ಬೆಂಗಳೂರು: ಹಣ್ಣು, ತರಕಾರಿ ಸರಬರಾಜಿನಲ್ಲಿ ತೊಂದರೆ ಆಗದಂತೆ ಕ್ರಮ ವಹಿಸಿ ಎಂದು ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವರು ರೈತರಿಂದ ನೇರವಾಗಿ ರೈತರ ಉತ್ಪನ್ನಗಳನ್ನು ಆಯ್ದ ಭಾಗಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಹಾಪ್ ಕಾಮ್ಸ್ ಸಹಯೋಗದೊಂದಿಗೆ ತೋಟಗಾರಿಕಾ ಇಲಾಖೆಯಿಂದ ಮೊಬೈಲ್ ವ್ಯಾನ್‍ಗಳ ಮೂಲಕ ಮನೆಮನೆಗೆ ಹಣ್ಣು, ತರಕಾರಿ ಮಾರಾಟ …
Read More »ಭಾರತದಲ್ಲಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಕೊರೋನಾ ಸೋಂಕಿತರ ಸಂಖ್ಯೆ..! ಮಹಾಮಾರಿಗೆ 34 ಮಂದಿ ಬಲಿ..!
ನವದೆಹಲಿ : ಮಹಾಮಾರಿ ಕೊರೋನಾ ವೈರಸ್ ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿದ್ದು, ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಸೋಮವಾರ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಲ್ಲಿ ಮತ್ತೆ ಇಬ್ಬರು ಮೃತಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ಜತೆಗೆ, ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ದೇಶದಲ್ಲಿ ಕೊರೊನಾ ಈಗಲೂ ಸ್ಥಳೀಯ ಹರಡುವಿಕೆ ಹಂತದಲ್ಲಿ ಇದೆಯಷ್ಟೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ …
Read More »ಕೊರೊನಾಗೆ ಹೆದರಿದ ಕೈದಿಗಳು – ತಪಾಸಣೆ ಮಾಡುವಂತೆ ಆಗ್ರಹಿಸಿ ಉಪವಾಸ
ಬೆಂಗಳೂರು: ಕೊರೊನಾ ಸೋಂಕು ಇಡೀ ವಿಶ್ವವನ್ನೇ ಭಯಪಡಿಸಿದೆ. ಇದೀಗ ಜೈಲಿನಲ್ಲಿರುವ ಕೈದಿಗಳು ಕೂಡ ತಮಗೆಲ್ಲಿ ಕೊರೊನಾ ಬರುತ್ತೋ ಅಂತ ಹೆದರಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಪ್ರತಿದಿನ ಬರುವ ವಿಚಾರಾಣಾಧೀನ ಕೈದಿಗಳನ್ನು ತಪಾಸಣೆ ಮಾಡಿ ನಂತರ ಕಾರಾಗೃಹಕ್ಕೆ ಎಂಟ್ರಿ ನೀಡಬೇಕು. ಅಲ್ಲದೇ ಬ್ಯಾರಕ್‍ಗಳಲ್ಲಿ ಮಿತಿಗಿಂತ ಹೆಚ್ಚಿರುವ ಕೈದಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಉಪವಾಸ ಸತ್ಯಾಗ್ರಹ ಮಾಡಿ ಪ್ರತಿಭಟಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಈ …
Read More »2 ವರ್ಷದ ಮಗು ಸೇರಿ ಒಂದೇ ಕುಟುಂಬದ 25 ಮಂದಿಗೆ ಕೊರೊನಾ
