ಕೊಪ್ಪಳ: ಮಕ್ಕಳು ದೇವರ ಸಮಾನ ಅಂತಾರೆ. ಆದ್ರೆ, ಇಲ್ಲೊಂದು ದಲಿತ ಸಮುದಾಯದ ಮಗು ತನ್ನ ಹುಟ್ಟು ಹಬ್ಬದ ಸಂತಸದಲ್ಲಿ ಗ್ರಾಮದ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ಬಾಲಕನಿಗೆ ದಂಡವಿಧಿಸಿ ಅಮಾನವೀಯವಾಗಿ ನಡೆದಿಕೊಂಡಿದ್ದಾರೆ. ಗ್ರಾಮಸ್ಥರ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕೈಗೊಂಡಿದೆ. ಗ್ರಾಮದಲ್ಲಿ ಡಿಸಿ, ಎಸ್ಪಿ, ಎಸಿ ಸಭೆ ನಡೆಸಿದ್ದು, ಅಸ್ಪೃಶ್ಯತೆ ಆಚರಿಸಿದ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿ ಐದು ಜನರು ಬಂಧಿಸಿದ್ದಾರೆ. ಸೆಪ್ಟೆಂಬರ್ 4 ರಂದು ಚಂದ್ರಶೇಖರ ಚೆನ್ನದಾಸರ ಅವರ ಪುತ್ರ …
Read More »ದೇವರ ಮೂರ್ತಿ ಮೇಲೆ ಚಪ್ಪಲಿ ಧರಿಸಿ ಕಾಲಿಟ್ಟಿದ್ದ ಯುವಕನಿಗೆ ಥಳಿತ!
ತುಮಕೂರು: ದೇವರ ಮೂರ್ತಿ ಮೇಲೆ ಚಪ್ಪಲಿ ಧರಿಸಿ ಕಾಲಿಟ್ಟಿದ್ದ ಆರೋಪದಡಿ ಯುವಕನನ್ನು ಹಿಡಿದು ಗ್ರಾಮಸ್ಥರು ಥಳಿಸಿದ ಘಟನೆ ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಶ್ರೀಸ್ವಾಮಿ ಕೋಟೆ ಕಲ್ಲಪ್ಪನ ಮೂರ್ತಿ ಮೇಲೆ ಚಪ್ಪಲಿ ಧರಿಸಿ ಯುವಕ ಕಾಲಿಟ್ಟಿದ್ದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಯುವಕನ ವರ್ತನೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಯುವಕನ ವಿರುದ್ಧ ಮಧುಗಿರಿ ಠಾಣೆಗೆ ಗ್ರಾಮಸ್ಥರು ದೂರು ಸಲ್ಲಿಸಿದ್ದರು. …
Read More »ಮಗುವನ್ನ ಶಾಲೆಗೆ ಸೇರಿಸಲು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಹೆಡ್ ಮಾಸ್ಟರ್
ಬೆಂಗಳೂರು: ನಗರದ ಕೋದಂಡರಾಮಪುರ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯ ಲೋಕೇಶಪ್ಪ ಎಂಬಾತ ಮಗುವಿನ ದಾಖಲಾತಿಗೆಂದು ಬಂದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಘಟನೆ ನಡೆದಿದೆ. ಸದ್ಯ ಲೋಕೇಶಪ್ಪನನ್ನ ಸೇವೆಯಿಂದ ಅಮಾನತು ಮಾಡಲಾಗಿದೆ. ಕೋದಂಡರಾಮಪುರ ಪ್ರೌಢಶಾಲೆಗೆ ತಮ್ಮ ಮಗುವನ್ನ ದಾಖಲು ಮಾಡಲೆಂದು ಮಹಿಳೆಯೋರ್ವರು ಶಾಲೆಗೆ ಬಂದರೆ ಆ ಮಹಿಳೆಯಿಂದಲೇ ಹೆಡ್ ಮಾಸ್ಟರ್ ಲೋಕೇಶಪ್ಪ ಮಸಾಜ್ ಮಾಡಿಸಿಕೊಂಡಿದ್ದಾನೆ. ಈ ಸಂಬಂಧ ಸಿಸಿಟಿವಿ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಚಾರವಾಗಿ ಪ್ರಶ್ನಿಸಿದಾಗ ತಾನು ಮಸಾಜ್ ಮಾಡಿಸಿಕೊಂಡಿದ್ದಾಗಿ …
Read More »ಹೈ-ಎಂಡ್ ಬೈಕ್ ಯಾಕೆ? ನಮಗೆ ಈ ಹೋರಿನೇ ಸಾಕು..!
