Breaking News

ರಾಜ್ಯ

ಸಿದ್ರಾಮಯ್ಯ ಹೌದು ಹುಲಿಯಾ ಆಗಿ ಉಳಿದಿಲ್ಲ, ʻಹೌದು ಇಲಿಯಾʼ ಆಗಿದ್ದಾರೆ: ಅಶೋಕ್‌ ಲೇವಡಿ

ಬೆಂಗಳೂರು: ಸಿದ್ದರಾಮಯ್ಯ ʻಹೌದು ಹುಲಿಯಾʼ ಆಗಿ ಉಳಿದಿಲ್ಲ. ಅವರೀಗ ಹೌದು ಇಲಿಯಾ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸಿಎಂಗೆ ವಿಧಾನಸಭೆಯಲ್ಲಿ ಕಾಲೆಳೆದರು. ರಾಜ್ಯಪಾಲರ ಭಾಷಣ ಮೇಲೆ ಚರ್ಚೆ ನಡೆಸಿದ ಆರ್ ಅಶೋಕ್, ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡ್ರು. ಸಿಎಂ ಡಲ್ ಆಗಿದ್ದಾರೆ, ಮೊದಲಿನ ಹಾಗಿಲ್ಲ. ಆಡಳಿತದಲ್ಲಿ ಬಿಗಿ ಇಲ್ಲ. ʻಹೌದು ಹುಲಿಯಾ ಆಗಿ ಅವ್ರು ಉಳಿದಿಲ್ಲ, ಹೌದು ಇಲಿಯಾʼ ಆಗಿದ್ದಾರೆ. ಲೂಟಿಕೋರ …

Read More »

ವಿಕಸಿತ ಭಾರತ ಪರಿಕಲ್ಪನೆಯ ಕೇಂದ್ರದ ಬಜೆಟ್:ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

ಬೆಳಗಾವಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಬಜೆಟ್‌ನಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯ ದೂರದೃಷ್ಟಿತ್ವ, ವಿಕಸಿತ ಭಾರತದ ಕಲ್ಪನೆ ಮತ್ತಷ್ಟು ಅರಳಿದೆ ಎಂದು ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೇಂದ್ರದ ಬಜೆಟ್ ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ದೇಶದ ಜಿಡಿಪಿಯ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡಿರುವುದು ಇದರಲ್ಲಿ ಕಂಡುಬರುತ್ತದೆ. ಕೃಷಿ, ಶಿಕ್ಷಣ, ಆರೋಗ್ಯ, ಹೂಡಿಕೆ, ಮೂಲಭೂತ ಸೌಕರ್ಯ, ಜವಳಿ ಉದ್ಯಮ, ಐಟಿ ಬಿಟಿಗಳಿಗೆ …

Read More »

ಸೆಂಟ್ರಲ್ ಬಜೆಟ್‌ನಿಂದ ರಾಜ್ಯಕ್ಕೆ ಯಾವ ಅನುಕೂಲ ಆಗಿಲ್ಲ- ಡಿಕೆಶಿ

ರಾಮನಗರ: ಬಜೆಟ್‌ನಿಂದ ( ರಾಜ್ಯಕ್ಕೆ ಯಾವ ಅನುಕೂಲ ಆಗಿಲ್ಲ. ಬಜೆಟ್‌ನಿಂದ ನಮ್ಮ ರಾಜ್ಯಕ್ಕೆ ಯಾವುದೇ ದೊಡ್ಡ ಪಾಲು ಬಂದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಕೇಂದ್ರ ಬಜೆಟ್ ಘೋಷಣೆ ಬಗ್ಗೆ ಕನಕಪುರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಇಷ್ಟೊತ್ತು ಗಮನಿಸಿದೆ, ಈಗೇನೋ ಯಾವುದೋ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಟ್ಟಿದ್ದಾರೆ. ನಾವು ಮನರೇಗಾ ಹೆಸರಲ್ಲಿ ನಮ್ಮ ಕ್ಷೇತ್ರದಲ್ಲೇ ಮ್ಯಾರಥಾನ್ ಮಾಡಿದ್ದೇವೆ. ಮನರೇಗಾ ಬದಲಾವಣೆ ವಾಪಸ್ ತೆಗೆದುಕೊಳ್ಳಲಿ. ಹಿಂದೆ ಯಾವ ಸ್ಕೀಂ …