ಮುಂಬೈ: 2 ವರ್ಷದ ಗಂಡು ಮಗು ಸೇರಿ ಒಂದೇ ಕುಟುಂಬದ 25 ಜನರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಈ ಕುಟುಂಬದ ನಾಲ್ಕು ಜನರು ಸೌದಿ ಅರೇಬಿಯಾದ ಹಜ್ ಯಾತ್ರೆಗೆ ಹೋಗಿ ವಾಪಸ್ ಆಗಿದ್ದರು. ಈ ನಾಲ್ವರಿಗೆ ಮಾರ್ಚ್ 19ರಂದು ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ಆಗ ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ನಾಲ್ವರನ್ನು ಮಾರ್ಚ್ 19ರಂದು …
Read More »ಲಾಠಿ ಬಿಟ್ಟ ಖಾಕಿ – ಮನೆ, ಮನೆಗೆ ತೆರಳಿ ಕೊರೊನಾ ಜಾಗೃತಿ
ಚಿಕ್ಕಮಗಳೂರು: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕಿತರಿಂದ ದೇಶವೇ ಲಾಕ್‍ಡೌನ್ ಆಯ್ತು. ಆದರೆ ಜನಸಾಮಾನ್ಯರು ಪರಿಸ್ಥಿತಿಯನ್ನ ಅವಲೋಕಿಸದೆ ಬೇಕಾಬಿಟ್ಟಿ ಮನೆಯಿಂದ ಹೊರಬಂದು ಓಡಾಡುತ್ತಿದ್ದಾರೆ. ಹೀಗಾಗಿ ಪೊಲೀಸರು ಮನೆ-ಮನೆಗೆ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಮೊದಲಿಗೆ ಪೊಲೀಸರು ಎಲ್ಲಾ ರೀತಿಯಲ್ಲೂ ಮನವಿ ಮಾಡಿದ್ದರು. ಕೈಮುಗಿದು ಕೇಳಿಕೊಂಡಿದ್ದರು, ಕೊನೆಗೆ ಲಾಠಿಯಿಂದ ಹೊಡೆಯಲು ಶುರು ಮಾಡಿದ್ದರು. ಇದರಿಂದ ಪೊಲೀಸರ ವರ್ತನೆ ತೀವ್ರ ವಿರೋಧ ಹಾಗೂ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸರು …
Read More »ಕೊರೊನಾ ಎಫೆಕ್ಟ್ – ಸಿಇಟಿ ಪರೀಕ್ಷೆ ಮುಂದೂಡಿಕೆ
ಬೆಂಗಳೂರು: ದೇಶದಲ್ಲಿ ಕೊರೊನಾ ಎಫೆಕ್ಟ್ ಜಾಸ್ತಿಯಾದ ಕಾರಣ ಮುಂದಿನ ತಿಂಗಳು ನಿಗದಿಯಾಗಿದ್ದ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಏಪ್ರಿಲ್ 22 ರಿಂದ 24ವರೆಗೆ ಸಿಇಟಿ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದ ಪ್ರಧಾನಿ ಮೋದಿ ಅವರು ದೇಶವನ್ನು ಏಪ್ರಿಲ್ 14ವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಕೊರೊನಾ ವೈರಸ್ ದೇಶದಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ದಿನೇ ದಿನೇ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ ಇಂದು ಕರ್ನಾಟಕ ಪರೀಕ್ಷಾ …
Read More »100ಕ್ಕೂ ಹೆಚ್ಚು ಜನರಿಗೆ ಊಟ ಹಾಕಿದ ಧಾರವಾಡ ಎಸ್‍ಪಿ – ಸ್ವತಃ ನಿಂತು ಊಟ ಬಡಿಸಿದ್ರು
ಧಾರವಾಡ: ಕೊರೊನಾ ಭೀತಿಯಿಂದ ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಸೇರಿದಂತೆ ಕರ್ತವ್ಯದ ಮಧ್ಯೆಯೂ ಅನೇಕ ಪೊಲೀಸರು ಊಟ ಹಾಕಿ ಮಾನವೀಯತೆ ಮೆರೆದಿದ್ದಾರೆ. ಶಿವಮೊಗ್ಗದಿಂದ ರಾಜಸ್ಥಾನಕ್ಕೆ ನಡೆದುಕೊಂಡೇ ಹೊರಟಿದ್ದ ಅನೇಕ ಕಾರ್ಮಿಕರು ಹಾಗೂ ಕಾರಿನಲ್ಲಿ ಹೊರಟಿದ್ದ ರಾಜಸ್ಥಾನ ಮೂಲದ ಕುಟುಂಬಗಳಿಗೆ ತೆಗೂರ ಬಳಿ ಖುದ್ದು ಎಸ್‍ಪಿಯೇ ಊಟ ಬಡಿಸಿ ಎಲ್ಲರ ಉಪಚಾರ ಮಾಡಿದರು. ಬೆಳಗಾವಿ ರಸ್ತೆಗೆ ಸಂಪರ್ಕ ಕಲ್ಪಿಸುವ ಟೋಲ್ ಗೇಟ್‍ನಲ್ಲಿ ಕೂಲಿ …
