿಸುವ ಗೋಜಿಗೆ ಮುಖ್ಯಮಂತ್ರಿ …

Read More »

ದಿವಂಗತ ಮಾಜಿ IAS ಅಧಿಕಾರಿ ಡಿ.ಕೆ. ರವಿಯವರ ತಂದೆ ಕರಿಯಪ್ಪ(70) ಹೃದಯಾಘಾತದಿಂದ ವಿಧಿವಶ

ತುಮಕೂರು: ದಿವಂಗತ ಮಾಜಿ IAS ಅಧಿಕಾರಿ ಡಿ.ಕೆ. ರವಿಯವರ ತಂದೆ ಕರಿಯಪ್ಪ(70) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಕರಿಯಪ್ಪನವ್ರು ಕುಣಿಗಲ್ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದ ಸ್ವಗ್ರಹದಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವ್ರನ್ನ ಹುಲಿಯೂರು ದುರ್ಗದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಸೇರಿಸಲಾಯ್ತು. ನಂತ್ರ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕುಣಿಗಲ್​ʼನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದ್ರು, ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತದಿಂದ ರಾತ್ರಿ 8 ಗಂಟೆ ಸುಮಾರಿಗೆ ಮರಣಿಸಿದ್ದಾರೆ ಎನ್ನಲಾಗ್ತಿದೆ.

Read More »

ಶಾಕಿಂಗ್: ಪೋಷಕರ ಮಗ್ಗುಲಲ್ಲಿ ಮಲಗಿದ್ದ ಮಗುವನ್ನೇ ಕಚ್ಚಿ ಎಳೆದೊಯ್ದ ನಾಯಿ

ಹಾವೇರಿ: ಹಾವೇರಿ ಜಿಲ್ಲೆ ಗುತ್ತಲ ಸಮೀಪದ ಹೊಸರಿತ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪೋಷಕರ ಮಡಿಲಲ್ಲಿದ್ದ 10 ತಿಂಗಳ ಮಗುವನ್ನು ಬೀದಿ ನಾಯಿ ಕಚ್ಚಿಕೊಂಡು ಹೋಗಿದೆ. ಗಾಯಗೊಂಡ ಮಗುವನ್ನು ರಕ್ಷಿಸಿ ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನಂತರ ಹುಬ್ಬಳ್ಳಿಯ ಕಿಮ್ಸ್ ಗೆ ಸೇರಿಸಲಾಗಿದೆ. ಅಲೆಮಾರಿ ಸಮುದಾಯದ ದಂಪತಿಯ ಮಗು ಭಾನುವಾರ ರಾತ್ರಿ ಪೋಷಕರ ಜೊತೆ ಮಲಗಿದ್ದ ವೇಳೆಯಲ್ಲಿ ನಾಯಿ ಕಚ್ಚಿಕೊಂಡು ಹೋಗಿದೆ. ಈ ವೇಳೆ ಎಚ್ಚರಗೊಂಡ ದಂಪತಿ ಮಗುವನ್ನು …

Read More »

ಮುಂಬಯಿ ಎನ್‌ಸಿಬಿ ಅಧಿಕಾರಿಗಳು ಗೋವಾದ ಮೀರಾಮಾರ್ ಮತ್ತು ಆಜಗಾಂವನಲ್ಲಿ ದಾಳಿ ನಡೆಸಿ ಬೃಹತ್ ಪ್ರಮಾಣದ ಮಾದಕ ಪದಾರ್ಥಗಳನ್ನು ಜಫ್ತಿ ಮಾಡಿದ್ದಾರೆ.

