Breaking News

ನಾನಂತೂ ಅಕ್ಷರ ಕಲಿಯಲಿಲ್ಲ…ಬೇರೆ ಮಕ್ಕಳು ವಂಚಿತಾರಗಬಾರದೆಂದು ಜಮೀನು ದಾನ ಮಾಡಿದ ಸಚಿವರ ತಾಯಿ

Spread the love

ಗಂಗಾವತಿ: ತಮ್ಮ ಜೀವನದಲ್ಲಿ ಅಕ್ಷರ ಕಲಿಯದಿದ್ದರೂ ಪರ್ವಾಗಿಲ್ಲ.. ಆದರೆ, ಮಕ್ಕಳು ಅಕ್ಷರದಿಂದ ವಂಚಿತರಾಗಬಾರದು ಎಂಬ ಆಶಯ ಹೊಂದಿದ ಹಿರಿಯ ಜೀವವೊಂದು ತಮ್ಮ ಹೆಸರಲ್ಲಿದ್ದ ಒಂದು ಎಕರೆ ಜಮೀನು ಸರ್ಕಾರಿ ಶಾಲೆಗೆ ದಾನ ಮಾಡಿದೆ.

ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣವೇ ಮುಖ್ಯ ಎಂದರಿತು ಬಡತನದಲ್ಲಿ ಬೆಂದರೂ ಈ ಹಿಂದೆ ಕೊಪ್ಪಳ ಜಿಲ್ಲೆಯ ಕುಣಿಕೇರಿಯ ಹುಚ್ಚಮ್ಮ ಚೌದರಿ ತಮ್ಮ ಜಮೀನು ದಾನ ಮಾಡಿ ಗಮನ ಸೆಳೆದಿದ್ದರು. ಇದೀಗ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಿಗೆಮ್ಮ ತಮ್ಮ ಹೆಸರಲ್ಲಿರುವ ಜಮೀನನ್ನು ಸರ್ಕಾರಿ ಶಾಲೆಗೆ ನೀಡಿ ಮಾದರಿಯಾಗಿದ್ದಾರೆ.

ಕನಕಗಿರಿ ವಿಧಾನಸಭಾ ಕ್ಷೇತ್ರದ ನವಲಿ ಹೋಬಳಿಯ ಆದಾಪುರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಸರಿಯಾದ ಶೈಕ್ಷಣಿಕ ಸೌಲಭ್ಯಗಳು ಇಲ್ಲದಿರುವುದನ್ನು ಗಮನಿಸಿದ ಹುಲಿಗೆಮ್ಮ, ತಮ್ಮ ಹೆಸರಲಿದ್ದ ಒಂದು ಎಕರೆ ಜಮೀನು ದಾನ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಿದ್ದಾರೆ.

ಶಾಲೆಯ ಮಕ್ಕಳ ಆಟೋಟಕ್ಕೆ ಮೈದಾನದ ಕೊರತೆ, ಪ್ರೌಢ, ಉನ್ನತ ಶಿಕ್ಷಣಕ್ಕೆ ಜಾಗದ ಕೊರತೆಯ ಬಗ್ಗೆ ತಿಳಿದ ಹುಲಿಗೆಮ್ಮ, ನವಲಿ ಹೋಬಳಿಯ ಆದಾಪುರ ಗ್ರಾಮದ ಸರ್ವೆ ನಂಬರ್ 86/1/9ರಲ್ಲಿ 01 ಎಕರೆಯ ಭೂಮಿ ಖರೀದಿಸಿ ದಾನವಾಗಿ ನೀಡಿದ್ದಾರೆ. ಈ ಮೂಲಕ ಶೈಕ್ಷಣಿಕ ಅಭಿವೃದ್ಧಿ ಮತ್ತು ಮೂಲಸೌಕರ್ಯಗಳ ವಿಸ್ತರಣೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