Read More »ಕುರಿ ಮೇಯಿಸಲು ಅವಕಾಶ ಕಲ್ಪಿಸಬೇಕು: ಸಿದ್ದರಾಮಯ್ಯ
ಬೆಂಗಳೂರು: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕುರಿ ಮೇಯಿಸಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳ ಬಳಿ ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ಕುರಿ ಮೇಯಿಸಲು ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ. “ಕುರಿಗಳಿಂದ ಕೊರೊನಾ ಸೋಂಕು ತಗಲಲಿದೆ ಎಂಬ ತಪ್ಪು ಕಲ್ಪನೆಯಿಂದ ಸಿರಾ, ಚಿಕ್ಕನಾಯ್ಕನಹಳ್ಳಿ, ಹಿರಿಯೂರು, ಮಧುಗಿರಿ, ಹೊಸದುರ್ಗ ಕಡೆ ಜನ ಕುರಿಗಳನ್ನು …
Read More »ಜನರ ಓಡಾಟಕ್ಕೆ ಬ್ರೇಕ್ ಹಾಕಲು ಡ್ರೋಣ್ ಬಳಕೆ- ರಾಯಚೂರು ಪೊಲೀಸರ ಹೊಸ ಪ್ರಯತ್ನ
ರಾಯಚೂರು: ಎಷ್ಟು ಹೇಳಿದರೂ ಜನ ಹೊರಗಡೆ ಓಡಾಡುವುದನ್ನ ಕಡಿಮೆ ಮಾಡುತ್ತಿಲ್ಲ. ಹೀಗಾಗಿ ಜನರ ಓಡಾಟ ತಡೆಯಲು ರಾಯಚೂರಿನಲ್ಲಿ ಡ್ರೋಣ್ ಬಳಕೆ ಮಾಡಲಾಗುತ್ತಿದೆ. ರಾಯಚೂರು ಪೊಲೀಸರಿಂದ ವಿನೂತನ ಕ್ರಮಕ್ಕೆ ಚಾಲನೆ ಸಿಕ್ಕಿದ್ದು, ಬಡಾವಣೆ, ಓಣಿಗಳಲ್ಲಿ ಜನ ಗುಂಪುಗುಂಪಾಗಿ ಸೇರುವುದನ್ನ ತಡೆಯಲು ಡ್ರೋಣ್ ಬಳಕೆ ಮಾಡಲಾಗುತ್ತಿದೆ. ಡ್ರೋಣ್ ಶಬ್ದಕ್ಕೆ ಹೆದರಿ ಜನ ಚದುರಿ ಹೋಗುತ್ತಿದ್ದಾರೆ. ಹೋಗದಿರುವವರನ್ನ ಪೊಲೀಸರು ಹಿಡಿದುಕೊಂಡು ಹೋಗುತ್ತಾರೆ. ಜಿಲ್ಲೆಯಲ್ಲಿ 50 ಚೆಕ್ ಪೋಸ್ಟ್ ಮಾಡಿದ್ದರೂ ಜನ ಸಂದಣಿ ನಿಯಂತ್ರಣವಾಗುತ್ತಿರಲಿಲ್ಲ. ಕೊರೊನಾ …
Read More »ಕಿಮ್ಸ್ ಸಿಬ್ಬಂದಿಯಿಂದ್ಲೇ ಮಾಸ್ಕ್ ಕಳ್ಳತನ
ಹುಬ್ಬಳ್ಳಿ: ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸಿಬ್ಬಂದಿಯೇ ಮಾಸ್ಕ್ ಬಾಕ್ಸ್ ಅನಧಿಕೃತವಾಗಿ ಕಳ್ಳತನ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕಿಮ್ಸ್ ಸಿಬ್ಬಂದಿ ಫಾತಿಮಾ ಸೈಯದ್ ಎಂಬವರೇ ಕಿಮ್ಸ್ ಆಸ್ಪತ್ರೆಯಿಂದ ಮಾಸ್ಕ್ ಬಾಕ್ಸ್ ಕಳ್ಳತನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಿಮ್ಸ್ ಆಡಳಿತ ಮಂಡಳಿ ನೋಟಿಸ್ ನೀಡಿದೆ. ಮೇಲಾಧಿಕಾರಿ ಅನುಮತಿಯಿಲ್ಲದೇ ಮುಖ್ಯ ಔಷಾಧಾಲಯದಿಂದ 100 ಮಾಸ್ಕ್ ಇದ್ದ ಬಾಕ್ಸ್ ತೆಗೆದುಕೊಂಡು ಹೊಗಿದ್ದ ಫಾತಿಮಾ. ಕಿಮ್ಸ್ ಅಧಿಕಾರಿಗಳು ಕೇಳಿದ್ರೆ …
Read More »
Laxmi News 24×7