Breaking News
Home / ರಾಜ್ಯ / 10ನೇ ತರಗತಿ ಪಾಸಾದವರಿಗೆ Reserve Bank Of India ನಲ್ಲಿ ಉದ್ಯೋಗಾವಕಾಶ

10ನೇ ತರಗತಿ ಪಾಸಾದವರಿಗೆ Reserve Bank Of India ನಲ್ಲಿ ಉದ್ಯೋಗಾವಕಾಶ

Spread the love

ನವದೆಹಲಿ: RBI Vaccancies – ಭಾರತೀಯ ರಿಸರ್ವ್ ಬ್ಯಾಂಕ್ (RBI)ನಲ್ಲಿ ಉದ್ಯೋಗ (RBI Vacancies Latest News) ಮಾಡಲು ಬಯಸುವವರಿಗೆ ಇಲ್ಲಿದೆ ಒಂದು ಸುವರ್ಣಾವಕಾಶ. RBI ಖಾಲಿ ಇರುವ ಆಫೀಸ್ ಅಟೆಂಡೆಂಟ್ಸ್ ಹುದ್ದೆಗಳ ಭರ್ತಿಗಾಗಿ (RBI Office Attendant Recruitment 2021) ಅಧಿಕೃತ ಅಧಿಸೂಚನೆ ಜಾರಿಗೊಳಿಸಿದೆ. ಅರ್ಜಿ ಪ್ರಕ್ರಿಯೆಯನ್ನು RBI ತನ್ನ ಅಧಿಕೃತ ವೆಬ್‌ಸೈಟ್ rbi.org.in ನಲ್ಲಿ 24 ಫೆಬ್ರವರಿ 2021 ರಿಂದ ಪ್ರಾರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಮಾರ್ಚ್ 2021. ಈ ಪ್ರಕ್ರಿಯೆಯ ಮೂಲಕ ಖಾಲಿ ಇರುವ ಸುಮಾರು 841 (RBI Vacancies) ಅಟೆಂಡೆಂಟ್ಸ್ ಗಳ ಭರ್ತಿ (Government Job) ನಡೆಯಲಿದೆ, ಸಂಪೂರ್ಣ ವಿವರ ಇಲ್ಲಿದೆ.

ಇಲ್ಲಿವೆ ಮಹತ್ವಪೂರ್ಣ ದಿನಾಂಕಗಳು
ಆನ್‌ಲೈನ್ ಅಪ್ಲಿಕೇಶನ್‌ಗೆ ಪ್ರಾರಂಭ ದಿನಾಂಕ: 24 ಫೆಬ್ರವರಿ 2021
ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ: 15 ಮಾರ್ಚ್ 2021
ಆನ್‌ಲೈನ್ ಶುಲ್ಕ ಸಲ್ಲಿಕೆಗೆ ಕೊನೆಯ ದಿನಾಂಕ: 15 ಮಾರ್ಚ್ 2021
ಆನ್‌ಲೈನ್ ಪರೀಕ್ಷೆಯ ಸಂಭವನೀಯ ದಿನಾಂಕ: ಏಪ್ರಿಲ್ 9 ಮತ್ತು ಏಪ್ರಿಲ್ 10 ಇರುವ ಸಾಧ್ಯತೆ.

ವಿದ್ಯಾರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿ (SSLC) ಪಾಸಾಗಿರಬೇಕು.

ವಯೋಮಿತಿ
ಈ ಹುದ್ದೆಗಳಿಗೆ (RBI Recruitment 2021) ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಗಳು 18 ವರ್ಷದಿಂದ 25 ವರ್ಷ ವಯಸ್ಸಿನವರಾಗಿರಬೇಕು. 1 ಫೆಬ್ರವರಿ 2021 ರಂತೆ ವಯಸ್ಸನ್ನು ಲೆಕ್ಕಹಾಕಲಾಗುವುದು. ಅಂದರೆ, ಅಭ್ಯರ್ಥಿಗಳು ಫೆಬ್ರವರಿ 2, 1996 ರ ಮೊದಲು ಮತ್ತು ಫೆಬ್ರವರಿ 1, 2003 ರ ನಂತರ ಜನಿಸಿರಬಾರದು. ಮೀಸಲು ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿಯಲ್ಲಿ ಸಡಿಲಿಕೆಯ ಅವಕಾಶವಿದೆ. ವಿವರವಾದ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಅಧಿಸೂಚನೆಯನ್ನು ಪರಿಶೀಲಿಸಬಹುದು.

ಪರೀಕ್ಷೆಯ ಪ್ಯಾಟರ್ನ್ ಹೇಗಿರಲಿದೆ?
ಆನ್‌ಲೈನ್ ಲಿಖಿತ ಪರೀಕ್ಷೆಯಲ್ಲಿ 120 ಐಚ್ಚಿಕ್ ಪ್ರಶ್ನೆಗಳನ್ನು ಕೇಳಲಾಗುತ್ತದೆ. ತಾರ್ಕಿಕ, ಸಾಮಾನ್ಯ ಇಂಗ್ಲಿಷ್, ಜನರಲ್ ಅವೇರ್ ನೆಸ್ ಮತ್ತು ಸಂಖ್ಯಾ ಸಾಮರ್ಥ್ಯದ ಪ್ರಶ್ನೆಗಳು ಇದರಲ್ಲಿ ಶಾಮೀಲಾಗಿವೆ. ಪ್ರತಿ ಪ್ರಶ್ನೆಗೆ 1 ಅಂಕವನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಯ ಅವಧಿ 90 ನಿಮಿಷಗಳು. ಆನ್‌ಲೈನ್ ಲಿಖಿತ ಪರೀಕ್ಷೆಯೂ ಕೂಡ ನೆಗೆಟಿವ್ ಮಾರ್ಕಿಂಗ್ ಇರುತ್ತದೆ ಎಂಬುದನ್ನು ಅಭ್ಯರ್ಥಿಗಳು ನೆನಪಿನಲ್ಲಿಡಬೇಕು. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಡಿತಗೊಳಿಸಲಾಗುತ್ತದೆ. ಪರೀಕ್ಷೆಯ ಮಾದರಿಯ ವಿವರವಾದ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.


Spread the love

About Laxminews 24x7

Check Also

ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ’ : ನಿರ್ಮಲಾ ಸೀತಾರಾಮನ್ ಘೋಷಣೆ

Spread the loveನವದೆಹಲಿ : ಲೋಕಸಭಾ ಚುನಾವಣೆಯಲ್ಲಿ ಖರ್ಚು ಮಾಡಲು ಹಣವಿಲ್ಲದ ಕಾರಣ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹಣಕಾಸು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