ಮುಂಬೈ: ‘ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯಲ್ಲಿ ಹಜರತ್ ನಿಜಾಮುದ್ದೀನ್‌ನ ರಾಜಧಾನಿ ಎಕ್ಸ್‌ಪ್ರೆಸ್, ಸುರಂಗವೊಂದರಲ್ಲಿ ಹಳಿ ತಪ್ಪಿದ ಘಟನೆ ಶನಿವಾರ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಗೋವಾದ ಮಡ್‌ಗಾಂವ್‌ನತ್ತ ಪ್ರಯಾಣಿಸುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ಮುಂಬೈನಿಂದ 325 ಕಿ.ಮೀ ದೂರದಲ್ಲಿರುವ ಕಾರ್ಬೂಡ್ ಸುರಂಗದಲ್ಲಿ ಬೆಳಿಗ್ಗೆ 4.15ಕ್ಕೆ ಹಳಿ ತಪ್ಪಿದೆ ಎಂದು ಕೊಂಕಣ್ ರೈಲ್ವೆ ಅಧಿಕಾರಿಗಳು ಹೇಳಿದರು. ಹಳಿಯ ಮೇಲೆ ಕಲ್ಲು ಬಂಡೆಯೊಂದು ಬಿದ್ದ ಕಾರಣ, ರೈಲು ಹಳಿ ತಪ್ಪಿದೆ. ರತ್ನಗಿರಿ ಜಿಲ್ಲೆಯ …
Read More »ದೇಶದಾದ್ಯಂತ ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ
ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ದರ 31ರಿಂದ 35 ಪೈಸೆ ಮತ್ತು ಡೀಸೆಲ್ ದರ 35 ಪೈಸೆ ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಶನಿವಾರ ದೇಶದಾದ್ಯಂತ ಇಂಧನ ದರವನ್ನು ಮತ್ತೊಮ್ಮೆ ಏರಿಕೆ ಮಾಡಿವೆ. ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 101.45ಕ್ಕೆ ಏರಿಕೆಯಾಗಿದ್ದು, …
Read More »ನಡು ರಸ್ತೆಯಲ್ಲಿ ಡೀಸೆಲ್ ಲಾರಿ ಪಲ್ಟಿ : ಬಕೆಟ್, ಪಾತ್ರೆ ಹಿಡಿದು ಮುಗಿಬಿದ್ದ ಜನರು.!
ದಾವಣಗೆರೆ : ಇಂದು ಡೀಸೆಲ್ ತುಂಬಿದ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ನಡೆದಿದೆ. ಜಿಲ್ಲೆ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ಡೀಸೆಲ್ ತುಂಬಿದ ಲಾರಿ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಲ್ಲಿ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಲಾರಿಯಿಂದ ಡೀಸೆಲ್ ಸೋರಿಕೆಯಾಗುತ್ತಲೇ ಮುಗಿಬಿದ್ದ ಜನರು ಪಾತ್ರೆ, ಬಕೆಟ್ …
Read More »ಸಂಭ್ರಮದಲ್ಲಿದ್ದ ಈ ಗ್ರಾಮದಲ್ಲೀಗ ಸೂತಕ.. ಎತ್ತು ಹಿಡಿಯಲು ಹೋಗಿ ಪ್ರಾಣ ಕಳ್ಕೊಂಡ ಯುವಕ
ಗದಗ: ಕಾರಹುಣ್ಣಿಮೆ ಸಂಭ್ರಮದ ವೇಳೆ ರಾಸು ಹಾಯ್ದು ಯುವಕನೊಬ್ಬ ಮೃತಪಟ್ಟ ಘಟನೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಸಂಭವಿಸಿದೆ.. ಕಿರಣಕುಮಾರ್ ನರ್ತಿ ಮೃತ ದುದೈವಿ. ಉತ್ತರ ಕರ್ನಾಟಕ ಭಾಗದಲ್ಲಿ ಗುರುವಾರ ಕಾರಹುಣ್ಣಿಮೆ ಸಡಗರ ಕಳೆಗಟ್ಟಿತ್ತು. ಗದಗ ಜಿಲ್ಲೆಯ ಸೂರಣಗಿ ಗ್ರಾಮದಲ್ಲೂ ಕಾರಹುಣ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಕರಿ ಹರಿಯುವ ಕಾರ್ಯಕ್ರಮದಲ್ಲಿ ರಾಸುಗಳನ್ನು ಓಡಿಸುವಾಗ ಯುವಕ ಕಿರಣಕುಮಾರ್ಗೆ ರಾಸು ಡಿಕ್ಕಿ ಹೊಡೆದಿತ್ತು. ಡಿಕ್ಕಿಯಾದ ರಭಸಕ್ಕೆ ನೆಲಕ್ಕುರುಳಿದ್ದ ಕಿರಣಕುಮಾರ್ ಗಂಭೀರ ಗಾಯಗೊಂಡಿದ್ದ. ಹುಬ್ಬಳ್ಳಿ …
Read More »ಮುಂದಿನ ಸಿ.ಎಂ. ಚರ್ಚೆ ನೇಣು ಹಾಕಿಕೊಂಡಂತೆ: ಕಾಗೋಡು ತಿಮ್ಮಪ್ಪ
ಸಾಗರ: ‘ರಾಜ್ಯದ ಮುಂದಿನ ಸಿ.ಎಂ. ಯಾರು ಎಂದು ಕಾಂಗ್ರೆಸ್ ನಾಯಕರು ಈಗಲೇ ಚರ್ಚಿಸುವುದು ನೇಣು ಹಾಕಿಕೊಂಡಂತಾಗಲಿದೆ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ತಾಲ್ಲೂಕು ಆಡಳಿತದ ವೈಫಲ್ಯ ಖಂಡಿಸಿ ಕಾಂಗ್ರೆಸ್ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ‘ಮುಂದಿನ ವಿಧಾನಸಭೆ ಚುನಾವಣೆ ಬರುವವರೆಗೂ ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಕಾಂಗ್ರೆಸ್ ಹೋರಾಟ ನಡೆಸಬೇಕೇ ಹೊರತು, ಈಗಲೇ ಮುಂದಿನ ಸಿ.ಎಂ. ಯಾರು ಎಂದು ಚರ್ಚಿಸುವುದು ಸಾಧುವಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.
