ರಾಯಚೂರು: ಮಳೆಯ ಅಬ್ಬರ ಜೋರಾಗಿರೋ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಇಂದು ಅವಾಂತರ ಸೃಷ್ಟಿಯಾಗಿತ್ತು. ಮಂತ್ರಾಲಯದ ಮದುವೆ ಮಂಟಪಕ್ಕೆ ಮಳೆ ನೀರು ನುಗ್ಗಿದ್ದರಿಂದ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ್ದರಿಂದ ಮದುವೆಗೆ ಬಂದಿದ್ದ ಜನರು ಫಜಿತಿಗೆ ಸಿಲುಕಿದ್ರು. ಇನ್ನು ಮಂತ್ರಾಲಯದಲ್ಲಿನ ಕರ್ನಾಟಕ ಭವನಕ್ಕೂ ಮಳೆ ನೀರು ನುಗ್ಗಿತ್ತು. ರಸ್ತೆ ತುಂಬಾ ನೀರು ನಿಂತಿದ್ದರಿಂದ ವಾಹನ ಸವಾರರೂ ಪರದಾಟ ನಡೆಸಿದ್ರು. ಅಲ್ಲದೇ ಕೆಲವು ವಾಹನ ಸವಾರರು ನೀರಿನಲ್ಲಿ ಗಾಡಿ ಚಲಾಯಿಸುವ ದುಸ್ಸಾಹಸ …
Read More »ಜೀವಂತ ಪುಟ ಎನಿಸಿದ ಹಂಪಿ
ಚರಿತ್ರೆಯ ಜೀವಂತ ಪುಟ ಎನಿಸಿದ ಹಂಪಿಯನ್ನು ನೀವು ಹೀಗೆ ನೋಡಿರುವುದು ಸಾಧ್ಯವೇ ಇಲ್ಲಬಿಡಿ. ಮುಂಗಾರಿನ ಮೊದಲ ಮಳೆ ಸುರಿದ ಕೆಲವು ದಿನಗಳ ಬಳಿಕ ಸೆರೆಸಿಕ್ಕ ಚಿತ್ರಗಳಿವು. ಆಗತಾನೆ ತಲೆಸ್ನಾನ ಮಾಡಿ, ಎಳೆ ಬಿಸಿಲಿಗೆ ಮೈಯೊಡ್ಡಿದ ಯುವತಿಯಂತೆ ಸ್ಮಾರಕಗಳೆಲ್ಲ ಫಳ ಫಳ ಹೊಳೆಯುತ್ತಿದ್ದವು. ಅವುಗಳ ಆವರಣದಲ್ಲಿ ಬೆಳೆಸಲಾದ ಗಿಡ-ಬಳ್ಳಿಗಳು ಗಾಢ ಹಸಿರುಬಣ್ಣದ ಎಲೆಗಳನ್ನು ತೊಟ್ಟು, ಮೊಗ್ಗುಗಳನ್ನು ಮೈತುಂಬಾ ಧರಿಸಿಕೊಂಡು ನಿಂತಿದ್ದವು. ಸ್ಮಾರಕಗಳ ಲ್ಯಾಂಡ್‌ಸ್ಕೇಪ್ ಚಿತ್ರಗಳನ್ನು, ಆ ಸ್ಮಾರಕಗಳ ಜತೆಯಲ್ಲೇ ಬಾಳಿ ಬದುಕುವ …
Read More »ಸಾವು ಸಂಭವಿಸಿದ 20 ನಿಮಿಷಗಳ ಬಳಿಕ ಮತ್ತೆ ಜೀವ ಪಡೆದ ವ್ಯಕ್ತಿ,ಪುನಃ ಜೀವ ಬಂದಿದ್ದಾದರೂ ಹೇಗೆ?