ಬಾಗಲಕೋಟೆ: ಹದಿನೆಂಟು ತಿಂಗಳ ಕಿಲಾರಿ ಹೋರಿಯೊಂದು ದಾಖಲೆಯ ಮೊತ್ತಕ್ಕೆ ಮಾರಾಟವಾಗುವ ಮೂಲಕ ಅಚ್ಚರಿ ಹುಟ್ಟಿಸಿದೆ. ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ತೇರದಾಳ ಪಟ್ಟಣದ ನಾಲ್ಕನೇ ಕಿನಾಲ್ ತೋಟದ ವಸತಿ ಪ್ರದೇಶದ ಭೀಮಪ್ಪ ಬರಡಗಿ ಎಂಬುವರ ಹೋರಿ ಬರೋಬ್ಬರಿ 3 ಲಕ್ಷ 25 ಸಾವಿರ ರೂಪಾಯಿಗಳಿಗೆ ಮಾರಾಟವಾಗಿದೆ. ಅಶೋಕ ಕುರಿ ಎಂಬುವರು 3 ಲಕ್ಷ 25 ಸಾವಿರಕ್ಕೆ ಖರೀದಿ ಮಾಡಿದ್ದಾರೆ. ಜಾನುವಾರು ಪ್ರದರ್ಶನದಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದ ಹೋರಿ ನೋಡೋದಕ್ಕೆ ಬಾರಿ ಮೈಮಾಟ …
Read More »ವಿಧಾನಸಭೆ: ಕೇಂದ್ರ ಸಚಿವರನ್ನು ಕರೆದು ಯಾಕೆ ಅಪಮಾನ ಮಾಡ್ತೀರಿ?
ಇದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ ಯತ್ನಾಳ್ ಅವರು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕೊಟ್ಟ ಟಾಂಗ್. ಪ್ರಶ್ನೋತ್ತರ ವೇಳೆಯಲ್ಲಿ ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಅವರು ಮುಖ್ಯಮಂತ್ರಿಗಳ ಅಮೃತ ಗ್ರಾಮಪಂಚಾಯಿತಿ ಯೋಜನೆಯನ್ನು ಪ್ರಸ್ತಾಪಿಸಿ ಗ್ರಾಮ ಪಂಚಾಯಿತಿಯೊಂದಕ್ಕೆ 25 ಲಕ್ಷ ರೂ. ಕೊಡುವುದಾಗಿ ಹೇಳಲಾಗಿದೆ. ಆದರೆ, ಹಣ ಬಿಡುಗಡೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಗಮನಸೆಳೆದರು. ಜೆಡಿಎಸ್ ಸದಸ್ಯ ಬಂಡೆಪ್ಪ ಕಾಶೆಂಪೂರ ಈ ಪ್ರಶ್ನೆಗೆ ಪೂರಕವಾಗಿ ಮಾತಾಡಿದರು. ಆಗ ಸಚಿವ ಈಶ್ವರಪ್ಪ ಉತ್ತರಿಸಿ, ಗ್ರಾಪಂಗಳಿಗೆ …
Read More »ಪತ್ನಿಯ ಮೊಬೈಲ್ ನೋಡಿದ ರಿಯಲ್ ಎಸ್ಟೇಟ್ ಉದ್ಯಮಿ: ಮುಂದೆ ನಡೆದಿದ್ದು ಘನ ಘೋರ ಘಟನೆ