Read More »

ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡ್ತೀವಿ: ಸಿದ್ದರಾಮಯ್ಯ

ರಾಯಚೂರು: ಜಾತಿಗಣತಿ ವರದಿ ಇನ್ನೊಂದು ತಿಂಗಳಲ್ಲಿ ಬಿಡುಗಡೆ ಮಾಡುತ್ತೇವೆ. ಬಹಳ ಹೆಚ್ಚು ಅಂದ್ರೆ ಎರಡು ತಿಂಗಳಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಯಚೂರಿನ ದೇವದುರ್ಗದ ತಿಂಥಣಿ ಬ್ರಿಡ್ಜ್ ಕನಕಗುರು ಪೀಠದಲ್ಲಿ ಆಯೋಜಿಸಿದ್ದ ಸಿದ್ದರಾಮನಂದ ಸ್ವಾಮಿ ಪುಣ್ಯಾರಾಧನೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವರದಿ ಕೊಟ್ಟ ನಂತರ ನಮ್ಮ ಸರ್ಕಾರ ಚರ್ಚೆ ಮಾಡಿ ಅಂಗಿಕಾರ ಮಾಡುತ್ತದೆ. ಕುರುಬ ಸಮಾಜವನ್ನ ಎಸ್‌ಟಿಗೆ ಸೇರಿಸುವ ವಿಚಾರವಾಗಿ ಎಸ್‌ಸಿ, ಎಸ್‌ಟಿಗೆ ಸೇರಿಸುವುದು ಕೇಂದ್ರ ಸರ್ಕಾರ. ನಾವು …

Read More »

ಆಂಬ್ಯುಲೆನ್ಸ್​ನಲ್ಲಿಯೇ ಹೆರಿಗೆ ಮಾಡಿಸಿದ ಚಾಲಕ,

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಮನ ಮಿಡಿಯುವ ಘಟನೆ ನಡೆದಿದೆ. ಆಂಬ್ಯುಲೆನ್ಸ್​ ಚಾಲಕ ಮಾಡಿರುವ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೂಡಿಗೆರೆಯಲ್ಲಿ ಅಸ್ಸಾಂ ಮೂಲದ ಅಸ್ಮಿಯಾ ಆಂಬ್ಯುಲೆನ್ಸ್​ನಲ್ಲೇ ಹೆರಿಗೆಗೊಳಗಾಗಿದ್ದಾರೆ. ಚಾಲಕ ಆರೀಫ್ ಸಮಯ ಪ್ರಜ್ಞೆಯಿಂದ ತಾಯಿ ಮಗು ಇಬ್ಬರೂ ಸುರಕ್ಷಿತವಾಗಿ ಆಸ್ಪತ್ರೆ ತಲುಪಿದ್ದಾರೆ. ಅಂದ ಹಾಗೆ ಇವರು ಅಸ್ಸಾಂ ಮೂಲದ ಕೂಲಿ ಮಾಡುವ ಮಹಿಳೆ. ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದು, ತುಂಬು ಗರ್ಭಿಣಿಯಾಗಿದ್ದರು. ಭಾನುವಾರ ತೀರಾ …

Read More »

ಮಕ್ಕಳ ಜೊತೆಗೆ ಮಕ್ಕಳಾದ ಡಿಸಿ ಮಕ್ಕಳಿಗೆ ಚನ್ನಾಗಿ ಅಭ್ಯಾಸ ಮಾಡಿ, ನನ್ನಂತೆ ಜಿಲ್ಲಾಧಿಕಾರಿ ಆಗುವಂತೆ ಸ್ಫೂರ್ತಿ

