ಗೋಕಾಕ : ಮನೆಯಲ್ಲಿ ಜಗಳವಾಡಿ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿದ್ದ ಮಹಿಳೆ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಗೋಕಾಕ ತಾಲ್ಲೂಕಿನ ಅರಭಾಂವಿಯ ಸಾವಿತ್ರಿ ರಾಜು ಬನಾಜ(30), ಪೂಜಾ (4) ಲಕ್ಷ್ಮಿ (2), ಮೃತರು. ಮನೆಯಲ್ಲಿ ಜಗಳವಾಡಿ ತಮ್ಮಇಬ್ಬರು ಮಕ್ಕಳನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ, ಕಾಣೆಯಾಗಿದ್ದರು. ಈ ಬಗ್ಗೆ ಗಂಡನ ಮನೆಯವರು ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದರು. ಆದ್ರೆ ಭಾನುವಾರ ಬೆಳಿಗ್ಗೆ ಗೋಕಾಕ …
Read More »ಗೋಕಾಕ: ಇಲ್ಲಿಯ ರೋಟರಿ ರಕ್ತ ಭಂಡಾರದಲ್ಲಿ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಬೃಹತ್ ರಕ್ತದಾನ ಶಿಬಿರಲ್ಲಿ ಪಾಲ್ಗೊಂಡ ಹಳೆಯ ವಿದ್ಯಾರ್ಥಿಗಳು.
ಗೋಕಾಕ : ಎಲ್ಲ ದಾನಗಳಲ್ಲಿ ಶ್ರೇಷ್ಠವಾದ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವಂತೆ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಅರ್ಥಪೂರ್ಣವಾದ ಸಾಮಾಜಿಕ ಕಳಿಕಳಿಯ ಮಾರ್ಗದಲ್ಲಿ ಜೀವನ ಸಾಗಿಸೋಣವೆಂದು ಇಲ್ಲಿಯ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಅಶೋಕ ಕೌಜಲಗಿ ಹೇಳಿದರು. ರವಿವಾರದಂದು ಇಲ್ಲಿಯ ರೋಟರಿ ರಕ್ತ ಭಂಡಾರದಲ್ಲಿ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಹಳೆಯ ವಿದ್ಯಾರ್ಥಿಗಳ ಸಂಘದ ಆಶ್ರಯದಲ್ಲಿ ರವಿವಾರ ದಿ. 21 ರಂದು ಇಲ್ಲಿಯ ಶುಭ …
Read More »ಆರೋಗ್ಯ ಇಲಾಖೆಯಿಂದ ನೂತನವಾಗಿ ಪ್ರಾರಂಭಿಸಲಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಚಿವ ರಮೇಶ ಜಾರಕಿಹೊಳಿ
ಗೋಕಾಕ: ಜನತೆ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿ, ಎಲ್ಲ ರೀತಿಯ ಸೌಲಭ್ಯಗಳೊಂದಿಗೆ ವಿಶೇಷ ಆಧುನಿಕ ತಂತ್ರಜ್ಞಾನ ಸಹಕಾರದೊಂದಿಗೆ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ರವಿವಾರದಂದು ನಗರದ ಗುರುವಾರ ಪೇಠೆಯಲ್ಲಿ ಆರೋಗ್ಯ ಇಲಾಖೆಯಿಂದ ನೂತನವಾಗಿ ಪ್ರಾರಂಭಿಸಲಾದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರೋಗ್ಯವಂತರಾಗಿರಿರೆಂದು ಕರೆ ನೀಡಿದರು. …
Read More »ಹೈಕಮಾಂಡ್ ನೋಟೀಸ್ ಗೂ ಹೆದರದಯತ್ನಾಳ್BSY ವಿರುದ್ಧ ಮತ್ತೆ ಕಿಡಿ
ತುಮಕೂರು: ಹೈಕಮಾಂಡ್ ನೋಟೀಸ್ ಗೂ ಹೆದರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದಾರೆ. ಯಡಿಯೂರಪ್ಪನವರಿಗೆ ಮೀಸಲಾತಿ ನೀಡಲು ಇಷ್ಟವಿಲ್ಲ. ಇಷ್ಟವಿದ್ದಿದ್ದರೆ ಹೀಗೆ ವಿಳಂಬ ಮಾಡುತ್ತಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ತುಮಕೂರಿನಲ್ಲಿ ಮಾತನಾಡಿದ ಯತ್ನಾಳ್, ಇವತ್ತಿನವರೆಗೂ ಆಯೋಗಕ್ಕೆ ನೀಡಿರುವ ಪತ್ರ ನೋಟೀಫಿಕೇಷನ್ ಆಗಿಲ್ಲ. ಸಿಎಂ ಅವರಿಗೆ ಮನಸ್ಸಿದ್ದರೆ ಪಂಚಮಸಾಲಿ, ವೀರಶೈವ ಲಿಂಗಾಯತ ಮೀಸಲಾತಿ ನೀಡಬಹುದಿತ್ತು. ಈ ಅಧಿಕಾರ ಸಿಎಂ ಕೈಲೇ ಇರುತ್ತದೆ ಎಂಬುದು ಎಲ್ಲರಿಗೂ …
Read More »ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಲೀಟರ್ ಪೆಟ್ರೋಲ್ ದರ 95.21 ರೂ
ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಿದ್ದು, ಇಂದು ಲೀಟರ್ ಪೆಟ್ರೋಲ್ ಬೆಲೆ 29 ಪೈಸೆ ಏರಿಕೆಯಾಗಿದ್ದರೆ ಡೀಸೆಲ್ ದರ 32 ಪೈಸೆ ಹೆಚ್ಚಳವಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳವಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆಯಾಗುವುದು ಸಾಮಾನ್ಯ. ಆದರೆ ಅಂತಾರಾಷ್ತ್ರಿಯ ಮಾರುಕಟ್ಟೆಯಲ್ಲಿ ತೈಲ ದರ ಹೆಚ್ಚಳವಾಗದಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ತೈಲ ದರ ಏರುತ್ತಲೇ ಇದೆ ಎನ್ನಲಾಗಿದೆ. ವಿವಿಧ ನಗರಗಳಲ್ಲಿ ಇಂದಿನ ಪೆಟ್ರೋಲ್ …
Read More »ಪ್ರೇಮಿಗಳ ದಿನವೇ ಎಸ್.ಎಂ. ಕೃಷ್ಣ ಮೊಮ್ಮಗನೊಂದಿಗೆ ಡಿಕೆಶಿ ಪುತ್ರಿ ಅದ್ಧೂರಿ ಮದುವೆ, ಗಣ್ಯರು ಭಾಗಿ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ದಿ. ಉದ್ಯಮಿ ಸಿದ್ದಾರ್ಥ್ ಹೆಗಡೆ ಪುತ್ರ ಅಮಾರ್ಥ್ಯ ಹೆಗಡೆ ಅವರ ವಿವಾಹ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮೊಮ್ಮಗ ಅಮಾರ್ಥ್ಯ ಹೆಗಡೆ ಮತ್ತು ಐಶ್ವರ್ಯಾ ಅವರ ಮದುವೆ ಪ್ರೇಮಿಗಳ ದಿನದಂದೇ ನೆರವೇರಲಿದೆ. ಡಿಕೆಶಿ ನಿವಾಸದಲ್ಲಿ ಮೆಹಂದಿ, ಸಂಗೀತ ಕಾರ್ಯಕ್ರಮ ನೆರವೇರಿದ್ದು ಸಂಭ್ರಮ ಸಡಗರ ಮನೆಮಾಡಿದೆ. ಇಂದು ಬೆಳಗ್ಗೆ 9.45 ಮುಹೂರ್ತದಲ್ಲಿ …
Read More »ಸಹಪಾಠಿಗಳ ಮೇಲೆ ಪುಂಡಾಟಿಕೆ ನಡೆಸುತ್ತಿದ್ದ ವಿದ್ಯಾರ್ಥಿಗೆ ಖಾಕಿಯಿಂದ ಕಪಾಳಮೋಕ್ಷ!