ಪಣಜಿ: ಮುಂಬಯಿ ಎನ್‌ಸಿಬಿ ಅಧಿಕಾರಿಗಳು ಗೋವಾದ ಮೀರಾಮಾರ್ ಮತ್ತು ಆಜಗಾಂವನಲ್ಲಿ ದಾಳಿ ನಡೆಸಿ ಬೃಹತ್ ಪ್ರಮಾಣದ ಮಾದಕ ಪದಾರ್ಥಗಳನ್ನು ಜಫ್ತಿ ಮಾಡಿದ್ದಾರೆ. ಈ ಕುರಿತಂತೆ ಕ್ಷೇತ್ರೀಯ ಸಂಚಾಲಕ ಸಮೀರ್ ವಾನಖೇಡೆ ಮಾಹಿತಿ ನೀಡಿ- ಮುಂಬಯಿ ಎನ್‌ಸಿಬಿ ಅಧಿಕಾರಿಗಳು ಮಾದಕ ಪದಾರ್ಥ ಪ್ರಕರಣವೊಂದರಲ್ಲಿ ಶಂಕಿತರ ಶೋಧ ಕಾರ್ಯ ಕೈಗೆತ್ತಿಕೊಂಡಿದ್ದರು. ಈ ಶಂಕಿತರು ಗೋವಾದಲ್ಲಿರುವ ಮಾಹಿತಿಯ ಮೇರೆಗೆ ಗೋವಾದ ಮೀರಾಮಾರ್ ಮತ್ತು ಆಜಗಾಂವನಲ್ಲಿ ದಾಳಿ ನಡೆಸಿದರು. ಈ ಎರಡೂ ಸ್ಥಳಗಳಲ್ಲಿ ಬೃಹತ್ ಪ್ರಮಾಣದಲ್ಲಿ …

Read More »

ಒಟ್ಟು ೮.೨೫ ಲಕ್ಷ ರೂ.ದಷ್ಟು ಸಾಲ ಮಾಡಿದ್ದ ರೈತ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ

ಖಾನಾಪುರ: ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಕೃಷಿಕರೊಬ್ಬರು ಕ್ರಿಮಿನಾಶಕ ಔಷಧ ಸೇವಿಸಿ ಸಾವಿಗೆ ಶರಣಾದ ಘಟನೆ ಸೋಮವಾರ ವರದಿಯಾಗಿದೆ. ಗ್ರಾಮದ ಪ್ರಕಾಶ ವೀರಪ್ಪ ಹುಚ್ಚನವರ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಚಿಕ್ಕ ಹಿಡುವಳಿದಾರರಾಗಿದ್ದ ಪ್ರಕಾಶ ತಮ್ಮ ಜಮೀನಿನಲ್ಲಿ ಒಕ್ಕಲುತನ ಕೈಗೊಳ್ಳುವ ಸಲುವಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು. ನಿರೀಕ್ಷಿತ ಮಟ್ಟದಲ್ಲಿ ಫಸಲು ಕೈಗೆ ದೊರಕದೇ ಇದ್ದದ್ದಕ್ಕೆ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಅವರು ಕಳೆದ ಮಾ.೭ರಂದು ಸಂಜೆ ತಮ್ಮ ಮನೆಯಲ್ಲಿ …

Read More »

ಬೆಳಗಾವಿಯಲ್ಲಿ ಆತ್ಮನಿರ್ಭರ ಮಹಿಳೆ; ರೊಟ್ಟಿ ತಯಾರಿಸಿ 40 ಕುಟುಂಬಗಳಿಗೆ ಆಸರೆಯಾದ ಮಹಾದೇವಿ ಕಬ್ಬೂರು

ಬೆಳಗಾವಿ (ಮಾ. 7): ಗ್ರಾಮೀಣ ಭಾಗದಲ್ಲಿ ಹೆಣ್ಣು ಎಂದರೆ ಕೇವಲ ಅಡುಗೆ ಮಾಡೋದು ಮಕ್ಕಳು ಸಂಸಾರ ನೋಡಿಕೊಂಡು ಹೋಗುವವರೇ ಜಾಸ್ತಿ. ಆದರೆ, ಇಲ್ಲೋರ್ವ ಮಹಿಳೆ ತನ್ನ ಸಂಸಾರ ಜೊತೆಗೆ ಇತರೆ 40 ಜನರ ಸಂಸಾರಕ್ಕೂ ಆಸರೆಯಾಗಿದ್ದಾರೆ. ಅವರ ಒಂದೇ  ಒಂದು ಕೆಲಸ 40 ಕುಟುಂಬಗಳಿಗೆ ಆಸರೆಯಾಗಿದೆ. ಹಾಗಾದರೆ ಯಾರು ಆ ಮಹಿಳೆ? ಏನು ಆ ಕೆಲಸ ಅಂತೀರಾ? ಈ ಸ್ಟೋರಿ ಓದಿ… ‘ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು’ ಎಂಬ …