ಬೆಂಗಳೂರು: ಅನ್ನಪೂರ್ಣೇಶ್ವರಿನಗರದಲ್ಲಿ ಪತ್ನಿಯ ಶೀಲ ಶಂಕಿಸಿದ ಪತಿ ಚೂರಿಯಿಂದ ಕತ್ತಿಗೆ ಇರಿದು ಹತ್ಯೆ ಮಾಡಿದ್ದಾನೆ. ಅನ್ನಪೂರ್ಣೇಶ್ವರಿನಗರದ ನಿವಾಸಿ ರೂಪಾ (34) ಕೊಲೆಯಾದವರು. ರಿಯಲ್ ಎಸ್ಟೇಟ್ ಉದ್ಯಮಿ ಕಾಂತರಾಜ್ (39) ಆರೋಪಿ. ಕಾಂತರಾಜ್-ರೂಪಾ ದಂಪತಿಗೆ ಒಬ್ಬ ಮಗನಿದ್ದಾನೆ. ಪ್ರತಿನಿತ್ಯ ಪತ್ನಿಯ ಶೀಲ ಶಂಕಿಸಿ ಪತಿ ಜಗಳ ಮಾಡುತ್ತಿದ್ದ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಮನಸ್ತಾಪ ಉಂಟಾಗುತ್ತಿತ್ತು. ಬುಧವಾರ ಸಂಜೆ 4.30ರಲ್ಲಿ ಕಾಂತರಾಜ್ ಪತ್ನಿಯ ಮೊಬೈಲ್ ಪರಿಶೀಲಿಸಿದಾಗ ಆಕೆ ಬೇರೆ ವ್ಯಕ್ತಿಯೊಂದಿಗೆ …
Read More »ಕ್ಯಾಬ್ ಡ್ರೈವರ್ ನಿಂದ ಅತ್ಯಾಚಾರ ಆರೋಪಿಸಿದ ಯುವತಿ
ಯುವತಿಯೇ ಬಂದು ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಚ್.ಎಸ್.ಆರ್ ಲೇಔಟ್ ನಿಂದ ಮುರುಗೇಶ್ ಪಾಳ್ಯಗೆ ಕ್ಯಾಬ್ ಬುಕ್ ಮಾಡಿದ್ದಳು. ಪಾನಮತ್ತರಾಳಾಗಿದ್ದ ಯುವತಿ ಕ್ಯಾಬಿನಿಂದ ಇಳಿಯುವ ಸ್ಥಿತಿಯಲ್ಲಿ ಇರಲಿಲ್ಲ. ಈ ಸಮಯದಲ್ಲಿ ರೇಪ್ ಎಸಗಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ. ಯುವತಿ ದೌರ್ಜನ್ಯವನ್ನು ವಿರೋಧಿಸಿದ್ದಾಳೆ ಅತ್ಯಾಚಾರ ಪ್ರಯತ್ನ ವೇಳೆ ಕೂಗಾಡಿ ಜಟಾ ಪಟಿ ಮಾಡಿದ ಯುವತಿ ಎಸ್ಕೇಪ್ ಅಗೋಕೆ ಟ್ರೈ ಮಾಡಿ ಆರೋಪಿಯ ಮೊಬೈಲ್ ಕಿತ್ತುಕೊಂಡಿದ್ದಾಳೆ. ಖುದ್ದು ಜೀವನ್ ಭೀಮಾ ನಗರ …
Read More »ಮೂರು ದಿನಗಳೊಳಗೆ ಸಂತ್ರಸ್ತರ ಮನೆಗಳ ಸಮೀಕ್ಷೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಕಳೆದ ಜುಲೈ ತಿಂಗಳಲ್ಲಿ ಸುರಿದ ಮಳೆ ಹಾಗೂ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ನದಿ ತೀರದ ಗ್ರಾಮಗಳ ಸಂತ್ರಸ್ತರು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಬುಧವಾರದಂದು ನಗರದ ಹೊರವಲಯದಲ್ಲಿರುವ ಬಸವೇಶ್ವರ ಸಭಾ ಭವನದ ಆವರಣದಲ್ಲಿ ಅರಭಾವಿ ಕ್ಷೇತ್ರದ 21 ಗ್ರಾಮಗಳ ನದಿ ತೀರದ ಸಂತ್ರಸ್ತರು ಶಾಸಕರ ಬಳಿ ಅಳಲು ಮಂಡಿಸಿದರು. ನದಿ ತೀರದ ಗ್ರಾಮಗಳಾದ ಅಡಿಬಟ್ಟಿ, ಚಿಗಡೊಳ್ಳಿ, …