ಗದಗ: ಪುಂಡಾಟಿಕೆ ನಡೆಸುತ್ತಿದ್ದ ವಿದ್ಯಾರ್ಥಿಗೆ ಪೊಲೀಸರು ಕಪಾಳಮೋಕ್ಷ ಮಾಡಿರುವ ಪ್ರಸಂಗ ನಗರದ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದಲ್ಲಿ ವರದಿಯಾಗಿದೆ. ನಿಲ್ದಾಣದಲ್ಲಿ ಇತರೆ ವಿದ್ಯಾರ್ಥಿಗಳ ಮೇಲೆ ಈತ ಪುಂಡಾಟಿಕೆ ಮಾಡ್ತಿದ್ದ. ಇದಲ್ಲದೆ, ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಪುಂಡ ಹಲ್ಲೆ ಸಹ ನಡೆಸಿದ್ದ. ಇದನ್ನು ಗಮನಿಸಿ ಪ್ರಶ್ನೆ ಮಾಡಿದ್ದ ಸಾರಿಗೆ ಸಂಸ್ಥೆ ನೌಕರರಿಗೆ ಆವಾಜ್ ಸಹ ಹಾಕಿದ್ದ. ಈ ವೇಳೆ, ಗದ್ದಲ ಗಮನಿಸಿ ಸ್ಥಳಕ್ಕೆ ಬಂದ ಪೊಲೀಸರು ಪುಂಡನಿಗೆ ಸರಿಯಾಗಿ ಕಪಾಳಮೋಕ್ಷ …
Read More »ರೇಪ್ ಆರೋಪಿ ಆಟೋ ಚಾಲಕನಿಗೆ ಕ್ಷಮೆಯಾಚಿಸಿದ ಪೊಲೀಸ್ ಆಯುಕ್ತ: ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಾ!
ಹೈದರಾಬಾದ್: ತೆಲಂಗಾಣ ರಾಜ್ಯಾದ್ಯಂತ ಭಾರಿ ಸಂಚಲನ ಸೃಷ್ಟಿದ್ದ ಬಿ. ಫಾರ್ಮಸಿ ವಿದ್ಯಾರ್ಥಿನಿಯ ಅಪಹರಣ ಮತ್ತು ಅತ್ಯಾಚಾರ ನಡೆದಿದೆ ಎನ್ನಲಾದ ಪ್ರಕರಣದ ಅಸಲಿಯತ್ತನ್ನು ತೆಲಂಗಾಣ ಪೊಲೀಸರು ಬಹಿರಂಗಪಡಿಸಿದ್ದಾರೆ. ಅಸಲಿಗೆ ಈ ಪ್ರಕರಣ ನಾಟಕೀಯ ಎಂದು ತಿಳಿದುಬಂದಿದ್ದು, ನಾಟಕದ ಸೂತ್ರಧಾರಿಯೇ ಮನೆಯಿಂದ ಓಡಿ ಹೋದ ಯುವತಿಯದ್ದಾಗಿದೆ. ಯುವತಿಯ ತಾಯಿ ದೂರು ನೀಡಿದ ಕೇವಲ ಎರಡೇ ಗಂಟೆಯಲ್ಲಿ ಪ್ರಕರಣವನ್ನು ರಾಚಕೊಂಡ ಪೊಲೀಸರು ಭೇದಿಸಿದ್ದಾರೆ. ಫೆ. 10ರಂದು ಆರ್ಎಲ್ ನಗರದಿಂದ ಪೊಲೀಸ್ ಸಹಾಯವಾಣಿ 100ಗೆ ಕರೆ …
Read More »15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
ಕೊಪ್ಪ: 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಅಸ್ಸಾಂನ ವ್ಯಕ್ತಿಯ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಶನಿವಾರ ಪ್ರಕರಣ ದಾಖಲಾಗಿದೆ. ‘ಸಂತ್ರಸ್ತೆಯೂ ಅಸ್ಸಾಂನವಳಾಗಿದ್ದು, ಆಕೆಯ ಕುಟುಂಬ ಎಸ್ಟೇಟ್‌ವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದೆ. ಹತ್ತಿರದಲ್ಲೇ ವಾಸವಿದ್ದ ಆರೋಪಿಯು ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿರುವ ಕುರಿತು ಆಕೆಯ ಪೋಷಕರು ಠಾಣೆಗೆ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Read More »2 ಹೆಚ್ ಪಿ ಮೋಟರ್ ವಶಕ್ಕೆ ಆರೋಪಿಯ ಬಂಧನ
ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯ ಸಾಯಿನಗರ ಕ್ಯಾಂಪ್ ಬಡಾವಣೆಯ ಸಮಾಂತರ ಪ್ರದೇಶದ ಹೊಲದಲ್ಲಿನ ನೀರು ಎತ್ತುವ ಮೋಟರ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು 24 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುದನೂರ(ಕೆ) ಗ್ರಾಮದ ಮಲಕಪ್ಪ ಹೇಳವರ ಬಂಧಿತ ಆರೋಪಿ. ಬಂಧಿತನಿಂದ 13 ಸಾವಿರ ಮೌಲ್ಯದ 2 ಎಚ್‌ಪಿ ಮೋಟರ್ ನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳ್ಳತನ ಪ್ರಕರಣ ದಾಖಲಿಸಿಕೊಂಡ ಕೆಂಭಾವಿ …
Read More »
Laxmi News 24×7