Breaking News
Home / ರಾಜಕೀಯ (page 735)

ರಾಜಕೀಯ

2ಡಿ ಮೀಸಲಾತಿ ನಿರ್ಣಯ ತಿರಸ್ಕಾರ, ಪ್ರಭಾವಿಗಳ ಹೆಸರು ಬಹಿರಂಗ: ಮೃತ್ಯುಂಜಯ ಶ್ರೀ

ಬೆಳಗಾವಿ: ‘ಸುವರ್ಣ ವಿಧಾನಸೌಧದಲ್ಲಿ ಡಿ.29ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ ಘೋಷಿಸಿದ್ದ 2ಡಿ ಮೀಸಲಾತಿಗೆ ಇಂದಿಗೂ ಅಧಿಸೂಚನೆ ಹೊರಡಿಸದ್ದರಿಂದ ಆ ನಿರ್ಣಯ ತಿರಸ್ಕರಿಸಿದ್ದೇವೆ’ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಂಗಳವಾರ ತಿಳಿಸಿದ್ದಾರೆ.   ಅಲ್ಲದೇ, ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ಗೆ ಸಮನಾದ ಮೀಸಲಾತಿ ಕಲ್ಪಿಸಲು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಎರಡು ದಿನಗಳ ಗಡುವನ್ನೂ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಾಲ್ಮೀಕಿ ಸಮುದಾಯದ ಬೇಡಿಕೆ …

Read More »

‘ಕಾಂಗ್ರೆಸ್ ಪಕ್ಷ’ ಅಧಿಕಾರಕ್ಕೆ ಬಂದರೇ ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತ – ಡಿಕೆ ಶಿವಕುಮಾರ್ ಘೋಷಣೆ

ಚಿಕ್ಕೋಡಿ: ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಬದುಕಿನಲ್ಲಿ ಮತ್ತೆ ಬೆಳಕು ತರುವ ದೃಷ್ಟಿಯಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ಇಂದು ಆರಂಭಿಸಿದ ಪ್ರಜಾಧ್ವನಿ ಯಾತ್ರೆ ನಿಮಿತ್ತ ಚಿಕ್ಕೋಡಿಯಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಇದೊಂದು ಐತಿಹಾಸಿಕ ದಿನ. ಕಾಂಗ್ರೆಸ್ ಪಕ್ಷ ರಾಜ್ಯದ …

Read More »

ವೈಜ್ಞಾನಿಕ ಮನೋಭಾವ ಮೂಡಿಸಿ’

ಗೋಕಾಕ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ಅವರನ್ನು ವಿಜ್ಞಾನಿಗಳಾಗುವಂತೆ ಪ್ರೇರೇಪಿಸಬೇಕು ಎಂದು ಮಯೂರ ಆಂಗ್ಲ ಮಾಧ್ಯಮ ಶಾಲೆ ಉಪಾಧ್ಯಕ್ಷೆ ಸಂಧ್ಯಾ ಲಖನ್ ಜಾರಕಿಹೊಳಿ ಹೇಳಿದರು. ನಗರದ ಮಯೂರ ಶಾಲೆಯಲ್ಲಿ ಮಂಗಳವಾರ ವಾರ್ಷಿ ಸ್ನೇಹ ಸಮ್ಮೇಳನ ನಿಮಿತ್ತ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವೈಜ್ಞಾನಿಕ ಯುಗದಲ್ಲಿ ವಿಜ್ಞಾನ ಹೆಚ್ಚಿನ ಮಹತ್ವ ಪಡೆದಿದೆ. ವಿದ್ಯಾರ್ಥಿಗಳು ವಿಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿಯೊಬ್ಬರಲ್ಲೂ ಪ್ರತಿಭೆ ಹುದುಗಿದ್ದು ಅದನ್ನು ಗುರುರಿಸಿ …

Read More »