ಸಾವಿನ ನಂತರ ಜನರು ಎಲ್ಲಿಗೆ ಹೋಗುತ್ತಾರೆ ಮತ್ತು ಅಲ್ಲಿ ಏನಾಗುತ್ತದೆ? ಎರಡನೇ ಜನ್ಮ (Second Life) ಸಿಗುತ್ತದೆಯೇ? ಮರಣದ ನಂತರದ ಪ್ರಯಾಣವನ್ನು ಜನ್ಮ ಕರ್ಮದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆಯೇ? ಇಂತಹ ಎಲ್ಲಾ ಪ್ರಶ್ನೆಗಳು ಜನರ ಮನಸ್ಸಿನಲ್ಲಿ ಸುತ್ತುತ್ತಿರುತ್ತವೆ.. ಆದರೆ ಸಾವಿನ ನಂತರ ಏನಾಗುತ್ತದೆ ಎಂಬ ಪ್ರಶ್ನೆಗೆ ಇಲ್ಲಿಯವರೆಗೆ ಯಾರೂ ಉತ್ತರಿಸಲು ಸಾಧ್ಯವಾಗಿಲ್ಲ. ಈ ಪ್ರಶ್ನೆಗಳಿಗೆ ಉತ್ತರವನ್ನು ಸಾವಿನ ನಂತರ ನಮ್ಮ ನಡುವೆ ಜೀವಂತವಾಗಿ ಬರುವವನು ವ್ಯಕ್ತಿ ಮಾತ್ರ ನೀಡಬಹುದು (Life …
Read More »ಒಬ್ಬನಿಗೆ ಅಪ್ಪ-ಅಮ್ಮನ ಬಗ್ಗೆ ಪ್ರೀತಿ, ಇನ್ನೊಬ್ಬನಿಗೆ ದ್ವೇಷ; ಇಬ್ಬರೂ ಸೇರಿ ಮಾಡಿದ್ರು ಬ್ಯಾಂಕ್ ಲೂಟಿ!
ನವದೆಹಲಿ: ಅಪ್ಪ-ಅಮ್ಮನನ್ನು ಮೆಚ್ಚಿಸುವ ಸಲುವಾಗಿ ಯುವಕನೊಬ್ಬ ಬ್ಯಾಂಕ್ ಲೂಟಿ ಮಾಡಿದ್ದು, ಆತನಿಗೆ ಅಪ್ಪ-ಅಮ್ಮನ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂಬ ಉದ್ದೇಶವಿದ್ದ ಇನ್ನೊಬ್ಬ ಕೈಜೋಡಿಸಿದ್ದಾನೆ. ಕೊನೆಗೆ ಇವರಿಬ್ಬರೂ ತಾವಂದುಕೊಂಡಿದ್ದನ್ನು ಮಾಡುವುದರಲ್ಲಿ ಯಶಸ್ವಿಯಾಗಿದ್ದರೂ, ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಹದಿನೆಂಟು ವರ್ಷದ ಅಜಯ್ ಬಜಾರೆ ಹಾಗೂ ಪ್ರದೀಪ್ ಠಾಕೂರ್ ಎಂಬಿಬ್ಬರು ಜೊತೆಯಾಗಿ ಈ ಲೂಟಿಯಲ್ಲಿ ಪಾಲ್ಗೊಂಡಿದ್ದಾರೆ. ಮಹಾರಾಷ್ಟ್ರದ ಇಂದಿರಾಗಾಂಧಿ ನಗರದ ಬರಾನಲ್ ಸ್ಕ್ವೇರ್ನಲ್ಲಿರುವ ಕೋ-ಆಪರೇಟಿವ್ ಬ್ಯಾಂಕೊಂದರಲ್ಲಿ ಇವರಿಬ್ಬರೂ ಸೇರಿ 4.78 ಲಕ್ಷ ರೂಪಾಯಿ …
Read More »ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದುವೆ ನಡೆಸಲು ಅನುಮತಿ: ಜಿಲ್ಲಾಧಿಕಾರಿ
ಮಂಗಳೂರು: ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಛತ್ರ, ಹೊಟೇಲ್, ರೆಸಾರ್ಟ್, ಸಭಾಂಗಣಗಳಲ್ಲಿ ಮದುವೆ ಕಾರ್ಯಕ್ರಮ ನಡೆಸಲು ಇಂದಿನಿಂದ ಜಿಲ್ಲೆಯಾದ್ಯಂತ ಅವಕಾಶ ಕಲ್ಪಿಸಲಾಗಿದೆ. ಆದರೆ, 40ಕ್ಕಿಂತ ಹೆಚ್ಚು ಜನರು ಭಾಗವಹಿಸಬಾರದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ,ವಿ. ಆದೇಶ ನೀಡಿದ್ದಾರೆ. ಮದುವೆ ನಡೆಸುವವರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯ ಆಯುಕ್ತರು, ಸ್ಥಳೀಯ ಆಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಸ್ಥೆಯ ಮುಖ್ಯಾಧಿಕಾರಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಅಧಿಕಾರಿಗಳ ಪೂರ್ವಾನುಮತಿ ಪಡೆಯಬೇಕು. ಸಂಬಂಧಪಟ್ಟ ಅಧಿಕಾರಿ 40 ಜನರ ಹೆಸರು …
Read More »ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ 8 ವರ್ಷದ ಬಾಲಕಿ
ಹಾವೇರಿ: ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಗುಂಡಗಟ್ಟಿ ಗ್ರಾಮದ ಕುಮಾರ ಗುಡದಳ್ಳಿ ಹಾಗೂ ಪೂರ್ಣಿಮಾ ದಂಪತಿಯ ಮಗಳಾದ 8 ವರ್ಷದ ನಮ್ರತಾ ಕುಮಾರ ಗುಡದಳ್ಳಿ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಗಿದೆ. ನಮ್ರತಾ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆ ಅಕ್ಕಿಆಲೂರಿನಲ್ಲಿ ಓದುತ್ತಿದ್ದಾಳೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ತನ್ನ ಹೆಸರನ್ನು ದಾಖಲಿಸಲು ಹಲವರು ವಿಷಯಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದಾಳೆ. 28 ರಾಜ್ಯಗಳು ಅವುಗಳ ರಾಜಧಾನಿಗಳು, 9 …
Read More »‘ಕಬ್ಜ’ ನ್ಯೂ ಲುಕ್ ರಿಲೀಸ್ : ಉಪ್ಪಿ-ಕಿಚ್ಚನ ಅಭಿಮಾನಿಗಳು ಫುಲ್ ಖುಷ್
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಾಯಕ ನಟರಾಗಿ ಅಭಿನಯಿಸುತ್ತಿರುವ ಹಾಗೂ ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ‘ಕಬ್ಜ’ ಸಿನಿಮಾದ ಹೊಸ ಪೋಸ್ಟರ್ ಇಂದು ( ಜೂನ್ 27) ಬಿಡುಗಡೆಯಾಗಿದೆ. ‘ಐ ಲವ್ ಯು’ ಚಿತ್ರದ ಬಳಿಕ ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಿರ್ದೇಶಕ ಆರ್.ಚಂದ್ರು ಕಾಂಬಿನೇಶನ್ ನಲ್ಲಿ ‘ಕಬ್ಜ’ ಸಿನಿಮಾ ರೆಡಿಯಾಗುತ್ತಿದೆ. ಭೂಗತ ಲೋಕದ ಕಥಾಹಂದರ ಹೊಂದಿರುವ ‘ಕಬ್ಜ’ ಚಿತ್ರದಲ್ಲಿ ಉಪೇಂದ್ರ …
Read More »ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬೆಲೆ ನಮಗೆ ಗೊತ್ತಾಗಿದೆ: ಉಮೇಶ್ ಕತ್ತಿ