Read More »

ಮಂಗಳವಾರ ಬೆಳಗ್ಗೆ 9.30ಕ್ಕೆ ರಮೇಶ ಜಾರಕಿಹೊಳಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

  ಮಾ.2ರಂದು ರಮೇಶ ಜಾರಕಿಹೊಳಿ ಯುವತಿಯೊಂದಿಗೆ ರಾಸಲೀಲೆ ಮಾಡುತ್ತಿರುವ ವಿಡಿಯೋ ಬಹಿರಂಗವಾಗಿ ಭಾರಿ ಸುದ್ದಿಯಾಗಿತ್ತು. ಈ ಕುರಿತು ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಳ್ಳಿ ಪೊಲೀಸ್ ದೂರನ್ನು ಸಹ ದಾಖಲಿಸಿದ್ದರು. ಯುವತಿಗೆ ಕೆಲಸ ಕೊಡಿಸುವುದಾಗಿ ಹೇಳಿ ಲೈಂಗಿಕ ಶೋಷಣೆ ಮಾಡಲಾಗಿದೆ ಎಂದು ದೂರಲಾಗಿತ್ತು. ಆದರೆ ಇದು ನಕಲಿ ಸಿಡಿ ಎಂದು ರಮೇಶ ಜಾರಕಿಹೊಳಿ ಹೇಳಿದ್ದರು. ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಕೂಡ ಇದು ನಕಲಿ ಸಿಡಿ ಎಂದು ಹೇಳಿದ್ದಲ್ಲದೆ ಪ್ರಕರಣ ಕುರಿತು …

Read More »

ಬಿಗ್​ ಬಾಸ್​ನಲ್ಲಿ ನಿರ್ಮಲಾ ಚೆನ್ನಪ್ಪ ವಿಚಿತ್ರ ವರ್ತನೆಗೆ ಕಾರಣ ತಿಳಿಸಿದ ಪತಿ ಸರ್ದಾರ್​ ಸತ್ಯ!

ಬಿಗ್​ ಬಾಸ್​ ಕನ್ನಡ ಸೀಸನ್​ 8ರ ಮೊದಲ ವಾರದಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಸ್ಪರ್ಧಿ ಎಂದರೆ ಅದು ನಿರ್ಮಲಾ ಚೆನ್ನಪ್ಪ. ಎಲ್ಲ ಸದಸ್ಯರು ಒಂದು ಹಾದಿಯಲ್ಲಿ ಸಾಗಿದರೆ, ನಿರ್ಮಲಾ ಪ್ರತ್ಯೇಕ ಹಾದಿಯಲ್ಲಿ ಹೋಗುತ್ತಿದ್ದಾರೆ. ಅವರ ವರ್ತನೆ ಅನೇಕರಿಗೆ ಅಚ್ಚರಿ ಮೂಡಿಸಿದೆ. ಅದರ ಬಗ್ಗೆ ಅವರ ಪತಿ ಸರ್ದಾರ್ ಸತ್ಯ ಬಾಯಿ ಬಿಟ್ಟಿದ್ದಾರೆ. ದೊಡ್ಮನೆಯೊಳಗೆ ನಿರ್ಮಲಾ ಬಗ್ಗೆ ಇರುವ ಮೊದಲ ಮತ್ತು ಮುಖ್ಯವಾದ ಕಂಪ್ಲೆಂಟ್​ ಎಂದರೆ, ಅವರು ಕ್ಯಾಮರಾ ಎದುರು …

Read More »