ಗ್ರಾಮೀಣ ಪ್ರದೇಶಕ್ಕೆ ಅಧಿಕ ಬಜೆಟ್ ಹಂಚಿಕೆ ಮಾಡಲಾಗುತ್ತಾ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023ರಂದು 2023-2024ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಈ ವರ್ಷದ ಬಜೆಟ್‌ 2024ರ ಲೋಕಸಭೆ ಚುನಾವಣೆಗೂ ಮುನ್ನ ಬರುತ್ತಿದೆ. ಅದರಿಂದಾಗಿ ಬಜೆಟ್ ನಿರೀಕ್ಷೆ ಹೆಚ್ಚೇ ಇದೆ. ಸರ್ಕಾರವು ಚುನಾವಣಾ ನೆಲೆಯಲ್ಲಾದರೂ ಗ್ರಾಮೀಣ ಪ್ರದೇಶದ ಬೆಳವಣಿಗೆ ಹೆಚ್ಚಿನ ಬಜೆಟ್ ಹಂಚಿಕೆ ಮಾಡಬಹುದು ಎಂಬ ನಿರೀಕ್ಷೆಗಳಿದೆ. ಮಧ್ಯಮ ವರ್ಗದ ಮಾಸಿಕ ವೇತನ ಪಡೆಯುವ ವರ್ಗವು ಸರ್ಕಾರವು ಆದಾಯ ತೆರಿಗೆ …

Read More »

ನಾನು ಬಿಜೆಪಿ ಕಾರ್ಯಕರ್ತ, ವರ್ಗಾವಣೆ ದಂಧೆ ನಿಜ ಎಂದು ಒಪ್ಪಿಕೊಂಡಿದ್ದ ಸ್ಯಾಂಟ್ರೋ ರವಿ

ಮೈಸೂರು: ಕುಖ್ಯಾತ ಕ್ರಿಮಿನಲ್‌, ರಾಜಕಾರಣಿಗಳು, ಅಧಿಕಾರಿಗಳ ಅಪ್ತ ಸಖನೆಂದು ಗುರುತಿಸಿಕೊಂಡಿರುವ ಮೈಸೂರಿನ ಕೆ.ಎಸ್‌. ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ (Santro Ravi Case) ತಾನೇ ಸ್ವತಃ ಈ ವಿಚಾರಗಳನ್ನು ಒಪ್ಪಿಕೊಂಡಿದ್ದಾನೆ. ತಾನೊಬ್ಬ ಬಿಜೆಪಿ ಕಾರ್ಯಕರ್ತ, ಪೊಲೀಸ್‌ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರ ವರ್ಗಾವಣೆ ಮಾಡಿಸಿದ್ದು ನಿಜ. ವೇಶ್ಯಾವಾಟಿಕೆ ದಂಧೆಯ ಆರೋಪವಿರುವುದು ನಿಜ ಎಂದೆಲ್ಲ ಲಿಖಿತವಾಗಿ ಒಪ್ಪಿಕೊಂಡಿದ್ದಾನೆ. ೨೦೨೨ರ ಜನವರಿ ೨೨ರಂದು ಪ್ರಕರಣವೊಂದು ದಾಖಲಾದಾಗ ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಸ್ವತಃ …

Read More »

ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಯಾರು? ಇಲ್ಲಿದೆ ಕುತೂಹಲಕರ ಮಾಹಿತಿ

ಬೆಂಗಳೂರು, ಜನವರಿ 11: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಈಗಾಗಲೇ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸುವಲ್ಲಿ ನಿರತವಾಗಿವೆ. ಜೆಡಿಎಸ್‌ 93 ಅಭ್ಯರ್ಥಿಗಳನ್ನು ಘೋಷಿಸಿದೆ. ಸಂಕ್ರಾಂತಿ ಸಮಯದಲ್ಲಿ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಹೊರತರಲು ಸಿದ್ದತೆ ಮಾಡಿಕೊಂಡಿದೆ. ಆಡಳಿತಾರೂಢ ಬಿಜೆಪಿ ಪಕ್ಷ ಫೆಬ್ರವರಿ ಅಂತ್ಯದಲ್ಲಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಬಹುದು. ಆ ಹೊತ್ತಿಗೆ ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳು ಹೊರಬಂದಿರುತ್ತವೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ …

Read More »

ಗ್ರಾಮಗಳಿಗೆ ಶ್ಮಶಾನ ಜಾಗ: ವರದಿ ಸಲ್ಲಿಸಲು ಸಮಯ ಕೇಳಿದ ಸರ್ಕಾರ

ಬೆಂಗಳೂರು: ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಶವ ಸಂಸ್ಕಾರಕ್ಕೆ ಶ್ಮಶಾನ ಜಾಗ ಒದಗಿಸಿರುವ ಬಗ್ಗೆ ಸಮಗ್ರ ವರದಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡುವಂತೆ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.   ರಾಜ್ಯದ ಎಲ್ಲಾ ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಿಗೆ ಶವಸಂಸ್ಕಾರಕ್ಕೆ ಶ್ಮಶಾನ ಜಾಗ ಒದಗಿಸುವಂತೆ 2019ರ ಆಗಸ್ಟ್‌ 20ರಂದು ಹೈಕೋರ್ಟ್‌ ನೀಡಿದ್ದ ಆದೇಶ ಸರ್ಕಾರ ಪಾಲಿಸಿಲ್ಲ ಎಂದು ದೂರಿ ಬೆಂಗಳೂರು ನಿವಾಸಿ ಮಹಮ್ಮದ್‌ ಇಕ್ಬಾಲ್‌ ಎಂಬುವರು ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ …

Read More »

ಜನಾರ್ದನ ರೆಡ್ಡಿ ಆಸ್ತಿ ಜಪ್ತಿ: ಸರ್ಕಾರದ ನಿಲುವು ಕೇಳಿದ ಹೈಕೋರ್ಟ್‌

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತವರ ಕುಟುಂಬಕ್ಕೆ ಸೇರಿದ ಹೆಚ್ಚುವರಿ ಆಸ್ತಿಗಳನ್ನು ಜಪ್ತಿ ಮಾಡುವ ಸಂಬಂಧ ಸಿಬಿಐ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸಲು ಸರ್ಕಾರ ಕಾಲಾವಕಾಶ ಕೋರಿದೆ.   ಸಿಬಿಐ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ಆಸ್ತಿ ಜಪ್ತಿಗೆ ಅನುಮತಿ ಕೋರಿ ಸಿಬಿಐ ಅರ್ಜಿ ಸಲ್ಲಿಸಿ 5 ತಿಂಗಳಾದರೂ ಮನವಿ ಪರಿಗಣಿಸದಿರಲು …

Read More »

ಸ್ಯಾಂಟ್ರೋ ರವಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕಾಂಗ್ರೆಸ್ ನಿಂದ ಸಿಎಂ ಬೊಮ್ಮಾಯಿ ಪುತ್ರನ ಜೊತೆಗಿನ ವಾಟ್ಸಾಪ್ ಚಾಟ್ ರಿಲೀಸ್

ಬೆಂಗಳೂರು: ಸ್ಯಾಂಟ್ರೋ ರವಿಯ ಸ್ವೀಟ್ ( Santro Ravi ) ಬ್ರದರ್ ಆಗಿರುವ ಸಿಎಂ ಪುತ್ರ ಮತ್ತು ರವಿಯ ವಾಟ್ಸಾಪ್ ಮೆಸೇಜ್‌ಗಳು ಹಲವು ಪ್ರಶ್ನೆಗಳನ್ನ ಎತ್ತುತ್ತವೆ. ಎಲ್ಲಾ ಬ್ರೋಕರ್‌ಗಳನ್ನು ಮ್ಯಾನೇಜ್ ಮಾಡುವ ಜವಾಬ್ದಾರಿ ಸಿಎಂ ಪುತ್ರನದ್ದೇ? ಸಿಎಂ ಪಾಲಿನ ಕಮಿಷನ್ ವ್ಯವಹಾರ ನೋಡಿಕೊಳ್ಳುವುದು ಪುತ್ರನೇ? ಸ್ವತಃ ಸಿಎಂ ರವಿಯ ರಕ್ಷಣೆಗೆ ನಿಂತಿದ್ದಾರೆಯೇ ಬಿಜೆಪಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಟ್ವಿಟ್ ನಲ್ಲಿ ( Twitter ) …

Read More »

ವಿಧಾನಸಭೆ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ.? ಮಧು ಬಂಗಾರಪ್ಪ ಹೇಳಿಕೆ

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನಾಲಾಯಕ್ ವ್ಯಕ್ತಿ. ಅಭಿವೃದ್ಧಿ ವಿಚಾರ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳುತ್ತಾರೆ ಎಂದು ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಟೀಕಿಸಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕೇವಲ ಹಿಂದುತ್ವದಿಂದ ಜನರ ಹೊಟ್ಟೆ ತುಂಬುವುದಿಲ್ಲ. ಕಾಂಗ್ರೆಸ್ ಪಕ್ಷ ಯಾವತ್ತೂ ಭಾವನಾತ್ಮಕವಾಗಿ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ನಟ ಶಿವರಾಜ್ ಕುಮಾರ್ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಒಲವಿಲ್ಲ. ಆದರೆ, ಗೀತಕ್ಕ ಚುನಾವಣೆಯಲ್ಲಿ ನನ್ನ …

Read More »