ಚಿಕ್ಕೋಡಿ: ಪರಿಸರದ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು. ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬೆಲೆ ಏನೇಂಬುದು ನಮಗೆ ಗೊತ್ತಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಸಸಿ ನೆಡುವ ಕಾರ್ಯಕ್ರಮಕ್ಕೆ ಉಮೇಶ್ ಕತ್ತಿ ಅವರು ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಸಸಿ ನೆಟ್ಟು ಹೆಚ್ಚಿನ ಪ್ರಮಾಣದಲ್ಲಿ ಕಾಡನ್ನು ಬೆಳೆಸಿದರೆ ವಾಯುಮಾಲಿನ್ಯ ನಿರ್ಮೂಲನೆ ಆಗುವುದರ ಜೊತೆಗೆ ಆಕ್ಸಿಜನ್ …
Read More »ಕೋವಿಡ್ ಸಂಕಟದ ಸಮಯದಲ್ಲಿ ನೆರವಿಗೆ ಧಾವಿಸದ ಕಾಂಗ್ರೆಸ್ನಿಂದ ಮೊಸಳೆ ಕಣ್ಣೀರು: ಕ್ಯಾ.ಕಾರ್ಣಿಕ್
ಬೆಂಗಳೂರು: ತಾವು ಆಯ್ಕೆಯಾದ ಕ್ಷೇತ್ರದ ಜನರ ಸಹಾಯಕ್ಕೆ ಕೋವಿಡ್ ಸಂಕಟದ ಸಂದರ್ಭದಲ್ಲಿ ಧಾವಿಸದ ಕಾಂಗ್ರೆಸ್‍ನ ಮಹಾನ್ ನಾಯಕರುಗಳು ಈಗ “ಡೆತ್ ಆಡಿಟ್”ನ ಕುರಿತಾಗಿ ಮಾತನಾಡುತ್ತ ರಾಜ್ಯಾದ್ಯಂತ ಪ್ರವಾಸ ಮಾಡುವ ಹೇಳಿಕೆ ನೀಡಿರುವುದು ರಾಜಕೀಯ ಸೋಗಲಾಡಿತಕ್ಕೆ ಒಂದು ಸ್ಪಷ್ಟ ನಿದರ್ಶನವಾಗಿದೆ ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಟೀಕಿಸಿದ್ದಾರೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಸಂತ್ರಸ್ತ ಜನರ ನೆರವಿಗೆ ಧಾವಿಸದ ಕಾಂಗ್ರೆಸ್ ಕೇವಲ ಟ್ವಿಟರ್ ಅಭಿಯಾನದ ಮೂಲಕ ಕೇಂದ್ರ …
Read More »ಜುಲೈ ಅಂತ್ಯದೊಳಗೆ 51.6 ಕೋಟಿ ಡೋಸ್ ಲಸಿಕೆ ನೀಡಿಕೆ; ಕೇಂದ್ರದಿಂದ ಸುಪ್ರೀಂಕೋರ್ಟ್ಗೆ ಹೊಸ ಅಫಿಡವಿಟ್ ಸಲ್ಲಿಕೆ
ದೆಹಲಿ: ಜುಲೈ ತಿಂಗಳ ಅಂತ್ಯದೊಳಗೆ ಅಂದರೆ, ಜುಲೈ 31ರ ಒಳಗೆ 51.6 ಕೋಟಿ ಡೋಸ್ ಲಸಿಕೆ ನೀಡಲಾಗುತ್ತದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಹೊಸ ಅಫಿಡವಿಟ್ ಸಲ್ಲಿಕೆ ಮಾಡಿದೆ. ದೇಶದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 94 ಕೋಟಿ ಜನರಿದ್ದಾರೆ. 94 ಕೋಟಿ ಜನರಿಗೆ 188 ಕೋಟಿ ಡೋಸ್ ಲಸಿಕೆಯ ಅಗತ್ಯವಿದೆ. ಹೀಗಾಗಿ ಆಗಸ್ಟ್‌ನಿಂದ ಡಿಸೆಂಬರ್‌ಗೆ 135 ಕೋಟಿ ಡೋಸ್ ನೀಡಲಾಗುತ್ತದೆ. ಅಗತ್ಯವಿರುವಷ್ಟು ಲಸಿಕೆ ಆಗಸ್ಟ್-ಡಿಸೆಂಬರ್ ಅವಧಿಯಲ್ಲಿ ಲಭ್ಯವಾಗಲಿದೆ ಎಂದು …
Read More »
Laxmi News 24×7