Read More »ಸುಪ್ರೀಂ ಚಾಟಿ ಬಳಿಕ SSLC,PUC ಪರೀಕ್ಷೆ ಬ್ಯಾನ್ ಮಾಡಿದ ಸರ್ಕಾರ
ಅಮರಾವತಿ: ಹೆಮ್ಮಾರಿ ಸೋಂಕಿನ ಮಧ್ಯೆಯೂ ಎಸ್ ಎಸ್ ಎಲ್ ಸಿ ಮತ್ತು ದ್ವಿತಿಯ ಪಿಯುಸಿ ಪರೀಕ್ಷೆ ರದ್ದು ಮಾಡದ ಆಂಧ್ರ ಪ್ರದೇಶದ ಸರ್ಕಾರದ ವಿರುದ್ಧ ಸುಪ್ರೀಂ ಚಾಟಿ ಬೀಸಿದ ಬೆನ್ನಲ್ಲೇ ಸರ್ಕಾರ ಪರೀಕ್ಷೆ ಬ್ಯಾನ್ ಮಾಡಿದೆ.ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ವಿಚಾರವಾಗಿ ನಿನ್ನೆ ಸುಪ್ರೀಂ ಕೋರ್ಟ್ ಆಂಧ್ರ ಪ್ರದೇಶ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಕೋವಿಡ್ ನಿಂದಾಗಿ ಯಾವುದೇ ಮಾರಣಾಂತಿಕ ಘಟನೆಗಳು ಸಂಭವಿಸಿದಲ್ಲಿ ರಾಜ್ಯ ಸರ್ಕಾರವನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. …
Read More »ದಂಗಾಗಿಸುತ್ತೆ ಹೊಸ ಚಿತ್ರಕ್ಕೆ ನಟ ಧನುಷ್ ಪಡೆಯುತ್ತಿರುವ ʼಸಂಭಾವನೆʼ
ಕೇವಲ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೇ ಬಾಲಿವುಡ್ ಹಾಗೂ ಹಾಲಿವುಡ್ ಮಟ್ಟದಲ್ಲೂ ಮಿಂಚುತ್ತಿರುವ ನಟ ಧನುಷ್ ಮೇಲಿಂದ ಮೇಲೆ ಹಿಟ್ ಚಿತ್ರಗಳನ್ನು ಕೊಡುತ್ತಲೇ ಸಾಗಿದ್ದಾರೆ. ಸದ್ಯದ ಮಟ್ಟಿಗೆ ಬಹಳ ಬ್ಯುಸಿಯಾಗಿರುವ ಧನುಷ್ ಅವರು ಶೇಖರ್ ಕಮ್ಮುಲಾ ಜೊತೆಗೆ ನಿರ್ಮಿಸುತ್ತಿರುವ ಹೊಸ ಚಿತ್ರಕ್ಕೆ ಸಂಭಾವನೆ ರೂಪದಲ್ಲಿ 50 ಕೋಟಿ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ಲೇಟೆಸ್ಟ್ ವರದಿಯೊಂದು ತಿಳಿಸಿದೆ. ಚಿತ್ರವೊಂದಕ್ಕೆ ಧನುಷ್ ಪಡೆಯುತ್ತಿರುವ ಅತ್ಯಂತ ಹೆಚ್ಚಿನ ಸಂಭಾವನೆ ಇದಾಗಿದ್ದು, ಈ ಮೂಲಕ ತಮಿಳು …
Read More »ನಾವೆಲ್ಲಾ ರಮೇಶ್ ಜಾರಕಿಹೊಳಿ ಜೊತೆಗೆ ಇದ್ದೇವೆ ಎಂದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್