Read More »ಧಾರ್ಮಿಕ ಕಟ್ಟಡ ರಕ್ಷಣೆ ವಿಧೇಯಕ ಅಂಗೀಕಾರ
ಸಾರ್ವಜನಿಕ ಸ್ಥಳ ಗಳಲ್ಲಿರುವ ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ಮಸೂದೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರವಾಗಿದೆ.”ಮೈಸೂರಿನಲ್ಲಿ 261 ಸ್ಥಳಗಳನ್ನು ಗುರುತಿಸಲಾಗಿದ್ದು, ಇದರಲ್ಲಿ 161ನ್ನು ಸ್ಥಳಾಂತರಿಸಲಾಗಿದೆ” ಎಂದು ಚರ್ಚೆಯ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. “ಸರ್ಕಾರದ ಕಟ್ಟಡಗಳನ್ನು ಸರ್ಕಾರದ ಗಮನಕ್ಕೆ ಬಾರದೇ ಒಡೆಯಲು ಸಾಧ್ಯವಿಲ್ಲ. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದು ಈ ಮಸೂದೆ ತರಲಾಗಿದೆ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ಆಡಳಿತದ ಸಂದರ್ಭ ಎಲ್ಲವನ್ನೂ ತೆರವುಗೊಳಿಸಿಲ್ಲ. ಹಿಂದಿನ ಸರ್ಕಾರಗಳ ಅವಧಿಯ …
Read More »ಹಂಪಿ ಎಲ್ಲಿ ಹೆಲಿಟೂರಿಸಂ ಆರಂಭಿಸಲು ರಾಜ್ಯ ಸರ್ಕಾರ ನಿರ್ಧಾರ
ಹಂಪಿ: ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಪ್ರಮುಖ ಯೋಜನೆಗಳಲ್ಲಿ ಹೆಲಿ ಟೂರಿಸಂ ಕೂಡ ಒಂದಾಗಿದ್ದು, ಯೋಜನೆಯ ಆರಂಭಿಕ ಭಾಗವಾಗಿ ಹಂಪಿಯನ್ನು ಆಯ್ಕೆ ಮಾಡಿಕೊಂಡಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಹಂಪಿಯಲ್ಲಿ ಹೆಲಿ ಟೂರಿಸಂ ಆರಂಭವಾಗಲಿದೆ ಎಂದು ವರದಿಗಳು ತಿಳಿಸಿವೆ.ಅಕ್ಟೋಬರ್ ಆರಂಭದಲ್ಲಿ ವಿಶ್ವವಿಖ್ಯಾತ ಹಂಪಿಯಲ್ಲಿ ಹೆಲಿ-ಟೂರಿಸಂ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈಗಾಗಲೇ ಜಿಲ್ಲಾ ಉಸ್ತವಾರಿ ಸಚಿವ ಆನಂದ್ ಸಿಂಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಯೋಜನೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು …
Read More »
Laxmi News 24×7