ಕಳೆದ 11 ವರ್ಷಗಳಿಂದ ಒಕ್ಕುಂದ ಉತ್ಸವ ಆಚರಿಸುತ್ತಿರುವ ಗ್ರಾಮಸ್ಥರನ್ನು ಶ್ಲಾಘಿಸಿದ ಡಿಸಿ ಮೊಹಮ್ಮದ್ ರೋಷನ್ ಅವರು ಬರುವ ವರ್ಷ ಇದು ಸರ್ಕಾರಿ ಉತ್ಸವ ಆಗಲಿದೆ ಎಂದಿದ್ದಾರೆ. ಬೆಳಗಾವಿ: “ಒಕ್ಕುಂದ ಗ್ರಾಮದ ಐತಿಹಾಸಿಕ ತ್ರಿಕೂಟೇಶ್ವರ ಮಂದಿರ ಜೀರ್ಣೋದ್ಧಾರಪಡಿಸಿ, ಪ್ರಸಿದ್ಧ ಪ್ರವಾಸಿ ತಾಣ ಮಾಡಲಾಗುವುದು. ಮುಂಬರುವ ವರ್ಷ ಒಕ್ಕುಂದ ಉತ್ಸವ ಸರ್ಕಾರದಿಂದಲೇ ಆಚರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು” ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭರವಸೆ ನೀಡಿದರು. ಭಾನುವಾರ ತಿರುಳ್ಗನ್ನಡನಾಡು ಒಕ್ಕುಂದ ಉತ್ಸವ …

Read More »

ನಾನಂತೂ ಅಕ್ಷರ ಕಲಿಯಲಿಲ್ಲ…ಬೇರೆ ಮಕ್ಕಳು ವಂಚಿತಾರಗಬಾರದೆಂದು ಜಮೀನು ದಾನ ಮಾಡಿದ ಸಚಿವರ ತಾಯಿ

ಗಂಗಾವತಿ: ತಮ್ಮ ಜೀವನದಲ್ಲಿ ಅಕ್ಷರ ಕಲಿಯದಿದ್ದರೂ ಪರ್ವಾಗಿಲ್ಲ.. ಆದರೆ, ಮಕ್ಕಳು ಅಕ್ಷರದಿಂದ ವಂಚಿತರಾಗಬಾರದು ಎಂಬ ಆಶಯ ಹೊಂದಿದ ಹಿರಿಯ ಜೀವವೊಂದು ತಮ್ಮ ಹೆಸರಲ್ಲಿದ್ದ ಒಂದು ಎಕರೆ ಜಮೀನು ಸರ್ಕಾರಿ ಶಾಲೆಗೆ ದಾನ ಮಾಡಿದೆ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ಮುಖ್ಯ ಎಂದರಿತು ಬಡತನದಲ್ಲಿ ಬೆಂದರೂ ಈ ಹಿಂದೆ ಕೊಪ್ಪಳ ಜಿಲ್ಲೆಯ ಕುಣಿಕೇರಿಯ ಹುಚ್ಚಮ್ಮ ಚೌದರಿ ತಮ್ಮ ಜಮೀನು ದಾನ ಮಾಡಿ ಗಮನ ಸೆಳೆದಿದ್ದರು. ಇದೀಗ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ …

Read More »

ಕೇಂದ್ರ ಬಜೆಟ್ ಸ್ವಾಗತಿಸಿದ FKCCI ಅಧ್ಯಕ್ಷೆ ಉಮಾ ರೆಡ್ಡಿ

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘಗಳ ಒಕ್ಕೂಟವು 2026–27ರ ಕೇಂದ್ರ ಬಜೆಟ್ ಅನ್ನು ಸ್ವಾಗತಿಸಿದ್ದು, ಇದು ಹಣಕಾಸಿನ ಶಿಸ್ತನ್ನು ಕಾಯ್ದುಕೊಳ್ಳುವುದರೊಂದಿಗೆ ಆರ್ಥಿಕ ಬೆಳವಣಿಗೆಗೆ ಸ್ಪಷ್ಟ ನಿರ್ದೇಶನವನ್ನು ನೀಡುತ್ತದೆ ಎಂದು ಹೇಳಿದೆ. ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ FKCCI ಅಧ್ಯಕ್ಷೆ ಉಮಾ ರೆಡ್ಡಿ, “ಉತ್ಪಾದನೆ, ಐಟಿ ವಲಯ, MSME ಹಣಕಾಸು, ಮೂಲಸೌಕರ್ಯ ಅಭಿವೃದ್ಧಿ ಮತ್ತು ವ್ಯವಹಾರ ಪ್ರಕ್ರಿಯೆಗಳ ಸರಳೀಕರಣದ ಮೇಲೆ ಕೇಂದ್ರೀಕರಿಸುವ ಮೂಲಕ ಬಜೆಟ್ ಉದ್ಯಮದ ಪ್ರಮುಖ ಕಾಳಜಿಗಳಿಗೆ ಸ್ಪಂದಿಸುತ್ತದೆ” ಎಂದು ಹೇಳಿದರು.