ತುಮಕೂರು: ನಾವೆಲ್ಲಾ ರಮೇಶ್ ಜಾರಕಿಹೊಳಿ ಜೊತೆಗೆ ಇದ್ದೇವೆ ಎಂದು ತಮಕೂರಿನಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ನಗರಕ್ಕೆ ಭೇಟಿ ನೀಡಿ, ಸ್ಮಾರ್ಟ್ ಸಿಟಿ ಕಾಮಗಾರಿಗಳ ವೀಕ್ಷಣೆ ನಡೆಸಿದರು. ಸ್ಟೇಡಿಯಂ, ರಾಧಕೃಷ್ಣ ರಸ್ತೆ, ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ಕಾಮಗಾರಿ ಸೇರಿದಂತೆ ಸ್ಮಾರ್ಟ್ ಸಿಟಿಯ ವಿವಿಧ ಕಾಮಗಾರಿಗಳ ವೀಕ್ಷಣೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಮೇಶ್ ಜಾರಕಿಹೊಳಿ ಸಿಡಿ ವಿಚಾರದಲ್ಲಿ ಕೆಲ ವ್ಯತ್ಯಾಸ ಆಗಿದೆ. ಕೆಲವೇ ದಿನದಲ್ಲಿ ಸತ್ಯಾಂಶ ಹೊರಬರಲಿದ್ದು, …
Read More »‘ಮಾಸ್ಟರ್’ ಮಾರ್ಗದಲ್ಲೇ ಸಾಗಿದ ಅಕ್ಷಯ್ ಕುಮಾರ್ ‘ಬೆಲ್ ಬಾಟಮ್’ ಸಿನಿಮಾಗೆ ಸಂಕಷ್ಟ
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷೆಯ ಬೆಲ್ ಸಿನಿಮಾ ಬಿಡುಗಡೆ ಕಗ್ಗಂಟಾಗಿದೆ. ಚಿತ್ರದ ನಿರ್ಮಾಪಕರು ಮತ್ತು ಮಲಿಫ್ಲೆಕ್ಸ್ ನಡುವೆ ಜಟಾಪಟಿ ಸುರುವಾಗಿದೆ. ಇತ್ತೀಚಿಗಷ್ಟೆ ಸಿನಿಮಾತಂಡ ಅಂದುಕೊಂಡಂತೆ ಜುಲೈ 27ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಅನೌನ್ಸ್ ಮಾಡಿತ್ತು. ಬಳಿಕ ಒಟಿಟಿಯಲ್ಲಿ ಸಿನಿಮಾ ಬರಲಿ ಎಂದು ಚಿತ್ರತಂಡ ಹೇಳಿತ್ತು. ವಿಜಯ್ ನಟನೆಯ ಮಾಸ್ಟರ್ ಸಿನಿಮಾ ಕೂಡ ರಿಲೀಸ್ ಆಗಿ ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಅದೇ ಮಾರ್ಗವನ್ನು ಅಕ್ಷಯ್ ಕುಮಾರ್ ನಟನೆಯ …
Read More »ಮತ್ತೆ ಅಖಾಡಕ್ಕಿಳಿದ ಜೇಮ್ಸ್: ಜುಲೈ ಮೊದಲನೇ ವಾರ ಶೂಟಿಂಗ್
ಲಾಕ್‌ಡೌನ್‌ನಿಂದ ವಿಶ್ರಾಂತಿಯಲ್ಲಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸದ್ಯದಲ್ಲೇ ಶೂಟಿಂಗ್ ಅಖಾಡಕ್ಕೆ ಎಂಟ್ರಿ ಕೊಡ್ತಿದ್ದಾರೆ. ಜುಲೈ ಮೊದಲನೇ ವಾರದಿಂದ ಪವರ್ ಸ್ಟಾರ್ ಜೇಮ್ಸ್ ಸಿನಿಮಾದ ಚಿತ್ರೀಕರಣ ಆರಂಭಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ‘ಭರ್ಜರಿ’ ಚೇತನ್ ಕುಮಾರ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಜೇಮ್ಸ್ ಸಿನಿಮಾದ ಬಹುಪಾಲು ಶೂಟಿಂಗ್ ಮುಗಿದಿದೆ. ಹೊಸಪೇಟೆ, ಬಳ್ಳಾರಿ ಸುತ್ತಮುತ್ತ ಚಿತ್ರೀಕರಣ ಮಾಡಿದ್ದರು. ಇದೀಗ, ಸಿನಿಮಾದ ಪ್ರಮುಖ ಆಕ್ಷನ್ ದೃಶ್ಯಗಳನ್ನು ಶೂಟ್ ಮಾಡಲು ಸಿದ್ದತೆ …
Read More »
Laxmi News 24×7