Read More »

ಬೆಳಗಾವಿ ಹಾಕಿ ತಂಡಕ್ಕೆ ಶುಭ ಹಾರೈಕೆ: ಜಿಲ್ಲಾ ತಂಡಗಳ ಭರ್ಜರಿ ಬೀಳ್ಕೊಡುಗೆ!

• ಬೆಳಗಾವಿ ಜಿಲ್ಲಾ ಹಾಕಿ ತಂಡದ ಆಯ್ಕೆ • ಲೇಲೆ ಮೈದಾನದಲ್ಲಿ ಕ್ರೀಡಾಪಟುಗಳ ಸಂಭ್ರಮ • ರಮಾಕಾಂತ್ ಕೊಂಡುಸ್ಕರ್ ಅವರಿಂದ ಶುಭ ಹಾರೈಕೆ • ಗೆಲುವಿನ ಸಂಕಲ್ಪದೊಂದಿಗೆ ಹೊರಟ ಹಾಕಿ ತಂಡ ಬೆಳಗಾವಿಯ ಟಿಳಕವಾಡಿಯ ಲೇಲೆ ಮೈದಾನದಲ್ಲಿ ಇಂದು ಹಾಕಿ ಬೆಳಗಾವಿ ವತಿಯಿಂದ ಜಿಲ್ಲೆಯನ್ನು ಪ್ರತಿನಿಧಿಸುವ ಹಾಕಿ ತಂಡಗಳಿಗೆ ಭವ್ಯ ಬೀಳ್ಕೊಡುಗೆ ನೀಡಲಾಯಿತು. ಮುಂಬರುವ ಪಂದ್ಯಾವಳಿಗಳಿಗಾಗಿ ಸಜ್ಜಾಗಿರುವ ಕ್ರೀಡಾಪಟುಗಳ ಆತ್ಮವಿಶ್ವಾಸ ಹೆಚ್ಚಿಸಲು ಗಣ್ಯರು ಹರಸಿದರು. ಬೆಳಗಾವಿ ಜಿಲ್ಲೆಯನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ …

Read More »

ಮೆಗಾಮಾರ್ಟ್‌‌ನಲ್ಲಿ ಯುವಕರಿಬ್ಬರ ಕಳ್ಳತನ; ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ

ಮೆಗಾಮಾರ್ಟ್‌‌ನಲ್ಲಿ ಯುವಕರಿಬ್ಬರ ಕಳ್ಳತನ; ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ ಮೆಗಾಮಾರ್ಟ್‌ಗೆ ಬಂದಿದ್ದ ಯುವಕರಿಬ್ಬರು ಬೆಲೆಬಾಳುವ ವಸ್ತುಗಳನ್ನ ಕದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಅಗರವಾಲ್ ಮೆಗಾ ಮಾರ್ಟ್‌‌ಗೆ ಖರೀದಿ ನೆಪದಲ್ಲಿ ಬಂದ ಯುವಕರು ಬೆಲೆಬಾಳುವ ಚಾಕೋಲೆಟ್, ಬೂಸ್ಟ್ ಡಬ್ಬಿ ಸೇರಿ ಬೆಲೆಬಾಳುವ ಗೃಹ ಉಪಯೋಗಿ ಕದ್ದು ತಮ್ಮ ಒಳ ಉಡುಪುಗಳಲ್ಲಿ ಅಡಗಿಸಿಕೊಂಡಿದ್ದಾರೆ‌. ಬಳಿಕ ಕಡಿಮೆ ವಸ್ತುವಿಗೆ ಪೇ ಮಾಡಿ ತೆರಳಿದ್ದಾರೆ. ಅನುಮಾನಗೊಂಡು ನೋಡಿದಾಗ ಸಿಸಿಟಿವಿಯಲ್ಲಿ …

Read More »